ನವರಸನಾಯಕನ ಸಾಕು ತಾಯಿ ಇನ್ನಿಲ್ಲ

0
602

ನಮ್ಮನ್ನು ಪ್ರೀತಿಸುವ ವ್ಯಕ್ತಿಗಳನ್ನು ಕಳೆದುಕೊಂಡರೆ ನಮಗೆ ಬಹಳ ನೋವಾಗುತ್ತದೆ. ಆ ವ್ಯಕ್ತಿ ಯಾರೆ ಆಗಿದ್ದರು ಸಹ ಅವರ ಜೊತೆ ಕಳೆದ ಮಧುರವಾದ ಕ್ಷಣಗಳು ಮತ್ತೆ ಮತ್ತೆ ನಮ್ಮನ್ನು ಕಾಡುತ್ತದೆ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಎನ್ನುವ ಒಂದು ಗಾದೆ ಮಾತಿದೆ. ತಾಯಿ ನಮ್ಮ ಜೀವನದಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಹೌದು, ತಾಯಿಯಿಂದ ಅನೇಕ ಜಾಗತೀಕವಾದ ವಿಷಯಗಳನ್ನು ನಾವು ಕಲಿಯುತ್ತೇವೆ. ಅಮ್ಮನ ಹತ್ತಿರ ನಾವು ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಚಿಕ್ಕ ವಯಸ್ಸಿನಿಂದ ನಮ್ಮನ್ನು ಸಾಕಿ ಸಲುಹಿ ಕಣ್ಣಲ್ಲಿ ಧೂಳನ್ನು ಹೋಗದಿರುವ ರೀತಿಯಲ್ಲಿ ನಮ್ಮನ್ನು ಕಣ್ಣಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಒಬ್ಬ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಪ್ರಪಂಚದಲ್ಲಿ ಇರುವುದಕ್ಕೆ ಸಾಧ್ಯವೇ ಇಲ್ಲ.

ಇಂದು ಹರಸಲಾಗದ ಕಣ್ಣಿಗೆ ಕಾಣದ ಊರಿಗೆ ಹೊರಟು ಬಿಟ್ಟಿದ್ದಾಳೆ

ಅಮ್ಮ ನಮ್ಮ ಪ್ರತಿ ಒಂದು ನಡಿಗೆಯನ್ನು ಸೂಕ್ಶ್ಮವಾಗಿ ಗಮನಿಸುತ್ತಿರುತ್ತಾರೆ. ಸದಾ ಕಾಲ ನಮ್ಮನ್ನು ಆರೈಕೆ ಮಾಡುತ್ತಲೆ ಇರುತ್ತಾರೆ. ಅಮ್ಮನ ಜೊತೆ ಕಳೆಯುವ ಪ್ರತಿ ಒಂದು ಕ್ಷಣವು ವರ್ಣಿಸಲು ಅಸಾಧ್ಯ. ನವರಸ ನಾಯಕ ತಮ್ಮ ಸಾಕು ತಾಯಿಯನ್ನು ಕಳೆದುಕೊಂಡಿದ್ದಾರೆ. ನನ್ನ ಸಾಕು ತಾಯಿ ಮೊರು ಬಾಯ್ ಜನ್ಮ ಕೊಟ್ಟ ನನ್ನ ತಾಯಿಯ ಬಳಿ ಸಂಗಾತಿಯಾಗಳು ಹೋಗಿ ಬಿಟ್ಟಳು. ಕಳೆದ ವಾರ ನನನ್ನು ಹರಸಿ ಕಳಿಸಿದ್ದಳು. ಇಂದು ಹರಸಲಾಗದ ಕಣ್ಣಿಗೆ ಕಾಣದ ಊರಿಗೆ ಹೊರಟು ಬಿಟ್ಟಿದ್ದಾಳೆ. ಅವಳ ಕೈ ತುತ್ತು ತಿಂದ ನಾನು ಅವರನ್ನು ಮರೆಯಲು ಸಾಧ್ಯವೇ ಇಲ್ಲ. ನನಗೆ ಮಮತೆ ತೋರಿ ತುತ್ತು ತಿನ್ನಿಸಿದ ಕಡೆ ತಾಯಿ ಪ್ರೀತಿಯ ಕೊಂಡಿಯೂ ಹೋಯಿತು. ಅಮ್ಮನಂತೆ ಇವಳು, ಇನ್ನುಮುಂದೆ ನೆನಪು ಮಾತ್ರ. ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆವು ಸುಮ್ಮನೆ ಎಂದು ತಾಯಿಯ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಬರಹಗಳ ಮೂಲಕ ಹಂಚಿಕೊಂಡಿದ್ದಾರೆ.

