ಇಲ್ಲಿ ವಿನಾಯಕನನ್ನ ಪೂಜಿಸುವ ಬದಲು, ವಿನಾಯಕಿಯನ್ನ ಪೂಜಿಸುತ್ತಾರೆ. ಇಲ್ಲಿ ಹೆಣ್ಣು ಗಣೇಶವಿದೆ.

0
1113

ದೇವನೊಬ್ಬ ನಾಮ ಹಲವು ಅಂತ ನಾವು ಕೇಳಿದ್ದೀವಿ. ಅಂದ್ರೆ ದೇವರು ಇರುವನ್ನೊಬ್ಬ, ಅವನಿಗೆ ಬೇಕಾದ ಹೆಸರುಗಳನ್ನ ನಾವು ನೀಡಿದ್ದೇವೆ ಅನ್ನೋದು ಎಲ್ಲರ ಮಾತು. ನಮ್ಮಲ್ಲಿ ಕೋಟ್ಯಾಂತರ ದೇವರಿವೆ. ಒಬ್ಬೊಬ್ಬರು, ಒಂದೊಂದು ದೇವರನ್ನ ಆರಾಧಿಸುತ್ತಾರೆ.

ನಮ್ಮ ಕನ್ನಡಿಗರಿಗೆ ಮೊದಲ ದೇವರು ಅಂದ್ರೆ ವಿನಾಯಕ. ಯಾವುದೇ ಕೆಲಸ ಮಾಡಬೇಕೆಂದರೂ, ಮೊದಲಿಗೆ ವಿಘ್ನೇಶ್ವರನನ್ನ ಪೂಜಿಸಿ ನಂತರ ಆ ಕೆಲಸವನ್ನ ಮಾಡುತ್ತಾರೆ. ಯಾಕಂದ್ರೆ ನಾವು ಮಾಡುವ ಕೆಲಸಕ್ಕೆ ಯಾವುದೇ ವಿಘ್ನ ಬರಬಾರದು ಅಂತ. ಗಜಾನನ ಅಂದ್ರೆ ಗಂಡು ದೇವರು ಅಂತ ಎಲ್ಲರಿಗೂ ಗೊತ್ತು. ಆದ್ರೆ ಹೆಣ್ಣು ವಿನಾಯಕಿಯನ್ನ ನಾವು ನೋಡುವುದು ನಂಬಲಾಗದ ವಿಷಯವಾಗುತ್ತೆ. ಆದರೂ ಹೆಣ್ಣು ಗಣೇಶ ಇರುವುದು ನಿಜ.

ಇಲ್ಲಿ ಹೆಣ್ಣು ಗಣೇಶನನ್ನ ಪೂಜಿಸುತ್ತಾರೆ

ನೋಡುಗರಿಗೆ ಹಾಗೂ ಕೇಳುಗರಿಗೆ ಇದು ಆಶ್ಚರ್ಯದ ವಿಷಯವಾಗಿದೆ. ಹೆಣ್ಣು ಗಣೇಶ ಇರೋದಾದ್ರೂ ಉಂಟಾ ಅಂತ. ಹೌದು. ಇಲ್ಲಿನ ಜನರು ಪೂಜೆ ಮಾಡುವುದು ಹೆಣ್ಣು ಗಣೇಶನನ್ನೇ. ಸುಖಾಸನದಲ್ಲಿ ಕುಳಿತಿರುವ ಅಡ್ಡ ಕಾಲಿನ, ತೆಳ್ಳಗಿನ, ನಾಲ್ಕು ಕೈಗಳನ್ನ ಹೊಂದಿದ್ದು, ತನ್ನ ಮೇಲಿನ ಎಡಗೈಯಲ್ಲಿ ಯುದ್ಧದ ಕೊಡಲಿ ಮತ್ತು ಕೆಳಗಿನ ಎಡಗೈಯಲ್ಲಿ ಒಂದು ಶಂಖವನ್ನ ಹೊಂದಿದ್ದಾಳೆ. ಇದು ಹೆಣ್ಣು ಆನೆ ತಲೆಯ ದೇವತೆ.

ಇತಿಹಾಸ

ಹಿಂದೂ ಪೌರಾಣಿಕ ಕಥೆಯ ಪ್ರಕಾರ ದೇವತೆಗಳ ರಾಜ ಇಂದ್ರನು ಒಂದು ಶಾಪವನ್ನ ಪಡೆದುಕೊಂಡಿರುತ್ತಾನೆ. ಎಷ್ಟೋ ವರ್ಷಗಳ ನಂತರ ಇಲ್ಲಿರುವ ಮುಖ್ಯ ಲಿಂಗದ ಬಳಿ ತನ್ನ ಶಾಪವನ್ನ ಕಳೆದುಕೊಳ್ಳುತ್ತಾನೆ. ಅದಾದ ನಂತರ ದೇವಾಲಯಕ್ಕೆ  ಪ್ರತಿದಿನ ಮಧ್ಯರಾತ್ರಿಯಂದು ಅರ್ಧಾಜಮ ಪೂಜೆನಿರ್ವಹಿಸಲು ಇಂದ್ರನು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾನೆ. ಅಂತ ಸಮಯದಲ್ಲಿ ಇವನ ಕಣ್ಣಿಗೆ ಒಂದು ಹೆಣ್ಣು ಆನೆಯ ತಲೆ ಕಂಡು, ಒಂದು ಅಶಿರೀರವಾಣಿ ಬರುತ್ತದೆ. ಅದರಲ್ಲಿ, ನಾನು ಇಲ್ಲಿ ನೆಲೆಸಬೇಕೆಂದಿರುವೆ, ಹಾಗಾಗಿ ನನ್ನನ್ನ ಇಲ್ಲಿ ನೆಲೆಸುವಂತೆ ಮಾಡಬೇಕು ಎಂದು ಹೇಳುತ್ತದೆ. ಆಗ ಇಂದ್ರ ಅದನ್ನ ಇಲ್ಲಿ ನೆಲೆಸುತ್ತಾನೆ. ಅಂದಿನಿಂದ ಇದು ವಿನಾಯಕಿ ಎಂಬ ಹೆಸರನ್ನ ಪಡೆದಿದೆ.

