ಇನ್ಫೋಸಿಸ್ ಸಂಸ್ಥಾಪಕರ ಜೀವನಾಧಾರಿತ ಕಥೆಯ ಸಿನಿಮಾಗೆ ನಡೆಯುತ್ತಿದೆ ಭರ್ಜರಿ ಸಿದ್ಧತೆ

0
322

ನಿಜಕ್ಕೂ ಸಾಮಾನ್ಯರಲ್ಲಿ ಸಾಮಾನ್ಯರು ಅಂದ್ರೆ ಅದು ಇನ್ಫೋಸಿಸ್ ಮಾಲೀಕರಾದ ನಾರಾಯಣಮೂರ್ತಿ ಹಾಗು ಸುಧಾಮೂರ್ತಿ  ಅವರು. ಲೆಕ್ಕವಿಲ್ಲದಷ್ಟು ಆಸ್ತಿ ಹೊಂದಿದ್ದರು, ಅತಿ ಹೆಚ್ಚಿನ ಸರಳ ಮನೋಭಾವದವರು. ಹೌದು. ಮನುಷ್ಯನ ದೊಡ್ಡತನ ಕಾಣುವುದು ಅವನ ಶ್ರೀಮಂತಿಕೆಯಿಂದ ಅಲ್ಲ, ಬದಲಿಗೆ ಅವರ ಮನೋಗುಣದಿಂದ ಎಂಬುದನ್ನು ಇವರು ತೋರಿಸಿದ್ದಾರೆ. ಹಾಗಾಗಿ ಇವರನ್ನು ಕಂಡರೆ ಎಲ್ಲರಿಗು ಏನೋ ಒಂದು ರೀತಿ ಗೌರವ. ಇವರು ಸಹ ಎಲ್ಲರನ್ನು ಸಮಾನರೆಂದು ಕಾಣುತ್ತಾರೆ. ಅಲ್ಲದೆ ಕಷ್ಟದಲ್ಲಿರುವ ಅನೇಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವುದರ ಮೂಲಕ, ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ಹಾಗಾಗಿ ಇಂಥವರ ಜೀವನದ ಬಗ್ಗೆ ಕುರಿತು ಸಿನಿಮಾ ಮಾಡಬೇಕು ಅನ್ನೋದು ಅನೇಕರ ಕನಸಾಗಿತ್ತು. ಆದ್ರೆ ಅದು ಸಾಧ್ಯವಾಗಿರಲಿಲ್ಲ. ಆದ್ರೆ ಈಗ ಆ ಕನಸು ಸಾಧ್ಯವಾಗುತ್ತಿದೆ. ಹೌದು. ಇನ್ಫೋಸಿಸ್ ಸಂಸ್ಥಾಪಕರ ಬಯೋಪಿಕ್ ಚಿತ್ರಕ್ಕೆ ಸಿದ್ಧತೆ ನಡೆಯುತ್ತಿದ್ದು, ನಾಯಕ ಹಾಗು ನಾಯಕಿಯರ ಹುಡುಕಾಟದಲ್ಲಿದ್ದಾರೆ.

ಭರ್ಜರಿಯಾಗಿ ಸಜ್ಜಾಗಲಿದೆ ಇನ್ಫೋಸಿಸ್ ಸಂಸ್ಥಾಪಕರ ಬಯೋಪಿಕ್

ನಾರಾಯಣಮೂರ್ತಿ ಹಾಗು ಸುಧಾಮೂರ್ತಿ ಅವರ ಜೀವನಾಧಾರಿತ ಕಥೆಯ ಬಗ್ಗೆ ಸಿನಿಮಾ ಮಾಡಬೇಕು ಎಂದು ಅನೇಕರು ಅಂದುಕೊಂಡಿದ್ದರು. ಆದ್ರೆ ಅದು ಆಗ ಆಗಿರಲಿಲ್ಲ. ಅಲ್ಲದೆ, ಈ ಸಿನಿಮಾ ಮಾಡುವುದಕ್ಕೆ ಅನೇಕ ನಿರ್ದೇಶಕರು ಸಹ ಮುಗಿಬಿದ್ದಿದ್ದರು. ಆದ್ರೆ ಯಾರೊಬ್ಬರಿಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಇವರ ಜೀವನಾಧಾರಿತ ಕಥೆ ತೆರೆ ಮೇಲೆ ಕಾಣಲು ಎಲ್ಲ ರೀತಿ ಸಜ್ಜಾಗುತ್ತಿದೆ. ಹೌದು. ಬಾಲಿವುಡ್ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶನದ ಜೊತೆಗೆ ಅಶ್ವಿನಿ ಅಯ್ಯರ್ ತಿವಾರಿ ಅವರೇ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಅಶ್ವಿನಿ ಜೊತೆ ನಿತೇಶ್ ತಿವಾರಿ ಮತ್ತು ಮಹಾವೀರ್ ಜೈನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ನಾಯಕ ಹಾಗು ನಾಯಕಿ ಯಾರಾಗಬಹುದು?

