ಮಾನವೀಯತೆ ಮರೆತ ಹುಚ್ಚ ವೆಂಕಟ್ ನೀವೇ ನೋಡಿ

0
287
huchha venkat

ಕೆಲ ವರ್ಷಗಳ ಹಿಂದೆ ಹುಚ್ಚ ವೆಂಕಟ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇವರು ಮುಖ್ಯ ಸೆಳೆತವಾಗಿದ್ದು, ಕಾರ್ಯಕ್ರಮದಲ್ಲಿ ಮನೋರಂಜನೆಗೆ ಮತ್ತೊಂದು ಪದವೇ ಹುಚ್ಚ ವೆಂಕಟ್ ಎನ್ನುವ ರೀತಿಯಲ್ಲಿತ್ತು. ಬಿಗ್ ಬಾಸ್ ಕಾರ್ಯಕ್ರಮದಲ್ಲು ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡುವ ಮೂಲಕ ಶೋ ನಿಂದ ಹೊರ ಬಿದ್ದಿದ್ದರು. ನಂತರ ತಮ್ಮ ಹುಚ್ಚ ವೆಂಕಟ್ ಸಿನಿಮಾವನ್ನು ಮರು ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಇವರ ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದರು. ಆಮೇಲೆ ಹುಚ್ಚ ವೆಂಕಟ್ ಅವರ ಯಾವ ಸುದ್ದಿಯು ಹೊರ ಬಿದ್ದಿರಲಿಲ್ಲ. ತಮ್ಮ ಪಾಡಿಗೆ ತಾವು ಸೈಲೆಂಟ್ ಆಗಿದ್ದರು.

ಮಾನವೀಯತೆ ಮರೆತು ಹಲ್ಲೆ ಮಾಡಿದ ವೆಂಕಟ್

ಆದರೆ ಇನ್ನು ಹುಚ್ಚ ವೆಂಕಟ್ ಅವರ ಹುಚ್ಚಾಟವು ಕಡಿಮೆ ಆದಂತೆ ಕಾಣುತ್ತಿಲ್ಲವಂತೆ. ಏನೋ ವೆಂಕಟ್ ಕಷ್ಟದಲ್ಲಿರುವುದನ್ನು ನೋಡಲಾರದೆ ಚೆನ್ನೈ ನಲ್ಲಿ ವಾಸಿಸುತ್ತಿರುವ ಕನ್ನಡಿಗರೊಬ್ಬರು ಇವರ ಸಹಾಯಕ್ಕೆ ಬಂದಿದ್ದರು. ಹೌದು, ಪರ್ವೇಜ್ ಬೆಳ್ಳಾರೆ ಎನ್ನುವ ವ್ಯಕ್ತಿ ವೆಂಕಟ್ ಗೆ ಊಟವನ್ನು ಕೊಡಿಸಿ, ಉಳಿದುಕೊಳ್ಳಲು ವಸತಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಆದರೆ ಮಾನವೀಯತೆಯನ್ನು ಮರೆತು ವೆಂಕಟ್ ಈ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಚೆನ್ನೈ ನ ನಡು ರಸ್ತೆಯಲ್ಲೆ ಸಹಾಯ ಮಾಡಲು ಬಂದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರಂತೆ. ಇನ್ನೂ ಹೋಟೆಲ್ ನ ಸಿಬ್ಬಂದಿಯ ಮೇಲೆಯು ಕೈ ಮಾಡಿದ್ದು, ಹೋಟೆಲ್ ನವರಿಂದ ತಳ್ಳಿಸಿಕೊಂಡು ಬೀದಿಗೆ ಬಂದಿದ್ದಾರೆ.

ಭುವನ್ ಗೌಡ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಬಿಟ್ಟಿದ್ದರು

ಕೆಲ ದಿನಗಳ ಹಿಂದೆ ಹುಚ್ಚ ವೆಂಕಟ್ ಚೆನ್ನೈ ನ ಬೀದಿ ಬೀದಿಗಳಲ್ಲಿ ಕೊಳಕು ಬಟ್ಟೆ ಧರಿಸಿ ಕಾಲಲ್ಲಿ ಚಪ್ಪಲಿ ಇಲ್ಲದೆ ಅರೆ ಹುಚ್ಚನಂತೆ ಓಡಾಡುತ್ತಿದ್ದರು. ರಾಂಧವ ಚಿತ್ರ ತಂಡದವರು ಶೂಟಿಂಗ್ ಗೆ ಹೋದ ವೇಳೆಯಲ್ಲಿ, ಇವರ ಕಣ್ಣಿಗೆ ವೆಂಕಟ್ ಕಾಣಿಸಿಕೊಂಡಿದ್ದು, ವೆಂಕಟ್ ಅವರ ಸ್ಥಿತಿಯ ಕುರಿತು ವೀಡಿಯೊ ಮಾಡಿ ಭುವನ್ ಗೌಡ ಅವರಿಗೆ ಕಳಿಸಿದ್ದರು. ಭುವನ್ ಗೌಡ ಈ ವೀಡಿಯೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಬಿಟ್ಟಿದ್ದರು. ಇದನ್ನು ಕಂಡ ಕರ್ನಾಟಕದ ಜನತೆ ಒಂದು ಕ್ಷಣ ಭಾವುಕರಾಗಿದ್ದು, ವೆಂಕಟ್ ಅವರ ಈ ಸ್ಥಿತಿಗೆ ಯಾರು ಕಾರಣ ಎನ್ನುವ ಪ್ರಶ್ನೆ ಎದ್ದಿತ್ತು. ಚಿತ್ರದ ನಿರ್ದೆಶಕರಾದ ಸುನಿಲ್ ಆಚಾರ್ಯ ಅವರು ಕಾರಿನಿಂದ ಕೆಳಗಿಳಿದು ವೆಂಕಟ್ ಅವರನ್ನು ಮಾತನಾಡಿಸಲು ಹೋದಾಗ ವೆಂಕಟ್ ವಾಪಸ್ ಬೈದು ಕಳಿಸಿದ್ದರಂತೆ.

huchha venkat

ವೆಂಕಟ್ ಅವರ ಸ್ಥಿತಿ ನೋಡಲಾಗುತ್ತಿಲ್ಲ

ವೆಂಕಟ್ ಹುಚ್ಚನಂತೆ ವರ್ತಿಸುತ್ತಿದ್ದಾರೆ. ಸಹಾಯ ಮಾಡಲು ಮುಂದಾದ ವ್ಯಕ್ತಿ ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಏನು ಹೇಳದೆ ಸುಮ್ಮನಿದ್ದರಂತೆ. ವೆಂಕಟ್ ಅವರ ಈ ಗತಿ ನೋಡುತ್ತಿದ್ದರೆ ಬಹಳ ಬೇಸರವಾಗುತ್ತಿದೆ. ಕೂಡಲೆ ಅವರಿಗೆ ಚಿಕಿತ್ಸೆ ಕೊಡಿಸಿ ಮೊದಲಿನಂತೆ ಮಾಡಬೇಕಾಗಿದೆ.

LEAVE A REPLY

Please enter your comment!
Please enter your name here