ಇಲ್ಲಿ ಹೆಣ್ಣು ಮಗು ಜನಿಸಿದಾಗ, ಅದರ ಪರಿಣಾಮ ತಿಳಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ

0
896
hennina mahatva

ಹೆಣ್ಣು ಅಂದ್ರೆ ಸಾಕು ಅನೇಕರು ಬಹಳಷ್ಟು ನಿಕೃಷ್ಟವಾಗಿ ಕಾಣುತ್ತಾರೆ. ಜೊತೆಗೆ ಇನ್ನು ಕೆಲವರು ಹೆಣ್ಣು ಹುಟ್ಟಿದೆ ಎಂದು ತಿಳಿದ ಕೂಡಲೇ, ಆ ಮಗುವನ್ನು ಸಾಯಿಸುವುದು ಅಥವಾ ಕಸದ ತೊಟ್ಟಿಗೆ ಎಸೆಯುವುದನ್ನು ಮಾಡುತ್ತಾರೆ. ಯಾಕಂದ್ರೆ ಅವರ ಪಾಲಿಗೆ ಹೆಣ್ಣು ಎನ್ನುವುದು ಒಂದು ರೀತಿ ಶಾಪವಾಗಿರುತ್ತದೆ. ಹಾಗಾಗಿ ಹೆಣ್ಣು ಅಂದ್ರೆ ಕಸಕ್ಕಿಂತ ಕೀಳಾಗಿ ಕಾಣುತ್ತಾರೆ. ಆದರೆ ನಾವು ಸಹ ಒಂದು ಹೆಣ್ಣಿಂದಲೇ ಜನಿಸಿರುವುದು ಎನ್ನುವುದನ್ನು ಮರೆತಿರುತ್ತಾರೆ. ಆದರೆ ಇಲ್ಲೊಂದು ಇರಿನಲ್ಲಿ ಹೆಣ್ಣಿಗಿರುವಷ್ಟು ಮಹತ್ವ ಬೇರೆ ಯಾವುದಕ್ಕೂ ಇಲ್ಲ. ಹೌದು. ಈ ಊರಿನಲ್ಲಿ ಹೆಣ್ಣೇ ಶ್ರೇಷ್ಠ. ಮೊದಲ ಆದ್ಯತೆ ಹೆಣ್ಣಿಗೆ. ನಂತರ ಉಳಿದ ವಿಷಯಗಳಿಗೆ. ನಿಜಕ್ಕೂ ಈ ಊರಿನಲ್ಲಿ ಹೆಣ್ಣಿಗೆ ನೀಡುವ ಆದ್ಯತೆಯನ್ನು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಯಾಕಂದ್ರೆ ಇಲ್ಲಿ ಹೆಣ್ಣು ಒಂದು ರೀತಿ ದೇವತೆಯಾಗಿದ್ದಾಳೆ. ಜೊತೆಗೆ ಈ ಊರಿನಲ್ಲಿ ಹೆಣ್ಣುಮಗು ಜನಿಸಿದರೆ, ಹಬ್ಬದ ವಾತಾವರಣ ಮನೆ ಮಾಡಿರುತ್ತದೆ.

