ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಇಲ್ಲಿ, ಮನುಷ್ಯರನ್ನ ಕಿತ್ತು ತಿನ್ನುವಂತಹ ಪ್ರೇತಗಳಿವೆ. ಊಹೆಗೂ ಮೀರಿದ್ದು.

0
763
goa niguda stala

ಜಗತ್ತಿನ ಸೃಷ್ಟಿಯಲ್ಲಿ ಕತ್ತಲೆ ಎಂಬುದು ತರ್ಕಕ್ಕೆ ನಿಲುಕದ್ದು. ಯಾಕಂದ್ರೆ, ಅಗೋಚರ ಸತ್ಯಗಳು ಹಾಗೂ ಘಟನೆಗಳು ಕತ್ತಲೆಯಲ್ಲೇ ನಡೆಯೋದು. ಹಾಗಾಗಿ ಕತ್ತಲೆ ಅಂದ್ರೆ, ಸಾಮಾನ್ಯವಾಗಿ ಎಲ್ಲರಿಗೂ ಭಯ. ಕೆಲವೊಂದು ಸ್ಥಳಗಳಿಗೆ ಕತ್ತಲಾಯ್ತು ಅಂದ್ರೆ, ಯಾರೂ ಹೋಗಲ್ಲ. ಯಾಕಂದ್ರೆ, ಅಲ್ಲಿ ದೆವ್ವ, ಪ್ರೇತ ಇದೆ ಅಂತ ಹೆದರುತ್ತಾರೆ. ಆದ್ರೆ ಇನ್ನೂ ಕೆಲವರು ಅದೆಲ್ಲಾ ಮೂಡನಂಬಿಕೆ ಅಂತ ಸುಮ್ಮನಾಗುತ್ತಾರೆ. ದೆವ್ವ ಇದೆಯೋ, ಅಥವಾ ಇಲ್ಲವೋ ಅನ್ನೋದು ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೂ ಕೆಲವೊಂದು ಸ್ಥಳಗಳಲ್ಲಿ ಇಂತ ವಿಷಯಗಳು ಹೆಚ್ಚಾಗಿ ಆಕ್ರಮಿಸಿಕೊಂಡಿರುತ್ತವೆ.

ಹೌದು. ಇಂಥ ಕೆಲವು ಅಂಶಗಳು ಆಕ್ರಮಿಸಿಕೊಂಡಿರೋದು, ಎಲ್ಲರ ನೆಚ್ಚಿನ ತಾಣವಾಗಿರುವ ಗೋವಾದಲ್ಲಿ. ಗೋವಾದ ಕೆಲವು ಪ್ರದೇಶಗಳಲ್ಲಿ ರಾತ್ರಿ ಆದರೆ ಸಾಕು ಚಿತ್ರ, ವಿಚಿತ್ರ ಘಟನೆಗಳು ಸಂಭವಿಸುತ್ತವೆ. ಅದು ಅಲ್ಲಿಗೆ ಬರುವ ಸಾಕಷ್ಟು ಪ್ರವಾಸಿಗರಿಗೆ ಅನುಭವವಾಗಿದೆ. ಗೋವಾದಲ್ಲಿ ಈ ರೀತಿಯ 8 ಸ್ಥಳಗಳಿವೆ. ಈ ಪ್ರದೇಶದಲ್ಲಿ ರಾತ್ರಿಯಾದರೆ ಸಾಕು ಪ್ರೇತಗಳ ಹಾವಳಿ ಶುರುವಾಗುತ್ತದೆ, ಇಲ್ಲವೇ ಆಕ್ಸಿಡೆಂಟ್‌ ನಂತಹ ತೊಂದರೆಗಳು ಉಂಟಾಗುತ್ತದೆ. ಹಾಗಾಗಿ ರಾತ್ರಿ ಸಮಯದಲ್ಲಿ ಯಾರ ನೆರಳು ಸಹ ಇಲ್ಲಿ ಸುಳಿಯುವುದಿಲ್ಲ.

