ಜೊತೆ ಜೊತೆಯಲಿ ಧಾರಾವಾಹಿಯ ಅನುಸಿರಿಮನೆ ಪಾತ್ರಕ್ಕೆ ಇವರು ಆಯ್ಕೆ ಆಗಿದ್ದು ಹೇಗೆ?

0
546

ಸದ್ಯಕ್ಕೆ ಈಗ ಜೊತೆ ಜೊತೆಯಲಿ ಸೀರಿಯಲ್ ಸಿಕ್ಕಾಪಟ್ಟೆ ಜನರ ಗಮನವನ್ನು ಸೆಳೆಯುತ್ತಿದ್ದು, ಬೇರೆ ಧಾರಾವಾಹಿಗಳನ್ನು ಹಿಂದಕ್ಕೆ ಹಾಕಿ ಟಿ ಆರ್ ಪಿ ರೇಟ್ ನಲ್ಲಿ ಅಗ್ರ ಸ್ಥಾನವನ್ನು ಈ ಸೀರಿಯಲ್ ಪಡೆದುಕೊಂಡಿದೆ. ಬಹಳ ವರ್ಷಗಳ ಕೆಳಗೆ ಜೊತೆ ಜೊತೆಯಲಿ ಸೀರಿಯಲ್ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ವಿಭಿನ್ನವಾದ ಪ್ರೇಮ ಕಥೆಗೆ ವೀಕ್ಷಕರು ಮಾರು ಹೋಗಿದ್ದರು. ಹೊಸ ದಾಖಲೆಯನ್ನು ಸಹ ಆ ಧಾರವಾಹಿ ಬರೆದಿತ್ತು. ಹೊಸ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿಮನೆ ಎನ್ನುವ ಪಾತ್ರ ಎಲ್ಲರಿಗು ಚಿರಪರಿಚಿತವಾಗಿದೆ. ಇವರು ಯಾರು ಧಾರಾವಾಹಿಗೆ ಹೇಗೆ ಆಯ್ಕೆ ಆದರು ಎನ್ನುವುದರ ಕುರಿತು ಮಾಹಿತಿ ನಾವು ನಿಮಗೆ ನೀಡುತ್ತೇವೆ. ಮುಂದೆ ಓದಿ

ಸಾಮಾಜಿಕ ಜಾಲತಾಣದಿಂದ ಸೀರಿಯಲ್ ಗೆ ಎಂಟ್ರಿ

ಈಗ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿಮನೆ ಎನ್ನುವ ಹೆಸರು ನೀವು ಕೇಳಿರುತ್ತೀರಾ. ಹೌದು ಇವರ ನಿಜವಾದ ಹೆಸರು ಮೇಘನಾ ಶೆಟ್ಟಿ, ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದಾರೆ. ಅನಿರುದ್ಧ್ ಗೆ ಜೋಡಿಯಾಗಿ ಇವರು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಶೆಟ್ಟಿ ಮೂಲತಃ ಮಂಗಳೂರಿನವರಾಗಿದ್ದು, ಓದಿದ್ದು, ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲೆ. ಐಎಎಸ್ ಆಫೀಸರ್ ಆಗಬೇಕೆನ್ನುವುದು ಇವರ ಕನಸಾಗಿದ್ದು, ಈಗ ನಟನೆಯತ್ತ ವಾಲಿದ್ದಾರೆ. ಸಾಮಾಜಿಕ ಜಾಲತಾಣದ ಮುಖಾಂತರ ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾದ ಹುಣಸೂರು ಅವರಿಗೆ ಪರಿಚಯವಾಗಿದ್ದರು. ಮುಂದೆ ಓದಿ

ಬಣ್ಣದ ಜಗತ್ತು ಇವರಿಗೆ ಹೊಸದಲ್ಲ

ತದನಂತರ, ಇವರಿಗೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನು ಸಿರಿಮನೆ ಎನ್ನುವ ಪಾತ್ರಕ್ಕೆ ನಟಿಸುವುದಕ್ಕೆ ಅವಕಾಶ ಸಿಗುತ್ತದೆ. ಮೊದಲ ಬಾರಿಗೆ ಇವರು ಬಣ್ಣ ಹಚ್ಚುತ್ತಿದ್ದರು ಸಹ ಇವರಿಗೆ ಬಣ್ಣದ ಪ್ರಪಂಚ ಹೊಸದಲ್ಲ. ಹೌದು, ಇವರ ಅಕ್ಕ ಸಹ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅವರು ಯಾರೆಂದು ಆಲೋಚಿಸುತ್ತಿದ್ದೀರಾ?. ಬೇರೆ ಯಾರು ಅಲ್ಲ ಲೂಸಿಯಾ ಚಿತ್ರದಲ್ಲಿ ನೀನಾಸಂ ಸತೀಶ್ ಅವರ ಜೊತೆ ಮುಖ್ಯವಾದ ಪಾತ್ರದಲ್ಲಿ ಪರದೆ ಹಂಚಿಕೊಂಡಿದ್ದರು. ಅವರ ಹೆಸರು ಹಾರ್ಧಿಕ ಶೆಟ್ಟಿ, ಗಲಾಟೆ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ ಜೊತೆ ಎರಡನೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಇವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದರು.

ನಟನೆಯಿಂದಾನೆ ಜನರನ್ನು ಆಕರ್ಷಿಸುತ್ತಿದ್ದಾರೆ

ಈ ಹೊಸ ಧಾರಾವಾಹಿಯಲ್ಲಿ ಅನಿರುದ್ಧ್ ಅವರ ಅಭಿನಯ ವೀಕ್ಷರನ್ನು ಧಾರಾವಾಹಿಯ ಕಡೆಗೆ ಸೆಳೆಯುತ್ತಿದೆ. ಪ್ರತಿ ದಿನ ಸಂಜೆ 8:20 ಕ್ಕೆ ಈ ಧಾರವಾಹಿ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅನಿರುದ್ದ್ ಅವರು ಖ್ಯಾತ ಕಂಪನಿಯ ಉದ್ಯಮಿಯಾಗಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮೊದಲನೆ ಬಾರಿಗೆ ಮೇಘನಾ ಶೆಟ್ಟಿ ಎನ್ನುವ ಯುವ ಪ್ರತಿಭೆ ಸೀರಿಯಲ್ ನಲ್ಲಿ ನಟಿಸಿದ್ದು, ತನ್ನ ನಟನೆಯಿಂದಾನೆ ಜನರನ್ನು ಆಕರ್ಷಿಸುತ್ತಿದ್ದಾರೆ. ಪ್ರಥಮವಾಗಿ ನಟಿಸಿದ್ದರು ಸಹ ಪರಿಪೂರ್ಣವಾದ ಅಭಿನಯವನ್ನು ನಾವು ಧಾರಾವಾಹಿಯಲ್ಲಿ ನೋಡಬಹುದಾಗಿದೆ.

LEAVE A REPLY

Please enter your comment!
Please enter your name here