ಇಳಯರಾಜ ಅವರು ಅಣ್ಣಾವ್ರ ಪ್ರತಿಭೆ ಬಗ್ಗೆ ಸಂಶಯ ಪಟ್ಟಿದ್ದಾದ್ರೂ ಏಕೆ?

0
1554

ಸಂಗೀತಕ್ಕೆ ಇರುವಷ್ಟು ಅಪಾರವಾದ ಶಕ್ತಿ ಬೇರ್ಯಾವುದಕ್ಕೂ ಇಲ್ಲ. ಯಾಕಂದ್ರೆ ಸಂಗೀತ ಏನನ್ನಾದರೂ ಸಾಧಿಸುವ ಹಾಗೆ ಬದಲಾಯಿಸುವ ಮಹತ್ವವನ್ನು ಹೊಂದಿದೆ. ಹಾಗಾಗಿ ನಮ್ಮಲ್ಲಿ ಅನೇಕ ಸಂಗೀತ ವಿದ್ವಾಂಸರಿದ್ದಾರೆ. ಅದರಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತ. ಈ ರೀತಿ, ನಮ್ಮಲ್ಲಿ ಸಂಗೀತ ನಿರ್ದೇಶನ ಮಾಡುವವರು ಹಾಗೆ ಹಾಡುವವರು ಹಲವರಿದ್ದು, ಅವರ ಸಾಲಿಗೆ ಇಳಯರಾಜ ಅವರು ಸಹ ಸೇರುತ್ತಾರೆ. ಇಳಯರಾಜ ಎನ್ನುವ ಹೆಸರು ಕೇಳಿದ ಕೂಡಲೇ, ಎಂಥವರು ಸಹ ಒಂದು ಕ್ಷಣ ನಿಶ್ಯಬ್ಧರಾಗುತ್ತಾರೆ. ಯಾಕಂದ್ರೆ ಅಂತಹ ಶಕ್ತಿ ಅವರ ಹಾಡಿಗಿದೆ. ಹಾಗಾಗಿ ಅವರ ಹಾಡುಗಳನ್ನು ಅಭಿಮಾನಿಗಳು ಕಿವಿಗೊಟ್ಟು ಕೇಳುವುದಕ್ಕಿಂತ, ಮನಗೊಟ್ಟು ಕೇಳುತ್ತಾರೆ. ಹೀಗೆ ಅವರು ಹೋದಲೆಲ್ಲಾ ತಮ್ಮ ಹಾಡಿನ ಬಗ್ಗೆ ಹಾಗು ತಮ್ಮ ಅನುಭವದ ಬಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದ್ರೆ ಇತ್ತೀಚಿಗೆ ಡಾ. ರಾಜ್ ಕುಮಾರ್ ಅವರ ಬಗೆಗೆ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅಣ್ಣಾವ್ರು ಹಾಡು ಹೇಳುತ್ತಾರಾ ಎಂದು ಪ್ರಶ್ನೆ ಮಾಡಿದ್ದ ಇಳಯರಾಜ

