ಮೋದಿಯವರ ಫೋಟೋ ಇಸ್ರೇಲ್ ದೇಶದ ಅಧ್ಯಕ್ಷ ಬಳಸಿಕೊಂಡಿದ್ದಾದ್ರು ಯಾಕೆ?

0
651

ಸ್ವಲ್ಪ ದಿನಗಳ ಹಿಂದೆ ಲೋಕಸಭಾ ಚುನಾವಣೆ ನಡೆದಿತ್ತು. ಭಾರತದ ಎಲ್ಲ ರಾಜ್ಯಗಳಲ್ಲು ಬಿಜೆಪಿದೆ ದರ್ಬಾರ್ ಆಗಿತ್ತು. ಮೋದಿ ಹವಾ ಇದ್ದ ಕಾರಣದಿಂದಾಗಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ಗೆಲುವನ್ನು ಸಾಧಿಸಿತ್ತು. ಮತ್ತೊಮ್ಮೆ ಮೋದಿ ಎಂದು ಹೇಳುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಆಗಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಪಕ್ಷ ರಚನೆ ಆಗಿದ್ದು, ಎರಡನೆ ಬಾರಿ ಪ್ರಧಾನ ಮಂತ್ರಿಯಾಗಿ ಮೋದಿಯವರು ಪ್ರಮಾಣವಚನವನ್ನು ಸ್ವೀಕರಿಸಿದ್ದರು. ಕರ್ನಾಟಕದಲ್ಲು ಬಿಜೆಪಿ ಹೆಚ್ಚು ಸೀಟ್ಸ್ ಗಳನ್ನು ಪಡೆದುಕೊಂಡಿದ್ದು, ಇದಕ್ಕು ಕಾರಣ ಮೋದಿ ಅಂತಾನೆ ಹೇಳಬಹುದಾಗಿದೆ. ಹೌದು ಚುನಾವಣೆಯ ಸಂದರ್ಭದಲ್ಲಿ. ಮೋದಿ ಆವರು ಕರ್ನಾಟಕದಲ್ಲಿ ಹೆಚ್ಚು ಪ್ರಚಾರವನ್ನು ಮಾಡಿದ್ದರು. ಕೊನೆಗು ದೇಶದ ಜನತೆ ಮೋದಿಯವರ ಕೈ ಬಿಡಲಿಲ್ಲ. ಕಮಲ ಬಹುಮತಗಳಿಂದ ದೇಶಾದ್ಯಂತ ಅರಳಿತ್ತು.

ಇಸ್ರೇಲ್ ದೇಶದಲ್ಲಿ ಮೋದಿಯವರ ಬ್ಯಾನರ್ ರಾರಾಜಿಸುತ್ತಿದೆ

ಈಗ ಭಾರತದಲ್ಲಿ ಚುನಾವಣೆ ನಡೆಯುತ್ತಿಲ್ಲ. ಇಸ್ರೇಲ್ ದೇಶದಲ್ಲಿ ಈಗಾಗಲೆ ಚುನಾವಣೆಯ ಕಾವು ಹೆಚ್ಚುತ್ತಿದೆ. ಆದರೆ ಆ ದೇಶದಲ್ಲು ನರೇಂದ್ರ ಮೋದಿಯವರ ಬ್ಯಾನರ್ ಗಳು ರಾರಾಜಿಸುತ್ತಿದೆ. ಪ್ರಚಾರಕ್ಕಾಗಿ ಉಪಯೋಗಿಸುವ ಬ್ಯಾನರ್ ಗಳಲ್ಲಿಯು ಮೋದಿಯವರ ಹೆಸರು ಮುದ್ರಣವಾಗಿದೆ. ಇತರ ದೇಶದವರು ಸಹ ನಮ್ಮ ದೇಶದ ಪ್ರಧಾನ ಮಂತ್ರಿಯ ಭಾವಚಿತ್ರವನ್ನು ಕಟ್ ಔಟ್ ನಲ್ಲಿ ಹಾಕಿಸಿರುವುದನ್ನು ನೋಡುವುದೆ ಭಾರತೀಯರಿಗೆ ಸಂತಸವಾದ ಕ್ಷಣವಾಗಿದೆ. ಇದರಿಂದಲೆ ನಮಗೆ ಗೊತ್ತಾಗುತ್ತದೆ ಮೋದಿ ಎಷ್ಟು ಪ್ರಬಲಶಾಲಿ ವ್ಯಕ್ತಿ ಅಂತ. ಸದ್ಯಕ್ಕೆ ಇದು ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.

