ಜಗತ್ತಿನಲ್ಲಿರೋ ಹೆಣ್ಣು ದೇವತೆಗಳಲ್ಲಿ, ಈಗ ಶನಿ ದೇವರು ಸಹ ಒಂದಾಗಿದೆ. ಇಲ್ಲಿದೆ ಸ್ರ್ತೀ ಶನಿ ದೇವರು

0
1204
shani devaru hennu

ದೇವರು ಅಂದ್ರೆ ಭಕ್ತಿಯ ಜೊತೆ ಭಯವು ಇರುತ್ತೆ. ಯಾಕಂದ್ರೆ, ಒಳ್ಳೆ ಕೆಲಸಗಳನ್ನ ಮಾಡಿದಾಗ ಕಾಪಾಡುವ ದೇವರು, ಕೆಟ್ಟ ಕೆಲಸಗಳನ್ನ ಮಾಡಿದಾಗ ಶಿಕ್ಷೆ ನೀಡುತ್ತಾನೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿ ಯಾವ ಕೆಲಸಗಳನ್ನ ಮಾಡಬೇಕಾದರು, ಯೋಚನೆ ಮಾಡಿ, ನಂತರ ಮಾಡುತ್ತಾರೆ. ಕೆಲವು ದೇವರು ಶಾಂತ ರೂಪವನ್ನ ಪಡೆದಿದ್ದರೆ, ಇನ್ನೂ ಕೆಲವು ದೇವರು ಕೋಪದಲ್ಲೇ ಮುಳುಗಿರುತ್ತವೆ. ಹೌದು. ಅದರಲ್ಲೂ ಶನಿ ದೇವರು ಅಂದ್ರೆ, ಎಂಥವರು ನಡುಗಿ ಹೋಗುತ್ತಾರೆ. ಯಾಕಂದ್ರೆ ಆ ದೇವರಿಗೆ ಅಷ್ಟು ಕೋಪವಿದೆ ಎಂದು.

ಹೌದು. ಶನಿ ದೇವರ ಕೋಪಕ್ಕೆ ಸರ್ವಲೋಕವೇ ಹೆದರುತ್ತದೆ. ಯಾಕಂದ್ರೆ, ಆ ದೇವರ ಕೋಪ ಅಥವಾ ಕಣ್ಣು ನಮ್ಮ ಮೇಲೆ ಬಿದ್ದರೆ, ನಮ್ಮ ಜೀವನವೇ ಸರ್ವನಾಶವಾಗುತ್ತದೆ ಎಂದು. ಹಾಗಾಗಿ ಈ ದೇವರ ವಿಚಾರದಲ್ಲಿ ಮಾತ್ರ, ಯಾರೊಬ್ಬರೂ ತಪ್ಪು ಕೆಲಸವನ್ನಿರಲಿ, ಕೆಟ್ಟ ಯೋಚನೆಯನ್ನು ಮಾಡುವುದಿಲ್ಲ. ಸಾಮಾನ್ಯವಾಗಿ ಶನಿ ದೇವರು ಅಂದ್ರೆ, ಗಂಡು ದೇವರು ಅಂತ ಎಲ್ಲರಿಗೂ ಗೊತ್ತು. ಆದ್ರೆ ಈ ಊರಲ್ಲಿ ಮಾತ್ರ, ಶನಿ ದೇವರನ್ನ, ಹೆಣ್ಣಿನ ರೂಪದಲ್ಲಿ ಪೂಜೆ ಮಾಡುತ್ತಾರೆ. ಹೌದು. ಇಲ್ಲಿನ ಶನಿ ದೇವರು ಸ್ತ್ರೀ ರೂಪ ಪಡೆದುಕೊಂಡಿದೆ.