ಮಾತು ನಿಂತು ನನಗಾಗಿ ಹಂಬಲಿಸಿದ್ದಾಳೆ

ಜಗ್ಗೇಶ್ ತಾಯಿಯಾದ ನಂಜಮ್ಮನವರ ಸ್ನೇಹಿತೆಯೆ ಮೊರುಬಾಯ್. ಚಿಕ್ಕ ವಯಸ್ಸಿನಿಂದ ಜಗ್ಗೇಶ್ ಇವರ ಜೊತೆ ತಾಯಿ ಮಗನ ತರಹದ ಬಾಂಧ್ಯವ್ಯವನ್ನು ಇಟ್ಟುಕೊಂಡಿದ್ದರು. ಹೋದ ವಾರ ಇವರನ್ನು ಭೇಟಿ ಮಾಡಿ ಒಂದು ಪೋಸ್ಟ್ ಹಾಕಿದ್ದರು.ನಾನು ಹುಟ್ಟಿದಾಗಿಂದ ನನ್ನ ಲಾಲನೆ ಪಾಲನೆ ಮಾಡಿದ ನನ್ನ ಎರಡನೆ ತಾಯಿ ಮೋರುಬಾಯ್. ನಾನು ಆಕೆಯನ್ನು ಅಕ್ಕ ಎಂದು ಕರೆಯುತ್ತೇನೆ ಆಕೆ ನನ್ನನ್ನು ಅಣ್ಣ ಎಂದು ಕರೆಯುತ್ತಾಳೆ. ನನ್ನ ಅಮ್ಮನಿಗಿಂತ 9 ವರ್ಷ ಹಿರಿಯಳು ಈಕೆಗೆ ಈಗ 90 ವರ್ಷ. ಸಾವಿನ ಬಾಗಿಲಿಗೆ ಅಕ್ಕ ಮುಖಮಾಡಿ ಮಾತು ನಿಂತು ನನಗಾಗಿ ಹಂಬಲಿಸಿದ್ದಾಳೆ. ಕೇದಾರನಾಥ ಸನ್ನಿದಿಯಿಂದ ಬಂದಾಗ ವಿಷಯ ತಿಳಿದು ಓಡಿಹೋದೆ.

