ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನನ ಘರ್ಜನೆಗೆ ಮನಸೋತ ಜಪಾನಿಯರು

0
868
japaniyaru

ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಅಂದ್ರೆ ಅದು ಕುರುಕ್ಷೇತ್ರ. ಹೌದು ಈ ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಅದರಂತೆ ಸಿನಿಮಾ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೌದು. ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಹೊಂದಿದ್ದ ಕುರುಕ್ಷೇತ್ರ ಸಿನಿಮಾ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಆಗುವುದರ ಯಶಸ್ಸು ಕಾಣುತ್ತಿದೆ. ಇನ್ನು ದುರ್ಯೋಧನನಾದ ದರ್ಶನ್ ಅವರನ್ನು ತೆರೆ ಮೇಲೆ ನೋಡುವುದಕ್ಕೆ ಎರಡು ಕಣ್ಣು ಸಾಲುವುದಿಲ್ಲ ಎಂದು ಅಭಿಮಾನಿಗಳು ಕೂಗಿ ಕೂಗಿ ಹೇಳುತ್ತಾರೆ. ಹೌದು. ದಚ್ಚು ಎಣಿಕೆ ಮಾಡಲಾಗದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಅನ್ನೋದು ಎಲ್ಲರಿಗು ಗೊತ್ತಿರುವ ವಿಷಯ. ಆದರೆ ನಮ್ಮ ದಾಸನಿಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ ಎನ್ನುವುದಕ್ಕೆ, ಈಗ ಜಪಾನ್ ದೇಶದವರು ಕುರುಕ್ಷೇತ್ರ ಸಿನಿಮಾ ನೋಡಿರುವುದೇ ಸಾಕ್ಷಿಯಾಗಿದೆ.

ಕುರುಕ್ಷೇತ್ರ ನೋಡಲು ಬೆಂಗಳೂರಿಗೆ ಬಂದ ಜಪಾನಿಯರು

ಗಾಂಧಿನಗರದಲ್ಲಿ ಕುರುಕ್ಷೇತ್ರದ ಅಬ್ಬರ ನಿಲ್ಲುವಂತೆ ಕಾಣುತ್ತಿಲ್ಲ. ಹೌದು. ದಿನದಿಂದ ದಿನಕ್ಕೆ ಇದರ ಸದ್ದು ಜೋರಾಗಿಯೇ ಕೇಳುತ್ತಿದೆ. ಜೊತೆಗೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲೂ ದಾಖಲೆ ಮೀರಿಸುವ ಹಂತಕ್ಕೆ ತಲುಪಲಿದೆಯಂತೆ. ಅದರಲ್ಲೂ ದರ್ಶನ್ ಅವರನ್ನು ನೋಡಲು ಎಲ್ಲೆಲ್ಲಿಂದಲೋ ಅಭಿಮಾನಿಗಳು ಬರುತ್ತಿದ್ದಾರೆ. ಹೌದು. ದುರ್ಯೋಧನನನ್ನು ನೋಡಲು ದೇಶ ವಿದೇಶಗಳಿಂದಲೂ ಅಭಿಮಾನಿಗಳು ಬರುತ್ತಿದ್ದಾರೆ. ದೂರದ ಜಪಾನ್ ನಿಂದ ಕುರುಕ್ಷೇತ್ರ ಸಿನಿಮಾ ನೋಡಲು ಡಿ ಬಾಸ್ ಅಭಿಮಾನಿಗಳು ಸಿಲಿಕಾನ್ ಸಿಟಿಗೆ ಆಗಮಿಸಿದ್ದಾರೆ. ಅಲ್ಲದೆ ದುರ್ಯೋಧನನ ಘರ್ಜನೆಗೆ ಮನಸೋತ ಜಪಾನಿ ಅಭಿಮಾನಿಗಳು ಡಿ ಬಾಸ್ ಎಂದು ಕೂಗಿ ಕೂಗಿ ಹೇಳಿದ್ದಾರೆ.

ಭಾರತ ಐತಿಹಾಸಿಕ ಕಥೆಗೆ ಮನಸೋತಿದ್ದಾರೆ

ಇನ್ನು ಕುರುಕ್ಷೇತ್ರ ಸಿನಿಮಾವನ್ನು ನೋಡಲು ಅಭಿಮಾನಿಗಳು ಜಪಾನ್ ನಿಂದ ಬೆಂಗಳೂರಿಗೆ ಬಂದಿದ್ದಾರೆ. ಬಂದವರು ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ, ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುರುಕ್ಷೇತ್ರ ಸಿನಿಮಾದ ಬಗ್ಗೆ ಮನಸೋತಿದ್ದಾರೆ. ಹೌದು. ಈ ಅಭಿಮಾನಿಗಳ ಚಿತ್ರಮಂದಿರಕ್ಕೆ ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ನಾಗಣ್ಣ ನಿರ್ದೇಶನದ ಈ ಚಿತ್ರವು ಚಾಲೆಂಜಿಂಗ್ ಸ್ಟಾರ್ ಅವರ ಈ ಹಿಂದಿನ ಕಲೆಕ್ಷನ್ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದ್ದು, 50ನೇ ಸಿನಿಮಾ ಮೂಲಕ ಡಿ ಬಾಸ್ ಹೊಸ ಇತಿಹಾಸ ನಿರ್ಮಿಸುವ ಸಾಧ್ಯತೆಯಿದೆ.

ಅದ್ದೂರಿ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರ

ಸ್ಯಾಂಡಲ್ ವುಡ್ ನ ಸಿಕ್ಕಾಪಟ್ಟೆ ನಿರೀಕ್ಷೆ ಹೊಂದಿದ್ದ ಸಿನಿಮಾ ಈ ಕುರುಕ್ಷೇತ್ರ. ಯಾಕಂದ್ರೆ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ನೆಚ್ಚಿನ ನಾಯಕರನ್ನೆಲ್ಲ ಒಂದೇ ತೆರೆ ಮೇಲೆ ನೋಡಿರುವುದಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಲ್ಲದೆ ಸಿನಿಮಾ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಯಾಕಂದ್ರೆ ವರಮಹಾಲಕ್ಷ್ಮೀ ಹಬ್ಬದಂದು ಕುರುಕ್ಷೇತ್ರ ಸಿನಿಮಾ ತೆರೆಗೆ ಬಂದಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ರಿಲೀಸ್​ ಆದ ಬೆನ್ನಲ್ಲೇ ಸಾಲು ಸಾಲು ಸರ್ಕಾರಿ ರಜೆ ಬಂದಿದ್ದು ಬಾಕ್ಸ್​ ಆಫೀಸ್​ ಗಳಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆಯಂತೆ. ಇನ್ನು ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ತಾರಾಬಳಗ ಕೂಡ ಸಂತಸ ಪಟ್ಟಿದ್ದಾರೆ.

ಒಟ್ಟಿನಲ್ಲಿ ಕುರುಕ್ಷೇತ್ರ ಸಿನಿಮಾವನ್ನು ನೋಡಲು ಡಿ ಬಾಸ್ ಅಭಿಮಾನಿಗಳು ದೇಶ ವಿದೇಶಗಳಿಂದಲೂ ಬರುತ್ತಿದ್ದಾರೆ. ಬಂದವರು ಚಿತ್ರವನ್ನು ನೋಡಿ ಮನಸೋತು, ಡಿ ಬಾಸ್ ಎಂದು ಜೋರಾಗಿ ಕೂಗುವುದರ ಮೂಲಕ, ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here