ಗಳಿಸಿದ ಕೋಟ್ಯಾಂತರ ಆಸ್ತಿಯನ್ನು ತಿಮ್ಮಪ್ಪನ ಹುಂಡಿಗೆ ಹಾಕಿದ ನಟಿ ಕಾಂಚನ

0
1190

ಸಾಮಾನ್ಯ ಮನುಷ್ಯರು ಸಿನಿಮಾ ರಂಗದವರನ್ನು ನೋಡುವ ರೀತಿಯೇ ಬೇರೆ. ಯಾಕಂದ್ರೆ ಸಿನಿಮಾದಲ್ಲಿ ನಟಿಸುವವರಿಗೆ ಏನು ಕಷ್ಟ ಇರಲ್ಲ, ಅವರು ಸುಖವಾದ ಜೀವನ ನಡೆಸುತ್ತಿರುತ್ತಾರೆ ಅಂತ ತಿಳಿದಿರುತ್ತಾರೆ. ಹೌದು. ಕಲಾವಿದರು ಸುಖದ ಸುಪ್ಪತ್ತಿಗೆಯಲ್ಲಿ ಜೀವನ ನಡೆಸುತ್ತಾರೆ, ಸಾಮಾನ್ಯ ಜನರಿಗಿರುವ ಯಾವ ಕಷ್ಟಗಳು ಅವರಿಗಿರುವುದಿಲ್ಲ ಅನ್ನೋದು ಎಲ್ಲರ ತಿಳುವಳಿಕೆ. ಆದ್ರೆ ಅವರು ಸಹ ನಮ್ಮಂತೆಯೇ ಮನುಷ್ಯರು. ನಾವು ಯಾವ ರೀತಿ ಕಷ್ಟ ಪಡುತ್ತೇವೋ, ಅವರು ಸಹ ಅದೇ ರೀತಿ ಕಷ್ಟ ಅನುಭವಿಸಿರುತ್ತಾರೆ. ಹಾಗೆ ಇನ್ನೂ ಕೆಲವರು ಕಷ್ಟದಲ್ಲೇ ಈಗಲೂ ಜೀವನ ಕಳೆಯುತ್ತಿದ್ದಾರೆ. ಹೌದು. ಇದಕ್ಕೆ ಉದಾಹರಣೆ ಆಗಿ ನಮ್ಮ ಹಿಂದಿನ ಕಾಲದ ನಟಿ ಕಾಂಚನ ಇದ್ದಾರೆ. ಹೌದು. ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿದರೂ, ಅದನ್ನು ಅನುಭವಿಸುವ ಅದೃಷ್ಟ ಮಾತ್ರ ಅವರಿಗೆ ಇರಲಿಲ್ಲ. ಆದ್ರೆ ಈಗ ತಾನು ದುಡಿದ್ದೆಲ್ಲವನ್ನು ತ್ಯಾಗ ಮಾಡಿ, ತ್ಯಾಗಮಯಿ ಎನಿಸಿಕೊಂಡಿದ್ದಾರೆ.

