ಸೌಂದರ್ಯ ಅವರನ್ನು ನೆನಪಿಸಿಕೊಳ್ಳುವ ಕ್ಷಣ ಇದಾಗಿದೆ

0
756

ಸೌಂದರ್ಯ ಎನ್ನುವ ಹೆಸರನ್ನು ಚಿತ್ರರಂಗದವರು ಮರೆಯಲು ಸಾಧ್ಯವೆ ಇಲ್ಲ. ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ಸೆಳೆದ ಏಕೈಕ ನಟಿ ಎಂದರೆ ಅದು ಸೌಂದರ್ಯ ಎನ್ನುವ ಪ್ರತಿಭಾವಂತ ನಟಿ. ಕೇವಲ ಕನ್ನಡ ಭಾಷೆಯಲ್ಲದೆ ಇನ್ನಿತರ ಭಾಷೆಗಳಲ್ಲಿ ನಟಿಸಿರುವ ಯಶಸ್ವಿ ನಟಿಯರ ಸಾಲಿಗೆ ಇವರ ಹೆಸರು ಸೇರ್ಪಡೆಯಾಗುತ್ತದೆ. ಇವರು ನಟಿಸಿರುವ ಆಪ್ತಮಿತ್ರ ಚಲನಚಿತ್ರ ಸೂಪರ್ ಹಿಟ್ ಆಗುತ್ತದೆ. ಆದರೆ ಒಂದು ಆಘಾತದಲ್ಲಿ ಸೌಂದರ್ಯ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಈ ಘಟನೆ ಆದ ಮೇಲೆ ಸಿನಿರಸಿಕರು ಬಹಳ ಮನನೊಂದಿದ್ದರು. ಇಡಿ ಫಿಲಂ ಇಂಡಸ್ಟ್ರಿ ಗೆ ಇದು ತುಂಬಾಲಾರದ ನಷ್ಟ ಅಂತಾನೆ ಹೇಳಬಹುದಾಗಿದೆ. ಸೌಂದರ್ಯ ಅವರು ಪರದೆ ಮೇಲೆ ಬಹಳ ವಿಭಿನ್ನವಾಗಿ ನಟಿಸುತ್ತಿದ್ದರು. ಇವರ ಜಾಗವನ್ನು ತುಂಬಲು ಬೇರೆ ಯಾವ ನಟಿಯರಿಂದು ಸಾಧ್ಯವಾಗುತ್ತಿಲ್ಲ.

ಸಮಾಜ ಸೇವೆಯ ಮೂಲಕ ಸೌಂದರ್ಯ ಅವರನ್ನು ನೆನೆಯುತ್ತಿದ್ದಾರೆ

ಆಪ್ತಮಿತ್ರ ಚಿತ್ರದಲ್ಲಿ ಸೌಂದರ್ಯ ಅವರ ಅಭಿನಯ ಜನರು ಇಂದಿಗು ಸಹ ಮರೆತಿಲ್ಲ. ನೀವು ಸೌಂದರ್ಯಗೆ ಯಾವುದೆ ಪಾತ್ರ ಕೊಟ್ಟರು ಸಹ ನೀರು ಕುಡಿದಂತೆ ನಟಿಸುತ್ತಿದ್ದರು. ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಇವರಾಗಿದ್ದಾರೆ. ಸೌಂದರ್ಯ ಅವರ ಅತ್ತಿಗೆ ಮಾತ್ರ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇನ್ನು ಸೌಂದರ್ಯ ಅವರನ್ನು ನೆನೆಯುತ್ತಿದ್ದಾರೆ. ವಿಮಾನ ದುರಂತದಲ್ಲಿ ಸೌಂದರ್ಯ ಜೊತೆ ಅವರ ಸಹೋದರರಾದ ಅಮರನಾಥ ಕೂಡ ಸತ್ತು ಹೋಗಿದ್ದಾರೆ. ಸೌಂದರ್ಯ ಅವರು ಇಹಲೋಕ ತ್ಯಜಿಸಿ ಒಂದು ದಶಕ ಕಳೆದಿದೆ. ದುರಂತದಲ್ಲಿ ಮೃತ ಪಟ್ಟ ಅಮರನಾಥ ಅವರ ಪತ್ನಿ ನಿರ್ಮಲಾ ಅಮರನಾಥ್ ಇಂದಿಗೂ ಸಹ ಸಮಾಜ ಸೇವೆಯನ್ನು ಮಾಡುವ ಮೂಲಕ ಸೌಂದರ್ಯ ಅವರ ನೆನಪನ್ನು ಇನ್ನು ಜೀವಂತವಾಗಿದೆ ಎಂದು ನಿರೂಪಿಸಿದ್ದಾರೆ.

