ಯುಗಾದಿಗೆ ತಮ್ಮ ಪತ್ನಿ ನೀಡಿದ ಉಡುಗೊರೆ ನೋಡಿ, ಸಂಭ್ರಮಗೊಂಡ ಕಿಚ್ಚ ಸುದೀಪ್

0
1134
kichha sudeep

ನೋಡೋಕೆ ಆರಡಿ. ಹುಡುಗಿಯರು ನೋಡಿದ ಕೂಡಲೇ ಫಿದಾ ಆಗೋ ಲುಕ್ಕು. ತಮ್ಮ ಮಾತಿನ ಸ್ಟೈಲ್ ನಿಂದಲೇ ಎಲ್ಲರನ್ನು ತಮ್ಮತ್ತ ಸೆಳೆಯುತ್ತಾರೆ ಇವರು. ಹೌದು. ಕಿಚ್ಚ ಸುದೀಪ್ ಅಂದ್ರೆ ಎಲ್ಲರಿಗೂ ಇಷ್ಟ. ತಮ್ಮ ನಟನೆ ಮೂಲಕ ಎಲ್ಲರನ್ನ ತಮ್ಮತ್ತ ಸೆಳೆದಿದ್ದಾರೆ. ಸ್ಪರ್ಶ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಸುದೀಪ್ ಗೆ ಬರಬರುತ್ತ ಅಭಿಮಾನಿಗಳ ಹೊಳೆಯೇ ಹರಿಯುವಂತಾಯ್ತು.

ಸುದೀಪ್ ಸಿನಿಮಾ ಮಾತ್ರವಲ್ಲದೆ, ಕೆಲವೊಂದು ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದಾರೆ. ಮುಖ್ಯವಾಗಿ ಅವರ ಬಿಗ್ ಬಾಸ್ ಶೋ ಅಂತೂ ಎಲ್ಲರ ಮನೆ ಮನ ಮುಟ್ಟಿದೆ. ನಮ್ಮ ಕಿಚ್ಚ ಈ ವರ್ಷದ ಯುಗಾದಿಯನ್ನ ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಈ ಸಮಯದಲ್ಲಿ ಅವರ ಪತ್ನಿ ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಯುಗಾದಿಗೆ ಪತ್ನಿಯಿಂದ ವಿಶೇಷ ಉಡುಗೊರೆ ಪಡೆದ ಕಿಚ್ಚ

ಯುಗಾದಿ ಹಬ್ಬವನ್ನ ಸುದೀಪ್ ಮನೆಯಲ್ಲಿ ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ಈ ಸಮಯದಲ್ಲಿ ಕಿಚ್ಚನ ಹೆಂಡತಿ, ಮನೆಯಲ್ಲಿ ಸಿಹಿ ಮಾಡಿ, ತಮ್ಮ ಗಂಡ ಹಾಗು ಮಗಳ ಜೊತೆ ಸಂಭ್ರಮ ಆಚರಿಸಿದ್ದಾರೆ. ಇದೆ ಸಮಯದಲ್ಲಿ ತಮ್ಮ ಪತಿಗೆ ಪ್ರಿಯಾ ಒಂದು ವಿಶೇಷ ಉಡುಗೊರೆ ನೀಡಿದ್ದಾರೆ. ಹೌದು ಶ್ರೀಕೃಷ್ಣನನ್ನು ನೆನಪಿಸುವವಂತೆ ತುಂಬಾ ಭಿನ್ನವಾಗಿ ಕಿಚ್ಚ ಕ್ರಿಯೇಷನ್ ಯೂಟ್ಯೂಬ್ ಅನ್ನು ಶುರು ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ನಟ ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್‌ಗೆ ಸಂಬಂಧಿಸಿದ ಸಿನಿಮಾ ವಿಚಾರಗಳು ಇಲ್ಲಿ ದೊರೆಯಲಿವೆಯಂತೆ.

