A ಚಿತ್ರವನ್ನು ಬಿಟ್ಟುಕೊಡದ ಖ್ಯಾತ ಸಂಗೀತ ನಿರ್ದೇಶಕ ಇಲ್ಲಿದೆ ಆಸಕ್ತಿಕರವಾದ ಕಥೆ

0
476

ಆಗಿನ ಕಾಲದಲ್ಲಿ ಉಪೇಂದ್ರ ಅವರು ನಿರ್ದೇಶಿಸಿದ A ಸಿನಿಮಾ ಹೊಸ ಸಂಚಲನವೇ ಸೃಷ್ಟಿಸಿತ್ತು. ಒಂದು ಸಾರಿ ಈ ಸಿನಿಮಾವನ್ನು ನೋಡಿ ತೃಪ್ತಿ ಪಟ್ಟಿರುವ ಪ್ರೇಕ್ಷಕರು ಬಹುಷಃ ಯಾರು ಇಲ್ಲ ಅಂತ ಕಾಣಿಸುತ್ತದೆ. ಎಷ್ಟು ಬಾರಿ ನೋಡಿದರು ಸಿನಿಮಾ ಅರ್ಥಾನೆ ಆಗುತ್ತಿರಲಿಲ್ಲ. ಸಾಕಷ್ಟು ಸಾರಿ ಗಮನ ಕೊಟ್ಟು ನೋಡಿದ ನಂತರ ಸಿನಿಮಾದ ನಿಜವಾದ ಸಂದೇಶ ಮತ್ತು ನಿರ್ದೇಶಕರ ಒಂದು ನಿಲುವು ಅರ್ಥವಾಗುತ್ತ ಹೋಗುತ್ತದೆ. A ಚಿತ್ರದ ಅನೇಕ ವಿಷಯಗಳ ಕುರಿತು ಈಗ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್ ಅವರು ಬಿಚ್ಚಿಟ್ಟಿದ್ದಾರೆ. ಗುರುಕಿರಣ್ ಬಹಳ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು ಸಹ, A ಇವರ ಮೊದಲ ಚಿತ್ರವಾಗಿತ್ತು.

ಚೊಚ್ಚಲ ಚಿತ್ರ ಕಲಾವಿದರ ಪಾಲಿಗೆ ಅಗ್ನಿಪರೀಕ್ಷೆ ಅಂತಾನೆ ಹೇಳಬಹುದಾಗಿದೆ

ಮೊದಲ ಸಿನಿಮಾ ಪ್ರತಿಯೊಬ್ಬ ಕಲಾವಿದನಿಗೂ ಮರೆಯಲಾರದ ನೆನಪಾಗಿರುತ್ತದೆ. ಚಿತ್ರರಂಗದಲ್ಲಿ ನೆಲೆಯೂರಲು ಕೆಲಸ ಮಾಡಿದ ಮೊದಲ ಚಿತ್ರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ. ಚೊಚ್ಚಲ ಚಿತ್ರ ಕಲಾವಿದರ ಪಾಲಿಗೆ ಅಗ್ನಿಪರೀಕ್ಷೆ ಅಂತಾನೆ ಹೇಳಬಹುದಾಗಿದೆ. ಗುರುಕಿರಣ್ ಗೆ ಉಪೇಂದ್ರ ಅಚಾನಕ್ಕಾಗಿ ಸಿಕ್ಕಿದ್ದು, ನಂತರ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಉಪೇಂದ್ರ ಅವರ ಹತ್ತಿರ ನಾನು ರಾಘವೇಂದ್ರ ರಾಜ್ ಕುಮಾರ್, ಶೈಲೇಂದ್ರ ಬಾಬು ಮತ್ತು ವಿ.ಉಮಾಕಾಂತ್ ಇವರಲ್ಲಿ ಸಿನಿಮಾ ಅವಕಾಶ ಕೊಡಿಸಿ ಎಂದು ನಾನು ಮನವಿ ಮಾಡಿಕೊಂಡಿದ್ದೆ. ನಾಲಕ್ಕು ತಿಂಗಳಿನಲ್ಲೆ ಉಪೇಂದ್ರ ಅವರ ಕಡೆಯಿಂದ ಆಫರ್ ಒದಗಿ ಬಂದಿತು. ಈ ಮುಂಚೆಯೇ ಚಿತ್ರರಂಗಕ್ಕೆ ನಾನು ಬಂದು 10 ವರ್ಷ ಕಳೆದಿತ್ತು. ಮುಂದೆ ಓದಿ.

ಕೊನೆಯ ಪ್ರಯತ್ನ A ಸಿನಿಮಾವಾಗಿತ್ತು

ನನಗೆ ಒಂದು ಅವಕಾಶವೂ ಸಿಕ್ಕಿರಲಿಲ್ಲ. ಆದ್ದರಿಂದ ನನಗೆ ಚಿತ್ರರಂಗದ ಸಹವಾಸವೆ ಬೇಡ ಎಂದು ಮಂಗಳೂರಿನಲ್ಲಿ ಒಂದು ಒಳ್ಳೆಯ ಹೋಟೆಲ್ ಇಡಲು ನಿರ್ಧರಿಸಿದ್ದೆ. ಲಾಸ್ಟ್ ಟ್ರೈ ಮಾಡೋಣ ಅಂತ ಹೇಳಿ A ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮಾಡಲು ಒಪ್ಪಿಕೊಂಡೆ. ಇಲ್ಲಿಂದ ನನ್ನ ಸಿನಿಪಯಣ ಶುರುವಾಯಿತು. ಉಪೇಂದ್ರ ಮತ್ತು ನಾನು ಸೇರಿದರೆ ಅಲ್ಲೊಂದು ಮ್ಯಾಜಿಕ್ ಸೃಷ್ಟಿ ಆಗುತ್ತಿತ್ತು. A ಸಿನಿಮಾದಿಂದ ಡಿಫರೆಂಟ್ ಮ್ಯೂಸಿಕ್ ಡೈರೆಕ್ಟರ್ ಎಂದು ನನ್ನನ್ನು ಜನ ಕರೆಯಲು ಶುರು ಮಾಡಿದರು. ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿದ್ದರು, ಮತ್ತೆ ನನಗೆ ಯಾವುದೆ ಆಫರ್ ಸಿಗಲಿಲ್ಲ.