ಇಸ್ರೇಲ್ ದೇಶದ ಪ್ರಮುಖ ಕಟ್ಟಡಗಳಲ್ಲಿ ಅಂಟಿಸಲಾಗಿದೆ

ಭಾರತದ ಪ್ರಧಾನ ಮಂತ್ರಿ ಮತ್ತು ಇಸ್ರೇಲ್ ನ ಪ್ರಧಾನಿ ನೇತನ್ಯಾಹು ಇಬ್ಬರು ಜೊತೆಗಿರುವ ಫೋಟೋ, ಇಸ್ರೇಲ್ ದೇಶದ ಪ್ರಮುಖ ಕಟ್ಟಡಗಳಲ್ಲಿ ಅಂಟಿಸಲಾಗಿದೆ. ಇಸ್ರೇಲ್ ಕಟ್ಟಡದ ಮೇಲೆ ಇರುವ ಮೋದಿಯವರ ಭಾವಚಿತ್ರವನ್ನು, ಇಸ್ರೇಲ್ ದೇಶದ ಪತ್ರಕರ್ತನಾದ ಅಮಿಚೈ ಸ್ಟೆಯಿಸ್ ಏನುವ ವ್ಯಕ್ತಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿಯವರ ಫೋಟೋ ಹೊರತು ಪಡಿಸಿ ಅಮೇರಿಕ ದೇಶದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್, ರಷ್ಯಾ ದೇಶದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಫೋಟೋಗಳು ಸಹ ಇಸ್ರೇಲ್ ದೇಶದ ಅಧ್ಯಕ್ಷರ ಜೊತೆಗೆ ಸೇರಿಕೊಂಡಿದೆ.

ಖ್ಯಾತ ವ್ಯಕ್ತಿಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ

ಜಗತ್ತಿನ ಖ್ಯಾತ ವ್ಯಕ್ತಿಗಳನ್ನು ಉಪಯೋಗಿಸಕೊಂಡು ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಅಸ್ತ್ರವನ್ನು ಬಿಡುತ್ತಿದ್ದಾರೆ ಇಸ್ರೇಲ್ ದೇಶದ ಅಧ್ಯಕ್ಷರು. ಕರ್ನಾಟಕದಲ್ಲಿ ದುಡ್ಡು, ಹೆಂಡ, ಬಂಗಾರ ನೀಡಿ ಮತವನ್ನು ಪಡೆಯುವ ಪ್ರಯತ್ನವನ್ನು ಮಾಡಿದರೆ, ಕೇವಲ ವ್ಯಕ್ತಿಗಳನ್ನಿಟ್ಟುಕೊಂಡು ಪ್ರಜೆಗಳಿಂದ ಮತಗಿಟ್ಟಿಸಿಕೊಳ್ಳಬೇಕೆಂದು ಈ ರೀತಿಯ ಹೊಂಚನ್ನು ಅಧ್ಯಕ್ಷರು ಹಾಕುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಟ್ವಿಟ್ಟರ್ ನಲ್ಲಿ ಮೋದಿಯವರ ಚಿತ್ರವನ್ನು ನೋಡಿದ ನಂತರ ಭಾರತೀಯರು ರಿಟ್ವೀಟ್ ಮಾಡುತ್ತಿದ್ದಾರೆ. ನರೇಂದ್ರರ ಕುರಿತು ಜನರು ಸಕಾರಾತ್ಮಕವಾದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here