ಇಳಯರಾಜ ಅವರು ಸ್ಯಾಂಡಲ್ ವುಡ್ ಗೆ ಮೊದಲು ಅಸಿಸ್ಟೆಂಟ್ ಮ್ಯೂಸಿಕ್ ಡೈರೆಕ್ಟರ್ ಆಗಿ ಸೇರಿದ್ದು, ಜಿ.ಕೆ ವೆಂಕಟೇಶ್ ಅವರ ಬಳಿ ಕೆಲಸ ಮಾಡುತ್ತಾರೆ. ಅಲ್ಲಿವರೆಗೂ ಅವರು ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡುತ್ತಿರುತ್ತಾರೆ. ಆಗ ಅದೇ ಸಮಯಕ್ಕೆ ಅಣ್ಣಾವ್ರ ಸಂಪತ್ತಿಗೆ ಸವಾಲ್ ಸಿನಿಮಾ ನಿರ್ದೇಶನವಾಗುತ್ತಿತ್ತು. ಆಗ ಆ ಸಿನಿಮಾಗೆ ಇವರೇ ಸಂಗೀತ ನಿರ್ದೇಶನ ನೀಡುತ್ತಿರುತ್ತಾರೆ. ಇನ್ನು ಆ ಸಿನಿಮಾದಲ್ಲಿ ಎಲ್ಲರ ಮನಗೆದ್ದ ಹಾಡು ಅಂದ್ರೆ ಅದು, ಯಾರೇ ಕೂಗಾಡಲಿ ಊರೇ ಹೋರಾಡಲಿ. ಇನ್ನು ಈ ಸಾಂಗ್ ಸಿನಿಮಾಗೆ ಹೈಲೆಟ್ ಆಗಿತ್ತು. ಹಾಗಾಗಿ ಈ ಹಾಡನ್ನು ಯಾರಾದ್ರೂ ವಿಶೇಷವಾದ ಧ್ವನಿ ಇರುವವರು ಹಾಡಿದ್ರೆ ಚೆನ್ನಾಗಿರುತ್ತೆ ಎಂದು ಜಿ.ಕೆ ವೆಂಕಟೇಶ್ ಅವರಿಗೆ ಇಳಯರಾಜ ಅವರು ಹೇಳುತ್ತಾರೆ. ಆಗ ಅವರು ಅಣ್ಣಾವ್ರ ಹೆಸರನ್ನು ಸೂಚಿಸುತ್ತಾರೆ.

ರಾಜಣ್ಣ ಈ ಹಾಡನ್ನು ಹಾಡುತ್ತಾರಾ?

ಯಾರೇ ಕೂಗಾಡಲಿ ಹಾಡಿಗೆ ಹಾಡಿಗೆ ವಿಶೇಷ ವ್ಯಕ್ತಿಯ ಬಳಿ ಹಾಡನ್ನು ಹಾಡಿಸೋಣ ಅಂದಾಗ, ಒಂದು ಕಡೆಯಿಂದ ಜಿ.ಕೆ ವೆಂಕಟೇಶ್ ಅವರು ಯೋಚಿಸುತ್ತಾರೆ. ಯಾರಿದ್ದಾರೆ ಅಂಥವರು ಎಂದು. ಆದರೆ ಅವರ ತಲೆಗೆ ಯಾರೊಬ್ಬರೂ ಒಳಿಯುವುದಿಲ್ಲ. ಆಗ ಅವರ ತಲೆಗೆ ಬಂದ ಹೆಸರೇ ಡಾ. ರಾಜ್ ಕುಮಾರ್ ಎಂದು. ಹೌದು. ಅಣ್ಣಾವ್ರ ಬಳಿ ಈ ಹಾಡನ್ನು ಹೇಳಿಸಿದರೆ, ಚೆನ್ನಾಗಿರುತ್ತದೆ ಎಂದು ಇಳಯರಾಜ ಅವರ ಬಳಿ ಹೇಳುತ್ತಾರೆ. ಆಗ ಇಳಯರಾಜ ಅವರು, ಅಣ್ಣ, ಅಣ್ಣಾವ್ರು ಈ ಹಾಡನ್ನು ಹೇಳುತ್ತಾರಾ? ಅವರಿಂದ ಸಾಧ್ಯವಾ ಎಂದು ಕೇಳುತ್ತಾರೆ. ಆಗ ಅದಕ್ಕೆ ಜಿ.ಕೆ ವೆಂಕಟೇಶ್ ಅವರು ಉತ್ತರಿಸುತ್ತಾರೆ. ಅವರಿಂದ ಸಾಧ್ಯವಾಗದ ಕೆಲಸ ಏನು ಇಲ್ಲ. ಅವರಿಂದ ಎಲ್ಲವು ಸಾಧ್ಯ. ಯಾಕಂದ್ರೆ ಅವರು ಸಿನಿಮಾಗೆ ಬರುವ ಮೊದಲು ರಂಗಭೂಮಿಯಲ್ಲಿ ಇದ್ದವರು. ಅವರು ಅನೇಕ ಹಾಡುಗಳನ್ನು ಹಾಡಿದ್ದಾರೆ. ಅವರಿಗೇನು ಇದು ಹೊಸದಲ್ಲ. ಈ ರೀತಿ ಮಾತನಾಡಬೇಡಿ ಎಂದು ಇಳಯರಾಜ ಅವರಿಗೆ ಹೇಳುತ್ತಾರೆ.

