ಶೇಕ್ ಹ್ಯಾಂಡ್ ಮಾಡುವುದರಿಂದ ದರಿದ್ರ ಬರುತ್ತದೆ – ನಟ ಜಗ್ಗೇಶ್ ಹೇಳಿಕೆ. ಹೇಗೆ?

0
714
jaggesh and school

ಸಾಮಾನ್ಯವಾಗಿ ಈಗಿನ ಮಕ್ಕಳಿಗೆ ಹಿಂದಿನ ಸಂಪ್ರದಾಯದ ಬಗ್ಗೆ ಗೊತ್ತಿಲ್ಲ. ಯಾಕಂದ್ರೆ ಈಗಿನ ಕಾಲದಲ್ಲಿ ಅದೆಲ್ಲಾ ಮಾಸಿ ಹೋಗುತ್ತಿದೆ. ಜೊತೆಗೆ ಶಾಲೆಯಲ್ಲೂ ಸಹ ಇದರ ಬಗ್ಗೆ ಬೋಧನೆ ಮಾಡುವುದು ಕಡಿಮೆಯಾಗಿದೆ. ಇನ್ನು ಪೋಷಕರು ಸಹ ಕೆಲಸ ಕಾರ್ಯ ಅಂತ ಸದಾ ಬ್ಯುಸಿಯಾಗಿರುತ್ತಾರೆ. ಹೀಗಿರುವಾಗ ಮಕ್ಕಳು ಮನಬಂದಂತೆ ಬೆಳೆಯುತ್ತಾರೆ. ಜೊತೆಗೆ ನಮ್ಮ ಸಂಪ್ರದಾಯವನ್ನು ಸಹ ಮರೆಯುತ್ತಿದ್ದಾರೆ. ಒಂದು ಕಾಲದಲ್ಲಿ ಯಾರನ್ನಾದರೂ ಭೇಟಿಯಾದರೆ ಕೈ ಮುಗಿದು ನಮಸ್ಕಾರ ಮಾಡುತ್ತಿದ್ದೆವು. ಆದ್ರೆ ಈಗ ಶೇಕ್ ಹ್ಯಾಂಡ್ ಕೊಡುತ್ತೇವೆ. ಇದರಿಂದ ಹಿರಿಯರಿಗೆ ಗೌರವ ನೀಡಿದಂತೆ ಆಗುವುದಿಲ್ಲ. ಯಾಕಂದ್ರೆ ಯಾರೇ ಆಗಲಿ ಅವರಿಗೆ ಕೈ ಮುಗಿದು ನಮಸ್ಕಾರ ಮಾಡಿದಾಗ ಮಾತ್ರ ಅದಕ್ಕೆ ಬೆಲೆ ಎಂದು ನಟ ಜಗ್ಗೇಶ್ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗು ಸಂಪ್ರದಾಯ ತಿಳಿಸಿ

ನಟ ಜಗ್ಗೇಶ್ ಶಾಲಾ ಕಾರ್ಯಕ್ರ್ರಮಕ್ಕಾಗಿ ಚಿತ್ರದುರ್ಗದ ಹಿರಿಯೂರು ತೆರಳಿದ್ದು ಅಲ್ಲಿ ನಮ್ಮ ಸಂಸ್ಕೃತಿ ಹಾಗು ಸಂಪ್ರದಾಯದ ಬಗ್ಗೆ ಮಾತನಾಡಿದ್ದಾರೆ. ಹೌದು. ಈಗಿನ ಕಾಲದ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವಿಲ್ಲ. ಯಾಕಂದ್ರೆ ಶಾಲೆಯಲ್ಲಿ ಅದರ ಬಗ್ಗೆ ತಿಳಿಸುತ್ತಿಲ್ಲ. ಇನ್ನು ಪೋಷಕರು ಸಹ ಅದರ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಹೀಗಾಗಿ ಹಿರಿಯರಿಗೆ ಗೌರವವನ್ನು ಹೇಗೆ ನೀಡಬೇಕೆಂದು ಮಕ್ಕಳಿಗೆ ತಿಳಿಯುತ್ತಿಲ್ಲ. ಸಿಕ್ಕಿದವರಿಗೆಲ್ಲ ಶೇಕ್ ಹ್ಯಾಂಡ್ ಮಾಡುವುದಷ್ಟೇ ಅವರಿಗೆ ಗೊತ್ತು. ಆದ್ರೆ ಇದರಲ್ಲಿ ಹಿರಿಯರು ಹಾಗು ಕಿರಿಯರಿಗೂ ಏನು ವ್ಯತ್ಯಾಸ ಇಲ್ಲದಂತಾಗುತ್ತದೆ. ಅದೇ ನಮಸ್ಕಾರ ಮಾಡಿದರೆ ಹಿರಿಯರಿಗೆ ನೀಡುವ ಗೌರವವಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಶೇಕ್ ಹ್ಯಾಂಡ್ ಮಾಡಿದರೆ ಅವರ ದರಿದ್ರ ನಮಗೆ ಬರುತ್ತದೆ ಎಂದು ಹೇಳಿದ್ದಾರೆ.

ಶೇಕ್ ಹ್ಯಾಂಡ್ ಮಾಡುವುದರಿಂದ ದರಿದ್ರ ಬರುತ್ತದೆ

ಇನ್ನು ಶೇಕ್ ಹ್ಯಾಂಡ್ ಮಾಡುವುದರ ಬಗ್ಗೆಯೂ ಸಹ ಜಗ್ಗೇಶ್ ಮಾತನಾಡಿದ್ದಾರೆ. ಹೌದು. ಈಗಿನ ಕಾಲದ ಮಕ್ಕಳೆಲ್ಲರೂ ಶೇಕ್ ಹ್ಯಾಂಡ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದ್ರೆ ಆ ಅಭ್ಯಾಸವನ್ನು ಇಂದಿಗೆ ಬಿಡಿಸಿ. ಯಾಕಂದ್ರೆ ಶೇಕ್ ಮಾಡುವುದರಿಂದ ಅವರ ದರಿದ್ರ ನಮಗೆ ಬರುತ್ತದೆ. ಅದೇ ನಮಸ್ಕಾರ ಮಾಡುವುದರಿಂದ ಅರೋಗ್ಯ ವೃದ್ಧಿಸುತ್ತದೆ. ಜೊತೆಗೆ ಹಿರಿಯರಿಗೆ ಗೌರವವನ್ನು ನೀಡಿದಂತಾಗುತ್ತದೆ. ಹಾಗಾಗಿ ಎಲ್ಲ ಮಕ್ಕಳಿಗೂ ಅವರ ತಂದೆ ತಾಯಿ ಇದರ ಬಗ್ಗೆ ಅರಿವು ಮೂಡಿಸಿ. ಪರ ದೇಶದ ಸಂಸ್ಕೃತಿಯನ್ನು ನಮ್ಮ ದೇಶದಲ್ಲಿ ಬೆಳೆಸಬೇಡಿ. ಸಂಪ್ರದಾಯದ ಪ್ರಕಾರ ನಡೆದುಕೊಳುವುದನ್ನು ಕಲಿಸಿ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ನಟ ಜಗ್ಗೇಶ್ ಶಾಲಾ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಮ್ಮ ಸಂಸ್ಕೃತಿ ಹಾಗು ಸಂಪ್ರದಾಯದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗು ಸಂಪ್ರಾದವನ್ನು ತಿಳಿಸಿ ಎಂದು ಪೋಷಕರಿಗೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here