ಒಂದು ತಿಂಗಳ ಸಂಬಳದ ಅರ್ಧ ಹಣವನ್ನು ಧಾನ ಮಾಡಿದ ಓಟಗಾರ್ತಿ ಹಿಮದಾಸ್

0
525

ಹಿಮಾ ದಾಸ್ ಎನ್ನುವ ಮಹಿಳೆ iaaf ಅಂತರಾಷ್ತ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ, ಚಿನ್ನದ ಪದಕ ಗೆಲ್ಲುವುದರ ಮೂಲಕ ಭಾರತ ದೇಶಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. ಈ ಹಂತದವರೆಗು ತಲುಪಬೇಕೆಂದರೆ ಅದು ಸುಲಭವಾದ ಮಾತಲ್ಲ. ಸಾಕಷ್ಟು ಏಳು ಬೀಳುಗಳ ನಂತರ ಕಮ್ ಬ್ಯಾಕ್ ಮಾಡಿದ್ದಾರೆ. ಪೊ ಲ್ಯಾಂಡ್ ನಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿದ್ದು, ಇವರ ವೃತ್ತಿ ಜೀವನದಲ್ಲಿ ಇದು ಒಂದು ಐತಿಹಾಸಿಕ ಗೆಲುವಾಗಿದೆ. ಮೂಲತಃ ಇವರು ಅಸ್ಸಾಂ ನವರು. ಇವರ ಕುಟುಂಬ ಅಕ್ಕಿಯನ್ನು ಮಾರುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಮಧ್ಯಮ ಕುಟುಂಬ ವರ್ಗದಿಂದ ಬಂದಿದ್ದರು, ಇಂದು ಇಡೀ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ.

ತಮ್ಮ ಹಳ್ಳಿಯಲ್ಲಿ ಬರಿಗಾಲಿನಲ್ಲಿ ಓಡುತ್ತಿದ್ದರು

ಕ್ರೀಡೆಯ ವಿಭಾಗದಲ್ಲಿ ಸಾಧನೆ ಮಾಡಬೇಕೆಂದು ಹೊರಟವರಿಗೆ ಇವರು ಮಾದರಿಯಾಗಿದ್ದಾರೆ. ಚಿನ್ನದ ಪದಕ ಗೆದ್ದಿರುವುದು ಭಾರತೀಯರ  ಮತ್ತು ಇವರ ಕುಟುಂಬಸ್ಥರ ಪಾಲಿಗೆ ಸಂತೋಷದ ಕ್ಷಣವಾಗಿದೆ. ವರ್ಲ್ಡ್ U 20 ಚಾಂಪಿಯನ್ ಶಿಪ್ ಗೆದ್ದಿರುವುದನ್ನು ಹೊರತು ಪಡಿಸಿ, ಕಳೆದ ತಿಂಗಳು ಏಶಿಯನ್ ಗೇಮ್ಸ್ ನಲ್ಲಿ ಮೂರು ಪದಕಗಳನ್ನು ಸಹ ಬಾಚಿಕೊಂಡಿದ್ದಾರೆ. ರಾಷ್ತ್ರೀಯ ದಾಖಲೆಗಳ ಪುಟದಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಬರೆದುಕೊಂಡಿದ್ದಾರೆ. ಒಂದೆ ರಾತ್ರಿಯಲ್ಲಿ ಈ ಕ್ರೀಡಾಪಟು ಹೆಚ್ಚು ಖ್ಯಾತಿ ಮತ್ತು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಒಂದಾನೊಂದು ಕಾಲದಲ್ಲಿ ತಮ್ಮ ಹಳ್ಳಿಯಲ್ಲಿ ಬರಿಗಾಲಿನಲ್ಲಿ ಓಡುತ್ತಿದ್ದರು, ಆದರೆ ಈಗ  ತಮ್ಮ ಶೂಗಳನ್ನು ಬ್ರಾಂಡ್ ಆಗಿ ಮಾಡಿದ್ದು ,ತನ್ನಲ್ಲಿದ್ದ ಸಾಮ್ಯರ್ಥತೆಯನ್ನು ನಿರೂಪಿಸಿದ್ದಾರೆ. ಇದಕ್ಕಿಂತ ದೊಡ್ಡ ಯಶಸ್ಸು ಬೇರೆಯಾವುದಿದೆ.

ಒಂದು ತಿಂಗಳ ಸಂಬಳದ ಅರ್ಧ ಹಣವನ್ನು ಅಸ್ಸಾಂ ಗೆ ನೀಡಿದ್ದಾರೆ

ಅಸ್ಸಾಮ್ ಪ್ರದೇಶದಲ್ಲಿ ಪ್ರವಾಹ ಬಂದಿರುವದರಿಂದ ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಆದ್ದರಿಂದ ಭಾರತ ದೇಶದ ಅತ್ಯಂತ ಕಿರಿಯ ಓಟಗಾರ್ತಿಯಾದ ಹಿಮಾ ದಾಸ್ ಅವರು ತಮ್ಮ ಒಂದು ತಿಂಗಳ ಸಂಬಳದಲ್ಲಿ, ಅರ್ಧದಷ್ಟು ಹಣವನ್ನು ಅಸ್ಸಾಂ ಪ್ರದೇಶಕ್ಕೆ ನೀಡುವುದರ ಮೂಲಕ ಸಹಾಯ ಮಾಡಿದ್ದಾರೆ. ಪ್ರವಾಹದಿಂದ ಸುಮಾರು 50 ಲಕ್ಷ ಜನ ಪರದಾಡುತ್ತಿದ್ದಾರೆ. ಹಿಮಾ ಹಣವನ್ನು ಭಾರತೀಯ ತೈಲ ನಿಗಮದ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸಿದ್ದಾರೆ. ನನ್ನ ಅಸ್ಸಾಂಗೆ ಸಹಾಯ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಿಮಾ ಇಂಡೈನ್ ತೈಲಾ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. 30 ಜಿಲ್ಲೆಗಳು ತೊಂದರೆಯಲ್ಲಿವೆ, ಆದ್ದರಿಂದ ದೊಡ್ಡ ವ್ಯಕ್ತಿಗಳು ಮತ್ತು ಕಾರ್ಪೊರೇಟರ್ ಗಳು ಅಸ್ಸಾಂ ಗೆ ನೆರವಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

46 ಲಕ್ಷಕ್ಕು ಅಧಿಕ ಜನ ಪ್ರವಾಹದಿಂದ ಒದ್ದಾಡುತ್ತಿದ್ದಾರೆ

ನಾನು ನನ್ನ ಕಡೆಯಿಂದ ಸಹಾಯ ಮಾಡಿದ್ದೇನೆ, ನೀವು ಕೂಡ ಅಸ್ಸಾಂ ಜನತೆಗೆ ಉಪಕಾರ ಮಾಡಿ ಎಂದು ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಭೂಕುಸಿತದಿಂದ 14 ಜನ ಮೃತ ಪಟ್ಟಿದ್ದರೆ,46 ಲಕ್ಷಕ್ಕು ಅಧಿಕ ಜನ ಪ್ರವಾಹದಿಂದ ಒದ್ದಾಡುತ್ತಿದ್ದಾರೆ. ಉತ್ತರ ಬಿಹಾರದ ಪ್ರದೇಶದಲ್ಲಿ 24 ಜನ ಮರಣ ಹೊಂದಿದ್ದಾರೆ. ಎನ್ನುವ ವಿಷಯ ವರದಿಗಳ ಮೂಲಕ ತಿಳಿದು ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here