4 ಲಕ್ಷದ ಉದ್ಯಮ ತೊರೆದು, ಇಸ್ರೇಲ್ ಕೃಷಿಯಲ್ಲಿ ಸಾಧನೆ ಮಾಡಿದ ಪದವೀಧರ

0
2744
isrel udyami

ಈಗಿನ ಕಾಲದಲ್ಲಿ ಚೆನ್ನಾಗಿ ಓದಿ, ಯಾವುದಾದರು ಒಳ್ಳೆ ಕೆಲಸ ಸಿಗಲಿ ಅಂತ ಎಲ್ಲರೂ ಕಾಯ್ತಿರ್ತಾರೆ. ಅದಕ್ಕೋಸ್ಕರ ಅಂತ ಪಡಬಾರದ ಕಷ್ಟ ಪಡುತ್ತಾರೆ. ಹೌದು, ತಂದೆ ತಾಯಿಗೆ ಎಷ್ಟೇ ಬಡತನವಿದ್ದರೂ, ನಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್, ಪೊಲೀಸ್ ಆಗ್ಬೇಕು ಅಂತ ಬಯಸುತ್ತಾರೆ. ಅದೇ ರೀತಿ ಇಲ್ಲೊಂದು ಕುಟುಂಬ ತಮ್ಮ ಮಗನನ್ನ ಕಷ್ಟಪಟ್ಟು ಓದಿಸಿ, ಬಿಇ, ಬಿಟೆಕ್ ಮಾಡಿಸಿದ್ದರು. ಅದರಂತೆ ಇವರ ಮಗ ಕೂಡ, ಒಳ್ಳೆಯ ಕೆಲಸವನ್ನು ಪಡೆದುಕೊಂಡಿದ್ದರು. ಆದ್ರೆ ಈಗ ಕೆಲಸವನ್ನು ಬಿಟ್ಟು, ಊರು ಸೇರಿದ್ದಾರೆ. ಆದ್ರೆ ಇವರು ಊರು ಸೇರಿದ್ದು, ಇವರ ತಂದೆ ತಾಯಿಗೆ ಮೊದಲು ಬೇಸರ ತರಿಸಿದರು, ನಂತರ ಇವರ ಮಗ ಮಾಡಿರುವ ಕೆಲಸಕ್ಕೆ ಹೆಮ್ಮೆ ಪಟ್ಟಿದ್ದಾರೆ. ಹೌದು. ಇಷ್ಟೆಲ್ಲಾ ಓದಿ, ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

4 ಲಕ್ಷದ ನೌಕರಿಗೆ ಗುಡ್‍ ಬೈ ಹೇಳಿದ ಗಿರೀಶ್

ಇವರ ಹೆಸರು ಗಿರೀಶ್. ಇವರು ಮೂಲತಃ ಬಳ್ಳಾರಿಯವರು. ಗಿರೀಶ್ ಅವರಿಗೆ ಬಹಳ ಆಸಕ್ತಿ. ಹಾಗಾಗಿ ಕಷ್ಟಪಟ್ಟು ಬಿಇ, ಬಿಟೆಕ್ ಮಾಡಿದರು. ನಂತರ ಅವರಿಗೆ ಅದೃಷ್ಟ ಎನ್ನುವಂತೆ ಜರ್ಮನಿಯಲ್ಲಿ ಆಟೋಮೊಬೈಲ್ ಇಂಜಿನಿಯರ್ ಆಗಿ ಅವರಿಗೆ ಕೆಲಸ ಸಿಕ್ಕಿತು. ಅವರ ಕೆಲಸಕ್ಕೆ 4 ಲಕ್ಷ ಸಂಬಳ ನೀಡ್ತಿದ್ರು. ಗಿರೀಶ್ ಕೂಡ, ಚೆನ್ನಾಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ರು. ಆದ್ರೆ ಇದ್ದಕ್ಕಿದ್ದಂತೆ, ಅವರಿಗೆ ಏನಾಯ್ತೋ ಗೊತ್ತಿಲ್ಲ. ದಿಢೀರನೆ ಕೆಲಸಕ್ಕೆ ರಾಜೀನಾಮೆ ನೀಡಿ, ಹುಟ್ಟೂರಿಗೆ ಬಂದು ಕೃಷಿ ಮಾಡಲು ನಿರ್ಧರಿಸಿದರು. ಗಿರೀಶ್ ಅವರ ಈ ನಿರ್ಧಾರವನ್ನು ಕೇಳಿದಾಗ ಮೊದಲು, ಮನೆಯವರು ಒಪ್ಪಿರಲಿಲ್ಲ. ಆದ್ರೆ ಗಿರೀಶ್ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಎಲ್ಲರೂ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ.

