ಎಸ್ಎಸ್ಎಲ್ಸಿ ವರೆಗೂ ಕನ್ನಡದ ಮಾದ್ಯಮದಲ್ಲಿ ಓದಿ 15 ಚಿನ್ನದ ಪದಕಗಳನ್ನು ಬಾಚಿಕೊಂಡ ಕನ್ನಡತಿ

0
5425
arpitha

ಶಿಕ್ಷಣ ಎಂದರೆ ಒಂದು ಜ್ಞಾನ ಮತ್ತು ವಿಧ್ಯೆ, ಕಲಿತ ವಿಧ್ಯೆಯೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಉಪಯೋಗಕ್ಕೆ ಬಂದೆ ಬರುತ್ತದೆ. ತುಂಬಾ ಜನರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲನ್ನು ಏರಿದ್ದಾರೆ. ಸಣ್ಣ ವಯಸ್ಸಿನಿಂದ ಶಾಲೆಗಳಲ್ಲಿ ಆಡುತ್ತಾ ಓದುತ್ತಾ ಬೆಳೆದಿದ್ದೇವೆ. ಆಟ ಅಥವಾ ಪಾಠ ಯಾವುದೇ ವಿಷಯವಾಗಲಿ ನಾವು ಚೆನ್ನಾಗಿ ಪರ್ಫಾರ್ಮ್ ಮಾಡಿದರೆ ನಮ್ಮಗೊಂದು ಪದಕ, ಕಪ್ ಗಳನ್ನು ಬಹುಮಾನ ವಾಗಿ ನೀಡುತ್ತಿದ್ದರು. ಈಗ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಪಡೆದ ಯುವತಿ 15 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಮುಂದೆ ಒದಿ

ಎಂಬಿಬಿಎಸ್ ಪದವಿಯಲ್ಲಿ 15 ಚಿನ್ನದ ಪದಕಗಳನ್ನು ಪಡೆದುಕೊಂಡ ಅರ್ಪಿತ ಜಿ ಎಸ್

ಎಸ್‌ಎಸ್‌ಎಲ್‌ಸಿ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದುಕೊಂಡಿದ್ದರು, ಆನಂತರ ಎಂಬಿಬಿಎಸ್ ಪದವಿಯಲ್ಲಿ 15 ಚಿನ್ನದ ಪದಕಗಳನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ ಇದೂ ನಿಜಕ್ಕೂ ಬಹಳ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಕೊಡುವ ವಿಷಯವಾಗಿದೆ. ಮನುಷ್ಯನಲ್ಲಿ ಗೆಲ್ಲುವ ಛಲ ಇದ್ದರೆ ಏನೂಬೇಕಾದರೂ ಮಾಡಬಹುದು ಎನ್ನುವ ನುಡಿಗಳಿಗೆ ಇವರು ಸಾಕ್ಷಿಯಾಗಿದ್ದಾರೆ. ವಿಧ್ಯಾರ್ಥಿನಿಯ ಹೆಸರು ಅರ್ಪಿತಾ ಜಿ ಎಸ್ ಧಾರವಾಡ್ ನಾ ಪ್ರತಿಷ್ಠಿತ ವೈದ್ಯಕೀಯ ಕಾಲೇಜ್ ಎಂದೇ ಹೆಸರುವಾಸಿ ಆದ ಎಸ್ ಡಿ ಎಂ ಕಾಲೇಜಿನಲ್ಲಿ ಇವರು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.

arpitha receiving medal

ವೀರೇಂದ್ರ ಹೆಗ್ಡೆ ಅವರು ಚಿನ್ನದ ಪದಕಗಳನ್ನು ನೀಡಿ ಸನ್ಮಾನಿಸಿದ್ದಾರೆ

2017 ರ ಇಸವಿಯ ಚಿನ್ನದ ಹುಡುಗಿ ಆಗಿ ಗುರುತಿಸಿಕೊಂಡಿದ್ದಾರೆ. ಹೆಗೆಡೆ ಕಲಾಕ್ಷೇತ್ರದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯಕೀಯ ವಿದ್ಯಾಲಯದ 9ನೇ ಘಾತಕೋತ್ಸವದ ಆವೃತ್ತಿಯಲ್ಲಿ ಪುಣ್ಯ ಕ್ಷೇತ್ರ ದರ್ಮಸ್ಥಳದ ಮುಖ್ಯಸ್ಥರು ಡಾ ವೀರೇಂದ್ರ ಹೆಗ್ಡೆ ಅವರು ಅರ್ಪಿತಾಳಿಗೆ ಚಿನ್ನದ ಪದಕವನ್ನು ನೀಡಿ ಸನ್ಮಾನಿಸಿ ಗೌರಿಸಿದ್ದಾರೆ. ಅರ್ಪಿತಾ ಅವರು ಹುಟ್ಟಿ ಬೆಳೆದಿದ್ದ ಊರು ದಾವಣಗೆರೆ, ಇವರ ತಂದೆಯ ಹೆಸರು ಜಯಶೀಲ ರೆಡ್ಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ, ತಾಯಿಯ ಹೆಸರು ಶಾಂತಕುಮಾರಿ. ವೀರೇಂದ್ರ ಹೆಗ್ಡೆ ಅವರು ಚಿನ್ನದ ಪದಕಗಳನ್ನು ನೀಡಿ ಅಭಿನಂದನೆ ವ್ಯಕ್ತ ಪಡಿಸಿದ್ದಾರೆ, ಮದುವೆ ಆಗುವ ವೇಳೆಯಲ್ಲಿ  ಚಿನ್ನ ತೆಗೆದುಕೊಳ್ಳುವ ತಲೆ ಬಿಸಿ ನಿನಗೆ ಇರುವುದಿಲ್ಲ ಅಂತಾ ಹಾಸ್ಯಮಯವಾಗಿ ಗೇಲಿ ಮಾಡಿದ್ದಾರೆ.

