45 ಜನ ಹೆಚ್ ಐ ವಿ ಮಕ್ಕಳಿಗೆ ತಂದೆಯಾದ ವ್ಯಕ್ತಿ

0
686
hiv makkalu

ನಾವು ಸಹ ಸಹಾಯ ಮಾಡ್ತೀವಿ ಅಂತ ಕೆಲವು ಜನರು ಮುಂದೆ ಬರ್ತಾರೆ. ಆದರೆ ಅದರಲ್ಲಿ ನಮಗೆ ಏನಾದ್ರು ಉಪಯೋಗ ಆಗುತ್ತಾ ಅಂತ ನೋಡ್ತಾರೆ. ಆದ್ರೆ ಯಾವುದೇ ಸ್ವಾರ್ಥವಿಲ್ಲದೆ ಮಾಡುವ ಸಹಾಯ, ನಿಜವಾದ ಸಹಾಯವಾಗುತ್ತದೆ. ಮನುಷ್ಯನಾದವನು ಮೊದಲು ಆ ಗುಣ ಬೆಳೆಸಿಕೊಳ್ಳಬೇಕು. ಹೌದು ನಿಷ್ಕಲ್ಮಶ ಮನಸ್ಸಿನಿಂದ,ಹಾಗು ನಿಸ್ವಾರ್ಥದಿಂದ ಮಾಡುವ ಸಹಾಯ ಮಾತ್ರ ನಿಜವಾದ ಸಹಾಯವಾಗುತ್ತದೆ. ಬದಲಾಗಿ ನಾವು ಮನಸ್ಸಲ್ಲಿ ಎಷ್ಟೇ ಕೆಟ್ಟ ಗುಣವಿಟ್ಟುಕ್ಕೊಂಡು, ಸಹಾಯ ಮಾಡ್ತೀವಿ ಅಂತ ಹೋದ್ರೆ ಅದರಿಂದ ಯಾವುದೇ ರೀತಿಯ ಉಪಯೋಗವಾಗುದಿಲ್ಲ.

ಅದೇ ರೀತಿ ಕೆಲವರು ಯಾವುದೊ ಒಂದು ತೊಂದೆರೆಯಿಂದ ಬೀದಿಯಲ್ಲಿ ಬಿದ್ದಿರುತ್ತಾರೆ. ಸಹಾಯ ಮಾಡುವ ನಿಜವಾದ ಮನಸ್ಸಿರುವವರು ಅಂಥವರಿಗೂ ಸಹಾಯ ಮಾಡುತ್ತಾರೆ. ಯಾಕಂದ್ರೆ ಅದು ಅವರ ನಿಜವಾದ ವ್ಯಕ್ತಿತ್ವವನ್ನ ತೋರಿಸುತ್ತದೆ. ಆದ್ರೆ ಕೆಲವರು ಹೇಗೆ ಅಂದ್ರೆ ಯಾರೋ ಒಬ್ಬರಿಗೆ ಸಣ್ಣ ಪುಟ್ಟ ಖಾಯಿಲೆ ಇದೆ ಅಂದ್ರೆ ಅವರನ್ನ ಹತ್ತಿರಕ್ಕೂ ಸಹ ಸೇರಿಸಲ್ಲ. ಎಲ್ಲೋ ಕೆಲವರು ಮಾತ್ರ. ಅವರನ್ನ ತಮ್ಮಂತೆ ಕಾಣುತ್ತಾರೆ. ಯಾಕಂದ್ರೆ ಯಾರು ಸಹ ಖಾಯಿಲೆಗಳನ್ನ ಹುಡುಕಿಕೊಂಡು ಹೋಗುವುದಿಲ್ಲ. ಅಕಸ್ಮಾತ್ ಆಗಿ ಬಂದಿರುವುದನ್ನ ಏನು ಮಾಡುವುದಕ್ಕೆ ಆಗಲ್ಲ ಅಂತ ಅಂಥವರ ಸಹಾಯಕ್ಕೆ ನಿಲ್ಲುತ್ತಾರೆ. ಇದೇ ರೀತಿ ಇಲ್ಲೊಬ್ಬರು ಹೆಚ್ ಐ ವಿ ಪೀಡಿತ ಮಕ್ಕಳಿಗೆ ಆಶ್ರಯದಾತರಾಗಿದ್ದಾರೆ.

