ಮಗ ಕಾಲೇಜಿನಲ್ಲಿ ಓದುತ್ತಿರುವಾಗ ಪಿ. ಲಂಕೇಶ್ ಅವರಿಗೆ ಕೆಲಸವಿರಲಿಲ್ಲ. ಲಂಕೇಶ್ ಪತ್ರಿಕೆ ಶುರವಾಗಿದ್ದು ಹೇಗೆ?

0
371

ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಾಹಿತಿ ಪಿ. ಲಂಕೇಶ್ ಅವರೆಂದರೆ  ತಪ್ಪಾಗಲಾರದು. ಪಿ. ಲಂಕೇಶ್ ಅವರು ಬಹುಮುಖ ಪ್ರತಿಭೆಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಲಂಕೇಶ್ ಪತ್ರಿಕೆ ಮೂಲಕ ಹೆಚ್ಚು ಜನಪ್ರಿಯತೆಯನ್ನು ಇವರು ಪಡೆದುಕೊಂಡಿದ್ದರು. ಪುಸ್ತಕಗಳನ್ನು ಬರೆಯುವುದರ ಜೊತೆಗೆ ನಾಟಕಗಳನ್ನು ಬರೆಯುತ್ತಿದ್ದರು. ಸಿನಿಮಾಗಳನ್ನು ಸಹ ನಿರ್ದೇಶಿಸುತ್ತಿದ್ದರು. ಇವರ ಮರಣ ಅತ್ಯಂತ ನಿಗೂಢವಾಗಿತ್ತು. ಲಂಕೇಶ್ ಪತ್ರಿಕೆಯಲ್ಲಿ ಇವರು ಹೆಚ್ಚಾಗಿ ರಾಜಕಾರಣಿಗಳ ವಿರುದ್ಧ ಬರೆಯುತ್ತಿದ್ದರು. ಅನ್ಯಾಯದ ವಿರುದ್ಧ ಹೋರಾಡುತ್ತಿದ್ದರು. ಲಂಕೇಶ್ ಅವರದ್ದು ಕೊಲೆ ಎಂದು ಸ್ವಲ್ಪ ಜನ ಹೇಳುತ್ತಾರೆ. ಆದರೆ ಆ ಸಾವಿನ ರಹಸ್ಯ ಇನ್ನು ಅನುಮಾನಾಸ್ಪದವಾಗಿಯೆ ಉಳಿದಿದೆ. ಲಂಕೇಶ್ ಅವರ ಸುಪುತ್ರರಾದ ಇಂದ್ರಜಿತ್ ಲಂಕೇಶ್ ಒಂದು ಸಂದರ್ಶನದಲ್ಲಿ ತಮ್ಮ ತಂದೆಯ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ

ಕ್ರಿಯಾತ್ಮಕವಾದ ಮತ್ತು ಆರ್ಟ್ ಹೌಸ್ ಸಿನಿಮಾಗಳನ್ನು ಮಾಡಿದ್ದರು

ನಾನು ಯಾವುದೆ ಬಂಗಾರದ ಚಮಚವನ್ನು ಇಟ್ಟುಕೊಂಡು ಹುಟ್ಟಿರಲಿಲ್ಲ. ನಾನು ನಮ್ಮ ತಂದೆಯವರ ಕಷ್ಟದ ದಿನಗಳನ್ನು ನೋಡಿದ್ದೇನೆ, ಸಂತೋಷದ ದಿನಗಳನ್ನು ಮತ್ತು ಯಶಸ್ವಿಯ ದಿನಗಳನ್ನು ಸಹ ನೋಡಿದ್ದೇನೆ. ಅವರು ಅಧ್ಯಾಪಕರಾಗಿದ್ದಾಗ, ನಂತರ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಕಳೆದ ಆ ದಿನಗಳು ಬಹಳ ಕಷ್ಟದ ದಿನಗಳಾಗಿದ್ದವು. ಅವರು ಕ್ರಿಯಾತ್ಮಕವಾದ ಮತ್ತು ಆರ್ಟ್ ಹೌಸ್ ಸಿನಿಮಾಗಳನ್ನು ಮಾಡಿದ್ದರು. ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವಳು ಹೀಗೆ ಅನೇಕ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಒಬ್ಬ ಕನ್ನಡಿಗನಿಗೆ, ಸಿನಿಮಾ ನಿರ್ದೇಶನಕ್ಕಾಗಿ ಸ್ವರ್ಣ ಕಮಲಾ ಪ್ರಶಸ್ತಿ ಸಿಕ್ಕಿರುವುದು ನಮ್ಮ ತಂದೆಯ ಹೆಗ್ಗಳಿಕೆ. ಮುಂದೆ ಓದಿ

