ಇನ್ಫೋಸಿಸ್ ದಂಪತಿಗಳ ಕಥೆ ಈಗ ತೆರೆ ಮೇಲೆ ಬರುತ್ತಿದೆ

0
427

ಸಿನಿಮಾಗಳಲ್ಲಿ ಹಲವಾರು ವಿಧಗಳಿದ್ದು, ಕೆಲವರು ಹಾಸ್ಯಮಯವಾದ ಚಿತ್ರಗಳನ್ನು ನಿರ್ದೇಶಿಸಿದರೆ ಇನ್ನು ಕೆಲವರು ಲವ್ ಸ್ಟೋರಿ, ಹಾರರ್, ರೌಡಿಸಂ ಆಧಾರಿತವಾದ ಚಿತ್ರಗಳನ್ನು ನಿರ್ದೇಶಿಸುತ್ತಾರೆ. ನಿಜ ಜೀವನದಲ್ಲಿ ನಡೆದ ಕೆಲವು ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕರು ಚಿತ್ರವನ್ನು ಮಾಡಲು ಮುಂದಾಗುತ್ತಾರೆ. ಇತ್ತೀಚಿಗಷ್ಟೆ ಹೃತಿಕ್ ರೋಷನ್ ಅಭಿನಯದ ಸೂಪರ್ 30 ಚಿತ್ರ ಬಿಡುಗಡೆಯಾಗಿದ್ದು, ಇದು ಸಹ ನಿಜ ಜೀವನದಲ್ಲಿ ನಡೆದ ಕಥೆಯಾಗಿತ್ತು. ಚಿತ್ರ ಹಿಟ್ ಕೂಡ ಆಗಿತ್ತು. ಸಾಧಕರ ಜೀವನವನ್ನು ತೆರೆ ಮೇಲೆ ನೋಡುವುದೆ ಒಂದು ಖುಷಿ. ಕನ್ನಡಿಗರಿಗು ಸಹ ಕರುನಾಡ ಸಾಧಕರ ಜೀವನದಲ್ಲಿ ನಡೆದ ಘಟನೆಗಳು ಸಿನಿಮವಾಗಿ ಮೂಡಿ ಬರಬೇಕೆನ್ನುವುದು ಕನ್ನಡಿಗರ ಆಸೆಯಾಗಿತ್ತು. ಕನ್ನಡಿಗರ ಆಸೆ ನೆರವೇರಿದೆ ಆ ಕಾಲ ಈಗ ಕೂಡಿ ಬಂದಿದೆ.

ಸಂಸ್ಥೆಯನ್ನು ಬೆಳಸುವುದಲ್ಲದೆ ಸಮಾಜ ಸೇವೆಯಲ್ಲು ತೊಡಗಿಸಿಕೊಂಡಿದ್ದಾರೆ

ಸುಧಾಮೂರ್ತಿ ಮತ್ತು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ್ ಮೂರ್ತಿ ಅವರ ಕಥೆಯನ್ನು ನೀವು ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ನೋಡಿರಬಹುದು ಮತ್ತು ಅವರ ಬಗ್ಗೆ ಕೇಳಿರಬಹುದು. ಇನ್ಫೋಸಿಸ್ ಸಂಸ್ಥೆಯ ಸ್ಥಾಪನೆಯ ಹಿಂದೆ ಇರುವ ಬೆವರಿನ ಹನಿ ಮತ್ತು ದಂಪತಿಗಳು ಮಾಡಿದ ತ್ಯಾಗ, ಕಠಿಣ ಪರಿಶ್ರಮದಿಂದಲೆ ಇಂದು ಇನ್ಫೋಸಿಸ್ ಕಂಪನಿ ಉನ್ನತ ಸ್ಥಾನವನ್ನು ತಲುಪಿ, ಕೋಟ್ಯಂತರ ಜನರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದೆ. ಕೇವಲ ಸಂಸ್ಥೆಯನ್ನು ಬೆಳಸುವುದಲ್ಲದೆ ಸಮಾಜ ಸೇವೆಯಲ್ಲು ದಂಪತಿಗಳು ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆಯ ಸಂಪೂರ್ಣ ಜವಾಬ್ದಾರಿಯನ್ನು ಸುಧಾಮೂರ್ತಿ ಅವರು ವಹಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೆ ಪ್ರವಾಹದಿಂದ ಬಳಲುತ್ತಿದ್ದ ಜನರಿಗೆ ಸುಧಾಮೂರ್ತಿಯವರು ಧನಸಹಾಯವನ್ನು ಮಾಡಿದ್ದರು.

