ಸರ್ಕಾರದಿಂದ ನೇಕಾರರಿಗೆ ಮೋಸ. ಮೊದಲು ಆದೇಶದಲ್ಲಿ ಇದ್ದಿದ್ದೆ ಒಂದು, ಈಗ ಆಗಿದ್ದೆ ಇನ್ನೊಂದು

0
770

ಪ್ರವಾಹದ ಹಿನ್ನಲೆಯಲ್ಲಿ ಅನೇಕ ಗ್ರಾಮಗಳು ಮತ್ತು ಊರುಗಳು ಜಲಸಮಾಧಿಯಾಗಿದ್ದವು. ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿರುವುದರಿಂದ 1763 ವಿದ್ಯುತ್ ಮಗ್ಗಗಳಿಗೆ ಹಾನಿಯಾಗಿತ್ತು. ಈ ಪ್ರಕ್ರಿಯೆಯಲ್ಲಿ ಹೆಚ್ಚು ವಿದ್ಯುತ್ ಮಗ್ಗಗಳಿಗೆ ತೊಂದರೆಯಾಗಿರುವುದು ರಾಮದುರ್ಗ ಊರಿನಲ್ಲಿ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಹಾನಿಗೆ ಒಳಗಾದ ಮಗ್ಗಗಳಿಗೆ ಪರಿಹಾರ ನೀಡುವ ಆಶ್ವಾಸನೆಯನ್ನು ನೀಡಿದ್ದರು. ಹಾನಿಯಾದ ಪ್ರತಿ ಮಗ್ಗಕ್ಕೆ 25 ಸಾವಿರ ರೂಪಾಯಿ ಪರಿಹಾರವನ್ನಾಗಿ ನೀಡುತ್ತೇವೆ ಎಂದು ಆಗಸ್ಟ್ 18 ರಂದು ಹೇಳಿದ್ದರು. ಆದರೆ ನೇಕಾರರಿಗೆ ಆಘಾತವಾದ ಸುದ್ದಿಯೊಂದು ಕಾದಿತ್ತು. ಮುಂದೆ ಓದಿ

ನೇಕಾರರ ಆಕ್ರೋಶ

ಹೌದು. ಇದೇ ಆಗಸ್ಟ್ 24 ರಂದು ಸಿಎಂ ಆದೇಶವನ್ನು ಕಂದಾಯ ಇಲಾಖೆಯವರು ಬದಲಾಯಿಸಿಬಿಟ್ಟಿದ್ದರು. ಹಾನಿಗೊಳಗಾದ ಪ್ರತಿಯೊಂದು ಮಗ್ಗಕ್ಕೆ ಮೊತ್ತ ನಿಗಧಿಸಲಾಗಿತ್ತು ಎನ್ನುವುದು ಸಿಎಂ ಅವರು ಹೊರಡಿಸಿದ ಆದೇಶದಲ್ಲಿತ್ತು. ಪ್ರತಿ ಮಗ್ಗದ ಬದಲಾಗಿ ಹಾನಿಯಾದ ಮಗ್ಗದ ಮಾಲೀಕರಿಗೆ ಮಾತ್ರ ಎಂದು ತಿದ್ದು ಪಡಿ ಮಾಡಲಾಗಿದೆ.

ಆದ್ದರಿಂದ ನೇಕಾರರು ನಮಗೆ ಮೋಸವಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸಿಎಂ ಹಾಗು ಕಂದಾಯ ಇಲಾಖೆಯವರನ್ನು ಖಂಡಿಸಿ ಪ್ರತಿಭಟನೆ ಮಾಡುವುದರ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here