ಇಂಜಿನೀರಿಂಗ್ ವಿದ್ಯಾಭ್ಯಾಸದ ಜೊತೆಗೆ ಕೃಷಿಯಲ್ಲೂ ಸಹ ಯಶಸ್ಸು ಕಂಡ ಯುವತಿ

0
623
jyotsaa

ತಮ್ಮ ಕನಸಿನ ಗುರಿಯತ್ತ ಬೆನ್ನ್ ಹತ್ತಿ ಸಾಧಿಸಿದವರು ತುಂಬಾ ಜನರು ಇದ್ದಾರೆ, ಕೆಲವೊಮ್ಮೆ ನಾವು ಓದಿರುವ ವಿಷಯಕ್ಕು ನಮ್ಮ ವೃತ್ತಿಗೂ ಸಂಭಂದಾನೆ ಇರುವುದಿಲ್ಲ. ರೈತರು ದೇಶದ ಬೆನ್ನೆಲುಬು ಅಂತಾ ಒಂದು ಮಾತಿದೆ, ರೈತರಿಂದಾನೆ ಪ್ರತಿ ನಿತ್ಯ ನಮ್ಮ ಹೊಟ್ಟೆ ತುಂಬುತ್ತಿರುವುದು ಇಲ್ಲವಾದಲ್ಲಿ ಒಂದು ತುತ್ತು ಅಣ್ಣಕ್ಕು ಪರದಾಡುವ ಪರಿಸ್ಥಿತಿ ನಮ್ಮಗೆ ಬರುತಿತ್ತು. ಕೃಷಿ ಎಂದರೆ ಅದೂ ತಮಾಷೆಯ ಮಾತಲ್ಲ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಕೃಷಿಯಲ್ಲಿ ಮಾಡಬೇಕಾಗಿರುವ ಎಲ್ಲಾ ಕಾರ್ಯಗಳು ಮುಗಿದ ಮೇಲೆ ರೈತ ಉತ್ತಮ ಫಲಕ್ಕಾಗಿ ಕಾಯುತ್ತಾನೆ, ಕೊನೆ ಹಂತದಲ್ಲಿ ಸಿಗುವ ಯಶಸ್ಸನ್ನು ವರ್ಣಿಸಲು ಆಸಾದ್ಯ. ಕೃಷಿಯಲ್ಲಿ ಸಿಗುವ ಖುಷಿ, ನೆಮ್ಮದಿ,ತೃಪ್ತಿ ಬೇರೆ ಯಾವ ಕೆಲಸದಲ್ಲೂ ನಮ್ಮಗೆ ಸಿಗುವುದಿಲ್ಲ.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಹೊರಟವರಿಗೆ ಈ ಯುವಕಿಯೇ ಸ್ಪೂರ್ತಿ

ಇಂದಿನ ಪೀಳಿಗೆಯ ಯುವಕರಿಗೆ ಕೃಷಿ ಪದ ಕೇಳಿದರೆ ಸಾಕು ದೂರ ಸರಿಯುತ್ತಾರೆ, ಆದ್ದರಿಂದ ಕೃಷಿಯ ಕುಲಕಸುಬನ್ನು ಬಿಟ್ಟು ಅಥವಾ ಭೂಮಿ ಮಾರಿಕೊಂಡು ನಗರಕ್ಕೆ ಬಂದು ವಾಸಿಸುತ್ತಾರೆ. ಆದರೆ ನಾವು ಹೇಳಲು ಹೊರಟಿರುವ ಕಥೆಯನ್ನು ಕೇಳಿದರೆ ನಿಜಕ್ಕೂ ವಾವ್ ಅಂತೀರಾ ಹೌದೂ ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಹೊರಟವರಿಗೆ ಈ ಯುವಕಿಯೇ ಸ್ಪೂರ್ತಿ, ಸ್ವಲ್ಪ ಸುತ್ತದಾಡಿದರೆ ಸಾಕು ಈಗಿನ ಕಾಲದ ಯುವಕ,ಯುವತಿಯರು ಸುಸ್ತು ಅಂತಾ ಮಲಗಿ ಬಿಡುತ್ತಾರೆ, ನೀರು ಬೇಕು ಆದರೆ ನೆಲ ಗುದ್ದುವುದು ಬೇಡ ಎನ್ನುವ ಮನಸ್ಥಿತಿ ಯುವಕರದ್ದು. ಕೃಷಿಯಲ್ಲಿ ಜ್ಯೋತ್ಸಾ ಎಂಬ ಹೆಸರಿನ ಯುವತಿ ಹೇಗೆ ಯಶಸ್ಸು ಕಂಡಳು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ. ಮುಂದೆ ಓದಿ

