ನನ್ನಿಂದ ಜಡೇಜಾಗೆ ಸಮಾಧಾನ ಮಾಡಲು ಆಗುತ್ತಿಲ್ಲ ಎಂದು ಹೇಳಿದ ಪತ್ನಿ ಯಾವ ವಿಷಯಕ್ಕೆ

0
518

ಸೆಮಿಫೈನಲ್ ನಲ್ಲಿ ಭಾರತ ನ್ಯೂಜಿಲ್ಯಾಂಡ್ ವಿರುದ್ಧ ಸೊತಿದೆ. ಎಲ್ಲ ಬ್ಯಾಟ್ಸಮನ್ ಬಹಳ ಬೇಗ ಪೆವಿಲಿಯನ್ ಗೆ ಸೇರಿಕೊಳ್ಳುತ್ತಾರೆ. ಆದರೆ ಜಡೇಜ ಮಾತ್ರ ಆಟದ ಕೊನೆ ಕ್ಷಣದವರಿಗು ಹೋರಾಡಿದ್ದಾರೆ. ಗೆಲ್ಲುವ ಭರವಸೆ ಮೂಡಿಸಿದ್ದರು, ಕೊನೆಗೆ ಕ್ಯಾಚ್ ಔಟ್ ಆಗುವ ಮೂಲಕ ಅಭಿಮಾನಿಗಳ ಆಸೆ ನಿರಾಸೆ ಮಾಡುತ್ತಾರೆ. ಕ್ರೀಡೆಯಲ್ಲಿ ಕೆಳಗೆ ಬಿದ್ದಾಗೆಲ್ಲ ಮೇಲಕ್ಕೆ ಏಳುವುದನ್ನು, ಯಾವತ್ತಿಗು ಹೋರಾಟ ನಿಲ್ಲಿಸಬಾರದೆಂದು ನನಗೆ ಕ್ರೀಡೆ ಕಲಿಸಿಕೊಟ್ಟಿದೆ. ನನ್ನ ಸ್ಪೂರ್ತಿಗೆ ಕಾರಣವಾದ ಅಭಿಮಾನಿಗಳಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನನ್ನನ್ನು ಬೆಂಬಲಿಸಿದಿಕ್ಕಾಗಿ ಧನ್ಯವಾದಗಳು, ಹೀಗೆ ಸ್ಫೂರ್ತಿ ತುಂಬುತ್ತಲೆ ಇರಿ. ನನ್ನ ಕೊನೆ ಉಸಿರು ಇರುವವರೆಗು ನನ್ನ ಕಡೆಯಿಂದ ಅತ್ಯುತ್ತಮವಾದ ಪ್ರಯತ್ನ ಮಾಡುತ್ತಲೆ ಇರುತ್ತಿನಿ ಲವ್ ಯು ಆಲ್ ಎಂದು ಸಾಮಾಜಿಕ ಕಾಲ ತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಅವರನ್ನು ಸಮಾಧಾನ ಮಾಡಲು ನನ್ನಿಂದ ಆಗುತ್ತಿಲ್ಲ

ಮ್ಯಾಚ್ ಮುಗಿದರು ಸಹ ವಿಶ್ವ ಕಪ್ ಸೋತಿರುವ ಗುಂಗು ಜಡೇಜಾ ಅವರಿಗೆ ಕಾಡುತ್ತಿದೆ. ಹೌದು, ನಾನು ವಿಕೆಟ್ ಒಪ್ಪಿಸದೆ ಹೋಗಿದ್ದರೆ, ಖಂಡಿತ ನಾವು ಗೆಲ್ಲುತ್ತಿದ್ದೆವು. ಇನ್ನೇನು ಗೆಲ್ಲುವ ಭರವಸೆಯೊಂದಿಗೆ ಇದ್ದೆವು ಆದರೆ ಕೊನೆ ಹಂತದಲ್ಲಿ ಸೋತು ಬಿಟ್ಟೆವು. ಇದರಿಂದ ಅವರು ಹೊರಗೆ ಬಂದಿಲ್ಲ ಹೀಗಾಗಿ ಅವರನ್ನು ಸಮಾಧಾನ ಮಾಡಲು ನನ್ನಿಂದ ಆಗುತ್ತಿಲ್ಲ ಎಂದು ಜಡೇಜ ಪತ್ನಿ ರಿವಾಬಾ ಜಡೇಜ ಅವರು ತಿಳಿಸಿದ್ದಾರೆ. ನನ್ನ ಪತಿ ಮೈದಾನದಲ್ಲಿ ತುಂಬ ಚೆನ್ನಾಗಿ ಆಡುತ್ತಾರೆ. ಆಲ್ ರೌಂಡರ್ ಆಗಿ ಮಿಂಚಿರುವುದನ್ನು ನೀವು ನೋಡಿರಬಹುದು. 2013 ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಜಡೇಜಾ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿತ್ತು ಎಂದು ಹೇಳುವುದರ ಮೂಲಕ ಜಡೇಜಾ ಅವರನ್ನು ನೆನೆದಿದ್ದಾರೆ.

ಮ್ಯಾಚ್ ತುಂಬ ಕುತೂಹಲಕಾರಿಯಾಗಿತ್ತು

ಈ ಬಾರಿ ಭಾರತ ವಿಶ್ವ ಕಪ್ ಗೆದ್ದೆ ಗೆಲ್ಲುತ್ತದೆ ಎನ್ನುವ ಭಾವನೆಯಲ್ಲಿ ಕ್ರೀಡಾಭಿಮಾನಿಗಳು ಇದ್ದರು. ಕೊನೆವರೆಗು ಮ್ಯಾಚ್ ತುಂಬ ಕುತೂಹಲಕಾರಿಯಾಗಿತ್ತು. ಮ್ಯಾಚ್ ನಡೆಯುವ ವೇಳೆಯಲ್ಲಿ ಧೋನಿ ಮತ್ತು ಜಡೇಜಾ ಅವರ ಆಟವನ್ನು ನೋಡುತ್ತಿದ್ದರೆ ವಿಶ್ವ ಕಪ್ ನಮ್ಮ ಪಾಲಿಗೆ ಇನ್ನು ಜೀವಂತವಾಗಿದೆ ಎಂದು ಅನಿಸುತ್ತಿತ್ತು.

ಆದರೆ ಜಡೇಜಾ ಮತ್ತು ಧೋನಿ ಅವರ ವಿಕೆಟ್ಸ್ ಕಳೆದುಕೊಂಡ ಮೇಲೆ ವಿಶ್ವ ಕಪ್ ಕನಸು ನುಚ್ಚು ನೂರಾಗಿ ಹೋಯಿತು. ಮತ್ತೊಂದು ಅಡ್ಡಿ ಉಂಟಾಗಿದ್ದು ಮಳೆರಾಯನಿಂದ. ಹೌದು, ಅಕಸ್ಮಾತ್ ಅದೆ ದಿನ ಆಟವನ್ನು ಆಡಿದ್ದರೆ ಭಾರತ ಸುಲಭವಾಗಿ ಗೆಲ್ಲುತ್ತಿತ್ತು. ಆದರೆ ಮಳೆ ಸುರಿದಿರುವದರಿಂದ ಪಿಚ್ ಚೇಂಜ್ ಆಗಿದ್ದು, ನ್ಯೂಜಿಲ್ಯಾಂಡ್ ಗೆ ಅನುಕೂಲವಾಯಿತು.

LEAVE A REPLY

Please enter your comment!
Please enter your name here