ಐಷಾರಾಮಿ ಮನೆತನದಲ್ಲಿ ಜನಿಸಿದ ಕಾಂಚನ

ಕಾಂಚನ ದಕ್ಷಿಣ ಕನ್ನಡ ಕಂಡ ಅಪರೂಪದ ನಟಿ. ಇವರು ದಕ್ಷಿಣ ಚಿತ್ರಗಳಲ್ಲಿ ಮಾತ್ರವಲ್ಲದೆ, ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಇವರು ಒಂದು ದೊಡ್ಡ ಶ್ರೀಮಂತ ಮನೆತನದಲ್ಲಿ ಜನಿಸಿದರು. ಶ್ರೀಮಂತರ ಮನೆ ಮಕ್ಕಳು ಎಷ್ಟೆಲ್ಲಾ ಎಂಜಾಯ್ ಮಾಡ್ತಾರೆ ಅನ್ನೋದನ್ನ ನಾವು ಈಗ ಟಿವಿಗಳಲ್ಲಿ ನೋಡಿದ್ದೀವಿ. ಆದ್ರೆ ಅದ್ಯಾವ ಅದೃಷ್ಟವು ಇವರಿಗಿರಲಿಲ್ಲ. ಯಾಕಂದ್ರೆ ತಂದೆ, ತಾಯಿ ಯಾವಾಗಲು ಬ್ಯುಸಿಯಾಗಿರುತ್ತಿದ್ದರು. ಇನ್ನೂ ಆಡಂಭರದ ಜೀವನ ಇಷ್ಟವಿಲ್ಲದ ಕಾಂಚನ ಅವರಿಗೆ ಲೈಫ್ ಎಂಜಾಯ್ ಮಾಡುವುದುದರ ಬಗ್ಗೆ ಅರಿವಿರಲಿಲ್ಲ. ಹೀಗಿರುವಾಗ ಅವರು ಯಾವಾಗಲು ಒಬ್ಬರೇ ಇರುತ್ತಿದ್ದರೆ. ಒಬ್ಬಂಟಿ ಜೀವನವೇ, ಅವರಿಗೆ ಎಲ್ಲವು ಆಗಿತ್ತು. ಆದ್ರೆ ಅವರ ಜೊತೆಯಾಗಿ ಇದ್ದದ್ದು ಅಂದ್ರೆ ನೃತ್ಯ ಹಾಗೂ ಸಂಗೀತ. ಹೌದು. ತಂದೆ ತಾಯಿಯಿಂದ ವಂಚಿತರಾದ ಕಾಂಚನ ಪಾಲಿಗೆ ಇದ್ದದ್ದು ಈ ಎರಡು ಅಂಶಗಳು ಮಾತ್ರ. ಆಆದ್ರೆ ಬರಬರುತ್ತಾ ಅವರ ತಂದೆ ತಾಯಿ ವ್ಯವಹಾರದ ಕಡೆಗಿನ ಗಮನ ಕಡಿಮೆ ಮಾಡಿಕೊಂಡಿದ್ದರಿಂದ, ಎಲ್ಲವನ್ನು ಕಳೆದುಕೊಳ್ಳುವಂತಾಗುತ್ತದೆ. ಅದಾದ ನಂತರ ಕಾಂಚನ ಪಡಬಾರದ ಕಷ್ಟವನ್ನು ಪಡುತ್ತಾರೆ.

ಗಗನಸಖಿಯಾಗಿ ಕೆಲಸಕ್ಕೆ ಸೇರಿದ ಕಾಂಚನ

ಇನ್ನೂ ಮನೆಯಲ್ಲಿ ಇದ್ದಂತಹ ಕಷ್ಟಕ್ಕೆ ಕಾಂಚನ ಗಗನಸಖಿಯಾಗಿ ಕೆಲಸಕ್ಕೆ ಸೇರುತ್ತಾರೆ. ಆದ್ರೆ ಅದೇ ಸಮಯದಲ್ಲಿ ತಮಿಳು ನಿರ್ದೇಶಕ ಹೆಚ್.ವಿ. ಶ್ರೀಧರ್, ಕಾಂಚನ ಅವರನ್ನು ನೋಡುತ್ತಾರೆ. ನೋಡಿದವರೇ ತಮ್ಮ ಸಿನಿಮಾದಲ್ಲಿ ನಟಿಸುವಂತೆ ಹೇಳಿ, ಒಪ್ಪಿಸುತ್ತಾರೆ. ಅಲ್ಲಿಂದ ಕಾಂಚನ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾರೆ. ಅಲ್ಲಿಂದ ಕಾಂಚನ ಕೈ ತುಂಬಾ ಹಣ ಸಂಪಾದಿಸುತ್ತಾರೆ. ಅಲ್ಲಿಂದ ಅವರ ತಂದೆ ತಾಯಿಗೆ ಹಣದ ವ್ಯಾಮೋಹ ಶುರುವಾಗುತ್ತದೆ. ಹಾಗಾಗಿ ಮಗಳಿಗೆ ಮದುವೆ ಮಾಡದೇ, ತಮ್ಮ ಮನೆಯಲ್ಲಿಯೇ ಇರಿಸಿಕೊಳ್ಳುತ್ತಾರೆ. ಆದ್ರೆ ಇದ್ಯಾವುದು ಕಾಂಚನ ಅವರ ತಲೆಗೆ ಬರುವುದಿಲ್ಲ. ತಂದೆ, ತಾಯಿ ನನ್ನನ್ನು ತುಂಬಾ ಪ್ರೀತಿ ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳುತ್ತಾರೆ. ನಂತರ ಮಗಳಿಗೆ ಮಂಕು ಹಚ್ಚಿಸಿ, ಅವಳ ಹೆಸರಲ್ಲಿದ್ದ ಆಸ್ತಿಯನ್ನೆಲ್ಲ ತಮ್ಮ ಹೆಸರಿಗೆ ಬರೆಸಿಕೊಂಡು ಬೀದಿಗೆ ತಳ್ಳುತ್ತಾರೆ. ಅಲ್ಲಿಂದ ಕಾಂಚನ ಬೀದಿ ಪಾಲಾಗುತ್ತಾರೆ.

