ಕರ್ನಾಟಕ ಪ್ರವಾಹ: ಹಂಪಿ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳು ಮುಳುಗಡೆ

0
238

ಕಳೆದ ಒಂದು ವಾರಗಳಿಂದ ಪ್ರವಾಹದಿಂದ ತಪ್ಪಿಸಿಕೊಳ್ಳಲು ಜನರು ಹೋರಾಡುತ್ತಲೆ ಇದ್ದಾರೆ. ಭಾನುವಾರ ದಿನದಂದು ಕರ್ನಾಟಕದಲ್ಲಿ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನಾಡಿನ ಜನತೆ ಆತಂಕದಿಂದ ಹೊರ ಬಂದಿದ್ದಾರೆ. ಪ್ರವಾಹದ ಗದ್ದಲದಲ್ಲಿ ಜನರು ಕಳೆದುಹೋಗಿದ್ದರು, ಈಗ ಕಳೆದುಹೋದ ಜನರನ್ನು ಹುಡುಕುವ ಕಾರ್ಯಾಚರಣೆಯಲ್ಲಿ ಪ್ರಜೆಗಳು ನಿರತರಾಗಿದ್ದಾರೆ. ಹೆಚ್ಚು ಜನರನ್ನು ಪ್ರವಾಹದ ಅಪಾಯದಿಂದ ಪಾರು ಮಾಡಬಹುದಾಗಿದೆ. ಪ್ರವಾಹದಿಂದ ಹರಿದು ಬಂದ ನೀರು ಕರ್ನಾಟಕದ ನಾನಾ ಪ್ರದೇಶಲ್ಲಿರುವ ಜಲಾಶಯಗಳನ್ನು ಆವರಿಸಿಕೊಂಡಿದೆ.

ಪ್ರವಾಹದಿಂದಾಗಿ ಐತಿಹಾಸಿಕ ಸ್ಥಳಗಳಿಗೆ ಹಾನಿ ಉಂಟಾಗಿದೆ

ಬಳ್ಳಾರಿ ಜೆಲ್ಲೆಯ ಹೊಸಪೇಟೆಯ ತಾಲೂಕಿನಲ್ಲಿರುವ ಐತಿಹಾಸಿಕವಾದ ಸ್ಥಳವಾದ ಹಂಪಿಯ ಸುತ್ತ ಮುತ್ತ ಪ್ರದೇಶದಲ್ಲಿ ನೀರು ತುಂಬಿಕೊಂಡಿದೆ. ತುಂಗ ಭದ್ರ ಡ್ಯಾಮ್ ನಿಂದ ಮೊದಲನೆ ಬಾರಿಗೆ 3 ಲಕ್ಷ ಕ್ಯುಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿತ್ತು. ಇದು ದಾಖಲೆಯ ಬಿಡುಗಡೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಒಳಹರಿವಿನಿಂದ ನೀರನ್ನು ಬಿಡಲಾಗಿದೆ. ಕೆ ಆರ್ ಎಸ್ ಡ್ಯಾಮ್ ನಾ ಹೊರಹರಿವಿನ ನೀರಿನಿಂದ ಮೈಸೂರಿನ ಐತಿಹಾಸಿಕ ಸ್ಥಳವಾದ ಶ್ರೀರಂಗಪಟ್ಟಣ ಮತ್ತು ರಂಗನತಿಟ್ಟು ಅಭಯಾರಣ್ಯ ನೀರಿನಿಂದ ಮುಳುಗಿ ಹೋಗಿದೆ. ಇನ್ನು ಅನೇಕ ಸ್ಥಳಗಳಲ್ಲಿ ಇದೆ ರೀತಿಯ ಒಂದು ಪರಿಸ್ಥಿತಿ ನಿರ್ಣಾಣವಾಗಿದ್ದು, ಸುಧಾರಣೆಗಾಗಿ ಕೇಂದ್ರ ಸರ್ಕಾರ ಬಜೆಟ್ ಬಿಡುಗಡೆ ಮಾಡಿದೆ. ಮುಂದೆ ಓದಿ.