ವಿಸ್ಮಯಕಾರಿ ಸ್ಥಳಗಳು

ಇಗೊರ್ಚೆಮ್ ಬಾಂದ್

ಇದು ಗೋವಾದಲ್ಲಿ ಕಂಡುಬರುವ ಪ್ರೇತ ಪ್ರದೇಶ. ಇಲ್ಲಿ ಕತ್ತಲೆ ಆದರೆ ಸಾಕು ಜನಸಂಚಾರ ತುಂಬಾ ವಿರಳ. ರೈಯಾ ರಸ್ತೆಗೆ ಹೊಂದಿಕೊಂಡಿರುವ ಈ ಪ್ರದೇಶವು ಒಂದು ಚರ್ಚ್‌ನ ಹಿಂಬದಿಯಲ್ಲಿದ್ದು ಮಧ್ಯಾಹ್ನ 2 ಗಂಟೆಯಿಂದ 3 ಗಂಟೆಯ ನಡುವೆ ಇಲ್ಲಿ ಪ್ರೇತಗಳು ಕಾಣಿಸುತ್ತವೆ. ಆ ಸಮಯದಲ್ಲಿ ಇಲ್ಲಿ ಯಾರಾದರೂ ಹೋದರೆ, ಅವರು ದೆವ್ವ ಹಿಡಿದವರಂತೆ ಮಾತನಾಡಲು ಶುರು ಮಾಡುತ್ತಾರಂತೆ. ಜೊತೆಗೆ ಆ ವ್ಯಕ್ತಿಯ ಕಣ್ಣುಗಳು ಕೆಂಪು ಬಣ್ಣದಲ್ಲಿರುತ್ತವೆ. ಇಲ್ಲಿ ಹಗಲಿನಲ್ಲೇ ಇಂಥ ಭಯಾನಕ ಘಟನೆ ನಡೆಯುತ್ತದೆ ಅಂದ್ರೆ, ಇನ್ನೂ ರಾತ್ರಿ ಘಟನೆ ಜೀವವನ್ನೆ ನಡುಗಿಸುವಂತಿರುತ್ತದೆ.

ಬೇತಖೋಲ್ ರಸ್ತೆ

ಈ ರಸ್ತೆ. ಧವಾಲಿ ಮತ್ತು ಬೋರಿ ನಡುವೆ ಬರುತ್ತದೆ. ಈ ರಸ್ತೆ ಯಾವಾಗಲು ತಂಪಾಗಿ ಇರುತ್ತದೆ. ಈ ರಸ್ತೆಯಲ್ಲಿ ಸಂಚರಿಸುವಾಗ, ಯಾರೋ ಒಬ್ಬ ಹುಡುಗಿ ಕಿರುಚಿದಂತಾಗುತ್ತದಂತೆ. ಇಳಿದು ನೋಡೋಣ ಅನ್ನೋ ಅಷ್ಟರಲ್ಲಿ, ಯಾವುದಾದ್ರೂ ಒಂದು ರೀತಿಯಿಂದ ಅಪಘಾತ ಸಂಭವಿಸುತ್ತದಂತೆ. ಇದು ಇಲ್ಲಿಗೆ ಹೋಗಿ, ಅನುಭವವಾಗಿರುವವರೇ ತಿಳಿಸಿರುವ ಉಲ್ಲೇಖವಾಗಿದೆ.

NH-17 ಮುಂಬೈಗೋವಾ ಹೆದ್ದಾರಿ

ಈ ರಸ್ತೆ ಹೆಚ್ಚಿನ ಭಯಾನಕತೆಯನ್ನ ಹೊಂದಿದೆ. ಇಲ್ಲಿ ಮಾಟಗಾತಿಯ ರೂಪದಲ್ಲಿರುವ ಆತ್ಮವು ಸತ್ತ ಮಾಂಸದ ಹುಡುಕಾಟದಲ್ಲಿ ಇಲ್ಲಿ ಅಲೆಯುತ್ತಿರುತ್ತದಂತೆ. ಈ ಸ್ಥಳದಲ್ಲಿ ಮಧ್ಯಾಹ್ನ 12ರ ನಂತರ ಮಾಂಸ ಪದಾರ್ಥಗಳನ್ನ ತೆಗೆದುಕೊಂಡು ಹೋಗಬಾರದು. ಒಂದು ವೇಳೆ ಹೋದರೆ, ಅವರಿಗೆ ಅಪಾಯ ತಪ್ಪಿದ್ದಲ್ಲ. ಯಾಕಂದ್ರೆ, ಮಾಂಸಕ್ಕಾಗಿ ಹುಡುಕುವ ಪ್ರೇತಕ್ಕೆ, ಯಾರಾದರೂ ಮಾಂಸ ತರುತ್ತಿದ್ದಾರೆ ಅನ್ನೋದು ಗೊತ್ತಾದ ಬಳಿಕ, ಅವರಿಂದ ಅದನ್ನ ಪಡೆಯಲು ಅವರಿಗೆ ಅಪಾಯವಾಗುವಂತೆ ಮಾಡುತ್ತದೆ. ಹಾಗಾಗಿ ಇಲ್ಲಿಗೆ ಯಾರೂ ಮಾಂಸವನ್ನ ತೆಗದುಕೊಂಡು ಹೋಗುವುದಿಲ್ಲ.

