ಕೋಟ್ಯಾಧಿಪತಿಯಲ್ಲಿ ಆಡಿಯನ್ಸ್ ಉತ್ತರ ನಂಬಿ ದೊಡ್ಡ ಮೊತ್ತದ ಹಣ ಕಳೆದುಕೊಂಡ ನಟ ಜೆಕೆ

0
406
jk kotyadhipathi

ಕನ್ನಡದ ಕಿರುತೆರೆ ಕಾರ್ಯಕ್ರಮಗಳನ್ನ ನಮ್ಮ ಜನರು ಬಳಷ್ಟು ಆಸಕ್ತಿಯಿಂದ ನೋಡುತ್ತಾರೆ. ಯಾಕಂದ್ರೆ, ಕಿರುತೆರೆಯಲ್ಲಿ ಅಂತಹ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದರಲ್ಲೂ ಜನರು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಬಹಳಷ್ಟು ಇಷ್ಟ ಪಟ್ಟು ನೋಡುತ್ತಾರೆ. ಯಾಕಂದ್ರೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರು ಉತ್ತರವನ್ನು ನೀಡುವುದರ ಮೂಲಕ ಕೋಟಿಯನ್ನು ಗೆಲ್ಲಬಹುದಾಗಿದೆ. ಹೌದು. ಪುನೀತ್ ರಾಜ್ ಕುಮಾರ್ ಅವರ ನಿರೂಪಣೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಹಲವಾರು ಸ್ಪರ್ಧಿಗಳು ಭಾಗವಹಿಸುತ್ತಾರೆ. ಅದರಂತೆ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಸಾಮಾನ್ಯ ಜನರು ಭಾಗವಹಿಸಿದ್ದರು. ಆದ್ರೆ ಇತ್ತೀಚಿಗೆ ಸಲೆಬ್ರೆಟಿಗಳು ಸಹ ಭಾಗವಹಿಸುತ್ತಿದ್ದಾರೆ. ಅದರಂತೆ ಕಳೆದ ವಾರ ಜೆಕೆ ಸ್ಪರ್ಧಿಯಾಗಿ ಹಾಟ್ ಸೀಟ್ ನಲ್ಲಿ ಕುಳಿತಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಸೋಲನ್ನು ಕಂಡಿದ್ದಾರೆ.

ಹಾಟ್ ಸೀಟ್ ನಲ್ಲಿ ಕುಳಿತು ಉತ್ತರ ನೀಡಿದ ನಟ ಜೆಕೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಸಾಕಷ್ಟು ಸ್ಪರ್ಧಿಗಳು ಭಾಗವಹಿಸುತ್ತಾರೆ. ಅದರಂತೆ ಕಳೆದ ವಾರ ನಟ ಜಯರಾಮ್ ಕಾರ್ತಿಕ್ ಭಾಗವಹಿಸಿದ್ದರು. ಹೌದು. ಇತ್ತೀಚಿಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಸಿನಿಮಾ ಕಲಾವಿದರೇ ಬರುತ್ತಿದ್ದಾರೆ. ಯಾಕಂದ್ರೆ ಧೀನ ಬಂಧು ಟ್ರಸ್ಟ್’ ಮಕ್ಕಳಿಗಾಗಿ ಕೋಟ್ಯಧಿಪತಿ ಆಟ ಆಡುತ್ತಿದ್ದು, ಈಗಾಗಲೇ ಸಾಕಷ್ಟು ಹಣವನ್ನು ಗೆದ್ದು ಕೊಟ್ಟಿದ್ದಾರೆ. ಮೊದಲು ಹಾಟ್ ಸೀಟ್ ಗೆ ಆಯ್ಕೆಯಾದ ಕಿರುತೆರೆ ನಟ ಭವಾನಿ ಸಿಂಗ್ ಒಂಭತ್ತು ಪ್ರಶ್ನೆಗಳಿ ಸರಿ ಉತ್ತರ ನೀಡಿ ಹತ್ತನೇ ಪ್ರಶ್ನೆಯಿಂದ ಆಟ ಕ್ವಿಟ್ ಮಾಡಿದ್ರು. ಹೀಗಾಗಿ, 1.60 ಲಕ್ಷ ಹಣ ಗೆದ್ದರು. ನಂತರ ಎರಡನೇಯವರಾಗಿ ಜೆಕೆ ಆಡಿದ್ದಾರೆ. ಆದ್ರೆ ಹತ್ತನೇ ಪ್ರಶ್ನೆಯಿಂದ ಅವರು ಹಿನ್ನಡೆ ಸಾಧಿಸಿದ್ದಾರೆ.

