ಪ್ರವಾಹ ಪೀಡಿತದಿಂದ ಬಳಲುತ್ತಿರುವ ಜನರ ಸಮಸ್ಯೆಯ ಕುರಿತು ಕಿಚ್ಚ ಹೇಳಿದ್ದಾದ್ರು ಏನು?

0
385

ಕರ್ನಾಟಕದಲ್ಲಿ ಧಾರಾಕಾರವಾದ ಮಳೆ ಸುರಿದ ಕಾರಣದಿಂದಾಗಿ ಜನರು ಪರದಾಡುತ್ತಿದ್ದಾರೆ. ಇನ್ನು ಪ್ರವಾಹ ಪೀಡಿತ ಪ್ರದೇಶದ ಜನರ ಕಷ್ಟ ಊಹಿಸಿಕೊಳ್ಳುವುದಕ್ಕು ಸಾಧ್ಯವಿಲ್ಲ. ಮಲೆನಾಡು ಮತ್ತು ಇನ್ನಿತರ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಜನರು ಸರಿಯಾಗಿ ರಸ್ತೆಯಲ್ಲಿ ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಲ್ಲಿ ನೀರು ನುಗ್ಗಿದ್ದು, ಜನರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾವೇರಿ, ಕೊಡಗು, ಬಾಗಲಕೋಟೆ, ಹಾಸನ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದೆ. ಶಾಲಾ ಕಾಲೆಜಿಗಳಿಗೂ ಎರಡು ದಿನಗಳ ಕಾಲ ರಜೆ ಘೋಷಿಸಿದ್ದಾರೆ. ಜನರು ಇದರಿಂದ ಹೊರ ಬರಲು ಸಾಕಷ್ಟು ಒದ್ದಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಟರು ಈ ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಪ್ರವಾಹದ ಫೋಟೋಗಳನ್ನು ನೋಡಿದ್ದೇನೆ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ

ಪ್ರವಾಹದಿಂದ ರಾಜ್ಯದ ಜನತೆ ಸಂಕಷ್ಟದ ಪರಿಸ್ಥಿತಿಯನ್ನು ಎದುರುಸುತ್ತಿದ್ದು, ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಪ್ರಜೆಗಳ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಅಪಾಯದಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆಗೆ ಕೂಡಲೆ ಬರುವಂತೆ ಕಿಚ್ಚ ಅಭಿಮಾನಿಗಳಲ್ಲಿ ಮತ್ತು ತಮ್ಮ ಸ್ನೇಹಿತರಲ್ಲಿ ವಿನಂತಿಸಿಕೊಂಡಿದ್ದಾರೆ. ನಾನು ಉತ್ತರ ಕರ್ನಾಟಕದಲ್ಲಿ ಆಗುತ್ತಿರುವ ಪ್ರವಾಹದ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡುವ ಮೂಲಕ ಅಲ್ಲಿಯ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಸರ್ಕಾರದವರು ಖಂಡಿತವಾಗಿ ಸಹಾಯ ಮಾಡುತ್ತಾರೆ. ನಮ್ಮ ಕಡೆಯಿಂದ ಸಹ ಏನಾದರು ಸಹಾಯ ಮಾಡಲೆಬೇಕಾಗಿದೆ ಎಂದು ಹೇಳಿದ್ದಾರೆ.