ಹೆಣ್ಣು ಮಗು ಜನಿಸಿದರೆ, ಊರಿಗೆ ಊರೇ ಸಂಭ್ರಮಿಸುತ್ತದೆ

ಈ ಊರಿನಲ್ಲಿ ಹೆಣ್ಣು ಮಗು ಜನಿಸಿದರೆ, ಊರಿಗೆ ಊರೇ ಸಂಭ್ರಮ ಪಡುತ್ತದೆ. ಹೌದು. ರಾಜಸ್ಥಾನದ ರಾಜ್ ಸಮಂದ್ ತಾಲೂಕಿನಲ್ಲಿ ಪಿಪ್ಲಂತ್ರಿ ಎಂಬ ಗ್ರಾಮವಿದೆ. ಈ ಊರಿನಲ್ಲಿ ಹೆಣ್ಣು ಅಂದ್ರೆ ಬಹಳ ಮಹತ್ವ ನೀಡುತ್ತಾರೆ. ಹಾಗಾಗಿ ಇಲ್ಲಿ ಹೆಣ್ಣು ಮಗು ಜನಿಸಿದರೆ, ವಿಶೇಷ ಆಚರಣೆಯನ್ನು ಆಚರಿಸುತ್ತಾರೆ. ಹೌದು. ಯಾರಿಗೆ ಹೆಣ್ಣು ಮಗು ಜನಿಸಿದರು, ಅದರ ಸಂತೋಷಕ್ಕಾಗಿ ಊರಿನಲ್ಲಿ 111 ಮರಗಳನ್ನು ನೆಡುತ್ತಾರೆ. ಯಾಕಂದ್ರೆ ಆ ಮರಗಳು ಬೆಳೆದ ರೀತಿಯಲ್ಲೇ, ಆ ಹೆಣ್ಣು ಮಗಳು ಕೂಡ ಸಮಾಜದಲ್ಲಿ ಚೆನ್ನಾಗಿ ಬೆಳೆಯಬೇಕು ಎನ್ನುವುದು ಇವರ ಆಸೆ. ಹಾಗಾಗಿ ಮಗು ಹುಟ್ಟಿದ ಕೂಡಲೇ, ಆ ಮಗುವಿನ ಪರವಾಗಿ 111 ಗಿಡಗಳನ್ನು ನೆಡುತ್ತಾರೆ. ಈ ರೀತಿ ಇಲ್ಲಿಯವರೆಗೂ ಆ ಊರಿನಲ್ಲಿ ಸುಮಾರು 21 ಮಿಲಿಯನ್ ಮರಗಳನ್ನು ನೆಡಲಾಗಿದೆಯಂತೆ.

ಮಗುವಿಗಾಗಿ ಊರಿನಲ್ಲಿ ದೇಣಿಗೆ ಸಂಗ್ರಹಿಸುತ್ತಾರೆ

ಇನ್ನು ಈ ಊರಿನಲ್ಲಿ ಹೆಣ್ಣು ಮಗು ಹುಟ್ಟಿದ ಕೂಡಲೇ, ಪ್ರತಿಯೊಬ್ಬರ ಮನೆಯಲ್ಲಿ ದೇಣಿಗೆ ಸಂಗ್ರಹಿಸುತ್ತಾರೆ. ಹೌದು.ಈ ಊರಿನಲ್ಲಿ ಇರುವಷ್ಟು ಮನೆಗಳಿಂದಲೂ ದಿನಿಗೆ ಸಂಗ್ರಹಿಸುತ್ತಾರೆ. ಅದು ಸುಮಾರು 21 ಸಾವಿರದಷ್ಟು ಆಗುತ್ತದೆ. ನಂತರ ಅವರ ತಂದೆ, ತಾಯಿ ಬಳಿಯಿಂದ 10 ಸಾವಿರ ರೂ ನಗದನ್ನು ಪಡೆದು, ಒಟ್ಟು ಹಣ 31 ಸಾವಿರವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗುತ್ತದೆ. 20 ವರ್ಷಗಳ ಫಿಕ್ಸ್ಡ್ ಡೆಪೋಸಿಟ್ ಮಾಡಲಾಗುತ್ತದೆ. ಆ ಹಣದಿಂದ ಬರುವ ಬಡ್ಡಿಯಲ್ಲೇ ಮಗುವಿನ ಶಿಕ್ಷಣ, ಮದುವೆ ವೆಚ್ಚ ಎಲ್ಲವನ್ನೂ ಭರಿಸಲಾಗುತ್ತದೆ. ಯಾಕಂದ್ರೆ ಹೆಣ್ಣು ಮಗಳ ವಿದ್ಯಾಭ್ಯಾಸ ಹಾಗು ಮಾಡುವೆ ಬಹಳ ಖರ್ಚಾಗುತ್ತದೆ. ಹೀಗಿರುವಾಗ ಅದನ್ನು ಒಂದೇ ಸಾರಿ ತಂದೆ, ತಾಯಿಯಿಂದ ಭರಿಸಲು ಕಷ್ಟವಾಗುತ್ತದೆ. ಹಾಗಾಗಿ ಅವರಿಗೆ ಕಷ್ಟವಾಗಬಾರದೆಂದು ಈ ರೀತಿಯ ಉಪಾಯವನ್ನು ಮಾಡಿದ್ದಾರೆ.

