ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜೈ ಎಂದ ನವರಸನಾಯಕ, ಹೇಳಿದ್ದಾದ್ರೂ ಏನು?

0
455

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನವನ್ನು ಸರ್ಕಾರ ರದ್ದು ಗೊಳಿಸಿರುವುದು, ಬಹಳ ಜನರಿಗೆ ಸಂತಸ ತಂದು ಕೊಟ್ಟಿದೆ. ಸರ್ಕಾರ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರಕ್ಕೆ ಜನರು ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅನೇಕ ಬಿಜೆಪಿ ನಾಯಕರು ಇದರ ಸಲುವಾಗಿ ಹೋರಾಡಿದ್ದರು. ಎಷ್ಟು ಉಗ್ರ ಹೋರಾಟ, ಪ್ರತಿಭಟನೆ ಮಾಡಿದರು ಯಾವುದೆ ಪ್ರಯೋಜನವಾಗಿರಲಿಲ್ಲ. ಆರ್ಟಿಕಲ್ 370 ಮತ್ತು 35 ಎ ನಲ್ಲಿ ಸರ್ಕಾರ ಯಾವುದೆ ಬದಲಾವಣೆ ಮಾಡದೆ ತೆಗೆದುಹಾಕಿದ್ದಾರೆ. ಪರ ಮತ್ತು ವಿರೋಧದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸರ್ಕಾರ ಯಾವುದಕ್ಕು ತಲೆ ಕೆಡಿಸಿಕೊಳ್ಳದೆ ದೇಶದ ಹಿತಕ್ಕಾಗಿ ಈ ರೀತಿಯ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

1947 ಅಲ್ಲ, 2019 ಭಾರತಕ್ಕೆ ನಿಜವಾದ ಸ್ವಾತಂತ್ರ ಸಿಕ್ಕ ದಿನ

ನವರಸ ನಾಯಕ ಜಗ್ಗೇಶ್ ಅವರು ಸಹ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಬಹಳ ಸಂತಸದಿಂದ ಟ್ವೀಟ್ ಮಾಡಿದ್ದಾರೆ. ಇಂದಿನ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತೀಯರ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದು ಹೇಳಿದ್ದಾರೆ. ಕರ್ಣಾನಂದವಾಯಿತು ಇಂದಿನ ನನ್ನ ಹೆಮ್ಮೆಯ ಭಾರತೀಯ ಜನತಾ ಪಕ್ಷದ ಐತಿಹಾಸಿಕ ನಿರ್ಣಯ. 1947 ಅಲ್ಲಾ 2019 ಭಾರತಕ್ಕೆ ನಿಜವಾದ ಸ್ವಾತಂತ್ರ ಸಿಕ್ಕ ದಿನ. ಒಕ್ಕೊರಲಿನ ಸ್ವಾಭಿಮಾನದ ಘೋಷ ಮೊಳಗಲಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ನಂತರ ಮತ್ತೊಂದು ಟ್ವೀಟ್ ಮಾಡಿದ್ದು, ಎಲ್ಲರ ಮನ ಮುಟ್ಟುವ ಹಾಗೆ ಬಹಳ ಸೊಗಸಾಗಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸ್ವಾಭಿಮಾನಿ ಮಕ್ಕಳು ಭಾರತ ಮಾತೆಯ ಮುಕುಟ ತಲೆ ಮೇಲೆ ಇಡಲು ಸನ್ನದ್ಧರಾಗಿದ್ದಾರೆ