ನಾವೆಲ್ಲರು ಒಗ್ಗಟ್ಟಾಗಿ ನಮ್ಮವರಿಗೆ ಸಹಾಯ ಮಾಡೋಣ

ನನ್ನ ಸ್ನೇಹಿತರ ಬಳಗಕ್ಕೆ ನನ್ನದೊಂದು ಚಿಕ್ಕ ವಿನಂತಿ. ಅಲ್ಲೆ ಸುತ್ತ ಮುತ್ತ ಇರುವ ಮನೆಗಳಿಗೆ ಭೇಟಿ ನೀಡಿ ಏನು ಸಹಾಯ ಮಾಡಬೇಕು ಸದ್ಯಕ್ಕೆ ಅವರಿಗೆ ಏನು ಅವಶ್ಯಕತೆ ಇದೆ, ತಕ್ಷಣಕ್ಕೆ ಏನು ಮಾಡಬಹುದು, ನಮ್ಮ ಕಡೆಯಿಂದ ಏನು ಮಾಡಲಿಕ್ಕೆ ಸಾಧ್ಯ ಎನ್ನುವುದನ್ನು ನನಗೆ ತಿಳಿಸಿ. ನಾವೆಲ್ಲರು ಒಗ್ಗಟ್ಟಾಗಿ ನಮ್ಮವರಿಗೆ ಸಹಾಯ ಮಾಡುವ ಮೂಲಕ ಅಪಾಯದಿಂದ ಪಾರು ಮಾಡೋಣ. ದಯವಿಟ್ಟು ಆದಷ್ಟು ಬೇಗ ಹೋಗಿ ನಮ್ಮವರಿಗೆ ಏನು ಮಾಡಬಹುದೆನ್ನುವುದು ನನಗೆ ತಿಳಿಸಿ ಎಂದು ರಾಜ್ಯದ ಜನತೆಯ ಕಾಳಜಿಯ ಮಾತುಗಳನ್ನು ಆಡಿದ್ದಾರೆ. ಕಿಚ್ಚನ ಮಾತಿನಂತೆ ಅಭಿಮಾನಿಗಳು ನಡೆದುಕೊಳ್ಳುತ್ತಿದ್ದಾರೆ.

ಮೂಲ ಸೌಖರ್ಯಗಳನ್ನು ತಲುಪಿಸುವ ಪ್ರಯತ್ನ ಮಾಡೋಣ

ಉತ್ತರ ಕರ್ನಾಟಕದ ಜನರ ಸಮಸ್ಯೆ ಏನು ಎನ್ನುವುದನ್ನು ಅರಿತು ಸಹಾಯ ಮಾಡಲು ಮುಂದಾಗುತ್ತಿದ್ದಾರೆ. ಉಪಕಾರ ಮಾಡುವವರ ಜನರ ಜೊತೆಗೆ ಇನ್ನು ಅನೇಕ ಪ್ರಜೆಗಳು ಸೇರಿಕೊಳ್ಳಬೇಕಾಗಿದೆ ಎಂದು ಕಿಚ್ಚ ಹೇಳಿದ್ದಾರೆ. ಪ್ರವಾಹ ಪೀಡಿತ ಜನರಿಗೆ ಮೂಲ ಸೌಲಭ್ಯಗಳಾದ ಊಟ, ಬಟ್ಟೆ, ಆಹಾರ, ವಾಟರ್ ಬಾಟಲ್, ಮೆಡಿಸಿನ್ಸ್, ಹಾಲಿನ ಪ್ಯಾಕೆಟ್ ಗಳು ಇನ್ನು ಅತ್ಯವಶ್ಯಕವಾದ ವಸ್ತುಗಳನ್ನು ತಲುಪಿಸುವ ಪ್ರಯತ್ನದಲ್ಲಿ ಅಭಿಮಾನಿಗಳು ನಿರತರಾಗಿದ್ದಾರೆ.

ಕೇವಲ ಸಿನಿಮಾವನ್ನು ನೋಡಿ ತಮ್ಮ ನೆಚ್ಚಿನ ನಟನನ್ನು ಅಭಿಮಾನಿಗಳು ಆರಾಧಿಸುತ್ತಿದ್ದರು. ಆದರೆ ಈಗ ನಟನ ಮಾತೆ ವೇದವಾಕ್ಯವಾಗಿದೆ. ಕಿಚ್ಚನ ಮೇಲೆ ಅಭಿಮಾನಿಗಳು ಎಷ್ಟರ ಮಟ್ಟಿಗೆ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ ಎನ್ನುವುದು ನಮಗೆ ಇದರಲ್ಲಿಯೆ ಗೊತ್ತಾಗುತ್ತದೆ.

LEAVE A REPLY

Please enter your comment!
Please enter your name here