ಸ್ಟಾರ್ ನಟನಾಗಿದ್ದು ,ಪೋಷಕ ನಟನ ಪಾತ್ರಕ್ಕೆ ಬಣ್ಣ ಹಚ್ಚುವುದು ಕಷ್ಟದ ವಿಷಯವಾ? ಕಿಚ್ಚನ ಮಾತು

0
322

ಇತ್ತೀಚಿಗಷ್ಟೆ ಸೈರಾ ನರಸಿಂಹ ರೆಡ್ಡಿ ಚಿತ್ರ ಸೌತ್ ಸಿನಿರಂಗದಲ್ಲಿ ಹೆಚ್ಚು ಸದ್ದು ಮಾಡಿತ್ತು. ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಹೈ ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕವಾದ ಅಭಿಪ್ರಾಯ ವ್ಯಕ್ತವಾಗಿತ್ತು. ಖ್ಯಾತ ನಿರ್ದೇಶಕರಾದ ರಾಜ್ ಮೌಳಿ ಅವರು ಸಹ ಕಿಚ್ಚನ ಪಾತ್ರವನ್ನು ಮೆಚ್ಚಿಕೊಂಡಿದ್ದರು. ಸ್ಯಾಂಡಲ್ ವುಡ್ ನಲ್ಲಿ ಸುದೀಪ್ ಒಬ್ಬ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಪೈಲ್ವಾನ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿತ್ತು. ಅಭಿನಯ ಚಕ್ರವರ್ತಿ ತಮ್ಮದೆಯಾದಂತಹ ಅಭಿಮಾನದ ಬಳಗವನ್ನು ಹೊಂದಿದ್ದಾರೆ. ಒಬ್ಬ ಸ್ಟಾರ್ ನಟ ಬೇರೆ ಭಾಷೆಯ ಚಿತ್ರದಲ್ಲಿ ಪೋಷಕ ನಟನ ಪಾತ್ರಕ್ಕೆ ಬಣ್ಣ ಹಚ್ಚುವುದು ಎಷ್ಟು ಕಷ್ಟ ಎನ್ನುವದರ ಕುರಿತು ಮಾತನಾಡಿದ್ದಾರೆ. ಮುಂದೆ ಓದಿ

ಹೀರೋ ಎನ್ನುವ ಭಾವನೆ ಇದ್ದೇ ಇರುತ್ತದೆ

ಯಾರೇ ಆದರು ಹೀರೋ ಆಗುವುದು ಮತ್ತು ಚಿತ್ರರಂಗದಲ್ಲಿ ತಮ್ಮದೆಯಾದ ಸ್ಥಾನವನ್ನು ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನಿಮ್ಮ ಪ್ರತಿಭೆ, ಅದೃಷ್ಟದಿಂದ ನಿಮ್ಮದೆಯಾದ ಅಭಿಮಾನದ ಬಳಗ, ಒಂದು ವಿಸ್ತಾರವಾದ ಮಾರುಕಟ್ಟೆ ಅವರಿಗಾಗಿ ನಿರ್ಮಾಣವಾಗಿರುತ್ತದೆ. ಬೇಕಿದ್ದರು, ಬೇಡವಾಗಿದ್ದರು ನಾನು ಹೀರೋ ಎನ್ನುವ ಭಾವನೆ ಇದ್ದೇ ಇರುತ್ತದೆ. ಆದ್ದರಿಂದ ಬೇರೆ ಭಾಷೆಯ ಚಿತ್ರದಲ್ಲಿ ಪೋಷಕ ನಟನ ಪಾತ್ರದಲ್ಲಿ ಅಭಿನಯಿಸುವುದು ಕೊಂಚ ಕಷ್ಟ. ಆ ಚಿತ್ರದಲ್ಲಿ ನಿಮ್ಮ ಪಾತ್ರಕ್ಕೆ ಅದೆಷ್ಟೇ ಪ್ರಾಮುಖ್ಯತೆ ಇದ್ದರು ಸಹ, ಹೀರೋ ಬೇರೆಯವರು ಆಗಿದ್ದರಿಂದ ಅದು ಪೋಷಕ ನಟನ ಪಾತ್ರವೆ ಆಗಿರುತ್ತದೆ.

