ದೋಸ್ತಿ ಸರ್ಕಾರ ಉರುಳಿದ ನಂತರ ಪ್ರತಿಕ್ರಿಯಿಸಿದ ನವರಸ ನಾಯಕ

0
441

ದೇಶದಲ್ಲಿ ಯಾವ ಪಕ್ಷ ಆಡಳಿತದಲ್ಲಿರುತ್ತದೊ ಅದೆ ಪಕ್ಷ ರಾಜ್ಯದಲ್ಲಿದ್ದರೆ ಆಗ ದೇಶ ಮತ್ತು ರಾಜ್ಯ ಎರಡು ಒಟ್ಟಿಗೆ ಅಭಿವೃದ್ಧಿಯಾಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿತ್ತು. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಎಲ್ಲ ವಿರುದ್ದವಾಗಿಯೆ ಇತ್ತು. ಸೆಂಟ್ರಲ್ ನಲ್ಲಿ ಬಿಜೆಪಿ ಇದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಆಡಳಿತದಲ್ಲಿರುವುದನ್ನು ನಾವು ಕಂಡಿದ್ದೇವೆ. ಕೇಂದ್ರ ಸರ್ಕಾರದಲ್ಲಂತು ಬಿಜೆಪಿ ದೆ ಹವಾ ಅದರಲ್ಲಿ ಬೇರೆ ಮಾತೆ ಇಲ್ಲ. ಈ ಹಿಂದೆ ಕರ್ನಾಟಕದಲ್ಲಿ ಚುನಾವಣೆ ನಡೆದಿದ್ದಾಗ, ಬಿಜೆಪಿ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆದಿದ್ದರು, ಅಧಿಕಾರಕ್ಕೆ ಬರಲು ಸ್ವಲ್ಪ ಶಾಸಕರ ಬೆಂಬಲ ಬೇಕಿತ್ತು. ಅಷ್ಟರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದ್ದರು. ಈ ದಿನ ಅದೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಗೆ ಬಂದು ಸೇರಿಕೊಂಡಿದ್ದರು.

ನಾನು ರಾಜ್ಯದ ಬೆಳವಣಿಗೆಗಾಗಿ ಸ್ವಾರ್ಥ ಚಿಂತನೆ ಮಾಡುವೆ

ಕಳೆದ ಎರಡು ವಾರಗಳಿಂದ ಮೈತ್ರಿ ಸರ್ಕಾರ ಬೀಳುತ್ತ ಅಥವಾ ಉಳಿಸುಕೊಳ್ಳುತ್ತಾರಾ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತ ಎನ್ನುವುದು ಕುತೂಹಲಕಾರಿಯಾಗಿತ್ತು. ನೆನ್ನೆ ಸದನದಲ್ಲಿ ವಿಶ್ವಾಸ ಮತ ತೋರಿಸಲು ದೋಸ್ತಿ ಸರ್ಕಾರ ವಿಫಲವಾಗಿತ್ತು. ಯೆಡಿಯೂರಪ್ಪ ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದ್ದಾರೆ. ಮಾಡಿದ ಕರ್ಮ ನಮ್ಮನ್ನು ಬಿಡುವುದಿಲ್ಲ, ಅದೆ ರೀತಿ ಈಗ ರಾಜಕೀಯದಲ್ಲು ನಡೆದಿದೆ. ಈ ವಿಷಯದ ಬಗ್ಗೆ ನವರಸ ನಾಯಕ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಾನು ರಾಜ್ಯದ ಬೆಳವಣಿಗೆಗಾಗಿ ಸ್ವಾರ್ಥ ಚಿಂತನೆ ಮಾಡುವೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಒಂದೆ ಸರ್ಕಾರ ಇದ್ದಾಗ ಮಾತ್ರ ನಮ್ಮ ಪರಿಕಲ್ಪನೆಯ ಕನಸು ಸಫಲ. ಈಗ ಆ ಸುವರ್ಣ ಕಾಲ ಕನ್ನಡ ನಾಡಿಗೆ ಬಂದಿದೆ ಎಂದು ಹೇಳಿದ್ದಾರೆ.

ನನ್ನ ಮಾತನ್ನು ಎಲ್ಲರು ಒಪ್ಪುತ್ತಾರೆ ಎಂದು ನಾನು ಭಾವಿಸಲಾರೆ

ದೋಸ್ತಿ ಸರ್ಕಾರ ಪತನವಾಗಿದ್ದಕ್ಕೆ ಮತ್ತೆ ಬಿಜೆಪಿಪಕ್ಷ ಅಧಿಕಾರ ವಹಿಸಿಕೊಳ್ಳುವುದರ ಬಗ್ಗೆ ಜನ ಪಕ್ಷಗಳ ಪರ,ವಿರುದ್ಧವಾಗಿ ಚರ್ಚಿಸುತ್ತಿದ್ದಾರೆ. ಆದರೆ ಇದು ಸಹಜ ಕಳೆದುಕೊಂಡಿರುವವರು ದುಃಖಿಸಬಹುದು, ಪಡೆದುಕೊಂಡಿರುವವರು ಹರ್ಷಿಸಬಹುದು. ತಮ್ಮ ಸ್ವಾರ್ಥಕ್ಕಿಂತ ಸಮಾಜದ ಬಗ್ಗೆ ಚಿಂತನೆಯನ್ನು ಮಾಡದಿದ್ದರೆ ರಾಜಕೀಯ ಬದುಕಿಗೆ ಕ್ಷಮೆಯೆ ಇರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಮಾತನಾಡುವ ಹಕ್ಕು ಪ್ರತಿಯೊಬ್ಬರಿಗೂ ನಮ್ಮ ದೇಶದ ಸಂವಿಧಾನ ನೀಡಿದೆ. ನನ್ನದು ನೇರ ನುಡಿ, ನನ್ನ ಮಾತನ್ನು ಎಲ್ಲರು ಒಪ್ಪುತ್ತಾರೆ ಎಂದು ನಾನು ಭಾವಿಸಲಾರೆ. ಅನಿಸಿಕೆಗೆ ವಿರೋಧ ಸಹಜ. ವಿಚಾರವನ್ನು ವ್ಯಕ್ತ ಪಡಿಸುವ ರೀತಿ ಚೆನ್ನಾಗಿದ್ದರೆ ಜನರು ಅದರ ಬಗ್ಗೆ ಚರ್ಚಿಸುತ್ತಾರೆ. ಕೆಟ್ಟ ಪದಪುಂಜ ಬಳಸುವುದು ಸರಿ ಅಲ್ಲ ಎಂದು ತಿಳಿಸಿದ್ದಾರೆ.

ಪ್ರಚಾರ ಮಾಡಲು ಹೆಚ್ಚು ಸಮಯ ಲಭ್ಯವಾಗಿರಲಿಲ್ಲ

ಕಳೆದ ವರ್ಷ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ,ಜಗ್ಗೇಶ್ ಬಿಜೆಪಿ ಪಕ್ಷದ ವತಿಯಿಂದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದರು. ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕಿರುವುದರಿಂದ ಪ್ರಚಾರ ಮಾಡಲು ಹೆಚ್ಚು ಸಮಯ ಲಭ್ಯವಾಗಿರಲಿಲ್ಲ . ಜಗ್ಗೇಶ್ ಅಂದುಕೊಂಡಂತೆ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ವಿರುದ್ಧ ಸೋತಿದ್ದರು.

LEAVE A REPLY

Please enter your comment!
Please enter your name here