ಕಿಚ್ಚ ಕ್ರಿಯೇಷನ್ ಯೂಟ್ಯೂಬ್

ಉಡುಗೊರೆ ನೀಡುವ ಮೊದಲು ಕಿಚ್ಚನನ್ನ ಕುರಿತು ಹಾಗು ಶ್ರೀ ಕೃಷ್ಣನನ್ನ ಕುರಿತು ಒಂದು ಸಂಗೀತ ಸಂಯೋಜನೆ ಮಾಡಲಾಗಿದೆ. ಯಾಕಂದ್ರೆ ಕಿಚ್ಚ ಅಂದ್ರೆ ಕೃಷ್ಣ ಎಂದರ್ಥ. ಹಾಗಾಗಿ ಕಿಚ್ಚ ಹಾಗೂ ಕೃಷ್ಣನನ್ನ ಕುರಿತು ಹಾಡನ್ನ ಹಾಡಿ, ನಂತರ ಯೂಟ್ಯೂಬ್ ಲಾಂಚ್ ಮಾಡಲಾಗಿದೆ. ಅಜಾನುಬಾಹು ಆರಡಿಯ ಅಸ್ತ್ರ , ಸಿಂಹಕಂಠ ಬಿಲ್ಲನೋಟ, ಆಕಾಶ ಮುಟ್ಟಿದರೂ ಭೂಸ್ಪರ್ಶ ಬಿಡದೇ ಆಡುವನಿವನಾಟ, ಸದ್ದಿಲ್ಲದೆ ಕತ್ತಲ ಬೆಳಗುವ ದೀಪದಂಚಿನ ಕಪ್ಪು ಇವನ ಮೌನ, ಕಪ್ಪಾದರೂ ಜಗಕೇ ಬೆಳಕನೀವ ಪರಮ ಸುದೀಪನು, ಕೃಷ್ಣಇಂಥ ಸಾಲುಗಳೊಂದಿಗೆ ಶ್ರೀಕೃಷ್ಣನ ಶಂಖದ ಹಿನ್ನೆಲೆ ಧ್ವನಿಯಾಗಿ ಆ ಧ್ವನಿಯ ಮುನ್ನಲೆಯಲ್ಲಿ ಕಿಚ್ಚ ಕ್ರಿಯೇಷನ್ ಪ್ರಾರಂಭ ಮಾಡಲಾಗಿದೆ.

ಮನದಾಳದ ಮಾತು ಹಂಚಿಕೊಂಡ ಕಿಚ್ಚ

ತಮ್ಮ ಪತಿಗೆ ಯುಗಾದಿ ದಿನವೇ ಈ ಉಡುಗೊರೆಯನ್ನ ನೀಡಬೇಕು ಅನ್ನೋದು ಪ್ರಿಯಾರ ಆಸೆಯಾಗಿತ್ತಂತೆ. ಅದರಂತೆ, ತಮ್ಮ ಉಡುಗೊರೆಯನ್ನ ಹಬ್ಬದ ದಿನವೇ ತಮ್ಮ ಪತಿಗೆ ನೀಡಿದ್ದಾರೆ. ಉಡುಗೊರೆಯನ್ನ ನೋಡಿದ ಕಿಚ್ಚ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ. ಪ್ರಿಯಾ ನನಗೆ ಈ ರೀತಿ ಉಡುಗೊರೆ ನೀಡುತ್ತ್ತಾರೆ ಅನ್ನೋ ನಿರೀಕ್ಷೆ ನನಗೆ ನಿಜವಾಗಿಯೂ ಇರಲಿಲ್ಲ. ನಿಜಕ್ಕೂ ಪ್ರಿಯಾಳ ಈ ಉಡುಗೊರೆ ನನಗೆ ನಿಜಕ್ಕೂ ಇಷ್ಟವಾಯಿತು. ಹಬ್ಬದ ಸಂಭ್ರಮದಲ್ಲಿದ್ದ ನನಗೆ ಪ್ರಿಯಾಳ ಈ ಉಡುಗೊರೆ, ಇನ್ನೂ ಹೆಚ್ಚಿನ ಸಂತೋಷ ತಂದಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ನಮ್ಮ ಸ್ಯಾಂಡಲ್ ವುಡ್ ನ ಕೆಲವು ನಟರಿಗೆ ಈ ಯುಗಾದಿ ಬಹಳ ವಿಶೇಷವಾಗಿದೆ. ಯಾಕಂದ್ರೆ ರಿಷಬ್ ಶೆಟ್ಟಿ ಹಾಗೂ ಸೃಜನ್ ಲೋಕೇಶ್ ಗೆ ಗಂಡು ಮಕ್ಕಳು ಹುಟ್ಟಿದರೆ, ಇತ್ತ ನಮ್ಮ ಕಿಚ್ಚ ಸುದೀಪ್ ಗೆ ಅವರ ಪತ್ನಿ ಪ್ರಿಯಾ ಕಿಚ್ಚ ಕ್ರಿಯೇಷನ್ ಯೂಟ್ಯೂಬ್ ನ್ನ ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ. ನಮ್ಮ ನಟರಿಗೆ ನಿಜಕ್ಕೂ ಈ ವರ್ಷದ ಯುಗಾದಿ ಮರೆಯಲಾಗದ ದಿನವಾಗಿದೆ ಅಂತಾನೆ ಹೇಳಬಹುದು.

LEAVE A REPLY

Please enter your comment!
Please enter your name here