ನಾನು ಕಾಲೇಜ್ ನಲ್ಲಿ ಓದಬೇಕಾದರೆ ತಂದೆಗೆ ಕೆಲಸ ಇರಲಿಲ್ಲ

ಹೀಗೆ ಅನೇಕ ಸಿನಿಮಾಗಳನ್ನು ಮಾಡುತ್ತ ಬಂದರು. ಈಗಿನ ಕಾಲಕ್ಕಿಂತ ಹೆಚ್ಚು ಮುಂದುವರೆದಂತಹ ಸಿನಿಮಾಗಳನ್ನು ಮಾಡಿದರು. ಈ ಸಿನಿಮಾಗಳು ಆರ್ಥಿಕವಾಗಿ ಯಶ್ವಸಿಯಾಗದಿದ್ದರು ಸಹ, ಜನರಿಗೆ ತಲುಪಿತ್ತು ಮತ್ತು ಇಷ್ಟವಾಗಿತ್ತು. ಕರ್ನಾಟಕದ ಇತಿಹಾಸದಲ್ಲಿ ಪಿ ಲಂಕೇಶ್ ಎನ್ನುವ ಹೆಸರು ದಾಖಲೆಯಾಗಿತ್ತು. ಲಂಕೇಶ್ ಅವರು ಮಾಡಿದ ಸಿನಿಮಾಗಳು ಜನರು ನೋಡಿದ್ದರಿಂದ, ಅವರಿಗೆ ಪತ್ರಿಕೆ ಮಾಡಲು ಜನರಿಂದ ಬೆಂಬಲ ಸಿಕ್ಕಿತ್ತು. ಬಹಳಷ್ಟು ಜನ ನಾನು ಶ್ರೀಮಂತ ಮನೆತನದಿಂದ ಬಂದಿದ್ದೇನೆ ಎಂದು ಭಾವಿಸಿದ್ದಾರೆ. ನಾನು ಕಾಲೇಜ್ ನಲ್ಲಿ ಓದಬೇಕಾದರೆ ತಂದೆಗೆ ಕೆಲಸ ಇರಲಿಲ್ಲ. ನಾನು ಮುಂದೆ ಏನು ಮಾಡಬೇಕೆಂದು ಆಲೋಚಿಸುತ್ತಿದ್ದರು. ಕೆಲ ಸಿನಿಮಾಗಳನ್ನು ಮಾಡಿದೆ ಆದರೆ ಅವರು ಆರ್ಥಿಕವಾಗಿ ಸೆಟ್ಲ್ ಆಗೋಕೆ ಆಗಿರಲಿಲ್ಲ.

