ಅಯ್ಯರ್ ಇಡ್ಲಿ ಬೆಂಗಳೂರು , ನೀವು ಸಕ್ಕತ್ ಇಡ್ಲಿ ಮತ್ತೆ ಚಿಂದಿ ಚಟ್ನಿ ಹುಡುಕ್ತಿದ್ರೆ ಇದು perfect place.

0
1288

ಇಡ್ಲಿ ಯಾರಿಗ್ ಇಷ್ಟ ಇರಲ್ಲ ಹೇಳಿ? ಅದ್ರಲ್ಲೂ ನೀವು ಬೆಂಗಳೂರಿನವರಾಗಿದ್ರೆ ಇಡ್ಲಿ ನಿಮ್ಮ ಬದುಕಿನ ಒಂದು ಭಾಗ ಆಗಿಹೋಗಿರುತ್ತದೆ. ಸಿಟಿ ಮಂದಿಗಂತೂ ಭಾವನಾತ್ಮಕ ಸಂಬಂಧ ಅನ್ನುವಷ್ಡು ಹತ್ತಿರ ಆಗಿ ದಿನ ನಿತ್ಯದ ಬದುಕಲ್ಲಿ ಬೆರೆತುಹೋಗಿರುತ್ತದೆ.

ಸಿಟಿಮಂದಿ ಮತ್ತೆ ಇಡ್ಲಿ,ವಡೆ ಪ್ರೇಮ್ ಕಹಾನಿ ದಿನದಿಂದ ದಿನಕ್ಕೆ,ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಾನೇ ಇದೇ ಅನ್ನಬಹುದು.ನೀವೂ ಸಾಕಷ್ಟು ಹೋಟಲ್‍ಗಳಲ್ಲಿ ಇಡ್ಲಿ ತಿಂದಿರ್ಬೋದು ಆದರೇ ಬಾಪ್ ಕಾ ಬಾಪ್ ಅನ್ನೋ ಹಾಗೇ ಸಕತ್ ಕ್ವಾಲಿಟಿ , ಚಿಂದಿ ಟೇಸ್ಟ್ ಕೊಡೋ ಈ ಇಡ್ಲಿ ಪಾಯಂಟ್ ಥರ ಬೇರೆದ್ ನಿಮಗೆ ಸಿಗೋದಕ್ಕೆ ಚಾನ್ಸ್ ಎ ಇಲ್ಲ ,ನೀವು ಇಡ್ಲಿ ಪ್ರೇಮಿಗಳಾಗಿದ್ರೇ ಒಂದ್ ಸರ್ತಿನಾದ್ರು “ಅಯ್ಯರ್ ಇಡ್ಲಿ” ನಲ್ಲಿ ಇಡ್ಲಿವಡೆ ಜತೆ ರೋಮಾನ್ಸ್ ಮಾಡ್ಲೇ ಬೇಕು.

ಇದು ಇಡ್ಲಿ  ಪ್ರೇಮಿಗಳ ಅಡ್ಡ.

ಹಳೇ ಬೆಂಗಳೂರನ್ನ ನೆನಪಿಸುವಂತ,ಈ ಸಣ್ಣ ಪುಡ್ ಪಾಯಿಂಟ್ನಲ್ಲಿ ಇಡ್ಲಿ ಮಾಡೋ ಕಲೆಯನ್ನ ಕರಗತ ಮಾಡಿಕೊಂಡಿದ್ದಾರೆ ಅಂತಾನೇ ಹೇಳ್ಬೋದು. ಆನ್ ಆರ್ಡರ್, ನಾವು ಕೇಳಿದ ಮೇಲೆ ಇಡ್ಲಿ ಕೊಡೋದ್ರಿಂದ , ಮೃದುವಾಗಿ , ಬಿಸಿ ಬಿಸಿಯಾಗಿ ಬಾಯಲ್ಲಿ ಇಟ್ಟ ಕೊಡಲೇ ಕರಗಿ ಹೋಗಿಬಿಡತ್ತೆ , ಆ ಬಿಸಿ ಇಡ್ಲಿ ಗಂಟಲಲ್ಲಿ ಜಾರೋವಾಗ ಸ್ವರ್ಗ ರಪ್ ಅಂತ ಪಾಸ್ ಆಗತ್ತೆ ಅಂದ್ರೆ ತಪ್ಪಾಗೋದಿಲ್ಲ .

ಬಹಳ ವರ್ಷಗಳಿಂದಲೂ ಇದೇ ಕ್ವಾಲಿಟಿನ ಕಾಪಾಡಿಕೊಂಡು ಬಂದಿದ್ದಾರೆ. ನಿಜ ಹೇಳ್ಬೇಕಂದ್ರೆ ಆ ಮೃದುವಾದ ಇಡ್ಲಿಗಳು ಚಟ್ನಿ ಇಲ್ಲದೆ ಕೂಡ ನಾಲಗೆಗೆ ಖುಷಿ ಕೊಡತ್ತೆ.ಆದ್ರೆ ಚಟ್ನಿ ಜತೆಗೆ ಸ್ವರ್ಗನೇ!! ; ನಿಜವಾಗ್ಲೂ, ಹೋಗಳೊದಕ್ಕೆ ಹೇಳ್ತಿಲ್ಲ , ಬೆಂಗಳೂರಿನಲ್ಲಿ ಇನ್ನೆಲ್ಲೂ ಈ ತರದ್ ಚಟ್ನಿ ಸಿಗೋದಿಲ್ಲ , ನಾವು ನೋಡಿದ ಹಾಗೇ ಜನ ನಾಲ್ಕು ಇಡ್ಲಿ ತಿನ್ನೋದಕ್ಕೆ ಕಡೇಪಕ್ಷ ಐದಾರ್ ಸರ್ತಿನಾದ್ರು ಚಟ್ನಿ ಹಾಕಿಸಿಕೊಳ್ತಾರೆ. ನಿಮಗೆಲ್ಲ ಬಾಯಲ್ಲಿ ನೀರ್ ಸುರಿತಿದೆ ಅಲ್ವಾ ,!!

iyer idli bengaluru

ನಿರ್ದಿಷ್ಟ ಸಮಯ ಹಾಗೂ ಜನಸಾಗರ.