ಕಾಶ್ಮೀರ ಭಾರತಮಾತೆಯ ಮುಕುಟ 70 ವರ್ಷ ಕಳಚಿಟ್ಟು, ಭಾರತ ಮಾತೆಗೆ ಜೈ ಎಂದರೆ ಕಲೆಕಟ್ಟದು. ಇಂದು ಭಾರತ ಮಾತೆಯ ಸ್ವಾಭಿಮಾನಿ ಮಕ್ಕಳು ಅವಳ ಮುಕುಟ ತಲೆ ಮೇಲೆ ಇಡಲು ಸನ್ನದ್ಧರಾಗಿದ್ದಾರೆ. ಅವರ ಜೊತೆ ಕೈ ಜೋಡಿಸಿ ಎಲ್ಲರು ಜೈ ಎನ್ನುವ ಕಾಲ ಬಂದಿದೆ. ಈಗ ಯಾರು ಅವಳ ಮಕ್ಕಳು ಜಾಗ ಅರಿವುದು ನಿಜ ಮಕ್ಕಳು, ಜಾಗ ಅರಿವುದು ಜೈ ಹಿಂದ್ ಎಂದು ಹೇಳುವ ಮೂಲಕ ದೇಶದ ಮೇಲೆ ಇರುವ ಅಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಜಗ್ಗೇಶ್ ಅವರು ಮಾಡಿದ ಟ್ವೀಟ್ ಗೆ ಜನರು ಹಾಡಿ ಹೊಗಳುತ್ತಿದ್ದಾರೆ.

ನನಗಿಂತ ದೇಶ ಮುಖ್ಯ ವಿನಹ ಅಧಿಕಾರವಲ್ಲಾ ನನಗೆ ನಿಮ್ಮ ಚಪ್ಪಾಳೆ ಸಾಕು

12 ವರ್ಷದ ಹಿಂದೆ ನಾನು ಭಾಜಪ ಅಪ್ಪಿದಾಗ ನನ್ನ ಪ್ರಾಮಾಣಿಕ ಭಾವನೆ ಅರಿವಾಗದೆ ಕೆಲವರು ಹಂಗಿಸಿ ಅವಮಾನಿಸಿದರು, ಎಲ್ಲವನ್ನು ಸಹಿಸಿ ನಾನು ತಾಳ್ಮೆಯಿಂದ ಬಾಳಿದ ಕಾರಣ ಇಂದಿನ ದಿನದ ಕನಸು ಕಂಡು. ಬಹುತೇಕರಿಗೆ ಅರಿವಾಗಿರಬೇಕು ನಾನು ಅಂದು ಕಂಡ ಕನಸು ಇಂದು ಸಾಕಾರವಾಯಿತು. ನನಗೆ ನನಗಿಂತ ದೇಶ ಮುಖ್ಯ, ವಿನಹ ಅಧಿಕಾರವಲ್ಲಾ ನನಗೆ ನಿಮ್ಮ ಚಪ್ಪಾಳೆ ಸಾಕು ಎಂದು ಹೇಳಿದ್ದಾರೆ.

ಇನ್ನು ಮುಂದೆ ಸಾಮಾನ್ಯ ರಾಜ್ಯಗಳಂತೆ ಜಮ್ಮು ಕಾಶ್ಮೀರದಲ್ಲಿ ಒಂದೇ ಬಾವುಟ ಹಾರಾಟ ಮಾಡಬೇಕು. 2ನೇ ಬಾವುಟ ಹಾರಾಟ ಮಾಡುವಂತಿಲ್ಲ. ಜಮ್ಮು ಕಾಶ್ಮೀರ ಮೂರು ಭಾಗಗಳಾಗಿ ವಿಭಜನೆ ಮಾಡಾಲಾಗಿದೆ. ಜಮ್ಮು ಮತ್ತು ಕಶ್ಮೀರ, ವಿಧಾನಸಭೆ ಎರಡು ಕೇಂದ್ರಾಡಳಿತ ಪ್ರದೇಶವಾಗಲಿದೆ. ಶಿಕ್ಷಣ, ವಿದ್ಯಾರ್ಥಿವೇತನ, ಉದ್ಯೋಗ ಅವಕಾಶಕ್ಕೆ ಎಲ್ಲರು ಅರ್ಹರು. ಮಹಿಳೆಯರು ಸಹ ಬೇರೆ ರಾಜ್ಯದವರನ್ನು ಮದುವೆಯಾಗಬಹುದಾಗಿದೆ ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ.

LEAVE A REPLY

Please enter your comment!
Please enter your name here