ಸ್ತ್ರೀ ರೂಪ ಪಡೆದಿರುವ ಶನಿ ದೇವರು

ಶನಿ ದೇವರು ಅಂದ್ರೆ, ಗಂಡು ದೇವರು ಅಂತ ಎಲ್ಲರಿಗೂ ಗೊತ್ತು. ಆದ್ರೆ ಈ ಊರಲ್ಲಿ ಮಾತ್ರ ಆ ದೇವರು ಸ್ತ್ರೀ ರೂಪ ಪಡೆದುಕೊಂಡಿದೆ. ಇದನ್ನ ಕೇಳಿದರೆ, ಎಂಥವರಿಗೂ ಒಂದು ಕ್ಷಣ ಆಶ್ಚರ್ಯವಾಗುತ್ತೆ. ಆದ್ರೆ ಇದು ಸತ್ಯ. ಹೌದು. ಈ ಊರಲ್ಲಿ ಶನಿ ದೇವರನ್ನ ಹೆಣ್ಣು ದೇವರು ಎಂದು ಪೂಜೆ ಮಾಡುತ್ತಾರೆ. ಇವರಿಗೆ ಗಂಡು ಶನಿ ದೇವರು ಇದೆ ಅಂತ ಗೊತ್ತು, ಆದರೂ ಇವರು ಹೆಣ್ಣಲ್ಲೇ ಶನಿ ದೇವರನ್ನ ಕಂಡುಕೊಂಡು, ಪೂಜೆ ಮಾಡುತ್ತಿದ್ದಾರೆ. ಇದು ಇಂದು, ನಿನ್ನೆಯಿಂದ ನಡೆಯುತ್ತಿಲ್ಲ. ಶತಮಾನಗಳಿಂದಲೇ ನಡೆದುಕೊಂಡು ಬಂದಿದೆ. ಹಾಗಾದ್ರೆ ಇಲ್ಲಿ ಶನಿ ದೇವರನ್ನ, ಸ್ತ್ರೀ ರೂಪದಲ್ಲಿ ಪೂಜೆ ಮಾಡುವುದಾದರೂ, ಏಕೆ ಎಂದು ತಿಳಿಸುತ್ತೀವಿ ನೋಡಿ.

ಇತಿಹಾಸ

ಪುರಾಣಗಳ ಪ್ರಕಾರ, ಒಮ್ಮೆ ಶನಿ ದೇವರ ಕ್ರೋಧ ದೃಷ್ಟಿ ಭೂಮಿಯ ಮೇಲೆ ಹಾಗೂ ದೇವಲೋಕದ ಮೇಲೆ ಬೀಳುತ್ತದೆ. ಹೌದು. ದೇವರ ಕೋಪದಿಂದ ಸಕಲ ಚರಾಚರ ಜೀವಿಗಳು ಕಷ್ಟವನ್ನ ಅನುಭವಿಸೋದಕ್ಕೆ ಶುರುವಾಗುತ್ತೆ. ಅದನ್ನ ನೋಡಿದ, ದೇವತೆಗಳು ಸಹಾಯ ಮಾಡಲು ಮುಂದಾದರೆ, ಅವರ ಮೇಲೂ ತನ್ನ ಕೋಪವನ್ನ ಶನಿ ದೇವರು ತೋರಿಸುತ್ತಿತ್ತು. ಹಾಗಾಗಿ ಯಾರಿಂದಲೂ ಏನು, ಮಾಡಲು ಆಗಿರುವದಿಲ್ಲ. ಆದ್ರೆ ಶನಿ ದೇವರು ಇಷ್ಟೆಲ್ಲಾ ಕೋಪ ಮಾಡಿಕೊಂಡರು, ಆ ದೇವರಿಗೂ ಒಬ್ಬರನ್ನ ಕಂಡ್ರೆ, ಸ್ವಲ್ಪ ಭಯವಿದೆ. ಹೌದು. ಆಂಜನೇಯ ಎಂದರೆ, ಶನಿ ದೇವರು ಹೆದರುತ್ತದೆ. ಹಾಗಾಗಿ ಶನಿ ದೇವರ ಉಪಟಳವನ್ನ ನೋಡಿದ ಆಂಜನೇಯ, ಶನಿ ದೇವನನ್ನ ಹುಡುಕಿ ಹೊರಡುತ್ತದೆ. ಈ ವಿಷಯ ತಿಳಿದ, ಶನಿ ದೇವನು, ಆಂಜನೇಯನ ಕೋಪಕ್ಕೆ ಗುರಿಯಾದರೆ, ನಾನು ಬದುಕಲು ಆಗುವುದಿಲ್ಲ ಎಂದು, ಸ್ತ್ರೀ ರೂಪ ಧರಿಸುತ್ತದೆ.

