ಅನುಮತಿಯೇ ಇಲ್ಲದ ದೇಶಕ್ಕೆ ನುಗ್ಗಿ ಆರೋಪಿಯನ್ನು ಎಳೆತಂದ ಲೇಡಿ ಸಿಂಹಿಣಿ

0
434
ips officer lady

ಒಂದು ಕಾಲದಲ್ಲಿ ಮಹಿಳೆಯರು ಅಂದ್ರೆ ಮನೆಯಲ್ಲಿ ಅಡಿಗೆ ಮಾಡಿಕೊಂಡು ಮಾತ್ರ ಇರಬೇಕು ಅಂತ ಎಲ್ಲರು ಎಲ್ಲರು ಹೇಳುತ್ತಿದ್ದರು. ಆದ್ರೆ ಯಾವಾಗ ಮ್ಹಳೇ, ನಾನು ಕೂಡ ಪುರುಷರಷ್ಟೇ ಸಂಬಳಲು ಎಂದು ತೋರಿಸಿದಳೋ ಆಗಿಂದ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ದುಡಿಯುತ್ತಿದ್ದಾರೆ. ರಾಜಕೀಯ, ಕ್ರೀಡೆ, ಶಿಕ್ಷಣ, ಪೊಲೀಸ್ ಈ ರೀತಿ ಹಜಾತ್ತು ಹಲವು ಕ್ಷೇತ್ರಗಳಲ್ಲಿ ಮಹಿಳೆ, ಪುರುಷರಿಗಿಂತ ಹೆಚ್ಚಿನ ಸಾಧನೆಯನ್ನು ಮಾಡಿದ್ದಾರೆ. ಹೌದು. ಸಾಮಾನ್ಯವಾಗಿ ಪೊಲೀಸ್ ಕೆಲಸ ಅನ್ನೋದು ಕಷ್ಟ ಅಂತ ಎಲ್ಲರಿಗು ತಿಳಿದಿದೆ. ಪುರುಷರಿಗೆ ಈ ಹುದ್ದೆಯಲ್ಲಿ ಸಾಕಷ್ಟು ತೊಂದರೆಗಳು ಎದೂತರಾಗುತ್ತವೆ ಎಂದು ಕೆಲವರು ಹಿಂದೆ ಸರಿಯುತ್ತಾರೆ. ಆದ್ರೆ ಇಲ್ಲೊಬ್ಬರು ಲೇಡಿ ಸಿಂಹಿಣಿ ಇದ್ದಾರೆ. ಇವರು ಯಾವುದಕ್ಕೂ ಹೆದರುವುದಿಲ್ಲ. ಬದಲಿಗೆ ಯಾವುದೇ ಕೇಸ್ ಇದ್ದರು ನುಗ್ಗಿ ಮಾಡುತ್ತಾರೆ. ಈಗ ಇವರು ಮಾಡಿರುವ ಕೆಲಸ ನಿಜಕ್ಕೂ ಅಸಾಮಾನ್ಯವಾದುದಾಗಿದೆ.

