ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಲು ನಡೆಯಲಿದೆ ಉಗ್ರ ಪ್ರತಿಭಟನೆ

0
427

ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಒಂದು ಗಾದೆ ಮಾತಿದೆ. ಕೆಲಸ ಸಿಕ್ಕರೆ ಮಾತ್ರ ಒಬ್ಬ ವ್ಯಕ್ತಿ ತನ್ನ ಜೀವನವನ್ನು ಆರಾಮವಾಗಿ ನಡೆಸಿಕೊಂಡು ಹೋಗಬಹುದು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಬ್ಯಾಂಕ್ ಗಳಲ್ಲಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಯಾವತ್ತಿಗು ಕನ್ನಡಿಗನೆ ಸಾರ್ವಭೌಮನಾಗಿರಬೇಕು. ಆದರೆ ಉದ್ಯೋಗದ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೇಲೆ ದೌರ್ಜನ್ಯವಾಗುತ್ತಿದೆ, ನಮ್ಮ ರಾಜ್ಯದವರಿಗಾಗಿ ಸೃಷ್ಟಿಯಾದ ಕೆಲಸವನ್ನು ಪರ ರಾಜ್ಯದವರು ಬಂದು ಕಿತ್ತುಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ #jobs for kannadigas ಎನ್ನುವ ಅಭಿಯಾನ ಶುರುವಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಕುಮಾರ್ ಸ್ವಾಮಿ ಅವರು ಈ ಅಭಿಯಾನಕ್ಕೆ ಪ್ರೋತ್ಸಾಹಿಸಿದ್ದರು.

ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ

ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗದ ಅವಕಾಶಗಳು, ಕನ್ನಡಿಗರಿಗೆ ಸಿಗಲಿ ಎಂದು ಒತ್ತಾಯಿಸಿ ಕನ್ನಡಿಗರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಆಗಸ್ಟ್ 14 ಮತ್ತು 15 ರಂದು ಈ ವಿಷಯದ ಅಂಗವಾಗಿ ಧ್ವನಿ ಎತ್ತಲು ಸಿದ್ದರಾಗಿದ್ದಾರೆ. ಸ್ವಾತಂತ್ರ ದಿನಾಚರಣೆಯ ದಿನದಂದು ಬೆಂಗಳೂರು ನಗರದ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಇಡೀ ರಾತ್ರಿ ಪ್ರತಿಭಟನೆ ಮಾಡಬೇಕೆಂದು ಕನ್ನಡಿಗರು ಪ್ರತಿಜ್ಞೆ ಮಾಡಿದ್ದಾರೆ. ಇನ್ನು ಈ ಹೋರಾಟದಲ್ಲಿ ನಾಡಿನ ಹಿರಿಯ ಸಾಹಿತಿಗಳು, ನಟ-ನಟಿಯರು, ಪ್ರಜೆಗಳು, ಗಣ್ಯ ವ್ಯಕ್ತಿಗಳು ಸೇರಿದಂತೆ ಇನ್ನು ಅನೇಕ ಕನ್ನಡ ಪರ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

ಸಾಹಿತಿಗಳು, ರಾಜಕಾರಣಿಗಳು, ನಟ-ನಟಿಯರು ಭಾಗಿಯಾಗಲಿದ್ದಾರೆ

ಈ ಹೋರಾಟದಲ್ಲಿ ವಾಟಾಳ್ ನಾಗರಾಜ್, ಕರವೇ ನಾರಾಯಣ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ, ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಇನ್ನು ಅನೇಕ ಸಾಹಿತಿಗಳು, ರಾಜಕಾರಣಿಗಳು, ನಟ-ನಟಿಯರು, ಯುವ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 14 ಬೆಳಿಗ್ಗೆ 10 ಗಂಟೆಗೆ ಧರಣಿ ಶುರುವಾಗಲಿದ್ದು, 24 ಗಂಟೆಗಳ ಕಾಲ ನಡೆಯಬಹುದು ಎಂದು ಹೇಳಲಾಗುತ್ತಿದೆ.