ತಂದೆ ತಾಯಿ ಮೇಲೆ ಕೇಸ್ ಹಾಕಿದ ಕಾಂಚನ

ಕಾಂಚನ ಗೆ ಅವರ ತಂದೆ ತಾಯಿ ಕಾಂಚನ ಅವರ ಆಸ್ತಿಯನ್ನು ಮೋಸದಿಂದ ಪಡೆದ ಮೇಲೆ, ಕಾಂಚನ ಅವರ ತಂದೆ ತಾಯಿ ಮೇಲೆ ಕೆಸ್ಫ್ ಹಾಕುತ್ತಾರೆ. ಆ ಕೇಸ್ ಹಲವು ವರ್ಷ ನಡೆಯುತ್ತದೆ. ಹೌದು. ಸುಮಾರು ಹದಿನೆಂಟು ವರ್ಷಗಳ ಈ ಕೇಸ್ ನಡೆಯುತ್ತದೆ. ಅದಾದ ಬಳಿಕ ಕಾಂಚನ ಅವರಿಗೆ ಅಸ್ತಿ ನೀಡಬೆಕು ಎಂದು ಕೋರ್ಟ್ ಸೂಚಿಸುತ್ತದೆ. ಈಗ ಸದ್ಯಕ್ಕೆ ಕಾಂಚನ ತನ್ನೆಲ್ಲ ಆಸ್ತಿಯನ್ನು ಪಡೆದಿದ್ದಾರೆ. ಆದ್ರೆ ಅಸ್ತಿ ಪಡೆದವರು ಅದರಲ್ಲಿ ಆರಾಮಾಗಿ ಜೀವನ ನಡೆಸದೆ, ಅದೆಲ್ಲವನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿದ್ದಾರೆ. ಹೌದು. ಗಳಿಸಿದ್ದೆಲ್ಲವನ್ನು ತಿಮ್ಮಪ್ಪನ ಹುಂಡಿಗೆ ಹಾಕಿ ಕೈ ಮುಗಿದಿದ್ದಾರೆ. ನಿಜಕ್ಕೂ ಇವರ ಈ ಕೆಲಸ ನೋಡಿದಾಗ ಎಂಥವರಿಗೂ ಆಶ್ಚರ್ಯವಾಗುತ್ತದೆ. ಯಾಕಂದ್ರೆ ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಲ್ಪವನ್ನು ಉಳಿಸಿಕೊಳ್ಳದೆ, ಎಲ್ಲವನ್ನು ದೇವರ ಹುಂಡಿಗೆ ಹಾಕಿದ್ದಾರೆ.

ಈ ರೀತಿ ರಾಜ್ ಕುಮಾರ್ ಹಾಗೂ ಹಲವರ ಜೊತೆ ನಟಿಸಿದ ಕಾಂಚನ ಅವರು ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿದರೂ, ಅದನ್ನು ಅನುಭವಿಸಲು ಮಾತ್ರ ಆಗಲಿಲ್ಲ. ಈ ರೀತಿ ಸಿನಿಮಾ ರಂಗದವರು ಸಹ ಕಣ್ಣೀರಿನಲ್ಲೇ ಕೈ ತೊಳೆದಿರುವವರು ಹಲವರಿದ್ದಾರೆ. ಆ ಸಾಲಿಗೆ ಕಾಂಚನ ಅವರು ಕೂಡ ಸೇರುತ್ತಾರೆ.

LEAVE A REPLY

Please enter your comment!
Please enter your name here