ಸ್ತ್ರೀಯರ ಮೇಲೆ ಪ್ರಹಾರ ಮಾಡದ ಆಂಜನೇಯ

ಆಂಜನೇಯ ಬ್ರಹ್ಮಚಾರಿಯಾಗಿರುವುದರಿಂದ, ಸ್ತ್ರೀಯರ ಮುಂದೆಯೂ ಸಹ ಹೋಗುವುದಿಲ್ಲ. ಹೀಗಿರುವಾಗ, ಶನಿ ದೇವರು ಸ್ತ್ರೀ ರೂಪ ತಾಳುತ್ತದೆ. ಯಾಕಂದ್ರೆ, ಆಂಜನೇಯ ಸ್ತ್ರೀಯರ ಮೇಲೆ ಪ್ರಹಾರ ಮಾಡುವುದಿಲ್ಲ ಎಂದು. ಯಾಕಂದ್ರೆ, ನಾನು ನನ್ನ ರೂಪದಲ್ಲೇ ಇದ್ದರೇ, ಆಂಜನೇಯ ನನ್ನ ಮೇಲೆ ಪ್ರಹಾರ ಮಾಡುವುದಂತೂ ನಿಜ. ಆಂಜನೇಯನ ಕೋಪಕ್ಕೆ ಗುರಿಯಾದರೆ, ನಾನು ಬದುಕಲು ಆಗುದಿಲ್ಲ ಎಂದು ಸ್ತ್ರೀ ರೂಪ ತಾಳುತ್ತದೆ. ಇದು ಇಲ್ಲಿನ ಪುರಾಣವಾಗಿದೆ. ಹಾಗಾಗಿ ಇಲ್ಲಿ ಶನಿ ದೇವರನ್ನ ಸ್ತ್ರೀ ರೂಪದಲ್ಲಿ ಪೂಜಿಸುತ್ತಾರೆ. ಈಗಲೂ ಇಲ್ಲಿ, ಶನಿ ದೇವರು, ಆಂಜನೇಯ ದೇವರ ಪಾದಗಳಡಿಯಲ್ಲಿದೆ.

ದೇವಾಲಯ ಇರೋದಾದ್ರೂ ಎಲ್ಲಿ?

ನಿಜಕ್ಕೂ ಈ ಕಥೆಯನ್ನ ಕೇಳಿದರೆ, ಆಶ್ಚರ್ಯ ಹಾಗೂ ಭಯ ಎರಡು ಆಗುತ್ತೆ. ಯಾಕಂದ್ರೆ, ಇಡೀ ದೇವಲೋಕ ಹಾಗೂ ಮಾನವ ಲೋಕವೇ ಹೆದರುವ ದೇವರು ಅಂದ್ರೆ, ಶನಿ ದೇವರು. ಆದರೆ ಶನಿ ದೇವರು ಮಾತ್ರ, ಆಂಜನೇಯನಿಗೆ ಹೆದರುತ್ತದೆ. ಅಷ್ಟಕ್ಕೂ ಈ ದೇವಾಲಯ ಇರೋದು, ಗುಜರಾತಿನ ಸಾರಂಗಪುರದಲ್ಲಿ. ಇನ್ನು ಈ ದೇವಾಲಯದ ಹೆಸರು ಕಷ್ಟ ಭಂಜನ ಮಂದಿರ ಎಂದು. ಭಾರತದಲ್ಲಿ ಇಲ್ಲಿ ಮಾತ್ರ ಶನಿ ದೇವರನ್ನ ಸ್ತ್ರೀ ರೂಪದಲ್ಲಿ ಪೂಜೆ ಮಾಡುತ್ತಾರೆ. ಈ ದೇವಾಲಯದಲ್ಲಿ ಆಂಜನೇಯ ದೇವರು ಚಿನ್ನ ಹಾಗೂ ಬೆಳ್ಳಿಯಿಂದ ಸ್ಥಾಪಿತವಾಗಿರುವ ಸಿಂಹಾಸನದ ಮೇಲೆ ಕುಳಿತರೆ, ಶನಿ ದೇವರು ಅದರ ಪಾದಗಳಡಿಯಲ್ಲಿದೆ.

ಒಟ್ಟಿನಲ್ಲಿ ಈ ದೇವಾಲಯದ ಪುರಾಣ ಕೇಳಿದರೆ, ಒಂದು ಕ್ಷಣ ಮೈ ರೋಮಾಂಚನವಾಗುತ್ತದೆ. ಆದ್ರೆ ಇದು ಸತ್ಯ. ಸ್ತ್ರೀ ರೂಪದಲ್ಲಿರುವ ಶನಿ ದೇವರನ್ನ ಇಲ್ಲಿನ ಜನರು ಅಪಾರವಾಗಿ ನಂಬಿದ್ದಾರೆ. ಈ ದೇವಾಲಯಕ್ಕೆ ಭಾರತದ ಮೂಲೆ ಮೂಲೆಯಿಂದ ಭಕ್ತರು ಬಂದು, ದರ್ಶನ ಪಡೆಯುತ್ತಾರೆ.

LEAVE A REPLY

Please enter your comment!
Please enter your name here