ಹಿಂದಿ ಭಾಷೆಯಲ್ಲಿ ಇನ್ಫೋಸಿಸ್ ದಂಪತಿಗಳ ಕಥೆ ಬರಲಿದೆ

ಇಬ್ಬರ ಸಾಧಕರ ಜೀವನದಲ್ಲಿ ನಡೆದ ಕಥೆಯನ್ನು ನಾವು ಸಿನಿಮಾದಲ್ಲಿ ನೋಡಬಹುದಾಗಿದೆ. ನೈಜ್ಯ ಘಟನೆಗಳ ಆಧಾರಿತವಾದ ಚಿತ್ರಗಳು ಹೆಚ್ಚು ಜನಪ್ರಿಯತೆಗಳಿಸುವುದರ ಜೊತೆಗೆ ಹಿಟ್ ಕೂಡ ಆಗುತ್ತದೆ. ವಿಶ್ವಾದ್ಯಂತ ತಮ್ಮ ಸಮಾಜ ಸೇವೆ ಹಾಗು ಇನ್ಫೋಸಿಸ್ ಎನ್ನುವ ಬ್ರಾಂಡ್ ಮೂಲಕ ದಂಪತಿಗಳು ಗುರುತಿಸಿಕೊಂಡಿದ್ದರು. ಹಿಂದಿ ಭಾಷೆಯಲ್ಲಿ ಚಿತ್ರ ತಯಾರಾಗಲಿದ್ದು, ಈ ಸಿನಿಮಾದಿಂದ ಜನರು ಪ್ರೇರಿತವಾಗುವುದಂತು ನಿಶ್ಚಿತ. ಕನ್ನಡಿಗರಿಗೆ ಇದು ಹೆಮ್ಮೆ ಪಡುವ ವಿಷಯವಾಗಿದೆ. ಅಶ್ವಿನ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸುಧಾಮೂರ್ತಿ ಹಾಗು ನಾರಾಯಣ್ ಮೂರ್ತಿ ನಡುವೆ ನಡೆಯುವ ಪ್ರೇಮ ಕಥೆಯನ್ನು ಕಥಾವಸ್ತುವಾಗಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ.

ಮುಂದಿನ ವರ್ಷ ಚಿತ್ರ ತೆರೆಕಾಣುವ ಸಾಧ್ಯತೆಯಿದೆ

ಈಗಾಗಲೆ ನಿರ್ದೆಶಕಿ ಅಶ್ವಿನ್ ಸುಧಾಮೂರ್ತಿ ಮತ್ತು ನಾರಾಯಣ್ ಮೂರ್ತಿ ಅವರಿಂದ ಸಿನಿಮಾಕ್ಕೆ ಬೇಕಾಗಿರುವ ಮಾಹಿತಿಯನ್ನು ಪಡೆದಿದ್ದು, ಮುಂದಿನ ವರ್ಷದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ. ಸಾಧಕರ ಜೀವನದಲ್ಲಿ ಈ ಹಿಂದೆ ನಡೆದ ಬಹು ಮುಖ್ಯವಾದ ಸನ್ನಿವೇಶಗಳು ತೆರೆ ಮೇಲೆ ಬರಲಿದೆ. ಪಾತ್ರಧಾರಿಗಳ ಬಗ್ಗೆ ಇನ್ನು ಯಾವುದೆ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here