ನೆರೆ ಸಂತ್ರಸ್ತರಿಗೆ ಸಹಾಯ ಮಾಡುವಂತೆ ದೇವಿ ಕೊಲ್ಲೂರು ಮೂಕಾಂಬಿಕೆ ಸೂಚನೆ ನೀಡಿದ್ದಾದ್ರೂ ಯಾರಿಗೆ?

0
504
kolluru mukambike

ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ಹೌದು. ಉತ್ತರ ಕರ್ನಾಟಕ ಹಾಗು ಮಲೆನಾಡು ಪ್ರದೇಶಗಲ್ಲಿ ವರುಣ ತನ್ನ ರೌದ್ರ ನರ್ತನವನ್ನು ತೋರಿಸುತ್ತಿದೆ. ಇದರಿಂದ ಅಲ್ಲಿನ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು, ಒದ್ದಾಡುವಂತಾಗಿದೆ. ಇನ್ನು ಅಲ್ಲಿನ ಜನರ ಕಷ್ಟಕ್ಕೆ ಇಡೀ ಕರ್ನಾಟಕದ ಜನೆತೆಯೇ ನೆರವಿಗೆ ನಿಂತಿದೆ. ಹೌದು. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಅತಿಯಾದ ಪ್ರವಾಹದಿಂದ ಅಲ್ಲಿನ ಜನರು ಮನೆ, ಮಠ ಎಲ್ಲವನ್ನು ಕಳೆದುಕೊಂಡು ಒಂದು ತುತ್ತು ಅನ್ನಕ್ಕಾಗಿಯೂ ಪರದಾಡುತ್ತಿದ್ದಾರೆ. ಹಾಗಾಗಿ ಎಲ್ಲರು ಅವರವರ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈಗ ಅದೇ ರೀತಿ ಒಂದು ದೇವಾಲಯದ ಮಂಡಳಿ ಸಹಾಯಕ್ಕೆ ನಿಂತಿದೆ. ಹೌದು. ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ 1 ಕೋಟಿ ರೂ ಹಣವನ್ನು ಸಹಾಯಧನವಾಗಿ ನೀಡಿದ್ದಾರೆ.

ಸಹಾಯಧನ ನೀಡಿದ ಕೊಲ್ಲೂರು ಮೂಕಾಂಬಿಕಾ ದೇವಾಲಯ ಮಂಡಳಿ

ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ನಾ ಮುಂದು ತಾ ಮುಂದು ಅಂತ ಕರ್ನಾಟಕದ ಜನತೆ ಮುಂದಾಗುತ್ತದೆ. ಯಾಕಂದ್ರೆ ಅಲ್ಲಿನ ಜನರು ಒಂದು ತುತ್ತು ಅನ್ನಕ್ಕಾಗಿಯೂ ಒದ್ದಾಡುತ್ತಿದ್ದಾರೆ. ಹಾಗಾಗಿ ಅವರ ಸಹಾಯಕ್ಕೆ ಹಾಗು ಅವರ ಹಸಿವನ್ನು ನೀಗಿಸಲು ಎಲ್ಲರು ಮುಂದಾಗುತ್ತಿದ್ದಾರೆ. ಈಗ ಅದೇ ರೀತಿ ಕೊಲ್ಲೂರು ಮೂಕಾಂಬಿಕಾ ದೇವಾಲಯ ಮಂಡಳಿಯವರು ಸಹಾಯಕ್ಕೆ ನಿಂತಿದ್ದಾರೆ. ಹೌದು. ನೆರೆ ಸಂತ್ರಸ್ತರಿಗೆ ದೇವಾಲಯದ ಕಡೆಯಿಂದ 1 ಕೋಟಿ ರೂ ಹಣವನ್ನು ಸಹಾಯಧನವನ್ನಾಗಿ ನೀಡಿದ್ದಾರೆ. ಯಾಕಂದ್ರೆ ಅಲ್ಲಿನ ಜನರು ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಹೀಗಿರುವಾಗ ಇಂಥ ಸಮಯದಲ್ಲಿ ನಾವು ಅವರಿಗೆ ಸಹಾಯ ಮಾಡಿಲ್ಲ ಅಂದ್ರೆ ಈ ತಾಯಿ ಕೂಡ ನಮ್ಮನ್ನು ಕ್ಷಮಿಸಲ್ಲ ಎಂದು ಸಹಾಯ ಮಾಡಿದ್ದಾರಂತೆ.