ಡಿ ಮೆಲ್ಲೋ ಮನೆ

ಇದು ಗೋವಾದ ಸ್ಯಾಂಟೆಮೋಲ್‌ ಪ್ರದೇಶದಲ್ಲಿರುವ ಹಳೆ ಮನೆಯಾಗಿದ್ದು, ರಾತ್ರಿಯಾದ ಮೇಲೆ ಈ ಮನೆಯಿಂದ ಕಿರುಚಾಟ, ಕಿಟಗಿ ಬಾಗಿಲು ಬಡಿಯುವ ಶಬ್ದದ ಜೊತೆಗೆ ಯಾರೋ ಚೀರಿದ ಶಬ್ದ ಕೇಳಿಬರುತ್ತದಂತೆ. ಮೂಲಗಳ ಪ್ರಕಾರ, ಈ ಮನೆಯಲ್ಲಿ ಇಬ್ಬರು ಅಣ್ಣತಮ್ಮಂದಿರು ವಾಸವಿದ್ದರಂತೆ. ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ, ಇಬ್ಬರು ಪ್ರಾಣ ಕಳೆದುಕೊಳ್ಳುತ್ತಾರಂತೆ. ಆಗಿಂದ ಇಲ್ಲಿ ಇಂಥ ವಿಚಿತ್ರ ಘಟನೆಗಳು ನಡೆಯುತ್ತಿವೆ.

ರಾಡ್ರಿಗಸ್ ಹೌಸ್

ಗೋವಾದ ವೆರ್ನಾದಲ್ಲಿರುವ ಈ ಮನೆಯು ನೋಡಲು ಸಾಮಾನ್ಯವಾಗಿರುವಂತೆ ಕಾಣುತ್ತದೆ. ಆದರೆ ಕತ್ತಲು ಆವರಿಸುತ್ತಿದ್ದಂತೆ ಕಿಟಕಿಗಳು ಮತ್ತು ಬಾಗಿಲುಗಳು ತಾನಾಗಿಯೇ ತೆರೆಯುವುದು ಮುಚ್ಚುವುದು ಶುರುವಾಗುತ್ತದೆ. ಈ ಸ್ಥಳ ಹಗಲಿನಲ್ಲಿ ಸಾಮಾನ್ಯವಾಗಿರುತ್ತದೆ ಆದರೆ ರಾತ್ರಿ ಸಮಯದಲ್ಲಿ ಚಿಕ್ಕದಾಗಿ ಚೀರುತ್ತಿರುವ ಶಬ್ದ ಇಲ್ಲಿ ಕೇಳಿಸುತ್ತದಂತೆ.

ಜಂಕಿ ಬಾಂದ್‌

ಈ ಪ್ರದೇಶವು ಗೋವಾದ ಮತ್ತೊಂದು ಭಯಾನಕ ಪ್ರದೇಶವಾಗಿದ್ದು, ಇದು ನವೆಲಿಮ್ ಮತ್ತು ಡ್ರಾಂಪುರ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಆಗಿದೆ. ಒಮ್ಮೆ ಚಾಲಕನ ತಪ್ಪಿನಿಂದ ಘೋರ ಅಪಘಾತ ಸಂಭವಿಸಿ, ವಾಹನದಲ್ಲಿರುವ ಎಲ್ಲರೂ ಮೃತಪಟ್ಟಿದ್ದರು. ಇದರಲ್ಲಿ ಹೆಚ್ಚಿನವರು ಚಿಕ್ಕ ಮಕ್ಕಳಾಗಿದ್ದರಂತೆ ಹಾಗಾಗಿ ರಾತ್ರಿ ಹೊತ್ತು ಈ ಪ್ರದೇಶದಲ್ಲಿ ಮಕ್ಕಳು ಅಳುತ್ತಿರುವ ಶಬ್ದ ಕೇಳಿಸುತ್ತದೆಯಂತೆ ರಾತ್ರಿ ಹೊತ್ತು ಈ ಸ್ಥಳದಲ್ಲಿ ಹೆಚ್ಚಾಗಿ ಓಡಾಡುವುದು ವಿರಳ.

