ಕಾಡ್ಗಿಚ್ಚಿನಿಂದ ನೊಂದ ಆಸ್ಟ್ರೇಲಿಯಾ ಜನೆತೆಯ ಹಸಿವು ನೀಗಿಸುತ್ತಿರುವ ಭಾರತೀಯ ಮಹಿಳೆ

0
602
kadgicchu

ಮನುಷ್ಯನ ಜೀವನ ನಿಜಕ್ಕೂ ಬಹಳ ಕಷ್ಟಕರ. ಯಾಕಂದ್ರೆ ಮನುಷ್ಯನಾದವನು ಪ್ರಕೃತಿಯನ್ನು ಪ್ರೀತಿಸಿದರೆ, ಪ್ರಕೃತಿ ಮನುಷ್ಯನನ್ನು ಪ್ರೀತಿಸುತ್ತದೆ. ಒಂದು ವೇಳೆ ಪ್ರಕೃತಿ ಏನಾದರು ಮನುಷ್ಯನ ಮೇಲೆ ಮುನಿಸಿಕೊಂಡರೆ ಆತನನ್ನು ಸರ್ವನಾಶ ಆಗುವವರೆಗೂ ಬಿಡುವುದಿಲ್ಲ. ಅದಕ್ಕೆ ಸಾಕ್ಷಿಯಾಗಿ ಭೂಕಂಪ, ಸುನಾಮಿ ಹಾಗು ಕಾಡ್ಗಿಚ್ಚಿನಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಈಗ ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದಾಗಿ ಅಲ್ಲಿನ ಜನರ ಜೀವನ ಅಸ್ತವ್ಯಸ್ಥವಾಗಿದೆ. ಅಲ್ಲಿನ ಜನರು ಜೀವನ ನಡೆಸಲು ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಜೊತೆಗೆ, ಇರಲು ಮನೆಯಿಲ್ಲದೆ, ತಿನ್ನಲು ಆಹಾರವಿಲ್ಲದೆ ಸಂಕಟ ಪಡುತ್ತಿದ್ದಾರೆ. ಹಾಗಾಗಿ ಅವರಿಗೆ ಸಹಾಯ ಮಾಡಲು ನಮ್ಮ ಭಾರತೀಯ ಮಹಿಳೆ ಮುಂದಾಗಿದ್ದಾರೆ.

ಕಾಡ್ಗಿಚ್ಚಿನಿಂದ ನೊಂದ ಜನರಿಗೆ ಆಹಾರ ಪೂರೈಕೆ

ಆಸ್ಟ್ರೇಲಿಯಾ ಜನತೆ ಕಾಡ್ಗಿಚ್ಚಿನಿಂದಾಗಿ ಮನೆ ಕಳೆದುಕೊಂಡು ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಆಹಾರದ ವಿಚಾರದಲ್ಲೂ ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಹಾಗಾಗಿ ಅವರ ಕಷ್ಟಕ್ಕೆ ಸಹಾಯ ಮಾಡಲು ನಮ್ಮ ಭಾರತೀಯ ಮಹಿಳೆ ಮುಂದಾಗಿದ್ದಾರೆ. ಹೌದು. ಇವರ ಹೆಸರು ಸುಕ್ವಿಂದರ್ ಕೌರ್. ಇವರು ಮೂಲತಃ ಭಾರತೀಯರಾಗಿದ್ದು, ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನು ಇವರು ಒಂದು ದಶಕದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಈಗ ಅವರು ಅಲ್ಲಿನ ಜನತೆಯ ಸಹಾಯಕ್ಕೆ ಮುಂದಾಗಿದ್ದಾರೆ. ಹೌದು. ಸುಕ್ವಿಂದರ್ ಕೌರ್ ಅವರು ತಮ್ಮ ತಂಗಿಯ ಅನಾರೋಗ್ಯದಿಂದ ಭಾರತಕ್ಕೆ ಹಿಂದಿರುಗಬೇಕಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಪರಿಸ್ಥಿತಿಗೆ ಅವರು ಭಾರತಕ್ಕೆ ಬರುವುದನ್ನು ರದ್ದುಗೊಳಿಸಿ, ಅಲ್ಲಿನ ಜನತೆಯ ಹಸಿವನ್ನು ನೀಗಿಸುತ್ತಿದ್ದಾರೆ.

ಸಂಕಷ್ಟ ಪಡುತ್ತಿರುವ ಜನರ ಹಸಿವು ನೀಗಿಸುತ್ತಿದ್ದಾರೆ

ಇನ್ನು ಇವರು ಪ್ರತಿದಿನ ಸಾವಿರಾರು ಜನರಿಗೆ ಊಟ ಪೂರೈಕೆ ಮಾಡುತ್ತಿದ್ದಾರೆ. ಹೌದು. ಆಸ್ಟ್ರೇಲಿಯಾದ ಸ್ವಯಂ ಸೇವಕರ ಜೊತೆ ಸೇರಿ ತಮ್ಮ ಸ್ವಂತ ವಾಹನದ ಮೂಲಕ ಹಗಲಿನಿಂದ ರಾತ್ರಿಯವರೆಗೂ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಇನ್ನು ವಿಕ್ಟೊರಿಯಾದ ಪ್ರೀಮಿಯರ್ ಡಾನ್ಸ್ ಆಂಡ್ರೋಸ್ ಕೌರ್ ಮತ್ತು ಸಿಖ್ ಸ್ವಯಂ ಸೇವಕರು ಮಾಡುತ್ತಿರುವ ಸಹಾಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದಗಳ ಮಹಾಪೂರವೇ ಹರಿದುಬರುತ್ತಿದೆ. ನಿಜಕ್ಕೂ ಇವರ ಸೇವೆ ಪ್ರತಿಯೊಬ್ಬರೂ ಮೆಚ್ಚುವಂಥದ್ದು. ಯಾಕಂದ್ರೆ, ನೂರು ಜನರಿಗೆ ಅಥವಾ 200 ಜನರಿಗೆ ಆಹಾರ ಪೂರೈಕೆ ಮಾಡುವುದು ಸುಲಭ. ಆದ್ರೆ ಸಾವಿರಾರು ಜನರಿಗೆ ಇವರು ಪ್ರತಿದಿನ ಆಹಾರ ಪೂರೈಕೆ ಮಾಡಿ, ಅವರ ಹಸಿವನ್ನು ನೀಗಿಸುತ್ತಿದ್ದಾರೆ.

kadgicchu

ನಿಜಕ್ಕೂ ಸುಕ್ವಿಂದರ್ ಕೌರ್ ಅವರ ಈ ಕಾರ್ಯಕ್ಕೆ ಎಲ್ಲರು ಧನ್ಯವಾದ ತಿಳಿಸಲೇಬೇಕು. ಯಾಕಂದ್ರೆ ಕಾಡ್ಗಿಚ್ಚಿನಿಂದ ತೊಂದರೆಗೊಳಗಾಗಿರುವ ಜನತೆಯ ಸಂಕಷ್ಟಕ್ಕೆ ನೇರವಾಗಿ, ಅವರ ಹಸಿವನ್ನು ನೀಗಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here