ಚಿಕ್ಕಣ್ಣ ಅವರ ಒಂದು ದಿನದ ಸಂಪಾದನೆ ಇಷ್ಟು ಇದೆ ಅಂದರೆ ನೀವು ನಂಬುತ್ತಿರಾ?

0
1127
chikanna

ಜನರನ್ನು ಸಂಪಾದಿಸುವುದು ಸುಲಭದ ಮಾತಲ್ಲ, ಜನರು ನಮ್ಮನ್ನು ಇಷ್ಟ ಪಡಬೇಕೆಂದರೆ ಮೊದಲು ನಾವು ಜನರಿಗೆ ಇಷ್ಟ ಆಗಬೇಕು ಅದೂ ಯಾವುದೇ ಕ್ಷೇತ್ರ ಆಗಲಿ.ಏನೇ ಕಷ್ಟ ಇದ್ದರು ಅದನ್ನು ಮನದಲ್ಲೇ ಇಟ್ಟುಕೊಂಡು ಇನ್ನೊಬ್ಬರನ್ನು ಸಂತಸ ಪಡಿಸುವುದು ಕಷ್ಟ ಸಾಧ್ಯ, ಸಾಕಷ್ಟು ಹಾಸ್ಯ ಕಲಾವಿದರು ಸಿನಿರಂಗದಲ್ಲಿ ಬಂದು ಹೋಗಿದ್ದಾರೆ, ಪ್ರತಿಭೆ ಹಾಗೂ ಅಭಿನಯದ ಮೂಲಕ ಹಾಸ್ಯ ಕಲಾವಿದನಾಗಿ ಮೆರೆಯಬೇಕು ಎಂದರೆ ಜನರು ಇವರ ಅಭಿನಯವನ್ನು ನೋಡಿ ಖುಷಿ ಪಡಬೇಕು ಹಾಗು ಸಿನೆಮಾ ನೋಡುಗರರನ್ನು ತನ್ನತ್ತ ಸೆಳೆದುಕೊಳ್ಳುವ ಸಾಮ್ಯರ್ಥತೆ ಆ ಕಲಾವಿದನಲ್ಲಿ ಇರಬೇಕು.

ಪ್ರೇಕ್ಷಕರನ್ನು ನಗಿಸುವುದರಲ್ಲಿ ನಿಸ್ಸೀಮ

ಹೌದೂ ಸಿನಿ ರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿರುವ ಹಾಸ್ಯ ಕಲಾವಿದ ಎಂದರೆ ಅದು ಚಿಕ್ಕಣ್ಣ, ಕೇವಲ ಒಂದು ದೃಶ್ಯದಲ್ಲಿ ಚಿಕ್ಕಣ್ಣ ಕಾಣಿಸಿಕೊಂಡರೆ ಸಾಕು ಜನ ಚಿತ್ರಮಂದಿರದಲ್ಲಿ ಕೇಕೆ ಹೊಡಿಯುತ್ತಾರೆ ಅಷ್ಟರ ಮಟ್ಟಿಗೆ ಚಿಕ್ಕಣ್ಣ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸಿನೆಮಾದಲ್ಲಿಯೂ ಸಹ ನೈಜ್ಯ ರೂಪದ ಅಭಿನಯ ಮಾಡುತ್ತಾರೆ, ಪ್ರೇಕ್ಷಕರನ್ನು ನಗಿಸುವುದರಲ್ಲಿ ನಿಸ್ಸೀಮ. ಹಂತ ಹಂತವಾಗಿ ಚಿಕ್ಕಣ್ಣ ಬೆಳೆದು ಈಗ ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲ ಅಂತಾ ಹೇಳುವ ರೇಂಜ್ ಗೆ ಬಂದು ನಿಂತಿದ್ದಾರೆ.