ಮಣ್ಣಿನ ಋಣ ತೀರಿಸುವ ಮುನ್ನ ನನ್ನ ಪ್ರೀತಿಯಿಂದ ಮಾತಾಡಿಸಿ ಹರಸಿದಳು

ಅವಳ ಬಳಿ ಹೋದಾಗ ನಿಂತಮಾತು ಮುಚ್ಚಿದ ಕಣ್ಣು ನಾನು ಅಕ್ಕ ಎಂದು ಕೂಗಿದಾಗ ಕಣ್ಣು ತೆರೆದು ಮಾತು ಮತ್ತೆ ಶುರುವಾಯ್ತು. ಹರಸಿದಳು ನಮಿಸಿದಳು ನನ್ನ ಬಾಲ್ಯ ನೆನಪಾದಳು ಅಳಿಸಿದಳು. ಇದೆ ಅಲ್ಲವೆ ಸಾಕಿದ ಋಣ! ಅಮ್ಮನಿಲ್ಲದ ನನಗೆ 26 ವರ್ಷದಿಂದ ಅಮ್ಮನ ಪ್ರೀತಿ ತೋರುತ್ತಿದ್ದಳು. ಎಲ್ಲಿಯು ಬರದ ಈಕೆ ನನಗಾಗಿ ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದರು, ಕಾರ್ಯಕ್ರಮದಲ್ಲಿ ಇಬ್ಬರು ತುಂಬಾ ಭಾವುಕರಾಗಿದ್ದೆವು ಎಂದು ಜಗ್ಗೇಶ್ ಹೇಳಿದ್ದಾರೆ. ನನ್ನ ತಂದೆ ಸಾವಿನ ಕದಂಬ ಭಾಹು ಅಪ್ಪುವ ಸಮಯ ಹೀಗೆ ಪಕ್ಕದಲ್ಲಿ ಇದ್ದು ಭಾರವಾದ ಹೃದಯದಿಂದ ಅಳುತ್ತ ಅಪ್ಪನ ಕಳಿಸಿಕೊಟ್ಟೆ. ನನ್ನ ದುರ್ವಿಧಿ ಮತ್ತೆ ನನಗೆ ತಿನ್ನಿಸಿ ಆಡಿಸಿದ ಪ್ರೀತಿಯ ಸಾಕು ತಾಯಿ ಅಪ್ಪನಂತೆ ಅನ್ನ ಮಣ್ಣಿನ ಋಣ ತೀರಿಸುವ ಮುನ್ನ ನನ್ನ ಪ್ರೀತಿಯಿಂದ ಮಾತಾಡಿಸಿ ಹರಸಿದಳು.

ಇರುವವರೆಗು ನಮ್ಮವರು ಹೋದ ಮೇಲೆ ನೆನಪು ಮಾತ್ರ

ನನಗೆ ಪ್ರೀತಿಕೊಟ್ಟು ತಾಯಂತೆ ಪ್ರೀತಿಸಿದ ಆತ್ಮ ನನ್ನಬಿಟ್ಟು ಬಾರದ ಊರಿಗೆ ಗಂಟುಮೂಟೆ ಕಟ್ಟುತ್ತಿದ್ದಾಳೆ. ನನಗೆ ತಿಳಿದಿದ್ದು ಒಂದೆ ಶಿವಧ್ಯಾನ ಮಾಡುತ್ತಿರು ನಿಲ್ಲಿಸಬೇಡ ಶಿವ ಬರುತ್ತಿದ್ದಾನೆ. ನಿನಗಾಗಿ ಕೈಲಾಸದಿಂದ ಇಳಿದು ಶಿವ ಎಂದು ಧೈರ್ಯತುಂಬಿ ಸಾವಿನ ಲೆಕ್ಕಾಚಾರ ಜಗದನಿಯಮ ಮನುಷ್ಯನ ಕೊನೆದಿನ ಹಾಗು ನನ್ನ ಪ್ರೀತಿಸಿ ಬೆಳೆಸಿದ ನನ್ನ ಬಾಲ್ಯಕಂಡ ಕೊನೆ ಪ್ರೀತಿಯ ದೇವರ ಉಸಿರುನಿಂತ ಮೇಲೆ ತಿಳಿಸಿ ಎಂದು ಹೇಳಿ ಅವಳ ಸಾವು ಬರುವುದು ನೋಡಲಾಗದೆ ಬಂದುಬಿಟ್ಟೆ ಇರುವವರೆಗು ನಮ್ಮವರು ಹೋದ ಮೇಲೆ ನೆನಪು ಮಾತ್ರ. ಭಾರವಾಯ್ತು ನನ್ನ ಮನಸ್ಸು ನನ್ನ 56ನೆ ವಯಸ್ಸಿಗೆ ಎಷ್ಟು ಜನ ಬಂಧುಗಳ ಕಳೆದುಕೊಂಡೆ. ಅವಳ ಆತ್ಮ ನೋವಿಲ್ಲದೆ ಶಿವನ ಪಾದ ಸೇರಲಿ ಶಿವಾರ್ಪಣಮಸ್ತು ನವರಸನಾಯಕ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here