ಹೆಚ್ ಐ ವಿ ಮಕ್ಕಳಿಗೆ ತಂದೆಯಾಗಿರುವ ವ್ಯಕಿ

ಹೆಚ್ ಐ ವಿ ಖಾಯಿಲೆ ಅನ್ನೋದು ಯಾವ ವಯಸ್ಸಿನವರಿಗಾದರು ಬರುತ್ತದೆ. ಒಂದು ಕಾಲದಲ್ಲಿ ಹೆಚ್ ಐ ವಿ ವಯಸ್ಕರರಿಗೆ ಮಾತ್ರ ಬರುತ್ತದೆ ಎಂದು ತಿಳಿದಿದ್ದರು. ಆದರೆ ನಂತರದ ದಿನಗಳಲ್ಲಿ ಅದರ ಸಂಪೂರ್ಣ ವಿವರ ಎಲ್ಲರಿಗೂ ತಿಳಿಯುತ್ತದೆ. ಇದೇ ರೀತಿ ಎಷ್ಟೋ ಚಿಕ್ಕ ಮಕ್ಕಳು ಹೆಚ್ ಐ ವಿ ಸೋಂಕಿಗೆ ಒಳಗಾಗಿದ್ದಾರೆ. ಅಂಥವರನ್ನ ನಮ್ಮ ಸಮಾಜ ಬಹಳ ನಿಕೃಷ್ಟವಾಗಿ ಕಾಣುತ್ತದೆ. ಸಮಾಜವೇಕೆ, ಅವರ ತಂದೆ ತಾಯಿಯೇ ಹೆತ್ತ ಮಗುವನ್ನ ನಿರ್ಲಕ್ಷ್ಯ ಮಾಡುತ್ತಾರೆ. ಅಂತ ಮಕ್ಕಳನ್ನ ಮನೆಯಲ್ಲಿ ಇರಿಸಿಕೊಳ್ಳಲು ಇಷ್ಟವಾಗದೇ, ಹೆತ್ತ ಮಕ್ಕಳನ್ನ ಅನಾಥಾಶ್ರಮಕ್ಕೆ ಸೇರಿಸುತ್ತಾರೆ. ಅಂತ ಮಕ್ಕಳು ತಂದೆ, ತಾಯಿ ಪ್ರೀತಿಯಿಂದ ದೂರ ಆಗಿರುತ್ತಾರೆ. ಅಂತ ಮಕ್ಕಳನ್ನ ಇಲ್ಲೊಬ್ಬರು ದತ್ತು ತೆಗೆದುಕೊಂಡು ಅವರಿಗೆಲ್ಲಾ ತಂದೆಯಾಗಿದ್ದಾರೆ.

45 ಮಕ್ಕಳನ್ನ ದತ್ತು ಪಡೆದಿದ್ದಾರೆ

ಇವರ ಹೆಸರು ಸಲೋಮನ್ ರಾಜ್. ಇವರು ಮೂಲತಃ ಚನ್ನೈ ಮೂಲದವರು. ಇವರು ಅನಾಥಾಶ್ರಮದಲ್ಲಿದ್ದ ಹೆಚ್ ಐ ವಿ ಸೋಂಕಿನ 45 ಮಕ್ಕಳನ್ನ ದತ್ತು ಪಡೆದು ಸಾಕುತ್ತಿದ್ದಾರೆ. ಅದಕ್ಕೆ ಒಂದು ಕಾರಣವೂ ಇದೆ. ಹೌದು. ಸಲೋಮನ್ ರಾಜ್ ಅವರಿಗೆ ವಿವಾಹವಾಗಿ ಹಲವು ವರ್ಷ ಕಳೆದರು ಮಕ್ಕಳಾಗಿರಲಿಲ್ಲ. ಹಾಗಾಗಿ ಅವರು ದತ್ತು ಮಗು ಪಡೆಯುವುದಕ್ಕೆ ನಿರ್ಧಾರ ಮಾಡಿದರು. ಆದ್ರೆ ಅದೇ ಸಮಯಕ್ಕೆ ಇವರಿಗೆ ಮಗುವಾಯಿತು. ಅಷ್ಟರಲ್ಲಿ ಇವರಿಗೆ ದತ್ತು ಮಗು ಪಡೆಯುವ ಆಸೆ ಮುಗಿದೋಗಿತ್ತು. ಆದ್ರೆ ಪದೇ ಪದೇ ಇವರಿಗೆ ನಾನು ದತ್ತು ಪಡೆಯಬೇಕೆಂದು ನಿರ್ಧಾರ ಮಾಡಿದ್ದೆ ಅನ್ನೋದು ನೆನಪಾಗುತ್ತಿತ್ತು. ಹಾಗಾಗಿ ಇವರು, ಆರೋಗ್ಯವಾಗಿರುವ ಮಗುವನ್ನ ದತ್ತು ಪಡೆಯುವ ಬದಲು, ಹೆಚ್ ಐ ವಿ ಸೋಂಕಿನ ಮಗುವನ್ನ ದತ್ತು ಪಡೆದರೆ ಒಳ್ಳೆಯದು ಎಂದು ನಿರ್ಧರಿಸಿ ಒಂದು ಮಗುವನ್ನ ದತ್ತು ಪಡೆಯುತ್ತಾರೆ.