 ಜನರಲ್ಲಿ ಜಾಗ್ರತಿ ಮೂಡಿಸಬೇಕೆನ್ನುವುದು ಹೋರಾಟಗಾರರ ಅಭಿಲಾಷೆ 

ನಮ್ಮ ರಾಜ್ಯದ ಅಣ್ಣ, ನೀರು, ಗಾಳಿ ಉಪಯೋಗಿಸಿಕೊಂಡಿರುವ ಅನೇಕ ಕಂಪನಿಗಳು, ಬ್ಯಾಂಕ್ ಸಂಸ್ಥೆಗಳು ಬಹಳ ವರ್ಷಗಳಿಂದ ಇಲ್ಲೆ ನೆಲೆಗೊಂಡಿದೆ. ಜೀವಿಸುವುದಕ್ಕೆ ಕರ್ನಾಟಕದಿಂದ ಎಲ್ಲ ಸೌಲಭ್ಯಗಳು ಬೇಕು ಆದರೆ ಕನ್ನಡಿಗರಿಗೆ ಮಾತ್ರ ಉದ್ಯೋಗದ ವಿಷಯದಲ್ಲಿ ಕಡೆಗಣಿಸುತ್ತಿದ್ದಾರೆ. ನಮ್ಮ ನೆಲದಲ್ಲಿ ತಯಾರಾಗುವ ಕೆಲಸಗಳು ಬೇರೆಯವರ ಪಾಲು ಆಗುತ್ತಿದೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಕನ್ನಡ ಪರ ಹೋರಾಟಗಾರರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಈಗಾಗಲೆ ಇದರಿಂದ ಕನ್ನಡಿಗರು ವಂಚಿತರಾಗಿದ್ದಾರೆ ಮತ್ತಷ್ಟು ವಂಚಿತರಾಗಬಾರದು. ಜನರಲ್ಲಿ ಜಾಗ್ರತಿ ಮೂಡಿಸಬೇಕೆನ್ನುವುದು ಹೋರಾಟಗಾರರ ಚಿಂತನೆಯಾಗಿದೆ.

ಈ ಹಿಂದೆ ಬ್ಯಾಂಕ್ ಪರೀಕ್ಷೆಯಲ್ಲು ಅನ್ಯಾಯವಾಗುತ್ತಿತ್ತು

ಈ ಹಿಂದೆ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡ ಭಾಷೆ ಸೇರಿದಂತೆ, ಆಯಾ ರಾಜ್ಯಗಳ ಭಾಷೆಯಲ್ಲಿ ಬರೆಯಲು ಅವಕಾಶ ನೀಡುವುದರ ವಿಚಾರದ ಕುರಿತು ಸೂಕ್ತ ಕ್ರಮ ಕೈ ಗೊಳ್ಳಲಾಗುವುದು, ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಶ್ವಾಸನೆ ಕೊಟ್ಟಿದ್ದರು . ಕಾಂಗ್ರೆಸ್ ಸಂಸದರಾದ ಜೆಸಿ ಚಂದ್ರಶೇಖರ್ ಐಬಿಪಿಎಸ್ ವಿಷಯವನ್ನು ರಾಜಸಭೆಯಲ್ಲಿ ಪ್ರಸ್ತಾಪಿಸಿದ್ದು, ಈ ವಿಷಯದ ಕುರಿತು ಕನ್ನಡದಲ್ಲೇ ಮಾತನಾಡಿದ್ದಾರೆ. ಇದೊಂದು ಅತ್ಯಂತ ಗಂಭೀರದ ಸಂಗತಿಯಾಗಿದೆ. ಇದಕ್ಕಾಗಿ ಪರಿಶೀಲನೆ ನಡೆಸಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳ ಕಡೆ ಸಹ ಗಮನ ಕೊಡಬೇಕು ಎಂದು ಸಚಿವೆ ಹೇಳಿದ್ದರು. ಬ್ಯಾಂಕ್ ಪರೀಕ್ಷೆ ಕನ್ನಡದಲ್ಲಿ ಬರೆಯುವ ಅವಕಾಶ ಸಿಕ್ಕಿರುವದರಿಂದ ವಿದ್ಯಾರ್ಥಿಗಳಿಗೆ ಸಂತಸವಾಗಿತ್ತು.

LEAVE A REPLY

Please enter your comment!
Please enter your name here