ಹಾನಿ ಉಂಟಾದ ಸ್ಥಳಗಳನ್ನು ಪರಿಶೀಲಿಸಿದ್ದು, ಕೇಂದ್ರ ಸರ್ಕಾರದಿಂದ ಫಂಡ್ ರಿಲೀಸ್ ಆಗಿದೆ 

ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಶಾ ಕರ್ನಾಟಕದ ಮುಖ್ಯಮಂತ್ರಿಗಳ ಜೊತೆ ಸೇರಿ ಹಾನಿ ಉಂಟಾದ ಸ್ಥಳಗಳನ್ನು ಪರಿಶೀಲನೆ ಮಾಡಿದ್ದಾರೆ. ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶವನ್ನು, ವಿಜಯಪುರದ ಆಲಮಟ್ಟಿ ಆಣೆಕಟ್ಟು, ಇನ್ನು ಹಲವಾರು ಪ್ರದೇಶಗಳಲ್ಲಿ ಪರಿಶೀಲನೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಫಂಡ್ ರಿಲೀಸ್ ಮಾಡಿದ್ದು, ಇನ್ನು ಹೆಚ್ಚು ಹಣದ ಅವಶ್ಯಕತೆ ಇರುವದರಿಂದ ಶೀಘ್ರವೆ 300 ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು, ಕರ್ನಾಟಕದ ಸಿಎಂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕೊಪ್ಪಳ ತಾಲೂಕಿನ ವೀರಪುರಗಡ್ಡೆಯಲ್ಲಿ ಸುಮಾರು 200 ಜನ ಪ್ರವಾಸಿಗರನ್ನು ವಾಪಸ್ ಕಳಿಸಲಾಗಿದೆ.

ಪ್ರವಾಸಕ್ಕೆ ಬಂದ ವಿದೇಶಿಗರನ್ನು ಸಹ  ರಕ್ಷಿಸಲಾಗಿತ್ತು

ತುಂಗಭದ್ರ ನದಿಯಿಂದ ನೀರು ಹರಿದುಕೊಂಡು ಬಂದಿದ್ದರಿಂದ, ಕೊಪ್ಪಳ ತಾಲೂಕಿನ ವೀರಾಪುರ ಗಡ್ಡೆಯಲ್ಲಿ ಜನರು ಅಪಾಯದಲ್ಲಿ ಇದ್ದರು. ಇವರನ್ನು ಕಾಪಾಡಲು ಹೋಗಿದ್ದ ರಕ್ಷಣಾ ತಂಡಕ್ಕೆ ತೊಂದರೆಯಾಗಿರುವ ಘಟನೆ ಕಂಡು ಬಂದಿತ್ತು. ಆದರೆ ಕೊನೆಗೆ ಎಲ್ಲರೂ ಸಂಭವಿಸುತ್ತಿದ್ದ ಅನಾಹುತದಿಂದ ಪಾರಾಗಿದ್ದಾರೆ. ಇಂದು ಬೆಳಿಗ್ಗೆ ಎನ್ ಡಿ ಆರ್ ಎಫ್ ತಂಡ ಈ ಸ್ಥಳಕ್ಕೆ ಭೇಟಿ ನೀಡಿದ್ದು, ದೋಣಿಯ ಮೂಲಕ ರಕ್ಷಣಾ ಕಾರ್ಯ ಮುಂದುವರೆದಿತ್ತು. ಪ್ರವಾಸಕ್ಕೆ ಬಂದ ವಿದೇಶಿಗರನ್ನು ಸಹ  ರಕ್ಷಿಸಲಾಗಿತ್ತು.

ಹೆಗಲ ಮೇಲೆ ಹೊತ್ತುಕೊಂಡು ಬಂದು ಜನರನ್ನು ರಕ್ಷಿಸಿದ್ದಾರೆ

ಪ್ರವಾಹದ ಸಂಕಷ್ಟಕ್ಕೆ ಸಿಲುಕಿಕೊಂಡ ರೋಗಿಗಳನ್ನ ರಕ್ಷಣಾ ಕಾರ್ಯ ತಂಡ ಯಶಸ್ವಿಯಾಗಿ ಕಾರ್ಯಚರಣೆ ಮುಗಿಸಿದೆ. ಕಮ್ಯಾಂಡರ್ ಮಲ್ಲಿಕಾರ್ಜುನ್ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ವರದಿಯನ್ನು ನೀಡಿದ್ದಾರೆ. ನಮ್ಮ ಕೆಲಸ ನಮಗೆ ಖುಷಿ ಕೊಟ್ಟಿದೆ. ರೋಗಿಗಳನ್ನ ನಮ್ಮ ಸಿಬ್ಬಂದಿಗಳು 8 ಕಿಮಿ ವರೆಗೂ ಪಯಣಿಸಿ ಅವರನ್ನು ಹೆಗಲ ಮೇಲೆ ಹೊತ್ತಿಕೊಂಡು ತಂದಿದ್ದಾರೆ. ಸ್ವಲ್ಪ ಕಷ್ಟವಾದರು ಖುಷಿಯಿಂದ ಈ ಕೆಲಸವನ್ನು ಮಾಡಿದ್ದೇವೆ. ತೊಂದರೆಯಲ್ಲಿ ಇರುವ ಜನರನ್ನು ಸಂರಕ್ಷಿಸುವುದೆ ನಮ್ಮ ಕಾಯಕ. ದೇಶಕ್ಕಾಗಿ ಕೆಲಸ ಮಾಡುತ್ತಿರುವುದು ನನಗೆ ಖುಷಿ ಕೊಟ್ಟಿದೆ ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here