ಕರ್ನಾಟಕಕ್ಕೆ ಹೊಸ ಜಿಲ್ಲೆ ಸೇರ್ಪಡೆ ಆಗಲಿದೆಯಾ?

0
707

ರಾಜ್ಯ ಸರ್ಕಾರ ಹೊಸ ಜಿಲ್ಲೆಯನ್ನು ನಿರ್ಮಾಣ ಮಾಡಬೇಕೆಂಬ ನಿರ್ಣಯವನ್ನು ಮಾಡಿದ್ದಾರೆ. ಹೌದು ವಿಜಯನಗರ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯಿಂದ ಬೇರ್ಪಡಿಸಿ ಹೊಸ ಜಿಲ್ಲೆಯನ್ನಾಗಿ ಮಾಡುವ ಆಲೋಚನೆಯಲ್ಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಹೊಸ ಜಿಲ್ಲೆಯನ್ನು ಮಾಡಲಿದ್ದು, ವಿಜಯನಗರ ಜಿಲ್ಲೆಗೆ ಹೊಸದಾಗಿ 6 ತಾಲೂಕನ್ನು ಐತಿಹಾಸಿಕ ಸ್ಥಳವಾದ ಹಂಪಿಯ ರಾಜಧಾನಿಗೆ ಸೇರ್ಪಡೆ ಮಾಡಬೇಕೆನ್ನುವ ಪ್ಲಾನ್ ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ 31 ನೇ ಜಿಲ್ಲೆ

ರಾಜ್ಯದ ಜಿಲ್ಲೆಗಳನ್ನು 31 ಸಂಖ್ಯೆಗೆ ಏರ್ಪಡಿಸಲಿದ್ದು, ಯಡಿಯೂರಪ್ಪನವರು ಬಹಿರಂಗವಾಗಿ ಗುರುವಾರದ ದಿನದಂದು ಈ ವಿಷಯವನ್ನು ಘೋಷಿಸಿದ್ದಾರೆ. ಅತಿ ಶೀಘ್ರವೇ ಈ ವಿಷಯದ ಕುರಿತು ಕ್ಯಾಬಿನೆಟ್ ಎದುರು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಈ ಹೊಸ ಜಿಲ್ಲೆ ಮಾಡುವ ಯೋಜನೆಯು ಸಮಾಜ ಮತ್ತು ಆಡಳಿತದ ಹಿತಾಶಕ್ತಿಯಿಂದ ಪರಿಗಣಿಸಲಾಗಿದೆ. ವಿಜಯನಗರ ಹೊಸ ಜಿಲ್ಲೆಗೆ 6 ತಾಲೂಕುಗಳು ಸೇರ್ಪಡೆಯಾಗಲಿದ್ದು, ಬಳ್ಳಾರಿ ಜಿಲ್ಲೆಯಿಂದ 6 ತಾಲೂಕುಗಳನ್ನು ತೆಗೆದು ಹಾಕಲಾಗಿದೆ.

ಆನಂದ್ ಸಿಂಗ್ ಮನವಿ

17 ಅನರ್ಹ ಶಾಸಕರಲ್ಲಿ ಹೊಸಪೇಟೆ ಕ್ಷೇತ್ರದ ಆನಂದ್ ಸಿಂಗ್ ಅವರು ಸಹ ಒಬ್ಬರಾಗಿದ್ದರು. ಆನಂದ್ ಸಿಂಗ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ವಿಜಯನಗರ ಪ್ರದೇಶವು ಬಳ್ಳಾರಿಯಿಂದ ಪ್ರತ್ಯೇಕ ಪಡಿಸಿ ಹೊಸ ಜಿಲ್ಲೆಯನ್ನಾಗಿ ಮಾಡಬೇಕೆಂದು ಮನವಿಯನ್ನು ಸಲ್ಲಿಸಿದ್ದಾರೆ. ಇದರಿಂದ ಯಡಿಯೂರಪ್ಪನವರು ವಿಜಯನಗರ ಜಿಲ್ಲೆಗೆ ಆನಂದ್ ಸಿಂಗ್ ಅವರನ್ನು ನೂತನ ಶಾಸಕರನ್ನಾಗಿ ಮಾಡಬಹುದಾಗಿದೆ. ವಿಜಯನಗರ ಜಿಲ್ಲೆಯ ಸಂಪೂರ್ಣ ಆಡಳಿತದ ಜವಾಬ್ದಾರಿಯನ್ನು ಆನಂದ್ ಸಿಂಗ್ ಅವರು ವಹಿಸಬೇಕಾಗುತ್ತದೆ.

ನೂತನವಾದ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ

ಹೊಸ ಪ್ಲಾನ್ ಅನುಸಾರ ಬಳ್ಳಾರಿ ಜಿಲ್ಲೆಗೆ ಐದು ತಾಲೂಕುಗಳಾದ ಕುರುಗೋಡು, ಸಿರುಗುಪ್ಪ, ಸಂಡೂರ್, ಕೂಡ್ಲಿಗಿ ಪ್ರದೇಶಗಳು ಸೇರುತ್ತವೆ. ಇನ್ನುಳಿದ 6 ತಾಲೂಕುಗಳಾದ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಹರಪ್ಪನಹಳ್ಳಿ ವಿಜಯನಗರ ಜಿಲ್ಲೆಯ ಭಾಗವಾಗಲಿದ್ದು, ಹೊಸಪೇಟೆ ನಗರ ಪ್ರಧಾನ ಕಚೇರಿಯ ಸ್ಥಾನವನ್ನು ಅಲಂಕರಿಸಲಿದೆ. ಎಲ್ಲ ಅಂದುಕೊಂಡಂತೆ ಆದರೆ ಹಂಪಿ ಕರ್ನಾಟಕದಲ್ಲಿರುವ ಜಿಲ್ಲೆಗಳಲ್ಲಿ ನೂತನವಾದ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ.

ಕ್ಷೇತ್ರದ ಅಭಿವೃದ್ಧಿ ಆಗಬಹುದು

ಕರ್ನಾಟಕದಲ್ಲಿರುವ ದೊಡ್ಡ ಜಿಲ್ಲೆಗಳಲ್ಲಿ ಬಳ್ಳಾರಿ ಸಹ ಒಂದಾಗಿದ್ದು. 11 ತಾಲೂಕುಗಳನ್ನು ಹೊಂದಿದೆ. ಕೆಲ ತಾಲೂಕುಗಳು 200 ಕಿಮಿ ದೂರದಲ್ಲಿ ನೆಲೆಗೊಂಡಿವೆ. ಆದ್ದರಿಂದ ಕಾರ್ಮಿಕರಿಗೆ, ಜನ ಸಾಮಾನ್ಯರಿಗೆ ಮತ್ತು ರೈತರಿಗೆ ಪ್ರಧಾನ ಕಚೇರಿಯನ್ನು ತಲುಪಲು ಕಷ್ಟವಾಗುತ್ತಿದೆ. ಪ್ರತ್ಯೇಕವಾದ ಜಿಲ್ಲೆ ಆದಲ್ಲಿ ,ಕ್ಷೇತ್ರದ ಆಡಳಿತವು ಇನ್ನು ಅಭಿವೃದ್ಧಿ ಆಗಬಹುದು.

LEAVE A REPLY

Please enter your comment!
Please enter your name here