ಎಂಜಾಯ್ ಮಾಡುವ ಮನಸ್ಥಿತಿ ಇರಬೇಕು ಅಷ್ಟೆ

ಚಿತ್ರದಲ್ಲಿ ನೀವು ಔಟ್ ಆಫ್ ಫೋಕಸ್ ನಲ್ಲಿ ಇರುತ್ತೀರಿ. ಅದೆ ನೀವು ಆ ಪಾತ್ರದ ಅವಕಾಶವನ್ನು ಎಂಜಾಯ್ ಮಾಡುವ ಮನಸ್ಥಿತಿ ಬೆಳೆಸಿಕೊಂಡಾಗ, ಅದರಷ್ಟು ಖುಷಿ ಕೊಡುವ ಸಂಗತಿ ಮತ್ತೊಂದಿಲ್ಲ. ಅದೆ ಮನಸ್ಥಿತಿಯೊಂದಿಗೆ ನಾನು ಶೂಟಿಂಗ್ ಸ್ಪಾಟ್ ಗೆ ಹೋಗುತ್ತಿದ್ದೆ ಎಂದು ಹೇಳುವ ಮೂಲಕ ಪೋಷಕ ನಟನ ಪಾತ್ರದ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ ಸುದೀಪ್. ಸದ್ಯಕ್ಕೆ ಇತರ ಭಾಷೆಯ ಚಿತ್ರರಂಗದಲ್ಲಿ ಬೈಯೋಪಿಕ್ ಚಿತ್ರದ ಟ್ರೆಂಡ್ ನಡೆಯುತ್ತಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಕಥೆಗೆ ಸಿನಿಮಾ ರೂಪವನ್ನು ಕೊಡುತ್ತಿದ್ದಾರೆ. ಸುದೀಪ್ ಅವರಿಗೂ ಸಹ ಬೈಯೋಪಿಕ್ ಚಿತ್ರದ ವಿಷಯದಲ್ಲಿ ಪ್ರಶ್ನೆಗಳು ಎದುರಾಗಿದ್ದವು.

ಅಂಬರೀಷ್ ಅವರ ವ್ಯಕ್ತಿತ್ವ ಸಿನಿಮಾ ಆಗಲು ಯೋಗ್ಯವಿದೆ

ಅಂಬರೀಷ್ ಅವರ ಬೈಯೋಪಿಕ್ ಚಿತ್ರದಲ್ಲಿ ನಟಿಸುವ ಅವಕಾಶ ನಿಮಗೆ ಸಿಕ್ಕರೆ ನೀವು ನಟಿಸುತ್ತೀರಾ ಎನ್ನುವ ಪ್ರಶ್ನೆಗೆ ಕಿಚ್ಚ ಉತ್ತರಿಸಿದ್ದಾರೆ. ಅಂಬರೀಷ್ ಅವರ ವ್ಯಕ್ತಿತ್ವ ಸಿನಿಮಾ ಆಗಲು ಯೋಗ್ಯವಿದೆ ಅದರ ಬಗ್ಗೆ ಸಂಶಯವೇ ಇಲ್ಲ. ಇವತ್ತಿಗೂ ಸಹ ಅವರು ನಮ್ಮೊಂದಿಗೆ ಇದ್ದಾರೆ. ಅವರ ಜೀವನ ಶೈಲಿ, ಬದುಕುವ ರೀತಿ ಹೀಗೆ ಪ್ರತಿಯೊಂದು ವಿಚಾರವು ನಮಗೆ ತಿಳಿದಿದೆ.

ನಮ್ಮ ಮೊಮ್ಮಕ್ಕಳಿಗೆ ಸೂಕ್ತ

ಆದ್ದರಿಂದ ನಾನು ಅವರ ಪಾತ್ರವನ್ನು ಮಾಡಿದರೆ ಸ್ವತಃ ನೀವೆ ಒಪ್ಪಿಕೊಳ್ಳುವುದಿಲ್ಲ. ಅಂಬರೀಷ್ ಅವರು ಈ ತರಹ ಇರಲಿಲ್ಲ ಮತ್ತು ಈ ರೀತಿಯಾಗಿ ಮಾತನಾಡುತ್ತಿರಲಿಲ್ಲ ಎನ್ನುವ ಸಾಧ್ಯತೆ ಇದೆ. ಅಂಬರೀಷ್ ಅವರ ಬೈಯೋಪಿಕ್ ಸಿನಿಮಾ ನಮ್ಮ ಮೊಮ್ಮಕ್ಕಳಿಗೆ ಸೂಕ್ತ ಏಕೆಂದರೆ ಅವರು ಅಂಬಿಯನ್ನು ನೋಡಿರಲಿಲ್ಲ, ಅವರ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ ಎಂದು ಸುದೀಪ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here