ಸಭೆ ನಡೆಸಿ ನಂತರ ನಿರ್ಧಾರ ಕೈಗೊಂಡ ವ್ಯವಸ್ಥಾಪನಾ ಸಮಿತಿ

ಇನ್ನು ಉತ್ತರ ಕರ್ನಾಟಕ ಜನತೆಗೆ ಸಹಾಯ ಮಾಡುವ ಮೊದಲು ಒಂದು ಸಭೆ ನಡೆಸಿದ್ದಾರೆ. ಯಾಕಂದ್ರೆ ಹಣ ಎಷ್ಟು ಇದೆ, ಅದರಲ್ಲಿ ಯಾವುದಕ್ಕೆ ಎಷ್ಟೆಷ್ಟು ಸಹಾಯ ಮಾಡಬೇಕು, ನಂತರ ಎಲ್ಲರಿಗು ಒಪ್ಪಿಗೆ ಇದೆಯಾ ಎಂಬುದನ್ನೆಲ್ಲಾ ತಿಳಿದುಕೊಂಡಿದ್ದಾರೆ. ಯಾಕಂದ್ರೆ ನಾವು ಮಾಡುವ ಈ ಕೆಲಸ ಯಾರಿಗೂ ಬೇಸರ ತರಿಸಬಾರದು. ಹಾಗಾಗಿ ಎಲ್ಲರ ಅಭಿಪ್ರಾಯವನ್ನು ಮೊದಲಿಗೆ ತಿಳಿದುಕೊಂಡಿದ್ದಾರಂತೆ. ನಂತರ ಎಲ್ಲರ ಒಪ್ಪಿಗೆ ಪಡೆದ ಮೇಲೆ ಹಣವನ್ನೆಲ್ಲಾ ಕಲೆಹಾಕಿ ಸುಮಾರು ೧ ಕೋಟಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ನೀಡಲಾಗಿದೆ

ಇನ್ನು ದೇವಾಲಯದ ವ್ಯವಸ್ಥಾಪನಾ ಮಂಡಳಿ ಸಹಾಯಧನವನ್ನು ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ನೀಡಿದ್ದಾರೆ. ಜೊತೆಗೆ ತಮ್ಮ ಅನಿಸಿಕೆಯನ್ನು ಸಹ ಹಂಚಿಕೊಂಡಿದ್ದಾರೆ. ಹೌದು. ಭಕ್ತರು ದೇವರಿಗೆ ಹರಕೆ ರೂಪದಲ್ಲಿ ಧನ ಸಹಾಯ ಮಾಡುತ್ತಾರೆ. ಅಂತಹ ಜನ ಕಷ್ಟದಲ್ಲಿರುವಾಗ ಸೂರು ಕಳೆದುಕೊಂಡಿರುವಾಗ ದೇಗುಲ ಸಹಾಯ ಮಾಡುವುದು ಜವಾಬ್ದಾರಿ. ತಾಯಿ ಮೂಕಾಂಬಿಕೆಯ ಪ್ರೇರಣೆಯಂತೆ ನೆರೆ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ. ಜನರು ಕಾಣಿಕೆ ರೂಪದಲ್ಲಿ ನೀಡಿರುವ ಹಣವನ್ನೆಲ್ಲಾ ಜನರ ಸಹಾಯಕ್ಕೆ ನೀಡುತ್ತಿದ್ದೇವೆ. ಒಟ್ಟಿನಲ್ಲಿ ತಾಯಿ ಮೂಕಾಂಬಿಕೆ ಅವರ ಮೇಲೆ ದಯೆ ತೋರಲಿ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರು ಪಡುತ್ತಿರುವ ಕಷ್ಟಗಳಿಗೆ ಎಲ್ಲರು ಸ್ಪಂಧಿಸುತ್ತಿದ್ದಾರೆ. ಅದರ ಜೊತೆಗೆ ಈ ರೀತಿ ದೇವಾಲಯಗಳ ವ್ಯವಸ್ಥಾಪನಾ ಮಂಡಳಿಗಳು ಸಹ ಸಹಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅವರ ಕಷ್ಟ ಆದಷ್ಟು ಬೇಗ ಪರಿಹಾರವಾಗಲಿ ಅನ್ನೋದೇ ಎಲ್ಲರ ಬೇಡಿಕೆಯಾಗಿದೆ.

LEAVE A REPLY

Please enter your comment!
Please enter your name here