ಮೊದಲನೆ ದಿನವೆ ಹಾಡು ಓಕೆ ಆಗಿತ್ತು

ಆಗ ನಾನು ಊರಿಗೆ ಹೋಗಿದ್ದೆ. ತದನಂತರ ಮತ್ತೊಮ್ಮೆ ಉಪೇಂದ್ರ ಅವರು ತಮ್ಮ ಉಪೇಂದ್ರ ಚಿತ್ರಕ್ಕೆ ಆಫರ್ ನೀಡಿದರು. ಮುಂದಿನ ದಿನಗಳಲ್ಲಿ ನಾನು ಸಂಯೋಜಿಸಿದ ಹಾಡುಗಳು ಸೂಪರ್ ಹಿಟ್ ಆದವು. ಇನ್ನು ಚಿತ್ರದ ನಿರ್ದೇಶಕರು ಬಂದು ನಮ್ಮ ಸಿನಿಮಾಗೆ ಕೇವಲ ಎರಡು ಹಾಡುಗಳು ಮಾತ್ರ ಸೂಪರ್ ಹಿಟ್ ಆಗಬೇಕೆಂದು ಹೇಳಿದ್ದರು. ನನಗೆ ಇದು ಹಾಡುಗಳು ಹಿಟ್ ಮಾಡುವ ಸಾಮ್ಯರ್ಥತೆ ಇದೆ ಎಂದು ಅವರಿಗೆ ಉತ್ತರಿಸಿದ್ದೆ. ನಾವು ಕಥೆಯ ಅನುಸಾರವಾಗಿ ಹಾಡನ್ನು ಮಾಡುತ್ತ ಹೋಗಿದ್ದೆವು. ಕೆಲಸ ಪ್ರಾರಂಭ ಮಾಡಿದ ದಿನದಂದೆ ಸುಮ್ಮ್ ಸುಮ್ನೆ ನಗ್ತಾಳೆ ಎನ್ನುವ ಹಾಡನ್ನು ಮಾಡಿದ್ದೆವು. ಮೊದಲನೆ ದಿನವೆ ಹಾಡು ಓಕೆ ಆಗಿತ್ತು.

A ಸಿನಿಮಾಗೆ ಸಖತ್ ಆಗಿಯೆ ಮ್ಯೂಸಿಕ್ ಹೊಡೆದಿದ್ದಾನೆ

A ಚಿತ್ರದ ಹಾಡುಗಳು ದೊಡ್ಡ ಹಿಟ್ ಆಗಬೇಕೆನ್ನುವ ಕನಸು ನನಗೆ ಇರಲಿಲ್ಲ. ನಾಲಕ್ಕು ಜನ ನನ್ನ ಹಾಡನ್ನು ಕೇಳಿ ಪ್ರಶಂಸಿಸಲಿ ಎನ್ನುವುದು ಮಾತ್ರ ನನ್ನ ಆಸೆಯಾಗಿತ್ತು. ಚಿತ್ರದ ಆಡಿಯೋ ಬಿಡುಗಡೆ ಆದಾಗ, ನಾನು ಕ್ಯಾಸೆಟ್ ಅಂಗಡಿಗೆ ಹೋಗಿ ಹೊಸದಾಗಿ ಯಾವ? ಚಿತ್ರದ ಹಾಡುಗಳು ಬಂದಿದೆ, A ಚಿತ್ರದ ಹಾಡು ಹೇಗಿದೆ ಎಂದು ಹಾಗೆ ಅವರಿಗೆ ಕೇಳುತ್ತಿದ್ದೆ. ಆಗ ಅವರು ಸೂಪರ್ ಆಗಿದೆ ಸರ್, ಆದರೆ ಚಿತ್ರಕ್ಕೆ A ಅಂತ ಟೈಟಲ್ ಇಟ್ಟಿರುವುದೆ ವಿಚಿತ್ರವಾಗಿದೆ ಎಂದು ಹೇಳುತ್ತಿದ್ದರು.

ಮಾರಿ ಕಣ್ಣು ಹೋರಿ ಮ್ಯಾಲೆ ಚಿತ್ರದ ಹಾಡು ಸಹ ತುಂಬ ಜನಪ್ರಿಯವಾಗಿತ್ತು. ನನ್ನ ಮುಂದೆಯೆ ಜನ A ಸಿನಿಮಾಗೆ ಸಖತ್ ಆಗಿಯೆ ಮ್ಯೂಸಿಕ್ ಹೊಡೆದಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಅದು ನನಗೆ ಬಹಳ ಸಂತಸ ತಂದು ಕೊಟ್ಟ ಕ್ಷಣ ಎಂದು ಹೇಳುವ ಮೂಲಕ ಗುರುಕಿರಣ್ ಅವರು ಹಿಂದೆ ನಡೆದ ಘಟನೆಗಳನ್ನು ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here