ಅಧಿಕಾರ ಪಡೆದ ಒಂದೇ ತಿಂಗಳಲ್ಲಿ ಜನಮೆಚ್ಚುವ ಕೆಲಸ ಮಾಡಿದ ಐಪಿಎಸ್ ಅಧಿಕಾರಿ

ಇವರ ಹೆಸರು ಮೇರಿನ್ ಜೋಸೆಫ್. ಇವರು ಕೇರಳದ ಲೇಡಿ ಐಪಿಎಸ್ ಅಧಿಕಾರಿ. ಈ ಮೊದಲು ಇವರು ಬೇರೆಡೆ ಕೆಲಸ ನಿರ್ವಹಿಸುತ್ತಿದ್ದರು. ಆದ್ರೆ ಒಂದು ತಿಂಗಳ ಹಿಂದೆ ಕೊಲ್ಲಂನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡರು. ಇವರಿಗೆ ಮೊದಲಿನಿಂದಲೂ ಮಕ್ಕಳು ಹಾಗು ಮಹಿಳೆಯರಿಗೆ ಸಂಬಂಧಿಸಿದ ಕೇಸ್ ಗಳ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಹಾಗಾಗಿ ಇವರು ಅಧಿಕಾರ ವಹಿಸಿಕೊಂಡ ನಂತರ ಮಹಿಳೆಯರಿಗೆ ಸಂಬಂಧಿಸಿದ ಕೇಸ್ ಫೈಲ್ ಗಳನ್ನು ನೋಡಿದಾಗ ಅದರಲ್ಲಿ ಅತ್ಯಾಚಾರದ ಕೇಸ್ ಒಂದು ಕಾಣುತ್ತದೆ. ಅದೇ ಕೇರಳದಲ್ಲಿ 2 ವರ್ಷಗಳ ಹಿಂದೆ 13 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಆರೋಪಿ ಪರರಾಯಿಯಾಗಿದ್ದ. ಆದ್ರೆ ಈ ಕೇಸ್ ಅಲ್ಲಿಗೆ ನಿಂತು ಹೋಗಿತ್ತು. ಆದ್ರೆ ಮೇರಿನ್ ಜೋಸೆಫ್ ಅವರು ಅಧಿಕಾರ ವಹಿಸಿಕೊಂಡ ನಂತರ ಈ ಕೇಸ್ ಅನ್ನು ಮುಖ್ಯವಾಗಿ ತೆಗೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸಲು ಸೌದಿಗೆ ತೆರಳಿದ ಲೇಡಿ ಸಿಂಹಿಣಿ

2 ವರ್ಷಗಳ ಹಿಂದೆ ಆರೋಪಿ ಸುನಿಲ್ ಕುಮಾರ್ ಕೇರಳಗೆ ಬಂದಿದ್ದ. ಬಂದವನು ತನ್ನ ಸ್ನೇಹಿತನ ಮನೆಯಲ್ಲಿ ಉಳಿದಿದ್ದು, ಸ್ನೇಹಿತನ ಮಗಳ ಮೇಲೆ 3 ತಿಂಗಳ ಅತ್ಯಾಚಾರ ಎಸಗಿ ಸೌದಿಗೆ ಪರಾರಿಯಾಗಿದ್ದ. ಆದ್ರೆ ಆ ಹುಡುಗಿ ತನ್ನ ತಂದೆ ಯತಿಗೆ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದ್ರೆ ಕೇಸ್ ಮಾತ್ರ ಅಷ್ಟಕ್ಕೇ ನಿಂತಿತ್ತು. ಆದ್ರೆ ಯಾವಾಗ ಮೇರಿನ್ ಜೋಸೆಫ್ ಅಧಿಕಾರ ವಹಿಸಿಕೊಂಡರೋ, ಆಗ ಸುನಿಲ್ ನನ್ನ ಬಂಧಿಸಲೇ ಬೇಕು ಎಂದು ತೀರ್ಮಾನಿಸಿದರು. ಆದ್ರೆ ಇದರ ಮಧ್ಯದಲ್ಲಿ ಒಂದು ಕಡಿವಾಣವಿತ್ತು. ಹೌದು. ದುಬೈ ಹಾಗು ಭಾರತದ ನಡುವೆ ಹಸ್ತಾಂತರ ಒಪ್ಪಂದ ಆಗಿಲ್ಲ. ಹೀಗಿರುವಾಗ ಆರೋಪಿಯನ್ನು ಭಾರತಕ್ಕೆ ಎಳೆದು ತರುವುದು ಕಷ್ಟವಾಗಿತ್ತು. ಆದ್ರೆ ಮೇರಿನ್ ಜೋಸೆಫ್ ಅವರು ನಾನು ಅವನನ್ನು ಬಂಧಿಸುತ್ತೇನೆ ಎಂಬ ಕಠಿಣ ನಿರ್ಧಾರ ಆಂಡಿ, ದುಬೈ ದೇಶದೊಂದಿಗೆ ಮಾತುಕತೆ ಆರಂಭಿಸುತ್ತಾರೆ.

