ಬಹಳ ವರ್ಷಗಳ ನಂತರ ಮತ್ತೆ ಒಂದಾದ ಚಿತ್ರರಂಗದ ಮಾಂತ್ರಿಕ ಜೋಡಿ

0
539

ಸದ್ಯಕ್ಕೆ ನವರಸ ನಾಯಕ ಜಗ್ಗೇಶ್ ಅವರು ಬ್ಯಾಕ್ ಟು ಬ್ಯಾಕ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಕಿರುತೆರೆಯಲ್ಲು ನವರಸನಾಯಕ ಮಿಂಚುತ್ತಿದ್ದು, ಈಗ ಮತ್ತೊಂದು ಚಿತ್ರಕ್ಕೆ ಹಸಿರು ಚಿಹ್ನೆಯನ್ನು ನೀಡಿದ್ದಾರೆ. ಗುರುಪ್ರಸಾದ್ ಮತ್ತು ಜಗ್ಗೇಶ್ ಅವರ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಬರಲು ಸಜ್ಜಾಗಿದೆ. ಎದ್ದೇಳು ಮಂಜುನಾಥ, ಮಠ, ಅಂತಹ ಕಾಮಿಡಿ ಚಿತ್ರಗಳನ್ನು ಈ ಹಿಂದೆ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರು ನೀಡಿದ್ದರು. ಮತ್ತೊಮ್ಮೆ ಈ ಜೋಡಿ ಒಂದಾಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣವು ಸಹ ಶುರುವಾಗಿದೆ. ಕಾರಣಾಂತರಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಅದನೆಲ್ಲ ಪಕ್ಕಕ್ಕೆ ಇತ್ತು ಸಿನಿಮಾ ಮೂಲಕ ಮೋಡಿ ಮಾಡಲು ಸಿದ್ದರಾಗಿದ್ದಾರೆ.

ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿ ಗೆ ತಲುಪಿಸುವೆ

ಜಗ್ಗೇಶ್ ಹಾಗು ಗುರುಪ್ರಸಾದ್ ಮಾಡುತ್ತಿರುವ ಹೊಸ ಚಿತ್ರಕ್ಕೆ ರಂಗನಾಯಕ ಅಂತ ಟೈಟಲ್ ಫಿಕ್ಸ್ ಆಗಿದೆ. ಇನ್ನು ಈ ಚಿತ್ರದ ಕುರಿತು ಜಗ್ಗೇಶ್ ಅವರು ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ಸರಿಯಾದ ಪಾತ್ರ ಕೊಟ್ಟರೆ ಸಕ್ಸಸ್ ಖಂಡಿತ ಎಂದು ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಗುರು ಪ್ರಸಾದ್, ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿ ಗೆ ತಲುಪಿಸುವೆ. ಹತ್ತು ಹೆರುವುದಕ್ಕಿಂತ ಮುತ್ತಿನಂತಹ ಒಂದು ಹೆರುವುದು ಉತ್ತಮ. ಅದರಂತೆಯೆ ನನಗೆ ನೂರು ಚಿತ್ರಕ್ಕಿಂತ ಕನ್ನಡಿಗರನ್ನು ಖುಷಿ ಪಡಿಸಲು ಕೆಲ ಸಿನಿಮಾಗಳು ಸಾಕು. ಧನ್ಯವಾದಗಳು ಎಂದು ರಂಗನಾಯಕ ಚಿತ್ರ ಹಾಗು ನಿರ್ದೇಶಕರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

ಒಂದು ಮಾಡುವ ಪ್ರಯತ್ನವನ್ನು ಮಾಡಿದ್ದು ನಿರ್ಮಾಪಕ ವಿಖ್ಯಾತ್

ಇವರಿಬ್ಬರನ್ನು ಒಂದು ಮಾಡುವ ಪ್ರಯತ್ನವನ್ನು ಮಾಡಿದ್ದು ನಿರ್ಮಾಪಕ ವಿಖ್ಯಾತ್. ಸದ್ಯಕ್ಕೆ ಚಿತ್ರದ ಚಿತ್ರೀಕರಣವನ್ನು ಶುರುಮಾಡಿದ ಚಿತ್ರ ತಂಡ, ಇನ್ನು ಯಾವುದೇ ಅಧಿಕೃತವಾದ ಮಾಹಿತಿ ಬಿಟ್ಟುಕೊಟ್ಟಿಲ್ಲ ಚಿತ್ರದ ಕಲಾವಿದರ ಬಗ್ಗೆಯು ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಈ ಚಿತ್ರಕ್ಕೆ ಅನೂಪ್ ಸೆಲಿನ್ ಸಂಗೀತವನ್ನು ನೀಡುತ್ತಿದ್ದಾರೆ.

ಸಿನಿರಸಿಕರ ಪಾಲಿಗೆ ಸಂತಸದ ವಿಷಯವಾಗಿದೆ

ಬಹಳ ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗಿರುವುದು ಸಿನಿರಸಿಕರ ಪಾಲಿಗೆ ಸಂತಸದ ವಿಷಯವಾಗಿದೆ. ಎದ್ದೇಳು ಮಂಜುನಾಥ, ಮಠ ಚಿತ್ರಕ್ಕಿಂತ ರಂಗನಾಯಕ ಚಿತ್ರ ಇನ್ನು ಚೆನ್ನಾಗಿ ಮೂಡಿ ಬರಬಹುದೆನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಜಗ್ಗೇಶ್ ಅವರಿಗೆ ಈ ಚಿತ್ರ ಮತ್ತೊಂದು ಬ್ರೇಕ್ ನೀಡಲಿದೆಯಾ ಗೊತ್ತಿಲ್ಲ ಚಿತ್ರ ಬಿಡುಗಡೆಯಾಗುವವರೆಗೂ ನಾವು ಕಾಯಲೇಬೇಕಾಗಿದೆ.

LEAVE A REPLY

Please enter your comment!
Please enter your name here