ಜೊತೆ ಜೊತೆಯಲಿ ಧಾರಾವಾಹಿಗೆ ಕೇಳಿ ಬರುತ್ತಿದೆ ಹೊಸ ಆರೋಪ. ಜೀ ವಾಹಿನಿ ಸ್ಪಷ್ಟನೆ

0
658

ಕಿರುತೆರೆಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ಟಿ ಆರ್ ಪಿ ರೇಟ್ ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಹೌದು ಪ್ರೇಕ್ಷಕರ ಮನ ಮುಟ್ಟುವುದರಲ್ಲಿ ಈ ಧಾರವಾಹಿ ಯಶ್ವಸ್ವಿಯಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಜಗಳ, ವಿಭಿನ್ನವಾದ ಪ್ರೇಮ ಕಥೆ ಜನರಿಗೆ ಇಷ್ಟವಾಗಿದೆ. ಆರ್ಯವರ್ಧನ್ ಹಾಗು ಅನು ಸಿರಿಮನೆ ಪಾತ್ರಗಳು ಜನರನ್ನು ಆಕರ್ಷಿಸುತ್ತಿದೆ. ಅನಿರುದ್ಧ್ ಅವರು ಸಹ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಅವಕಾಶ ವಂಚಿತರಾಗಿದ್ದ ಅನಿರುದ್ಧ್ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಗೆ ಹೊಸ ಕಳಂಕ

ಧಾರಾವಾಹಿಯನ್ನು ನೋಡುತ್ತಿದ್ದರೆ ಇಷ್ಟು ಬೇಗ ಮುಗಿದು ಹೋಯ್ತಲ್ಲ ಎಂದು ಅನಿಸುತ್ತದೆ. ಕ್ಷಣಕ್ಕು ಕ್ಷಣಕ್ಕು ಕುತೂಹಲ ಮತ್ತು ಕಾತುರ ಜನರಲ್ಲಿ ಇರುತ್ತದೆ. ಆದರೆ ಈಗ ಧಾರಾವಾಹಿಗೆ ಹೊಸ ಕಳಂಕ ಅಂಟಿಕೊಂಡಿದೆ. ಯಶ್ವಸಿಯ ಹಾದಿಯಲ್ಲಿ ಹೊರಟಿರುವ ಧಾರಾವಾಹಿಗೆ ಕಳಂಕವಾ ಅಂತ ನೀವು ಅಂದುಕೊಂಡರು ಇದು ಸತ್ಯವಾದ ಸಂಗತಿಯಾಗಿದೆ. ಹೌದು ಜೊತೆ ಜೊತೆಯಲಿ ಧಾರವಾಹಿ ಮರಾಠಿ ಧಾರಾವಾಹಿಯ ರಿಮೇಕ್ ಆಗಿದೆ. ಮರಾಠಿ ಧಾರಾವಾಹಿಯಾದ ತುಲ ಪಹತೆ ರೆ’ ರಿಮೇಕ್ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಜೀ ಕನ್ನಡ ವಾಹಿನಿಯವರು ಸ್ಪಷ್ಟನೆಯನ್ನು ನೀಡಿದ್ದಾರೆ. ಮುಂದೆ ಓದಿ

ಮರಾಠಿಯಲ್ಲಿ 300 ಸಂಚಿಕೆಗಳು ಮುಗಿದಿದೆ

ಜೀ  ಕನ್ನಡ ವಾಹಿನಿಯವರು ಈ ಕಥೆ ಸಹ ಜೀ ಪರಿವಾರಕ್ಕೆ ಸೇರ್ಪಡೆಯಾಗುತ್ತದೆ ಎಂದು ಹೇಳಿದ್ದಾರೆ. ಮರಾಠಿಯಲ್ಲಿ ಮೂಡಿ ಬರುತ್ತಿರುವ ‘ತು ಪಹತೆ ರೆ’ ಎಂಬ ಧಾರಾವಾಹಿಯ ರಿಮೇಕ್ ಜೊತೆ ಜೊತೆಯಲಿ ಎನ್ನಲಾಗುತ್ತಿದೆ. ಈಗಾಗಲೆ ಮರಾಠಿಯಲ್ಲಿ 300 ಸಂಚಿಕೆಗಳು ಮುಗಿದಿದೆ. ಕನ್ನಡದಲ್ಲಿ ಶುರುವಾಗಿ ಕೇವಲ ನಾಲಕ್ಕು ವಾರ ಮಾತ್ರ ಕಳೆದಿದೆ. ಧಾರವಾಹಿ ಶುರುವಾದ ಮೊದಲ ವಾರದಲ್ಲಿಯೆ ಟಿ ಆರ್ ಪಿಯಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಕನ್ನಡ ಭಾಷೆಗೆ ಅನುಸಾರವಾಗಿ ಧಾರಾವಾಹಿಯಲ್ಲಿ ಕೆಲ ಬದಲಾವಣೆಗಳು ಮಾಡಿದ್ದಾರೆ.

LEAVE A REPLY

Please enter your comment!
Please enter your name here