15 ದಿನಗಳಲ್ಲಿ 4 ಚಿನ್ನದ ಪದಕ ಗೆದ್ದು, ದೇಶಕ್ಕೆ ಕೀರ್ತಿ ತಂದ ಹಿಮಾ ದಾಸ್

0
588
hima das

ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಅಂದ್ರೆ ಕೆಳವಳ ಮನೆಯಲ್ಲಿ ಅಡಿಗೆ ಮಾಡಿಕೊಂಡು ಇರಬೇಕು ಅಂತ ಹೇಳ್ತಿದ್ರು. ಆದ್ರೆ ಯಾವಾಗ ಹೆಣ್ಣು, ನಾನು ಕೂಡ ಪುರುಷರಷ್ಟೇ ಸಮರ್ಥಳು ಎಂದು ತೋರಿಸಿದರೋ ಆಗಿಂದ ಎಲ್ಲ ಕ್ಷೇತ್ರದಲ್ಲೂ ಹೆಣ್ಣು ದುಡಿಯುತ್ತಿದ್ದಾಳೆ. ಅಲ್ಲದೆ ಕ್ರೀಡೆಯಲ್ಲೂ ಸಹ ಮುಂದಿದ್ದರಷ್ಟೇ. ಹೌದು. ಈಗಾಗಲೇ ಕ್ರೀಡೆಯಲ್ಲಿ ಸಾಕಷ್ಟು ಮಹಿಳೆಯರು ಸಾಧನೆ ಮಾಡಿದ್ದಾರೆ. ಆದ್ರೆ ಈಗ ಇತ್ತೀಚಿಗೆ ಹೆಚ್ಚಾಗಿ ಹೆಸರು ಮಾಡುತ್ತಿರುವ ಒಬ್ಬರು ಅಂದ್ರೆ ಅದು ಹಿಮಾ ದಾಸ್. ಹೌದು. ಹಿಮಾ ದಾಸ್ ಸಾಧನೆ ಎಲ್ಲರನ್ನು ಬೇರಾವು ಮಾಡಿದೆ. ಯಾಕಂದ್ರೆ ಕಳೆದ ಕೆಲವು ದಿನಗಳಿಂದ, ಚಿನ್ನದ ಪದಕ ಪಡೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿದ್ವಿ. ಆದ್ರೆ ಈಗ 15 ದಿನಗಳಲ್ಲಿ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

15 ದಿನದಲ್ಲಿ 4 ಚಿನ್ನದ ಪದಕ ಗೆದ್ದ ಹಿಮಾ ದಾಸ್

ಹಿಮಾ ದಾಸ್ ಅಂದ್ರೆ ಓಟ ಅನ್ನೋದು ನೆನೆಪಾಗುತ್ತದೆ. ಹೌದು. ಇತ್ತೀಚಿಗೆ ಓಟದಲ್ಲಿ ಬಹಳಷ್ಟು ಗುರುತಿಸಿಕೊಂಡಿರೋರು ಅಂದ್ರೆ ಹಿಮಾ ದಾಸ್. ಹೌದು. ವೇಗದ ಓಟಗಾರ್ತಿ ಹಿಮಾದಾಸ್ ಜೆಕ್ ಗಣರಾಜ್ಯದಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದರು. ಭಾಗವಹಿಸಿ 200 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ 15 ದಿನಗಳಲ್ಲಿ ಬರೋಬ್ಬರಿ ನಾಲ್ಕು ಚಿನ್ನದ ಪದಕವನ್ನು ಪಡೆದುಕೊಂಡಿರುವ ಹೆಗ್ಗಳಿಕೆಗೆ ಹಿಮಾದಾಸ್ ಪಾತ್ರವಾಗಿದ್ದಾರೆ. ಜೊತೆಗೆ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ ಭಾರತದ ಮತ್ತೊಬ್ಬ ಓಟಗಾರ್ತಿ ವಿ.ಕೆ. ವಿಸ್ಮಯ ಅವರು 23.43 ಸೆಕೆಂಡ್‍ಗಳಲ್ಲಿ ಓಡುವ ಮೂಲಕ ಬೆಳ್ಳಿ ಪದಕವನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ದೇಶಕ್ಕೆ ಕೀರ್ತಿ ತಂದ ಹಿಮಾ ದಾಸ್

ಹಿಮಾ ದಾಸ್ ಓಟದಲ್ಲಿ ಚಿನ್ನದ ಪದಕಗಳನ್ನು ಪಡೆದು, ನಮ್ಮ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು. ಹಿಮಾ ದಾಸ್ ಜುಲೈ 2 ರಿಂದ ಇದುವರೆಗೂ ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. ಮೊದಲನೆಯದಾಗಿ ಯುರೋಪ್‍ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಮೊದಲ ಚಿನ್ನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಅದಾದ ನಂತರ ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾ ದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನ ಗೆದ್ದಿದ್ದರು. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಗೆದ್ದಿದ್ದರು. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಈಗ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ನಿಜಕ್ಕೂ ಹಿಮಾ ದಾಸ್ ಅವರ ಸಾಧನೆಗೆ ಮೆಚ್ಚಲೇ ಬೇಕು. ಯಾಕಂದ್ರೆ ಓಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಈಗ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹಾಗಾಗಿ ಇವರಿಗೆ ನಮ್ಮ ಕಡೆಯಿಂದ ಮುಂದಿನ ಭವಿಷ್ಯಕ್ಕೆ ಆಲ್ ದಿ ಬೆಸ್ಟ್ .

LEAVE A REPLY

Please enter your comment!
Please enter your name here