ಸೂಪರ್ ಡೂಪರ್ ಹಿಟ್ ಆದ ಹಾಡು

ಇನ್ನು ಈ ಹಾಡನ್ನು ಅಣ್ಣಾವ್ರ ಬಳಿ ಹೇಳಿಸೋಣ ಎಂದ ಕೂಡಲೇ, ಇಳಯರಾಜ ಅವರು ಅಣ್ಣಾವ್ರ ಬಳಿ ಮಾತನಾಡುತ್ತಾರೆ. ಆದ್ರೆ ಅಣ್ಣಾವ್ರು ಅದಕ್ಕೆ ಒಪ್ಪುವುದಿಲ್ಲ. ಯಾಕಂದ್ರೆ ನಾನು ಅಂತಃ ಅಹಾಡುಗಾರನಲ್ಲ. ಅಲ್ಲದೆ, ಪಿ.ಬಿ ಶ್ರೀನಿವಾಸ್ ಅವರು ಇರುವಾಗ ನಾನು ಈ ಹಾಡನ್ನು ಹೇಳುವುದು ಸರಿಯಲ್ಲ ಎಂದು ಹೇಳುತ್ತಾರೆ. ಆದರೆ ಇಳಯರಾಜ ಅವರು, ಅವರಿಗೆ ಹಾಡಿನ ಬಗ್ಗೆ ವಿವರಿಸುತ್ತಾರೆ. ಅಂದ್ರೆ ಈ ಹಾಡನ್ನು ಜೋರು ಧ್ವನಿಯಲ್ಲಿ ಹಾಡಬೇಕು. ಅದಕ್ಕೆ ಅವರ ಧ್ವನಿ ಸರಿಹೊಂದುವುದಿಲ್ಲ. ಹಾಗಾಗಿ ಈ ಹಾಡನ್ನು ನೀವೇ ಹಾಡಬೇಕು ಎಂದು ಹೇಳಿದಾಗ, ಅಣ್ಣಾವ್ರು ಒಪ್ಪಿಕೊಂಡು ಈ ಹಾಡನ್ನು ಹೇಳುತ್ತಾರೆ. ಆಗ ಹೇಳಿದ ಹಾಡು ಈಗಲೂ ಎಲ್ಲರ ಕಿವಿಯಲ್ಲಿ ಗುನುಗುಟ್ಟುತ್ತಿದೆ. ಅಂದ್ರೆ ಈಗಲೂ ಸಹ ಆ ಹಾಡು ಸೂಪರ್ ಡೂಪರ್ ಹಿಟ್ ಆಗಿದ್ದು, ಯಾರೊಬ್ಬರೂ ಸಹ ಈ ಹಾಡನ್ನು ಮರೆತಿಲ್ಲ.

ನಿಜಕ್ಕೂ ಕೆಲವು ವಿಚಾರಗಳು ಯಾರಿಂದಲೂ ಬೇಗ ಮಾಸಿ ಹೋಗುವುದಿಲ್ಲ ಎನ್ನುವುದಕ್ಕೆ ಇಳಯರಾಜ ಅವರ ಜೀವನದಲ್ಲಿ ನಡೆದ ಘಟನೆಗಳೇ ಸಾಕ್ಷಿಯಾಗಿದೆ. ಯಾಕಂದ್ರೆ ಅವರು ಎಲ್ಲಿಂದೆಲ್ಲಿಗೋದರು ಅವರ ಈ ನೆನಪನ್ನು ಮಾತ್ರ ಅವರಿಗೆ ಮರೆಯಲು ಆಗುತ್ತಿಲ್ಲವಂತೆ. ಹಾಗಾಗಿ ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here