ಅನುಮತಿಯೇ ಇಲ್ಲದ ದೇಶಕ್ಕೆ ನುಗ್ಗಿ ಆರೋಪಿಯನ್ನು ಎಳೆದುತಂದರು

ಇನ್ನು ಸುನಿಲ್ ಕುಮಾರ್ ನನ್ನ ಇವರು ಬಂಧಿಸುವುದಕ್ಕಾಗಿ ದುಬೈ ದೇಶದೊಂದಿಗೆ ಸ್ನೇಹ ಬೆಳೆಸುತ್ತಾರೆ. ಅದಾದ ನಂತರ ಆರೋಪಿಯನ್ನು ತಮ್ಮ ಕಸ್ಟಡಿಗೆ ಒಪ್ಪಿಸುವುದಾಗಿ ಕೆಲವು ಮಾತುಕತೆ ನಡೆಸುತ್ತಾರೆ. ಅದಾದ ನಂತರ ಅವರೇ ದುಬೈಗೆ ಹೋಗಿ, ಸುನಿಲ್ ಕುಮಾರ್ ನನ್ನ ಬಂಧಿಸಿ ಕೇರಳಗೆ ಎಳೆದು ತಂದಿದ್ದಾರೆ. ಇನ್ನು ಈ ಬಗ್ಗೆ ಅವರೇ ತಮ್ಮ ಅನಿಸಿಕೆಯನ್ನು ಸಹ ಹಂಚಿಕೊಂಡಿದ್ದಾರೆ. ಹೌದು. ನಾವು ಮೊದಲ ಬಾರಿಗೆ ಇಂತಹ ಹಸ್ತಾಂತರವನ್ನು ಮಾಡುತ್ತಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಲಿಯಲು ನಾನು ಬಯಸಿದ್ದೆ. ಅಲ್ಲದೆ ಇದರ ಬಗ್ಗೆ ನನ್ನ ತಂಡದ ಜೊತೆ ಹಂಚಿಕೊಳ್ಳಬಹುದು ಎಂದು ಎನಿಸಿತ್ತು. ಇದಕ್ಕೆ ಸಾಕಷ್ಟು ಪೇಪರ್ ಕೆಲಸಗಳು ಇದ್ದವು. ಆರೋಪಿಯನ್ನು ಅಲ್ಲಿಂದ ಕರೆ ತರಲು ದಾಖಲೆ ಕೂಡ ಮಾಡಬೇಕಿತ್ತು. ಹಾಗಾಗಿ ನಾನು ಸೌದಿಗೆ ಹೋಗಲು ನಿರ್ಧರಿಸಿದೆ. ಈಗ ಆರೋಪಿಯನ್ನು ಸೌದಿಯಿಂದ ಎಳೆದು ತಂದಿರುವುದು ನಿಜಕ್ಕೂ ನನಗೆ ಬಹಳ ಸಂತಸದ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ನಿಜಕ್ಕೂ ಮೇರಿನ್ ಜೋಸೆಫ್ ಅವರ ಈ ಕಾರ್ಯಕ್ಕೆ ಮೆಚ್ಚಲೇ ಬೇಕು. ಯಾಕಂದ್ರೆ ಹಸ್ತಾಂತರ ಒಪ್ಪಂದವೇ ಇಲ್ಲದ ದೇಶಕ್ಕೆ ನುಗ್ಗಿ ಆರೋಪಿಯನ್ನು ಎಳೆದು ತಂದಿದ್ದಾರೆ. ಅಲ್ಲದೆ ಆತನನ್ನು ಬಂಧಿಸುವ ಮೂಲಕ ಆ ಬಾಲಕಿಯ ಸಾವಿಗೂ ಕೂಡ ನ್ಯಾಯ ಒದಗಿಸಿದ್ದಾರೆ. ಆದ್ರೆ ಅಧಿಕಾರ ಪಡೆದ ಒಂದೇ ತಿಂಗಳಲ್ಲಿ ಇವರು ಇಂತಹ ಕೆಲಸ ಮಾಡಿರುವುದು ಎಲ್ಲರಿಗು ಮೆಚ್ಚುಗೆಯ ಸಂಗತಿಯಾಗಿದೆ.

LEAVE A REPLY

Please enter your comment!
Please enter your name here