ಸಿನಿಮಾ ಸಿದ್ಧತೆ ಅದ್ದೂರಿಯಾಗಿ ನಡೆಯುತ್ತಿದೆ. ಆದ್ರೆ ಸಿನಿಮಾಗೆ ನಾಯಕ ಹಾಗು ನಾಯಕಿ ಯಾರಾಗುತ್ತಾರೆ ಅನ್ನೋದೇ ಎಲ್ಲರಿಗು ಇರುವ ಕುತೂಹಲವಾಗಿದೆ. ಹೌದು. ನಿಜ ಜೀವನದಲ್ಲಿ ನಾರಾಯಣಮೂರ್ತಿ ಹಾಗು ಸುಧಾಮೂರ್ತಿ ಅವರು ಬಹಳ ಉನ್ನತ ಸ್ಥಾನದಲ್ಲಿದ್ದರೂ, ಬಹಳಷ್ಟು ಸರಳವಾಗಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಅವರ ಜೀವನ ಶೈಲಿಯನ್ನು ಕಣ್ಣಿಗೆ ಕಟ್ಟುವ ರೀತಿ ನಟಿಸುವವರು ಬೇಕು ಎಂದು ಚಿತ್ರತಂಡ ನಾಯಕ ಹಾಗು ನಾಯಕಿಯ ಹುಡುಕಾಟದಲ್ಲಿದೆ. ಆದರೆ ಇವರ ಕಥೆಗೆ ಇಂಥವರೇ ನಾಯಕ ಹಾಗು ನಾಯಕಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಅನೇಕ ಸಾಮಾನ್ಯ ಜನರು ಕೆಲವರ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಆದ್ರೆ ಚಿತ್ರತಂಡ ಮಾತ್ರ ಅದರ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಕ್ಷಯ್ ಕುಮಾರ್, ತಾಪ್ಸಿ ಪೆನ್ನು ಹಾಗು ರಣ್ಬೀರ್ ಕಪೂರ್, ಆಲಿಯಾ ಭಟ್

ಇನ್ನು ಈ ಚಿತ್ರಕ್ಕೆ ಮೊದಲು ಅಕ್ಷಯ್ ಕುಮಾರ್ ಅವರ ಹೆಸರನ್ನು ಜನರು ಮೊದಲಿಗೆ ಸೂಚಿಸಿದ್ದಾರೆ. ಹೌದು. ಅಕ್ಷಯ್ ಕುಮಾರ್ ಹಾಗು ತಾಪ್ಸಿ ಪೆನ್ನು ನಟಿಸಿದರೆ, ಕಥೆಗೆ ಜೀವ ತುಂಬಿದಂತೆ ಇರುತ್ತದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ರಣ್ಬೀರ್ ಕಪೂರ್ ಹಾಗು ಆಲಿಯಾ ಭಟ್ ಬಣ್ಣ ಹಚ್ಚಿದರೆ ಚೆನ್ನಾಗಿರುತ್ತದೆ ಎಂದು ಹೇಳುತ್ತಿದ್ದಾರೆ. ಯಾಕಂದ್ರೆ ಈಗಾಗಲೇ ಬಯೋಪಿಕ್ ಸಿನಿಮಾಗಳಲ್ಲಿ ರಣ್ಬೀರ್ ನಟಿಸಿದ್ದಾರೆ. ಹಾಗಾಗಿ ಈ ಸಿನಿಮಾಗೂ ಅವರೇ ಬಣ್ಣ ಹಚ್ಚಿದರೆ, ಒಳ್ಳೆಯದು ಎಂದು ಸಾಮಾನ್ಯ ಜನರು ಹೇಳುತ್ತಿದ್ದಾರೆ. ಆದರೆ ಚಿತ್ರತಂಡ ಮಾತ್ರ ಯಾವುದಕ್ಕೂ ಇನ್ನು ಉತ್ತರ ನೀಡಿಲ್ಲ. ಜೊತೆಗೆ ಸಿನಿಮಾ ಎಷ್ಟು ಭಾಷೆಯಲ್ಲಿ ತೆರೆ ಕಾಣುತ್ತದೆ ಅನ್ನೋ ವಿಚಾರದಲ್ಲೂ ಸ್ವಲ್ಪ ಗೊಂದಲವಿದೆ. ಆದ್ರೆ ಅಭಿಮಾನಿಗಳು ಮಾತ್ರ ಕನ್ನಡ ಭಾಷೆಯಲ್ಲಿ ಬರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಒಟ್ಟಿನಲ್ಲಿ ಇನ್ಫೋಸಿಸ್ ಸಂಸ್ಥಾಪಕರ ಜೀವನಾಧಾರಿತ ಕಥೆ ಈಗ ತೆರೆ ಮೇಲೆ ತರಲು ಎಲ್ಲ ರೀತಿ ಸಿದ್ಧತೆ ನಡೆಯುತ್ತಿದೆ. ಆದ್ರೆ ನಾಯಕ ಹಾಗು ನಾಯಕಿಯ ಆಯ್ಕೆ ಒಂದು ಮುಗಿದಿಲ್ಲ. ಅದೊಂದು ಮುಗಿದರೆ ಆದಷ್ಟು ಬೇಗ ಸಿನಿಮಾ ತೆರೆ ಮೇಲೆ ಬರುವ ಎಲ್ಲ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here