ಅಂಧಕಾಸುರನ ಸಂಹಾರ

ಇಂದ್ರನಿಗೇನೋ ಹೆಣ್ಣಿನ ಆನೆ ತಲೆ ಸಿಗುತ್ತದೆ. ಆದ್ರೆ ಅದು ಎಲ್ಲಿಂದ ಬಂತು ಅಂತ ಅದರ ಮೂಲವನ್ನ ಹುಡುಕಲು ಹೊರಟಾಗ, ಇಂದ್ರನಿಗೆ ಸತ್ಯ ಏನು ಎಂಬುದು ತಿಳಿಯುತ್ತದೆ. ಶಿವನು ಅಂಧಕಾಸುರ ಎಂಬ ರಾಕ್ಷಸನನ್ನ ಸಂಹಾರ ಮಾಡಿರುತ್ತಾನೆ. ಅಂಧಕಾಸುರ ಎಷ್ಟು ಪ್ರಭಾವಿ ಎಂದರೆ ಆತನ ರಕ್ತದ ಒಂದು ಹನಿ ಕೆಳಗೆ ಬಿದ್ದರು, ಮತ್ತೆ ರಾಕ್ಷಸರ ಉಗಮವಾಗುತ್ತಿತ್ತು. ಅಷ್ಟು ಪ್ರಭಾವಶಾಲಿಯಾಗಿದ್ದ ಆ ರಾಕ್ಷಸ. ಹಾಗಾಗಿ ಅವನನ್ನ ಸಂಹಾರ ಮಾಡಲು ಅಂತ ಮುಂದಾದಾಗ, ಅವನ ರಕ್ತವನ್ನ ನೆಲಕ್ಕೆ ಬೀಳದೆ, ಹಾಗೆ ಬಾಯಿಯಲ್ಲಿ ನೆಕ್ಕಲು ಶಿವ ಈ ವಿನಾಯಕಿಯನ್ನ ಸೃಷ್ಟಿಸಿದ್ದಾನೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ದೇವಾಲಯ

ಈ ದೇವಾಲಯ ಸುಮಾರು 17ನೇ ಶತಮಾನದ್ದಾಗಿದೆ. ಈ ದೇವಾಲಯವು ವಾಸ್ತುಶಿಲ್ಪದಿಂದ ಕೂಡಿದ್ದು, ಏಳು ಅಂತಸ್ತಿನ ಬಿಳಿ ಗೋಪುರವು ದೂರದಿಂದ ಸುಂದರವಾಗಿ ಕಾಣುತ್ತದೆ. ಇದು ವಾಸ್ತುಶಿಲ್ಪ ಹಾಗೂ ಕಲ್ಲಿನ ಕೆಲಸದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಒಂದೇ ಕಲ್ಲಿನಿಂದ ಕೆತ್ತಲಾದ ನಾಲ್ಕು ಸಂಗೀತ ಕಂಬಗಳು ಇಲ್ಲಿವೆ. ಜೊತೆಗೆ ದೇವಾಲಯದಲ್ಲಿ 22 ಅಡಿ ಎತ್ತರವಿರುವ ಆಂಜನೇಯನ ವಿಗ್ರಹವಿದೆ.

ದೇವಾಲಯ ಇರೋದಾದ್ರೂ ಎಲ್ಲಿ?

ನಿಜಕ್ಕೂ ನೋಡುಗರನ್ನ ಆಶ್ಚರ್ಯ ಪಡಿಸುವಂತ ಈ ಹೆಣ್ಣು ವಿನಾಯಕಿ ಇರೋದಾದ್ರೂ ಎಲ್ಲಿ ಅಂತೀರಾ? ಈ ದೇವಾಲಯ ಇರುವುದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸುಚಿಂದ್ರಂನಲ್ಲಿ. ಈ ದೇವಾಲಯದ ಹೆಸರು ತನುಮಲಯಂ ಎಂದು. ಈ ದೇವಾಲಯಯಕ್ಕೆ ಹೋದರೆ ಹೆಣ್ಣು ಗಣೇಶನನ್ನ ನೋಡಬಹುದು. ಈ ರೀತಿ ಹೆಣ್ಣು ವಿನಾಯಕಿಯನ್ನ ಹೊಂದಿರುವುದು ಈ ಸ್ಥಳದ ವಿಶೇಷವಾಗಿದೆ.

ನಿಜಕ್ಕೂ ನಾವು ನಂಬಲಾಗದ ವಿಷಯಗಳು ಅಂದ್ರೆ ಇವೆ. ಯಾಕಂದ್ರೆ ನಾವು ವಿನಾಯಕ ಅಂತ ಹೇಳ್ತಿವೆ. ಆದ್ರೆ ಇಲ್ಲಿ ವಿನಾಯಕಿ ಇದೆ. ಇಲ್ಲಿ ಹೆಣ್ಣು ಗಣೇಶ ಇದೆ. ಆ ದೇವರನ್ನ ಪೂಜಿಸುತ್ತಾರೆ ಅಂದ್ರೆ ಯಾರಿಂದಲೂ ನಂಬಲಾರದ ವಿಷಯ. ಆದ್ರೆ ಅದು ಸತ್ಯ

 

LEAVE A REPLY

Please enter your comment!
Please enter your name here