ಕಚೇರಿಯಲ್ಲೂ ಹೆಲ್ಮೆಟ್ ಧರಿಸಿ ಕೆಲಸ ಮಾಡುತ್ತಿರುವ ಸಿಬ್ಬಂದಿ. ಇದು ಯಾವ ಊರಿನ ರೂಲ್ಸ್ ಸ್ವಾಮಿ?

0
252
helmet in office

ಸರ್ಕಾದವರು ಹೆಲ್ಮೆಟ್ ಕಡ್ಡಾಯ ಮಾಡಿದ ಮೇಲೆ, ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸುತ್ತಿದ್ದಾರೆ. ಯಾಕಂದ್ರೆ ಅತಿಯಾದ ದಂಡವನ್ನು ಕಟ್ಟಲಾಗದೆ, ಜನರು ಸಹ ಬದಲಾಗುತ್ತಿದ್ದಾರೆ. ಹೌದು. ಮೊದಲು ಜನರು ಸರ್ವೇ ಸಾಮಾನ್ಯವಾಗಿ ಬೈಕ್ ಓಡಿಸುತ್ತಿದ್ದರು. ನಂತರ ಸವಾರನಿಗೆ ಹೆಲ್ಮೆಟ್ ಹಾಕಬೇಕೆಂಬ ನಿಯಮ ಜಾರಿಗೆ ಬಂದಿತು. ಬಳಿಕ ಹಿಂಬದಿಯ ಸವಾರನು ಸಹ ಹೆಲ್ಮೆಟ್ ಧರಿಸಬೇಕೆಂಬ ನಿಯಮ ತಂದರು. ಈಗ ಹೇಗಾಗಿದೆ ಅಂದ್ರೆ ಹೆಲ್ಮೆಟ್ ಇಲ್ಲದೆ ರಸ್ತೆಗೆ ಇಳಿಯುವ ಆಗಿಲ್ಲ ಎನ್ನುವ ರೀತಿ ಮಾಡಿದ್ದಾರೆ. ಒಂದು ವೇಳೆ ಹೆಲ್ಮೆಟ್ ಹಾಕದಿದ್ದರೆ, ಹೊಸ ಗಾಡಿಯನ್ನು ಕೊಂಡುಕೊಳ್ಳುವಷ್ಟು ಹಣವನ್ನು, ದಂಡವಾಗಿ ಪಡೆಯುತ್ತಿದ್ದಾರೆ. ಹಾಗಾಗಿ ಜನರು ಭಯದಲ್ಲಿ ಹೆಲ್ಮೆಟ್ ಹಾಕುತ್ತಿದ್ದಾರೆ. ಸಾಮಾನ್ಯವಾಗಿ ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕುವುದನ್ನು ನೋಡಿದ್ವಿ. ಆದ್ರೆ ಇಲ್ಲೊಂದು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗು ಸುಬ್ಬಂದಿಗಳು ಸಹ ಕೆಲಸ ಮಾಡುವಾಗ ಹೆಲ್ಮೆಟ್ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಚೇರಿಯಲ್ಲಿಯೂ ಹೆಲ್ಮೆಟ್ ಧರಿಸಿ ಕೆಲಸ ಮಾಡುವ ಸಿಬ್ಬಂದಿ

ಗಾಡಿ ಓಡಿಸುವ ಸವಾರ ತಮ್ಮ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಹೆಲ್ಮೆಟ್ ಹಾಕುತ್ತಾನೆ. ಆದ್ರೆ ಇಲ್ಲಿನ ಸಿಬ್ಬಂದಿಗಳು ಕಚೇರಿಯಲ್ಲಿ ಕೆಲಸ ಮಾಡುವಾಗಲೂ ಹೆಲ್ಮೆಟ್ ಧರಿಸಿದ್ದಾರೆ. ಆದ್ರೆ ಈ ರೀತಿ ಹೆಲ್ಮೆಟ್ ಧರಿಸಿ ಕೆಲಸ ಮಾಡುವುದಕ್ಕೂ ಒಂದು ಕಾರಣವೂ ಇದೆ. ಹೌದು. ಈ ಕಚೇರಿ ಇರುವುದು ಉತ್ತರ ಪ್ರದೇಶದ ಬಾಂಡಾದಲ್ಲಿ. ಇನ್ನು ಇದೊಂದು ವಿದ್ಯುತ್ ಕಚೇರಿಯಾಗಿದೆ. ಈ ಕಚೇರಿಯಲ್ಲಿನ ಪ್ರತಿಯೊಬ್ಬ ಕೆಲಸಗಾರನು ಸಹ ಹೆಲ್ಮೆಟ್ ಧರಿಸಿದ್ದಾರೆ. ಯಾಕಂದ್ರೆ, ಅಲ್ಲಿನ ಮೇಲ್ಛಾವಣಿಯಿಂದ ಉದುರುವ ಸಿಮೆಂಟ್‌ನಿಂದ ತಲೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ವಿದ್ಯುತ್ ವಿಭಾಗದ ನೌಕರರು ಕಚೇರಿಯೊಳಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ.

ಜೀವ ಉಳಿಸಿಕೊಳ್ಳುವ ಸಲುವಾಗಿ ಈ ನಿರ್ಧಾರ

ಇನ್ನು ಇಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಅನೇಕ ದಿನಗಳಿಂದಲೂ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರಂತೆ. ಯಾಕಂದ್ರೆ, ಕಚೇರಿಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಇದನ್ನು ದುರಸ್ತಿಗೊಳಿಸಿ ಎಂದು ಮನವಿ ಮಾಡಿದರೂ ಈ ಬಗ್ಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮೇಲ್ಛಾವಣಿಯಿಂದ ಸಿಮೆಂಟ್ ತುಣುಕುಗಳು ಉದುರಿ ಒಂದಷ್ಟು ಸಿಬ್ಬಂದಿ ತಲೆಗೆ ಗಂಭೀರ ಗಾಯಗಳಾಗಿವೆ. ಇದಾದ ನಂತರದಲ್ಲಿ ಎಚ್ಚೆತ್ತುಕೊಂಡಿರುವ ನೌಕರರು ಕಚೇರಿಯಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ. ಜೊತೆಗೆ ಫೈಲ್ ಗಳನ್ನೂ ಇಡಲು ಸ್ಥಳವಿಲ್ಲ. ಮಳೆ ಬಂದರೆ, ಫೈಲ್ ಗಳೆಲ್ಲ ನೆನೆದು ಹೋಗುತ್ತವೆ ಎಂದು ರೊಟ್ಟಿನಲ್ಲಿ ಮುಚ್ಚಿಡುತ್ತಾರೆ. ಈ ರೀತಿ ಅಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಜಕ್ಕೂ ಕೆಲವೊಂದು ಘಟನೆಗಳನ್ನು ನೋಡಿದಾಗ ಏನು ಹೇಳಬೇಕೆಂದು ತಿಳಿಯುವುದಿಲ್ಲ. ಯಾಕಂದ್ರೆ ಗಾಡಿ ಓಡಿಸಲು ಮಾತ್ರ ಕಡ್ಡಾಯವಾಗಿದ್ದ ಹೆಲ್ಮೆಟ್ ಅನ್ನು ಸರ್ಕಾರಿ ಅಧಿಕಾರಿಗಳು ಈಗ ಕಚೇರಿಯಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಉಪಯೋಗಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here