ಆಡಿಯೆನ್ಸ್ ಮಾತು ಕೇಳಿ ದೊಡ್ಡ ಮೊತ್ತ ಕಳೆದುಕೊಂಡ ಜೆಕೆ

ಇನ್ನು ಕಾರ್ಯಕ್ರಮದಲ್ಲಿ ಜೆಕೆ ಅವರು ಪ್ರಾರಂಭದಿಂದಲೂ ಚೆನ್ನಾಗಿ ಆಡಿಕೊಂಡು ಬಂದಿದ್ದಾರೆ. ಹಾಗಾಗಿ ಮೊದಲ ಸೇಫ್ ಜೋನ್ ಅನ್ನು ಸುಲಭವಾಗಿ ತಲುಪಿ 10 ಸಾವಿರ ರೂಪಾಯಿಗಳನ್ನು ಗೆದ್ದಿದ್ದಾರೆ. ನಂತರ ಅಲ್ಲಿಂದ ಎರಡನೇ ಹಂತಕ್ಕೆ ತಲುಪಿದ ಜೆಕೆ ಆಗಲು ಬಹಳಷ್ಟು ಸುಲಭವಾಗಿ ಉತ್ತರ ನೀಡಿದ್ದಾರೆ. ಆದರೆ 10ನೇ ಪ್ರಶ್ನೆ ಜೆಕೆ ಗೆ ಕಷ್ಟವಾಗಿದೆ. ಹೌದು. 9ನೇ ಪ್ರಶ್ನೆ ವರೆಗೂ ಆಟವನ್ನು ಚೆನ್ನಾಗಿ ಆಡಿದ ಜೆಕೆ, 10ನೇ ಪ್ರಶ್ನೆ ಬಂದಾಗ ಲೈಫ್ ಲೈನ್ ಬಳಸಿದ್ದಾರೆ. ಆದರೆ ಅವರು ಬಳಸಿದ ಎರಡು ಲೈಫ್ ಲೈನ್ ಗಳು ಕೈ ಹಿಡಿದಿಲ್ಲ. ಹಾಗಾಗಿ ನಂತರ ಕೊನೆಯದಾಗಿ ಆಡಿಯೆನ್ಸ್ ಉತ್ತರಕ್ಕೆ ಬಿಟ್ಟಿದ್ದಾರೆ. ನಂತರ ಆಡಿಯೆನ್ಸ್ ನೀಡಿದ ಉತ್ತರದಿಂದ ಹಿನ್ನೆಡೆ ಸಾಧಿಸಿದ್ದಾರಂತೆ.

ಯಾವುದು ಆ ಪ್ರಶ್ನೆ?

9 ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ನೀಡಿದ ಜೆಕೆಗೆ 10ನೇ ಪ್ರಶ್ನೆ ಬಹಳ ಕಷ್ಟವಾಗಿತ್ತು. ಹಾಗಾದ್ರೆ ಆ ಹತ್ತನೇ ಪ್ರಶ್ನೆ ಯಾವುದು ಅಂತೀರಾ ನೀವೇ ನೋಡಿ. ನವೆಂಬರ್ 1,1956ರಲ್ಲಿ ಡಾ ರಾಜೇಂದ್ರ ಪ್ರಸಾದ್ ಮೈಸೂರು ರಾಜ್ಯವನ್ನು ಎಲ್ಲಿ ಉದ್ಘಾಟಿಸಿದರು? ಎಂದು ಪ್ರಶ್ನೆ ಕೇಳಿದ್ದರು. ಇನ್ನು ಅದಕ್ಕೆ ಈ ರೀತಿಯ ಉತ್ತರಗಳನ್ನು ನೀಡಿದ್ದರು. A ಸೆಂಟ್ರಲ್ ಕಾಲೇಜ್ B ವಿಧಾನಸೌಧ C ಮೈಸೂರು ಅರಮನೆ D ಅರಮನೆ ಮೈದಾನ. ಆದ್ರೆ ಜೆಕೆಗೆ ಇದರ ಉತ್ತರ ತಿಳಿಯಲಿಲ್ಲ. ಹಾಗಾಗಿ ಆಡಿಯೆನ್ಸ್ ಪೋಲ್ ಮರೆ ಹೋದ ಜೆಕೆಗೆ B ವಿಧಾನಸೌಧ ಎಂಬ ಉತ್ತರಕ್ಕೆ ಬಹುಮತ ಸಿಕ್ಕಿತ್ತು. ಆದರೂ ಗೊಂದಲದಲ್ಲಿದ್ದ ಜೆಕೆ ಆಡಿಯೆನ್ಸ್ ನೀಡಿದ ಉತ್ತರಕ್ಕೆ ಜೈ ಎಂದರು. ಆದ್ರೆ ಅದು ತಪ್ಪು ಉತ್ತರವಾಗಿದ್ದರಿಂದ 3.20 ಲಕ್ಷದಿಂದ 10 ಸಾವಿರಕ್ಕೆ ಕುಸಿದರು.

ಒಟ್ಟಿನಲ್ಲಿ ಜೆಕೆ ಧಿನ ಬಂಧು ಟ್ರಸ್ಟ್ ಗಾಗಿ ಆಟ ಆಡಲು ಹಾಟ್ ಸೀಟ್ ನಲ್ಲಿ ಕೂತಿದ್ದರು. ಆದರೆ ಆಡಿಯೆನ್ಸ್ ಲಕ್ ಕೈ ಹಿಡಿಯಲಿಲ್ಲ ಎಂಬಂತೆ 10ನೇ ಪ್ರಶ್ನೆಗೆ ಹಿನ್ನೆಡೆ ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here