ಆಯ್ಯರ್ ಇಡ್ಲಿ ಕೇವಲ ಬೆಳಗ್ಗೆ ಮಾತ್ರ ತೆರೆದಿರುತ್ತೆ ,ಆದ್ರೇ ನಿಮ್ಮಹಾಗೆ ನಮ್ಮಹಾಗೆ ಇಡ್ಲಿ ಪ್ರೇಮಿಗಳು ತುಂಬಿಹೋಗಿ ಜನಸಾಗರಾನೇ ನೆರೆದಿರತ್ತೆ. ಅಲ್ಲಿ ಕುರೋ ವ್ಯವಸ್ತೆ ಇದ್ರೂ ಕೂಡ ಕೂತು ತಿನ್ನೋದು ಕಷ್ಟಸಾಧ್ಯ , ಬೆಳಿಗ್ಗೆ 7ರಿಂದ 9ರ ಒಳಗೆ ಸಾಕಷ್ಟು ಜನ ಲಂಚ್ ಬಾಕ್ಸ್ ತಂದು ಇಡ್ಲಿ ಪಾರ್ಸಲ್ ತಗೆದುಕೊಂಡು ಹೋಗೋದನ್ನ ಕಾಣಬಹುದು. ಹೋಟಲ್ ಹತ್ತಿರದ ನಿವಾಸಿಗಳಿಗೆ ಇದೂ ಎರಡನೇ ಮನೆ ಅನ್ನುವಷ್ಟು ಪ್ರಸಿದ್ದಿ ಪಡೆದುಕೊಂಡಿದೆ.

ಕೇವಲ ಹತ್ತು ರೂಪಾಯಿಗೆ ದೊಡ್ಡ ಗಾತ್ರದ ಇಡ್ಲಿ.

ಹೌದು , ನಿಮಗೆ ಹಸಿವಾಗಿ ಹಣ ಕಮ್ಮಿ ಇದ್ರು ಸರಿನೇ , ಕೇವಲ ಹತ್ತು ರೂಪಾಯಿಗೆ ಒಂದು ದೊಡ್ಡ ಗಾತ್ರದ ಇಡ್ಲಿ, ಚಟ್ನಿ ಜತೆ ನಿಮ್ಮ ಹೊಟ್ಟೆ ಸೇರತ್ತೆ. ನೀವು ತಿಂಡಿಪೋತರಾಗಿದ್ರು 2-3 ಇಡ್ಲಿ ತಿಂದು 30 ರೂಪಾಗೆ ತುಂಬಿದ ಹೊಟ್ಟೆಯಲ್ಲಿ ಸಂತೃಪ್ತಿಯಿಂದ ಹಿಂತಿರುಗಬಹುದು. ಮುಂಚೆ ಒಂದು ಇಡ್ಲಿಗೆ ಎಂಟು ರೂಪಾಯ ಚಾರ್ಜ್ ಮಾಡ್ತಿದ್ರು, ಆದ್ರೆ ಈಗ ಹತ್ತು ರೂಪಾಯಿ ಬೆಲೆ ಆಗಿದೆ. ಅವರು ಕೊಡೋ ಸಕ್ಕತ್ ಕ್ವಾಲಿಟಿಗೆ ಹತ್ತು ರೂಪಾಯಿ ಏನೇನು ಅಲ್ಲ ಬಿಡಿ.

ಟಿಪ್ : ಜನ ಹೆಚ್ಚು ಇರೋದ್ರಿಂದ ಆದಷ್ಟು ಬೇಗ ಹೋಗಿ , ಸ್ವಲ್ಪ ಸಮಯ ಕಾಯಬೇಕಾಗತ್ತೆ , ಅದಕ್ಕೆ ತಯಾರಾಗಿರಿ. ಕಾಯೋದಕ್ಕೆ ಕಷ್ಟ ಅನ್ನಿಸಿದ್ರೆ ಅಲ್ಲೇ ತಿನ್ನೋದಕ್ಕಿಂತ ಪಾರ್ಸಲ್ ತಗೆದುಕೊಂಡು ಹೋಗದು ಬೆಟರ್ ಚಾಯ್ಸ್.

ನೋಟ್ : ಬೆಣ್ಣೆ ಮತ್ತು ಚಟ್ನಿ ಪುಡಿ ಖರೀದಿಗೆ ದೊರೆಯುತ್ತದೆ.

Open: 6:30 AM – 11:30 AM (Mon, Fri, Thu) and 7 AM – 11 AM (Sat, Sun, Tue)

Where: Kariyappa Building, Kuvempu Road, Vignan Nagar, New Tippasandra, Bengaluru

LEAVE A REPLY

Please enter your comment!
Please enter your name here