2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಲಿಸ್ಟ್ ಇಲ್ಲಿದೆ

0
525

ಸಾಧನೆ ಅನ್ನೋದು ಯಾರ ಮನೆಯ ಆಸ್ತಿಯು ಅಲ್ಲ. ಅದನ್ನ ಯಾರು ಬೇಕಾದರೂ ಮಾಡಬಹುದು. ಆದ್ರೆ ಅದು ಒಂದೆರಡು ದಿನಗಳಲ್ಲಿ ಆಗುವುದಿಲ್ಲ. ಹೌದು. ಸಾಧನೆ ಅನ್ನೋದು ಒಂದೆರಡು ದಿನಗಳ ಮಾತಲ್ಲ. ಅದಕ್ಕೆ ಅನೇಕ ವರ್ಷಗಳ ಪರಿಶ್ರಮ ಅಗತ್ಯವಿದೆ. ಎಷ್ಟೋ ವರ್ಷಗಳ ಕಾಲ, ಕಷ್ಟ ಪಟ್ಟು ಗುರಿತಿಸಿಕೊಳ್ಳುವ ವ್ಯಕ್ತಿಗಳಿಗೆ ಈ ಸಾಧನೆ ಅನ್ನೋದು ಲಭಿಸುತ್ತದೆ. ಆಗ ಮಾತ್ರ ಅವರಿಗೆ ಗೌರವ, ಸನ್ಮಾನ ಎಲ್ಲವೂ ಸಿಗುತ್ತದೆ. ಹೌದು. ಅದೇ ರೀತಿ ಈಗ ಕೆಂಪೇಗೌಡ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಹಾಗಾಗಿ ಈಗ ಆ ಪ್ರಶಸ್ತಿಗೆ ಸುಮಾರು 70 ಜನ ಸಾಧಕರು ಆಯ್ಕೆಯಾಗಿದ್ದಾರೆ. ಹೌದು. ಬಿಬಿಎಂಪಿ ವತಿಯಿಂದ ಪ್ರತಿವರ್ಷವೂ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದೇ ರೀತಿ ಈ ಬಾರಿಯೂ ಸಹ ಈ ಪ್ರಶಸ್ತಿಯನ್ನು ನೀಡಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದಾರೆ.

2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ನೀಡಲಾಗುತ್ತಿದೆ

ಬಿಬಿಎಂಪಿ ವತಿಯಿಂದ ಪ್ರತಿವರ್ಷವೂ ಕೆಂಪೇಗೌಡ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದೇ ರೀತಿ ಈ ಬಾರಿಯೂ ಸಹ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇನ್ನು, ಈ ವರ್ಷದ ಸಾಧಕರ ಆಯ್ಕೆಯನ್ನು ನಿವೃತ್ತ ನ್ಯಾಯಮೂರ್ತಿ ಸದಾಶಿವ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಸಮಿತಿಯು ವಿವಿಧ ಕ್ಷೇತ್ರಗಳ 70 ಸಾಧಕರನ್ನು ಈ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ಈ ಕಾರ್ಯಕ್ರಮ ಸೆಪ್ಟೆಂಬರ್​ ೪ರಂದು ಡಾ.ರಾಜ್​ಕುಮಾರ್ ಗಾಜಿನ ಮನೆಯಲ್ಲಿ ನಡೆಯಲಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಯೂ 25 ಸಾವಿರ ನಗದು ಹಾಗೂ ಕೆಂಪೇಗೌಡರ ಸ್ಮರಣಿಕೆಯನ್ನು ಹೊಂದಿರುತ್ತದೆ. ಇದೇ ವೇಳೆ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಸ್ಮರಣಾರ್ಥ ಹತ್ತು ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಯಾರೆಲ್ಲಾ ಆಯ್ಕೆಯಾಗಿದ್ದಾರೆ?

ಮುಖ್ಯಮಂತ್ರಿ ಚಂದ್ರು (ಸಿನಿಮಾ)
ಚಂಪಾ (ಸಾಹಿತ್ಯ)
ಪ್ರೊ. ಶಿವರಾಮಯ್ಯ (ಸಾಹಿತ್ಯ)
ಅಬ್ದುಲ್ ಬಷೀರ್ (ಸಾಹಿತ್ಯ)
ಪ್ರೊ.ರವಿವರ್ಮ ಕುಮಾರ್ (ಕಾನೂನು)
ಬಿಂದುರಾಣಿ (ಕ್ರೀಡೆ)
ಶಾಂತರಾಮಮಮೂರ್ತಿ(ಕ್ರೀಡೆ)
ಸೈಯ್ಯದ್ ಇಬಯಾಯತುಲ್ಲಾ (ಅಂಗವಿಕಲ ಕ್ರೀಡಾಪಟು)
ಕುಮಾರಿ ಪ್ರತ್ಯಕ್ಷಾ- (ಬಾಲ ಪ್ರತಿಭೆ)
ಪ್ರೊ. ನಾಗೇಶ್ ಬೆಟ್ಟಕೋಟೆ (ರಂಗಭೂಮಿ)
ಮಂಜುಳಾ ಗುರುರಾಜ್ (ಸಂಗೀತ)
ಡಿ.ರೂಪಾ (ಸರ್ಕಾರಿ ಸೇವೆ)
ಅನುಚೇತ್​ ಮತ್ತು ತಂಡ (ಗೌರಿ ಹತ್ಯೆ ಪ್ರಕರಣ ಬೇಧಿಸಿದ್ದಕ್ಕೆ)

ಕೆಂಪೇಗೌಡ ಪ್ರಶಸ್ತಿ ನಿಜಕ್ಕೂ ಸಾಧನೆ ಮಾಡಿದ ಸಾಧಕರಿಗೆ ನೀಡುವುದಾಗಿದೆ. ಹಾಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇದನ್ನು ನೀಡಲಾಗುತ್ತದೆ. ಅದೇ ರೀತಿ ಇದನ್ನು ಪಡೆಯಲು, ಇಂಥದ್ದೇ ಕ್ಷೇತ್ರದಲ್ಲಿ ಸಾಧನೆ ಮಾಡಿರಬೇಕೆಂದೇನೂ ಇಲ್ಲ. ಬದಲಿಗೆ ಯಾವ ಕ್ಷೇತ್ರದಲ್ಲಾದ್ರು ಸಾಧನೆ ಮಾಡಿರಬಹುದು. ಹಾಗಾಗಿ ಅಂಥವರಿಗೆ ಈ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗುತ್ತದೆ.

LEAVE A REPLY

Please enter your comment!
Please enter your name here