 

ಸ್ವತಂತ್ರವಾಗಿ ಹೋರಾಡುವ ಧೈರ್ಯವನ್ನು ತುಂಬಿದ್ದಾರೆ

ಸೌಂದರ್ಯ ಫೌಂಡೇಶನ್ ಎನ್ನುವ ಹೆಸರಿನಲ್ಲಿ ಶಾಲೆ ತೆರೆದಿದ್ದು, ವಿಕಲ ಚೇತನರಿಗೆ ಭರವಸೆ ಮೂಡಿಸಿ ಆತ್ಮ ಗೌರವವನ್ನು ತುಂಬಿ ಜೀವನದಲ್ಲಿ ಏನೆ ಕಷ್ಟ ಬಂದರು ಸಹ ಸ್ವತಂತ್ರವಾಗಿ ಹೋರಾಡುವ ಧೈರ್ಯವನ್ನು ತುಂಬಿದ್ದಾರೆ. ಸೌಂದರ್ಯ ಮರಣ ಹೊಂದಿದ ಮೇಲೆ, ಆರು ತಿಂಗಳ ನಂತರ ಈ ಸಂಸ್ಥೆಯನ್ನು ಶುರು ಮಾಡುತ್ತಾರೆ. ನಿಜಕ್ಕು ಸೌಂದರ್ಯ ಅವರ ಸಹೋದರನ ಪತ್ನಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ. ಅಮರ್ ಸೌಂದರ್ಯ ಸಂಸ್ಥೆಯಿಂದ ಜನರಿಗೆ ಬಹಳ ಅನುಕೂಲವಾಗುತ್ತಿದೆ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಸಂಸ್ಥೆಯಿಂದ ಅನುಮತಿ ಸಿಕ್ಕಿತ್ತು

ವಿದ್ಯೆಯೇ ಗೊತ್ತಿರದೆ ಇರುವ ಮಕ್ಕಳಿಗೆ ವಿದ್ಯೆ ಕಲಿಸುವುದೆ ಒಂದು ದೊಡ್ಡ ಸವಾಲಾಗಿದೆ. ನಿರ್ಮಲ ಅಮರನಾಥ್ ಅವರು ಶಾಲೆಯೆಂದರೆ ಹೇಗಿರಬೇಕೆಂದು ಸೌಂದರ್ಯರೊಂದಿಗೆ ಮೊದಲೆ ಚರ್ಚಿಸಿದ ನಂತರ ಶಾಲೆಯ ನಿರ್ಮಾಣ ಮಾಡುವ ನಿರ್ಣಯವನ್ನು ತೆಗೆದುಕೊಂಡಿದ್ದರು. ಆದ್ದರಿಂದ ಇಂತಹದೊಂದು ಉತ್ತಮವಾದ ಕಾರ್ಯ ಮಾಡುವ ಮೂಲಕ ಸೌಂದರ್ಯ ಅವರನ್ನು ನೆನೆದಿದ್ದಾರೆ. 2004 ರಲ್ಲಿ ಈ ಶಾಲೆ ಪ್ರಾರಂಭವಾಗಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎನ್ನುವ ಸಂಸ್ಥೆಯಿಂದ ಅನುಮತಿ ಸಿಕ್ಕಿತ್ತು. ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಇನ್ನಿತರ ಆಸಕ್ತಿ ಉಳ್ಳ ವಿಷಯಗಳಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ. ಜೆರಾಕ್ಸ್ ಯಂತ್ರ, ಸ್ಪೈರಲ್ ಬೈಂಡಿಂಗ್ ಆಪರೇಟ್ ಮಾಡುವುದು ಈ ಸಂಸ್ಥೆ ಕಲಿಸಿ ಕೊಟ್ಟಿದೆ. ನಿರ್ಮಲಾ ಅವರಿಗೆ ಇಂತಹ ಶಾಲೆಗಳು ಇನ್ನಿತರ ರಾಜ್ಯಗಳಲ್ಲಿ ಸ್ಥಾಪಿಸುವ ಒಂದು ಉದ್ದೇಶವಿದೆ.

ಮಹತ್ವವಾದ ಕೆಲಸಕ್ಕೆ ಸಾಕ್ಷಿಯಾಗಿದ್ದಾರೆ

ಆಸ್ಪತೆಯ ವೈದ್ಯರು ಮತ್ತು ಶಿಕ್ಷಕರು ಕೂಡ ನಿರ್ಮಲ ಅವರು ಮಾಡಿರುವ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರು ಸಹ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಸೌಂದರ್ಯ ಅವರು ಈ ದಿನ ನಮ್ಮ ಹತ್ತಿರ ಇಲ್ಲದಿದ್ದರು, ಒಂದು ಮಹತ್ವವಾದ ಕೆಲಸಕ್ಕೆ ಅವರು ಸಾಕ್ಷಿಯಾಗಿದ್ದಾರೆ ಅಂತಾನೆ ಹೇಳಬಹುದಾಗಿದೆ.

LEAVE A REPLY

Please enter your comment!
Please enter your name here