ಸಲಿಗವೊ ಹಳ್ಳಿ

ಸಲಿಗವೊ ಈ ಪ್ರದೇಶ ಚರ್ಚುಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಕ್ರಿಸ್ಟಲಿನಾ ಎಂಬ ಹೆಂಗಸಿನ ಕೋಪಗೊಂಡ ಅತೃಪ್ತ ಆತ್ಮ ಇಲ್ಲಿನ ಗ್ರಾಮಸ್ಥರನ್ನು ಕಾಡಿಸುತ್ತಿದೆಯಂತೆ. ಈ ಪ್ರದೇಶದಲ್ಲಿರುವ ಒಂದು ದೊಡ್ಡ ಆಲದ ಮರವು ಅದರ ವಾಸಸ್ಥಾನವಾಗಿದೆ. ರಾತ್ರಿಯಾದರೆ ಸಾಕು ಈ ಮರದ ಸುತ್ತ ಯಾರೋ ಓಡಾಡಿದಂತೆ ಆಗುತ್ತದೆ ಮತ್ತು ಯಾರೋ ಚೀರಿದ ಶಬ್ದ ಕೇಳಿಸುತ್ತದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಅದಾದ ನಂತರ ಆ ಸ್ಥಳವು ಇಂದಿಗೂ ಹಲವಾರು ನಿಗೂಢತೆಯೊಂದಿಗೆ ಜನರನ್ನು ಭಯ ಭೀತಗೊಳಿಸುತ್ತಿದೆ.

ಮೂರು ರಾಜರ ಚರ್ಚ್

ಈ ಚರ್ಚ್ ತುಂಬಾ ಪುರಾತನವಾಗಿದ್ದು ಇದು ಕ್ಯಾಶುವಾಲಿಮ್ ಗ್ರಾಮದಲ್ಲಿದೆ ಇದು ತುಂಬಾ ಭಯಾನಕತೆಯನ್ನ ಸೃಷ್ಟಿಸುವ ಗೋವಾದ ಸ್ಥಳಗಳಲ್ಲಿ ಇದು ಕೂಡಾ ಒಂದು. ಈ ಸ್ಥಳದಲ್ಲಿ 3 ರಾಜರನ್ನ ಸಮಾಧಿ ಮಾಡಲಾಗಿದೆ. ಹೌದು. ಈ ಮೂರೂ ರಾಜರು, ಜಗಳವಾಡಿ ಪ್ರಾಣ ಕಳೆದುಕೊಂಡಿದ್ದರಂತೆ, ಹಾಗಾಗಿ ಅವರನ್ನ ಅಲ್ಲೇ ಸಮಾಧಿ ಮಾಡಲಾಗಿತ್ತಂತೆ. ಆದರೆ ಈಗ ಅವರು ಪ್ರೇತಗಳಾಗಿ ಕಾಡುತ್ತಿದ್ದಾರೆ. ಹಾಗಾಗಿ ಈ ಸ್ಥಳಕ್ಕೆ ಯಾರು ಭೇಟಿ ನೀಡುವುದಿಲ್ಲ.

ನಿಜಕ್ಕೂ ಇಂಥ ವಿಚಿತ್ರಗಳನ್ನ ಕೇಳಿದಾಗ, ಅದೆಲ್ಲಾ ಮೂಡನಂಬಿಕೆ ಅಂತ ಕೆಲವರಿಗೆ ಅನಿಸುತ್ತೆ. ಆದ್ರೆ ಎಲ್ಲದಕ್ಕೂ ಒಂದು ಕಾರಣವಿರುತ್ತದೆ. ಇಲ್ಲಿ ಹೋಗಿ, ಅದರ ಅನುಭವವಾದಾಗ ಮಾತ್ರ, ಆ ಘಟನೆಗಳ ನಿಜ ಸ್ವರೂಪ ಬೆಳಕಿಗೆ ಬರುತ್ತೆ. ಸುಂದರ ತಾಣದಿಂದ ತನ್ನತ್ತ ಆಕರ್ಷಿಸುವ, ಗೋವಾದಲ್ಲಿ ಇಂಥ ನಿಗೂಢಗಳು ಅಡಗಿರುವುದು ಭಯಾನಕವಾಗಿದೆ.

LEAVE A REPLY

Please enter your comment!
Please enter your name here