ಒಂದು ಮಗು ದತ್ತು ಪಡೆದ ಅವರಿಗೆ ಎಲ್ಲ ಮಕ್ಕಳನ್ನ ದತ್ತು ಪಡೆಯಬೇಕೆಂಬ ಆಸೆಯಾಯಿತು

ಸಲೋಮನ್ ರಾಜ್ ಅವರು ತಮ್ಮ ಆಸೆಯಂತೆ ಒಂದು ಮಗುವನ್ನ ದತ್ತು ಪಡೆದರು. ಆದರೆ ಅವರಿಗೆ ಯಾಕೋ ಆ ವಿಷಯದಲ್ಲಿ ಸಮಾಧಾನವಾಗಲಿಲ್ಲ. ಹಾಗಾಗಿ ಪ್ರತಿವರ್ಷದಂತೆ ಒಂದೊಂದು ಹೆಚ್ ಐ ವಿ ಸೋಂಕಿನ ಮಗುವನ್ನ ದತ್ತು ಪಡೆಯಲು ಮುಂದಾದರು. ಈಗ ಅವರ ಮನೆಯಲ್ಲಿ 45 ಜನ ಹೆಚ್ ಐ ವಿ ಮಕ್ಕಳಿದ್ದಾರೆ. ಅವರೆಲ್ಲರಿಗೂ ಇವರೇ ತಂದೆಯಾಗಿದ್ದಾರೆ. ಎಲ್ಲ ಮಕ್ಕಳಿಗೆ ವಿದ್ಯಾಭ್ಯಾಸ, ಕಂಪ್ಯೂಟರ್ ಶಿಕ್ಷಣವನ್ನ ನೀಡುತ್ತಿದ್ದಾರೆ. ಅದರಲ್ಲಿ ಒಬ್ಬ ಮಗಳು ಈಗ ದ್ವಿತೀಯ ಪಿಯುಸಿ ಓದುತ್ತಿದ್ದು, ಅವಳಿಗೆ ಡಾಕ್ಟರ್ ಆಗುವ ಆಸೆಯಿದೆಯಂತೆ. ಹಾಗಾಗಿ ಅವಳ ಆಸೆಯನ್ನ ಇವರು ಈಡೇರಿಸಲು ನಿರ್ಧರಿಸಿದ್ದಾರೆ. ಆದ್ರೆ ಕೆಲವೊಂದು ಸಾರಿ ಮಕ್ಕಳಿಗೆ ಅನಾರೋಗ್ಯ ಕಾಣಿಸಿಕೊಳ್ಳುವುದರಿಂದ ಇವರಿಗೆ ಅದರ ವೆಚ್ಚವನ್ನ ಭರಿಸಲು ಬಹಳ ಕಷ್ಟವಾಗುತ್ತದೆಯಂತೆ. ಆದ್ರೂ ಅವರು ಯಾವುದಕ್ಕೂ ಎದೆಗುಂದದೆ ಮಕ್ಕಳನ್ನ ಸಾಕುತ್ತಿದ್ದಾರೆ.

ನಿಜಕ್ಕೂ ಇವರ ದೊಡ್ಡಗುಣವನ್ನ ಮೆಚ್ಚಲೇ ಬೇಕು. ಯಾಕಂದ್ರೆ ಯಾರೊಬ್ಬರೂ ಆಗದ ಈ ಕಾಲದಲ್ಲಿ, ಇವರು 45 ಜನ ಹೆಚ್ ಐ ವಿ ಮಕ್ಕಳನ್ನ ದತ್ತು ಪಡೆದು, ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ನಿಜಕ್ಕೂ ಅಭಿನಂದನೆ ಸಲ್ಲಿಸಲೇ ಬೇಕು.

 

LEAVE A REPLY

Please enter your comment!
Please enter your name here