ಇಂದಿರಾ ಕ್ಯಾಂಟೀನ್ ನಲ್ಲಿ ಈ ಯಂತ್ರವನ್ನು ಕಂಡು ಸುಸ್ತಾದ ಊರಿನ ಜನತೆ

0
525
indira canteen

ಒಂದು ಕಾಲದಲ್ಲಿ ಎಲ್ಲಾ ಪುರುಷ ರಾಜಕೀಯ ನಾಯಕರನ್ನು ಹಿಂದಿಕ್ಕಿ ಸತತ ೩ ಬಾರಿ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದವರು ಇಂದಿರಾ ಗಾಂಧಿ. ಹೌದು. ನಿಜಕ್ಕೂ ಇವರ ರಾಜಕೀಯ ಜೀವನವನ್ನು ಇಂದಿಗೂ ಯಾರು ಮರೆಯುವುದಿಲ್ಲ. ಯಾಕಂದ್ರೆ ಪುರುಷರಿಂದಲೇ ನಡೆಸಲಾಗದ ಈ ರಾಜಕಾರಣವನ್ನು, ಯಾವುದಕ್ಕೂ ಯೋಚಿಸದೆ ನಿರ್ಭಯವಾಗಿ ಸತತ ೧೫ ವರ್ಷಗಳ ಕಾಲ ಆಳ್ವಿಕೆ ನಡೆಸಿ, ಭಾರತದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಜನರು ಎಂದಿಗೂ ಮರೆಯಬಾರದು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂದಿರಾ ಕ್ಯಾಂಟೀನ್ ಯೋಜನೆ ಶುರು ಮಾಡಿದರು. ಹೌದು. ಇಡೀ ಭಾರತದಲ್ಲಿ ಎಲ್ಲಾ ರಾಜ್ಯ ಹಾಗು ಜಿಲ್ಲೆಗಳಿಗೂ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಬೆಳಿಗ್ಗೆ ತಿಂಡಿ, ಊಟ, ಹಾಗು ರಾತ್ರಿ ಊಟ ಎಲ್ಲವು ಸಿಗುತ್ತದೆ. ಆದ್ರೆ ಏನೇ ತೆಗೆದುಕೊಂಡರು ಅದಕ್ಕೆ ಕಡಿಮೆ ಬೆಲೆ. ಆದ್ರೆ ಈಗ ಅಲ್ಲಿ ಮತ್ತೊಂದು ಸೌಲಭ್ಯ ಕಲ್ಪಿಸಿದ್ದಾರೆ. ಹೌದು. ಅದೇ ‘ಕಸದಿಂದ ರಸ’ ಮಾಡುವ ಯೋಜನೆ.

ಹಸಿ ಕಸದಿಂದ ರಸವನ್ನು ತೆಗೆಯುವ ಯಂತ್ರ ಅಳವಡಿಕೆ

ಇಂದಿರಾ ಕ್ಯಾಂಟೀನ್ ಶುರುವಾದಾಗಿನಿಂದಲೂ ಒಂದಲ್ಲ ಒಂದು ವಿಷಯ ಕೇಳಿ ಬರುತ್ತಲೇ ಇರುತ್ತೆ. ಹೌದು. ಮೊದಲೆಲ್ಲ ಅದು ಸರಿ ಇಲ್ಲ, ಇದು ಸರಿ ಇಲ್ಲ ಅನ್ನೋ ಸುದ್ದಿ ಕೇಳುತ್ತಿತ್ತು. ಆದ್ರೆ ಸ್ವಲ್ಪ ದಿನಗಳ ನಂತರ ಎಲ್ಲರು ಇಷ್ಟ ಪಟ್ಟು ಅಲ್ಲಿನ ತಿಂಡಿ ತಿನ್ನುತ್ತಿದ್ದಾರೆ. ಆದ್ರೆ ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಹೌದು. ಕಸದಿಂದ ರಸ ಅನ್ನೋ ಸುದ್ದಿಯನ್ನು ಹೊರ ಹಾಕಿದ್ದಾರೆ. ಹಸಿ ಕಸವನ್ನು ಬಳಸಿಕೊಂಡು ರಸವನ್ನು ತಯಾರಿಸುವಂತಹ ಯಂತ್ರವನ್ನು ಇದೀಗ ರಾಮನಗರದ ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿದೆ. ಫುಡ್ ವೇಸ್ಟ್ ಡೈಜೆಸ್ಟರ್ ಎಂಬ ಯಂತ್ರವನ್ನು ಇದೀಗ ಇಂದಿರಾ ಕ್ಯಾಂಟೀನ್‍ನಲ್ಲಿ ಅಳವಡಿಸಲಾಗಿದೆಯಂತೆ.

ಬೆಳೆಗಳಿಗೆ ಹಾಗು ಪ್ರಾಣಿಗಳಿಗೂ ಬಹಳ ಸಹಾಯಕವಾಗುತ್ತದೆ

ರಾಮನಗರದಲ್ಲಿ ಈ ರೀತಿ ಹಸಿ ಕಸದಿಂದ ರಸ ಬರುವಂತಹ ಯಂತ್ರವನ್ನು ಅಳವಡಿಸಿರುವುದು ಬಹಳ ಉಪಯೋಗವಾಗಿದೆಯಂತೆ. ಹೌದು. ಮಾನವನ ಜೀರ್ಣಾಂಗ ವ್ಯವಸ್ಥೆಯಂತೆ ಈ ಯಂತ್ರ ಹಸಿಕಸವನ್ನ ಜೀರ್ಣ ಮಾಡಿ ನೀರನ್ನು ಹೊರ ಹಾಕುತ್ತಿದೆ. ಈ ಹಸಿ ಕಸದ ನೀರು ವಿಟಮಿನ್ ಹಾಗೂ ಪ್ರೊಟಿನ್‍ನಿಂದ ಕೂಡಿದ್ದು ಸಸ್ಯಗಳಿಗೆ ಹಾಕಿದರೆ ಉತ್ತಮವಾಗಿ ಬೆಳೆಯಲಿವೆ. ಅಲ್ಲದೇ ಪ್ರಾಣಿಗಳಿಗೆ ಈ ನೀರನ್ನು ಕುಡಿಸಿದರೆ ಯಾವುದೇ ದುಷ್ಪರಿಣಾಮ ಬಿರುವುದಿಲ್ಲವಂತೆ. ಇದೀಗ ಪ್ರಾಯೋಗಿಕವಾಗಿ 9 ಲಕ್ಷ ವೆಚ್ಚದ ಈ ಯಂತ್ರವನ್ನು ರಾಮನಗರದ ಇಂದಿರಾ ಕ್ಯಾಂಟೀನ್‍ನಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲೂ ಸಹ ಅಳವಡಿಸುವ ಪ್ರಯತ್ನವನ್ನು ನಡೆಸಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಹೊಸ ಯಂತ್ರಗಳನ್ನು ಅಳವಡಿಸುತ್ತಿದ್ದಾರೆ. ಇನ್ನೂ ಈ ಯಂತ್ರದಿಂದ ಪ್ರಾಣಿ, ಪಕ್ಷಿ ಹಾಗು ಬೆಳೆಗಳಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದ್ದಾರೆ. ಆದ್ರೆ ಸದ್ಯಕ್ಕೆ ರಾಮನಗರದಲ್ಲಿ ಮಾತ್ರ, ಈ ರೀತಿಯ ಯಂತ್ರವನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಇಂದಿರಾ ಕ್ಯಾಂಟೀನ್ ನಲ್ಲೂ ಅಳವಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here