ಮೂರು ಹೊತ್ತು ಊಟಕ್ಕು ನಮಗೆ ಕಷ್ಟವಿತ್ತು

ಶೀಟಿನ ಮನೆಯಲ್ಲಿ ವಾಸಿಸುತ್ತಿದ್ದೆವು. ಬೇಸಿಗೆ ಕಾಲದಲ್ಲಿ ಮನೆಯೊಳಗೆ ಮಲಗುವುದಕ್ಕೆ ಆಗುತ್ತಿರಲಿಲ್ಲ ಹೊರಗಡೆ ಬಂದು ಮಲಗುತ್ತಿದ್ದೆವು. ನಮ್ಮ ಅಮ್ಮನಿಗೂ ಯಾವುದೆ ಕೆಲಸವಿರಲಿಲ್ಲ. ಹೌಸ್ ವೈಫ್ ಆಗಿದ್ದರು. ಮೂರು ಹೊತ್ತು ಊಟಕ್ಕು ನಮಗೆ ಕಷ್ಟವಿತ್ತು. ಆಗ ಅಮ್ಮ ಅಪ್ಪನಿಗೆ ಪ್ರೋತ್ಸಾಹವನ್ನು ನೀಡಿದ್ದು, ಸೀರೆ ತಯಾರಿಸುವುದನ್ನು ಶುರು ಮಾಡಿದ್ದರು. ಸೀರೆಯ ವ್ಯಾಪಾರದಿಂದ ಕೊಂಚ ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು. ನಂತರ ಶುರುವಾಗಿದ್ದು ಪತ್ರಿಕೋದ್ಯಮ. ಅದೆ ಲಂಕೇಶ್ ಪತ್ರಿಕೆ. ಪತ್ರಿಕೋದ್ಯಮದಲ್ಲಿ ಕಂಡ ಯಶಸ್ಸಿನಲ್ಲಿ ನಾವು ಸುಖಮಯವಾದ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದೆವು. ಇನ್ನೊಂದು ವಿಪರ್ಯಾಸ ಎಂದರೆ ಪತ್ರಿಕೆ ಶುರುವಾದ ನಂತರ, ಹೆಚ್ಚು ಸಮಯದವರೆಗೂ ಅವರು ಮನೆಯಲ್ಲಿ ಇರುತ್ತಿರಲಿಲ್ಲ.

ಕರ್ನಾಟಕದಲ್ಲಿರುವ ಹಳ್ಳಿ ಹಳ್ಳಿಗೂ ಹೋಗುತ್ತಿದ್ದರು

ಪತ್ರಿಕೆಯನ್ನು ಬೆಳೆಸಬೇಕು, ಹೆಚ್ಚು ಜನರಿಗೆ ತಲುಪಿಸುವಂತಹ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಇಡೀ ಕರ್ನಾಟಕವನ್ನು ಪ್ರಯಾಣ ಮಾಡುತ್ತಿದ್ದರು. ಎರಡು ವರ್ಷದಲ್ಲಿ ಅವರು ಒಂದು ವರೆ ಲಕ್ಷ ಕಿಮಿ ಅಷ್ಟು ಪ್ರಯಾಣಿಸುವ ಮೂಲಕ ಕರ್ನಾಟಕದಲ್ಲಿರುವ ಹಳ್ಳಿ ಹಳ್ಳಿಗೂ ಹೋಗುತ್ತಿದ್ದರು. ಮನೆಯಲ್ಲೇ ಇರುತ್ತಿರಲಿಲ್ಲ. ಮಂಗಳವಾರ ಪತ್ರಿಕೆ ತರುವುದು ಮತ್ತೆ ಹೊರಗಡೆ ಹೋಗುವುದು.

ದಲಿತರ ಸಮಸ್ಯೆ, ರೈತರ ಸಮಸ್ಯೆ, ಗೋಕಾಕ್ ಚಳುವಳಿ ಇದೆಲ್ಲ ಹೋರಾಟದಲ್ಲು ಲಂಕೇಶ್ ಅವರ ಹೆಸರು ಎಲ್ಲರಿಗೂ ಗೊತ್ತಿದೆ. ಅವರೆ ಮೊದಲು ಇದು ಶುರು ಮಾಡಿದ್ದರು. ಇದೆಲ್ಲರ ನಡುವೆ ಕುಟುಂಬಕ್ಕೆ ಅವರು ಹೆಚ್ಚು ಸಮಯವನ್ನು ನೀಡುತ್ತಿರಲಿಲ್ಲ. ಇದರ ನಡುವೆ ನಾನು ಬೆಳೆದು ಬಂದಿದ್ದೆ ಎಂದು ಇಂದ್ರಜಿತ್ ಲಂಕೇಶ್ ಅವರು ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here