20 ವರ್ಷ ತುಂಬುವವರೆಗೂ ಮದುವೆ ಮಾಡುವಂತಿಲ್ಲ

ಈ ಊರಿನಲ್ಲಿ ಇದೆಲ್ಲದರ ಜೊತೆಗೆ ಮತ್ತೊಂದು ವಿಶೇಷವಿದೆ. ಹೌದು. ಹೆಣ್ಣು ಮಗು ಜನಿಸಿದಾಗ ಮರ ನೆಡುತ್ತಾರೆ, ಜೊತೆಗೆ ದೇಣಿಗೆ ಸಂಗ್ರಹಿಸಿ ಹಣ ಸಹಾಯ ಮಾಡುತ್ತಾರೆ. ಅದರ ಜೊತೆಗೆ ಮತ್ತೊಂದು ನಿಯಮ ಕೂಡ ಈ ಊರಿನಲ್ಲಿ ಇದೆ. ಅದೇನಂದ್ರೆ, ಮಗು ಹುಟ್ಟಿ, ಆಕೆಗೆ 20 ವರ್ಷ ತುಂಬುವವರೆಗೂ ಮದುವೆ ಮಾಡುವಂತಿಲ್ಲ. ಯಾಕಂದ್ರೆ ಆ ಹುಡುಗಿ ಎಷ್ಟು ಓದುತ್ತಾಳೋ ಅಲ್ಲಿಯವರೆಗೂ ಓದಿಸಬೇಕು. ಯಾವುದೇ ಕಾರಣಕ್ಕೂ ಮದುವೆ ಎನ್ನುವುದು ನಡೆಯುವಂತಿಲ್ಲ. ಹಾಗಾಗಿ ಮಗು ಹುಟ್ಟಿದಾಗ, ಆ ಮಗುವಿಗೆ 20 ವರ್ಷ ತುಂಬುವವರೆಗೂ ಮದುವೆ ಮಾಡುವ ಆಗಿಲ್ಲ ಎನ್ನುವ ಪತ್ರಕ್ಕೆ ಹೆತ್ತವರ ಬಳಿ ಸಹಿ ಹಾಕಿಸಿಕೊಳ್ಳುತ್ತಾರೆ. ಜೊತೆಗೆ ಈ ಊರಿನಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದೆಯಂತೆ.

ಈ ರೀತಿ ಈ ಊರಿನಲ್ಲಿ ಒಂದು ಹೆಣ್ಣು ಮಗು ಜನಿಸಿದರೆ, ಅಥವಾ ಒಂದು ಹೆಣ್ಣಿಗೆ ಬಹಳಷ್ಟು ಮಹತ್ವ ನೀಡುತ್ತಾರೆ. ಯಾಕಂದ್ರೆ ಒಂದು ಹೆಣ್ಣಿನಿಂದಲೇ ಎಲ್ಲವು ಎಂಬುದನ್ನು ಇವರು ತಿಳಿದಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಹೆಣ್ಣಿಗೆ ಅನ್ಯಾಯವಾಗಬಾರದು ಎನ್ನುವುದು ಇವರ ಅಭಿಪ್ರಾಯ. ಹಾಗಾಗಿ ಈ ರೀತಿಯ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here