ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಆಫರ್ ಯಾರಿಗುಂಟು ಯಾರಿಗಿಲ್ಲ

0
630

ಇಲ್ಲಿಯವರೆಗು ದುರ್ಯೋಧನನಾಗಿ ದರ್ಶನ್, ಅಭಿಮನ್ಯು ಆಗಿ ನಿಖಿಲ್ ಕುರುಕ್ಷೇತ್ರ ಚಿತ್ರದ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮಿಕ್ಕ ಪಾತ್ರಗಳನ್ನು ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅರ್ಜುನನಾಗಿ ಸೋನು ಸೂದ್, ಕೃಷ್ಣನಾಗಿ ರವಿಚಂದ್ರನ್, ಕರ್ಣನಾಗಿ ಅರ್ಜುನ್ ಸರ್ಜಾ, ಶಕುನಿಯಾಗಿ ರವಿ ಶಂಕರ್, ಕುಂತಿಯಾಗಿ ಭಾರತಿ ವಿಷ್ಣುವರ್ಧನ್, ಧರ್ಮರಾಯನಾಗಿ ಶಶಿ ಕುಮಾರ್ ಸೇರಿದಂತೆ ಭೀಷ್ಮನ ಪಾತ್ರಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಣ್ಣ ಹಚ್ಚಿದ್ದಾರೆ. ನಾಗಣ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ.

ಹೊಸದಾಗಿ ಟ್ರೇಲರ್ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದ್ದರು

ಚಿತ್ರದಲ್ಲಿ ದರ್ಶನ್ ದುರ್ಯೋಧನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ರವಿ ಚಂದ್ರನ್, ಅರ್ಜುನ್ ಸರ್ಜಾ, ಮೇಘನಾ ರಾಜ್, ಸೇರಿದಂತೆ ಇನ್ನು ಅನೇಕ ತಾರ ಬಳಗವೆ ಇದೆ. ಬಹು ಭಾಷೆಯಲ್ಲಿ ಈ ಚಿತ್ರ ತೆರೆ ಕಾಣುವುದರ ಜೊತೆಗೆ 2 ಡಿ ಮತ್ತು 3 ಡಿಯಲ್ಲಿ ನೀವು ನೋಡಬಹುದಾಗಿದೆ. ಚಿತ್ರದ ಗೀತೆಗಳು ಜನಪ್ರಿಯವಾಗಿತ್ತು. ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಟ್ರೇಲರ್ ಸರಿ ಇಲ್ಲ ಎಂದು ಅಭಿಮಾನಿಗಳು ಚಿತ್ರದ ನಿರ್ಮಾಪಕರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದರು. ಚಿತ್ರದಲ್ಲಿ ಗ್ರಾಫಿಕ್ಸ್ ಚೆನ್ನಾಗಿ ಬಂದಿರಲಿಲ್ಲ ಮತ್ತು ಹಿಂದೆ ರಿಲೀಸ್ ಮಾಡಿದ ಟೀಸರ್ ಗೆ ಒಂದೆ ಒಂದು ದೃಶ್ಯ ಹಾಕಿ ಅದನ್ನು ಟ್ರೇಲರ್ ಎಂದು ಬಿಟ್ಟಿದ್ದರು. ಅಭಿಮಾನಿಗಳು ಇದರಿಂದ ಬಹಳ ಮನನೊಂದಿದ್ದು, ಮತ್ತೊಮ್ಮೆ ಹೊಸದಾಗಿ ಟ್ರೇಲರ್ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದ್ದರು.

ಟಿಕ್ ಟಾಕ್ ಮಾಡಿ ಉಚಿತ ಟಿಕೆಟ್ ಪಡೆದುಕೊಳ್ಳಿ

ಕುರುಕ್ಷೇತ್ರ ಚಿತ್ರ ತಂಡದಿಂದ ಅಭಿಮಾನಿಗಳಿಗೆ ಒಂದು ಹೊಸ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ. ಹೌದು ಆನ್ಲೈನ್ ನಲ್ಲಿ ಟಿಕ್ ಟಾಕ್ ಸ್ಪರ್ಧೆಯನ್ನು ಏರ್ಪಡಿಸಿದ್ದು, ಇದರಲ್ಲಿ ಯಾರು ಅರ್ಹತೆ ಪಡೆದುಕೊಳ್ಳುತ್ತಾರೊ ಅವರು ಉಚಿತವಾಗಿ ಕುರುಕ್ಷೇತ್ರ ಚಿತ್ರವನ್ನು ನೋಡಬಹುದಾಗಿದೆ. ಈ ಚಿತ್ರದ ಸಂಭಂದ ಪಟ್ಟ ಹಾಗೆ ಹಾಡನ್ನು ಅಥವಾ ಸಂಭಾಷಣೆಯ ಟಿಕ್ ಟಾಕ್ ವಿಡಿಯೋ ಮಾಡಬೇಕಾಗಿದೆ. ವಿಡಿಯೋ ಗೆ ಕುರುಕ್ಷೇತ್ರ ಮತ್ತು ಡಿ ಬಾಸ್ ಎಂದು ಹ್ಯಾಷ್ ಟ್ಯಾಗ್ ಹಾಕಿ ಪೋಸ್ಟ್ ಮಾಡಬೇಕು.

ಮುಂದಿನ ತಿಂಗಳು ಆಗಸ್ಟ್ 5ರ ವರೆಗು ಕಾಲಾವಕಾಶ ಇದೆ. ವಿಡಿಯೋ ಪೋಸ್ಟ್ ಮಾಡಿರುವವರಲ್ಲಿ ಕೇವಲ 15 ಜನರನ್ನು ಮಾತ್ರ ಆಯ್ಕೆ ಮಾಡುಕೊಳ್ಳುತ್ತಾರೆ. ಆಗಸ್ಟ್ 7 ಕ್ಕೆ ಆಯ್ಕೆಯಾದ ವ್ಯಕ್ತಿಗಳ ಹೆಸರನ್ನು ಬಹಿರಂಗ ಪಡಿಸುತ್ತಾರೆ. ಸೆಲೆಕ್ಟ್ ಆದ ಟಿಕ್ ಟಾಕ್ ಸ್ಪರ್ದಿಗಳು ಉಚಿತವಾಗಿ ಕುರುಕ್ಷೇತ್ರ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಿದ್ದು, ಮುನಿರತ್ನ ಬಂಡವಾಳ ಹಾಕಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

LEAVE A REPLY

Please enter your comment!
Please enter your name here