chikkanna

ಪ್ರತಿಭೆ ತನ್ನಲ್ಲು ಅಡಗಿದೆ ಅಂತಾ ನಿರೂಪಿಸಿದ್ದಾರೆ

ಬಹಳ ಕಡಿಮೆ ಸಮಯದಲ್ಲಿ ಯಶಸ್ಸು ಕಂಡ ವ್ಯಕ್ತಿ ಚಿಕ್ಕಣ್ಣ. ಇವರು ಹುಟ್ಟಿ ಬೆಳೆದಿದ್ದು ಎಲ್ಲಾ ಮೈಸೂರಿನ ಹತ್ತಿರ ಇರುವ ಬೆಳ್ಳೆ ಎಂಬ ಹೆಸರಿನ ಗ್ರಾಮದಲ್ಲಿ, ಕಿರಾತಕ ಸಿನೆಮಾದ ಮೂಲಕ ಇವರು ಬೆಳ್ಳಿತೆರೆಗೆ ಲಗ್ಗೆ ಇಡುತ್ತಾರೆ. ನಂತರ ಆದ್ಯಕ್ಷ ಮತ್ತು ರಾಜಾಹುಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಜನರಿಂದ ಪ್ರಶಂಸೆ ಪಡೆದುಕೊಳ್ಳುತ್ತಾರೆ, ಅತ್ಯುತ್ತಮ್ಮ ಹಾಸ್ಯ ನಟನ ಎಂಬ ಪ್ರಶಸ್ತಿಯು ಸಹ ಇವರಿಗೆ ಲಭಿಸಿದೆ. ನಾಯಕ ನಟನ ಸ್ನೇಹಿತನ ಪಾತ್ರಕ್ಕೆ ಚಿಕ್ಕಣ್ಣ ಹೇಳಿ ಮಾಡಿಸಿದ ಹಾಗೆ ಇದ್ದಾರೆ, ಜನರಂತು ಇವರ ನಟನೆಗೆ ಫಿದಾ ಆಗಿದ್ದಾರೆ. ಪ್ರತಿಭೆ ತನ್ನಲ್ಲು ಅಡಗಿದೆ ಎಂದು ನಿರೂಪಿಸಿದ್ದಾರೆ.

chikanna

ದುಡಿಮೆಯಲ್ಲಿ ಯಾವ ಸ್ಟಾರ್ ನಟರಿಗಿಂತನೂ ಕಮ್ಮಿ ಇಲ್ಲ

ಆದರೆ ಇವರ ಸಂಪಾದನೆ ಎಷ್ಟು ಇರಬಹುದೆನ್ನುವ ಪ್ರಶ್ನೆ ಹಲವರಿಗೆ ಕಾಡುತ್ತಿದೆ, ಇವರು ಒಂದು ದಿನದ ಆದಾಯ ಕೇಳಿದರೆ ನೀವು ಒಂದು ಕ್ಷಣ ದಂಗಾಗುತ್ತಿರಾ. ಒಂದು ದಿನಕ್ಕೆ ಚಿಕ್ಕಣ್ಣನವರು ಸುಮಾರು 5 ರಿಂದ 6 ಲಕ್ಷದವರೆಗೂ ಸಂಪಾದನೆ ಮಾಡುತ್ತಾರೆ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತಿದೆ, ಸ್ಟಾರ್ ನಟರ ಸಂಪಾದನೆಗೆ ಹೊಲಿಸಿದರೆ ದುಡಿಮೆಯಲ್ಲಿ ಇವರು ಯಾವ ಸ್ಟಾರ್ ನಟರಿಗಿಂತನೂ ಕಮ್ಮಿ ಇಲ್ಲ. ಇವರು ಸಮಾಜ ಸೇವೆ ಕೂಡ ಮಾಡಿದ್ದಾರೆ ಅಷ್ಟೇ ಯಾಕೆ ಚಿರತೆಯನ್ನು ಸಹ ಹೆಚ್ಚಿನ ಮೊತ್ತದ ಹಣವನ್ನು ಕೊಟ್ಟು ದತ್ತು ತೆಗೆದುಕೊಂಡಿದ್ದಾರೆ. ಇನ್ನು ಅನೇಕ ಚಿತ್ರಗಳಲ್ಲಿ ಅಭಿನಯಿಸಲಿ, ಹೀಗೆ ಅಭಿಮಾನಿಗಳನ್ನು ರಂಜಿಸುತ್ತಿರಲಿ, ಸಂಪಾದನೆ ಕೂಡ ಜಾಸ್ತಿ ಆಗಲಿ ಎಂದು ಹರಿಸೋಣ.

LEAVE A REPLY

Please enter your comment!
Please enter your name here