ಕಿಚ್ಚನ ಅಭಿಮಾನಿಯ ಸಾವು, ಕುಟುಂಬಸ್ಥರಿಗೆ ಸಹಾಯ ಮಾಡಿದ ಅಭಿನಯ ಚಕ್ರವರ್ತಿ

0
1281

ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಿಚ್ಚನ ಅಭಿನಯಕ್ಕೆ ಕರ್ನಾಟಕದ ಜನತೆಯೆ ಮಾರು ಹೋಗಿದ್ದರು. ಕೇವಲ ಕನ್ನಡ ಚಿತ್ರರಂಗವಷ್ಟೆ ಅಲ್ಲ, ಇತರ ಭಾಷೆಯ ಚಲನಚಿತ್ರಗಳಲ್ಲು ಸಹ ಕಿಚ್ಚ ತಮ್ಮ ಅಭಿನಯದ ಛಾಪನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ. ಕಿಚ್ಚ ಸಿನಿಮಾ ಯಶಸ್ಸಿನ ನಂತರ ಇವರನ್ನು ಕಿಚ್ಚ ಸುದೀಪ್ ಎಂದು ಜನರು ಕರೆಯಲು ಆರಂಭಿಸಿದ್ದರು. ಕಾಲ ಕ್ರಮೇಣ ಕಳೆದಂತೆ ಹೆಚ್ಚು ಅವಕಾಶಗಳು ಹುಡುಕುತ್ತ ಬಂದಿದ್ದವು. ಸುದೀಪ್ ಅವರು ಸಹ ತಮ್ಮ ಅಭಿನಯದ ಕಲೆಯ ಮೂಲಕ ಚಂದನವನದಲ್ಲಿ ಬೆಳೆಯುತ್ತ ಹೋದರು. ಆದ್ದರಿಂದ ಇವರಿಗೆ ಅಭಿನಯ ಚಕ್ರವರ್ತಿ ಎನ್ನುವ ಬಿರುದನ್ನು ನೀಡಿದ್ದರು. ಅಂದಿನಿಂದ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿಯಾಗಿ ಇವರು ಗುರುತಿಸಿಕೊಳ್ಳುತ್ತಾರೆ.

ಅಭಿಮಾನವನ್ನು ವ್ಯಕ್ತ ಪಡಿಸುವ ರೀತಿ

ಅಭಿಮಾನಿಗಳು ಸ್ಟಾರ್ ನಟರ ಮೇಲೆ ಎಷ್ಟರ ಮಟ್ಟಿಗೆ ಅಭಿಮಾನವನ್ನು ಇಟ್ಟುಕೊಂಡಿರುತ್ತಾರೆಂದು, ನೀವು ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ನೋಡಿರುತ್ತೀರಿ. ನಟರ ಕಟ್ ಔಟ್ ಗೆ ಹೂವಿನಾರ ಹಾಕಿ, ಪಟಾಕಿಯನ್ನು ಹೊಡೆದು ಸಂಭ್ರಮಿಸುತ್ತಾರೆ. ಡಾಕ್ಟರ್ ರಾಜ್ ಕುಮಾರ್ ಅವರು ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. ನಟರ ಹುಟ್ಟುಹಬ್ಬದ ದಿನ ಬಂದರೆ ಸಾಕು ಮಧ್ಯರಾತ್ರಿ ಇಂದಾನೆ ನಟರ ಮನೆ ಹತ್ತಿರ ಕೇಕ್ ಗಳನ್ನು ತಂದು, ತಮ್ಮ ನೆಚ್ಚಿನ ನಾಯಕನನ್ನು ಭೇಟಿ ಮಾಡಿ ಫೋಟೋ ತೆಗಿಸಿಕೊಂಡು ಹೋಗುತ್ತಾರೆ. ಇದೆ ವಿಚಾರದಲ್ಲಿ ಕೆಲವರು ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಫ್ಯಾನ್ಸ್ ಕ್ಲಬ್ ಪೇಜ್ ಕ್ರಿಯೇಟ್ ಮಾಡಿ, ನಟರ ಫೋಟೋಸ್ ಮತ್ತು ಅವರ ಬಗ್ಗೆ ಅಪ್ ಟು ಡೇಟ್ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿರುತ್ತಾರೆ.

ರಸ್ತೆಯ ಅಪಘಾತದಲ್ಲಿ ಕಿಚ್ಚನ ಅಭಿಮಾನಿ ಮೃತ ಪಟ್ಟಿದ್ದಾನೆ

ಅಭಿಮಾನಿಗಳು ಕಷ್ಟದಲ್ಲಿದ್ದಾಗ ಅಥವಾ ಏನೊ ಒಂದು ಅಪಘಾತವಾದಾಗ ಅದಕ್ಕೆ ಸ್ಪಂದಿಸುವುದು ಸ್ಟಾರ್ ನಟರ ಕರ್ತವ್ಯವಾಗಿರುತ್ತದೆ. ಹಿಂದೆ ಅನೇಕ ಬಾರಿ ಈ ತರಹದ ಸನ್ನಿವೇಶಗಳು ಎದುರಾದಾಗ ನಟರು ಪ್ರತಿಕ್ರಿಯಿಸಿದ್ದಾರೆ. ಇಂತಹದೆ ಒಂದು ಘಟನೆ ಈಗ ನಡೆದಿದೆ. ಹೌದು, ರಸ್ತೆಯ ಅಪಘಾತದಲ್ಲಿ ಕಿಚ್ಚನ ಅಭಿಮಾನಿ ಮೃತ ಪಟ್ಟಿದ್ದಾನೆ. ತುಮಕೂರಿನಲ್ಲಿ ಬೈಕ್ ಚಲಾಯಿಸುವ ವೇಳೆಯಲ್ಲಿ ರಸ್ತೆಗೆ ಬಿದ್ದು ಮರಣ ಹೊಂದಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಕಿಚ್ಚ ಸಂತಾಪ ಸೂಚಿಸಿದ್ದರು. ಅಪ್ಪಟ ಅಭಿಮಾನಿಯನ್ನು ಕಳೆದುಕೊಂಡಿರುವ ನೋವಿನ ಕುರಿತು ಟ್ವೀಟ್ ಮಾಡುವ ಮೂಲಕ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಸತ್ತು ಹೋದ ಪುನೀತ್ ಆರ್ಯ ಅಭಿಮಾನಿಯ ಕುಟುಂಬದವರಿಗೆ ಸಮಾಧಾನ ಹೇಳಿ, 2, 50,000 ಹಣವನ್ನು ನೀಡಿ ಸಹಾಯ ಮಾಡಿದ್ದಾರೆ.

ಕಿಚ್ಚ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದರು

ಪುನೀತ್ ಆರ್ಯ ತುಮಕೂರು ಜಿಲ್ಲೆಯ ನಿವಾಸಿಯಾಗಿದ್ದು, ಕಿಚ್ಚ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದರು. ಸಣ್ಣ ವಯಸ್ಸಿನಲ್ಲೆ ಇಹಲೋಕವನ್ನು ತ್ಯಜಿಸಿದ್ದಾರೆ. ಕಿಚ್ಚನ ಅಭಿಮಾನಿಗಳು ಸಹ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಪುನೀತ್ ಆರ್ಯನ ನಿಧನಕ್ಕೆ ನಟ ಕಬೀರ್ ದಾಹಾನ್ ಸಿಂಗ್ ಅವರು ಕಣ್ಣೀರು ಹಾಕಿದ್ದಾರೆ.

LEAVE A REPLY

Please enter your comment!
Please enter your name here