ನನ್ನ ಈ ಸಾಧನೆಗೆ ಅಪ್ಪ-ಅಮ್ಮನೇ ಕಾರಣ ಅಂತಾ ಯುವತಿ ಮಾತನಾಡಿದ್ದಾರೆ

ಸಮಾರಂಭ ಮುಗಿದ ಮೇಲೆ, ಅರ್ಪಿತಾ ಅವರು ತಮ್ಮ ತಂದೆ-ತಾಯಿಯ ಬಗ್ಗೆ ಮಾತನಾಡಿ ಹೋಗಲಿದ್ದಾರೆ. ನನ್ನ ಈ ಸಾಧನೆಗೆ ಅಪ್ಪ- ಅಮ್ಮನೇ ಕಾರಣ, ಅವರ ಆಶೀರ್ವಾದ ನನಗೆ ಇಲ್ಲಿಯವರೆಗೂ ಕರೆದು ಕೊಂಡು ಬಂದಿದೆ ಅಂತಾ ಹೇಳಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮಗಳ ಯಶಸ್ಸನ್ನು ನೋಡುತ್ತಿದ್ದಾರೆ ನನಗೆ ಸಂತೋಷ ಆಗುತ್ತದೆ. ನಾವು ಯಾವುದೇ ಆಸ್ತಿ ಮಾಡದೆ ಇರಬಹುದು ಆದರೆ ನನ್ನ ಮಕ್ಕಳೇ ನನ್ನ ಆಸ್ತಿ ಅಂತಾ ಹುಡುಗಿಯ ತಂದೆ ಮಾತನಾಡಿದ್ದಾರೆ. ನಿಜವಾಗಿಯೂ ಇವರ ಸಾಧನೆಯನ್ನು ರಾಜ್ಯದ ಜನರು ಮೆಚ್ಚಿಕೊಳ್ಳುವಂತಹದು.

arpitha with his parents

ಆದಿವಾಸಿಯಾ ಜನಾಂಗದ ಹುಡುಗರು ಐ‌ಐ‌ಟಿ ಸಂಸ್ಥೆಯಲ್ಲಿ ಸೀಟ್ ಗಿಟ್ಟಿಸಿಕೊಂಡಿದ್ದಾರೆ

ಛತ್ತೀಸಗಡದ ಜುಸ್ಪುರ್ ಎಂಬ ಜಿಲ್ಲೆಯ ಕೂಡುಕೆಲ, ಜಾಗ್ರಮ್ ಗ್ರಾಮದ ಆದಿವಾಸಿಯಾ ಜನಾಂಗಕ್ಕೆ ಸೇರ್ಪಡೆ ಆಗುವ ದೀಪಕ್ ಕುಮಾರ್ ಮತ್ತು ನಿತಿಶ್ ಗಂಜಾನ್ ಕಷ್ಟ ಪಟ್ಟು ವಿಧ್ಯಾಭ್ಯಾಸವನ್ನು ಮಾಡಿ ಡೆಲ್ಲಿ ಐ‌ಐ‌ಟಿ ಸಂಸ್ಥೆಯಲ್ಲಿ ಸೀಟ್ ಅನ್ನು ಗಿಟ್ಟಿಸಿಕೊಂಡಿದ್ದಾರೆ. ಟೆಕ್ಸ್ಟೈಲ್ ಅನ್ನೋ ವಿಭಾಗದ ಬ್ರ್ಯಾಂಚ್ಗೆ ಎಂಟ್ರಿ ಪಡೆದಿದ್ದಾರೆ. ಐ‌ಐ‌ಟಿ ಅಲ್ಲಿ ಸೀಟ್ ಪಡೆದುಕೊಳ್ಳುವುದು ತಮಾಷೆಯ ಮಾತಲ್ಲ. ವಿದ್ಯಾರ್ಥಿಯರ ಪರಿವಾರದವರು ಸೀಟ್ ಸಿಕ್ಕಿದಕ್ಕೆ ಖುಷಿ ಆಗಿದ್ದಾರೆ. ನಮ್ಮ ಈ ಗೆಲುವಿಗೆ ಫ್ಯಾಮಿಲಿ ಹಾಗೂ ಪ್ರೋತ್ಸಾಹ ನೀಡಿದ ನಗರದ ಜನತೆ ಕಾರಣ ಎಂದು ಹುಡುಗರು ಹೇಳಿದ್ದಾರೆ.

iit

ಹೀಗೆ ಅನೇಕ ಜನರ ಯಶಸ್ಸು ಪಡೆಯಲು ಶ್ರಮಿಸುತ್ತಿದ್ದಾರೆ, ಅವರ ಕನಸೆಲ್ಲ ನನಸಾಗಲಿ ಎಂದು ಬಯಸೋನ. ಸಾಧನೆ ಮಾಡಬೇಕೆಂದು ನಿರ್ಧರಿಸಿದವರಿಗೆ ಇವರು ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here