ಇಸ್ರೇಲ್ ಮಾದರಿ ಕೃಷಿ ಮಾಡಲು ನಿರ್ಧರಿಸಿದ ಗಿರೀಶ್

ಇನ್ನೂ 4 ಲಕ್ಷದ ಕೆಲಸಕ್ಕೆ ರಾಜೀನಾಮೆ ನೀಡಿದ ಗಿರೀಶ್ ಇಸ್ರೇಲ್ ಮಾದರಿ ಕೃಷಿ ಮಾಡಲು ನಿರ್ಧರಿಸುತ್ತಾರೆ. 2 ಮನೆ, ಬಂಗಾರ, ತಂದೆಯ ಪಿಎಫ್ ಫಂಡ್ ಜೊತೆಗೆ 4 ಕೋಟಿ ಸಾಲ ಮಾಡಿ, 10 ಎಕರೆ ಜಮೀನಿನಲ್ಲಿ 1 ಎಕರೆ ವಿಸ್ತಾರವುಳ್ಳ 7 ಪಾಲಿಹೌಸ್‍ಗಳನ್ನ ನಿರ್ಮಿಸಿ ಇಸ್ರೇಲ್ ಮಾದರಿಯ ಕೃಷಿ ಮಾಡಲು ಆರಂಭಿಸುತ್ತಾರೆ. ಅಷ್ಟು ಎಕರೆ ತೋಟದಲ್ಲೂ ಗುಲಾಬಿ ಹೂಗಳನ್ನು ಬೆಳೆಸುತ್ತಾರೆ. ಜೊತೆಗೆ 40 ಬೊರ್‍ವೆಲ್ ಕೊರೆಸುತ್ತಾರೆ. ಆದ್ರೆ ಅಷ್ಟು ಬೊರ್‍ವೆಲ್ ಕೊರೆಸಿದರು ನೀರು ಸಿಗುವುದಿಲ್ಲ. ಇದರಿಂದ ಬೇಸರವಾಗಿದ್ದ ಗಿರೀಶ್ ಅವರ ತಂದೆ ಧೈರ್ಯ ತುಂಬುತ್ತಾರೆ. ಹೌದು. ಪೌಲಿಹೌಸ್‍ಗಳ ಮೇಲೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು 1 ಕೋಟಿ 30 ಲಕ್ಷ ಲೀಟರ್ ಸಾಮರ್ಥ್ಯದ ಕೆರೆ ನಿರ್ಮಿಸುತ್ತಾರೆ. ಅದಾದ ಬಳಿಕ, ನೀರಿಗೆ ಯಾವುದೇ ತೊಂದರೆ ಇರುವುದಿಲ್ಲ. ಈ ರೀತಿ ಇಸ್ರೇಲ್ ಕೃಷಿಯಲ್ಲಿ ಅವರು ಸಂಪೂರ್ಣವಾಗಿ ಮುಳುಗಿ ಹೋಗುತ್ತಾರೆ.

ಕೊನೆಗೆ ಜಯ ಸಾಧಿಸಿದ ಗಿರೀಶ್

ಈ ರೀತಿ ತಂದೆ ನೀಡಿದ ಸಲಹೆಯನ್ನು ಅನುಸರಿಸಿ ಕೆಲಸ ಮಾಡಿದ ಗಿರೀಶ್ ಈಗ ಶಿಖರವನ್ನು ಏರಿದ್ದಾರೆ. ಹೌದು. ಒಂದೂವರೆ ವರ್ಷದಿಂದ ಉತ್ತಮ ಗುಣಮಟ್ಟದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ಅಲ್ಲದೆ ನಿತ್ಯ 10 ರಿಂದ 15 ಸಾವಿರ ಗುಲಾಬಿ ಹೂವುಗಳನ್ನು ಕೋಲ್ಡ್ ಸ್ಟೋರೇಜ್ ವಾಹನದಲ್ಲೇ ಮಾರುಕಟ್ಟೆಗಳಿಗೆ ಕಳಿಸುತ್ತಿದ್ದಾರೆ. ಈ ರೀತಿ ತಮ್ಮ ಕನಸನ್ನು ಗಿರೀಶ್ ಸಾಕಾರಗೊಳಿಸಿಕೊಂಡಿದ್ದಾರೆ. ಹೌದು. ಇದರ ಬಗ್ಗೆ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಬಹಳಷ್ಟು ಹೆಮ್ಮೆ ಇದೆ. ಯಾಕಂದ್ರೆ ತಮ್ಮ ಮಗ 4 ಲಕ್ಷ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು, ಹಳ್ಳಿಯಲ್ಲಿ ಕೃಷಿ ಮಾಡಲು ಬಂದಾಗ ನಾವು ಒಪ್ಪಲಿಲ್ಲ. ಆದ್ರೆ ಈಗ ನಮ್ಮ ಮಗ ಇಸ್ರೇಲ್ ಮಾದರಿಯಲ್ಲಿ ಕೃಷಿ ಮಾಡಿ, ಗೆಲುವು ಸಾಧಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅವರ ತಂದೆ ತಾಯಿ ತಿಳಿಸಿದ್ದಾರೆ. ಜೊತೆಗೆ ಗಿರೀಶ್ ಕೂಡ, ತಮ್ಮ ಅಸೆ ನೆರವೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಗಿರೀಶ್ ಇಸ್ರೇಲ್ ಮಾದರಿಯ ಕೃಷಿಯನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಯಾಕಂದ್ರೆ ಓದಿ, ಒಳ್ಳೆಯ ಕೆಲಸ ಮಾಡುವ ಈ ಕಾಲದಲ್ಲಿ, ಗಿರೀಶ್ ತಮಗೆ ಬರುತ್ತಿದ್ದ 4 ಲಕ್ಷ ಸಂಬಳದ ಕೆಲಸವನ್ನು ಬಿಟ್ಟು, ಕೃಷಿ ಮಾಡಿ, ಗೆಲುವು ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here