ಮಕ್ಕಳಾದರೂ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆನ್ನುವುದು ಇವರ ಕನಸಾಗಿತ್ತು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವಿಜಯ್ ದಾಂಡ್ ಅವರಿಗೆ ಹೆಸರುವಾಸಿಯ ವಕೀಲನಾಗಬೇಕೆನ್ನುವ ಆಸೆ ಇತ್ತು, ಆದರೆ ಇವರ ಕುಟುಂಬದಲ್ಲಿ ತಲಾ ತಲಾಂತರದಿಂದ ಕೃಷಿಯನ್ನೇ ನಂಬಿಕೊಂಡು ಜೀವನವನ್ನು ಸಾಗಿಸುತ್ತಿದ್ದರು, ಆದ ಕಾರಣದಿಂದಾಗಿ ಇವರು ಸಹ ಇದೇ ವೃತ್ತಿ ಮುಂದುವರೆಸುಕೊಂಡು ಹೋಗುವ ಸಂದರ್ಭ ಎದುರಾಯಿತು. ಇವರ ಹೆಂಡತಿ ಲತಾ ಅವರಿಗೂ ಸಹ ಚೆನ್ನಾಗಿ ಓದಿ ಒಳ್ಳೆಯ ವೈದ್ಯೇ ಆಗಬೇಕೆನ್ನುವ ಇಚ್ಛೆ ಇತ್ತು, ಮದುವೆ ಇಂದಾಗಿ ಅವರ ವಿದ್ಯಾಭ್ಯಾಸ ಪಿಯುಸಿ ಗೆ ಕೊನೆ ಆಯ್ತು ಕಂಡ ಕನಸೆಲ್ಲ ನುಚ್ಚು ನೂರಾಯ್ತು. ನಮ್ಮ ಕನಸ್ಸಂತು ಈಡೇರಲಿಲ್ಲ  ಮಕ್ಕಳಾದರೂ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡು ಕೈ ತುಂಬಾ ಸಂಪಾದನೆ ಮಾಡಬೇಕೆನ್ನುವುದು ಇವರ ಕನಸಾಗಿತ್ತು.

ತಂದೆಯಂತೆ ಕೃಷಿಯಲ್ಲಿ ಮುಂದುವರಿಯಬೇಕೆನ್ನುವುದು ಜ್ಯೋತ್ಸ್ನರ ಆಸೆ ಆಗಿತ್ತು

ಆದ್ದರಿಂದ ದಂಪತಿಗಳು ತಮ್ಮ ಮಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದರು, ಮಗಳು ಸಹ ಚೆನ್ನಾಗಿ ಓದುತ್ತಿದ್ದಳು. ಮಗಳ ಮೇಲೆ ಭರವಸೆ ಮತ್ತು ನಿರೀಕ್ಷೆ ಪೋಷಕರು ಇಟ್ಟುಕೊಂಡಿದ್ದರು, ಆದರೆ ಜ್ಯೋತ್ಸ್ನಾ ಅವರ ಆಸೆಯೇ ಬೇರೆ ಆಗಿತ್ತು ಆಕೆ ತಮ್ಮ ತಂದೆಯಂತೆ ಕೃಷಿಯಲ್ಲಿ ತೊಡಗಿಸಿಕೊಂಡು ತೋಟವನ್ನು ಉತ್ತಮವಾದ ರೀತಿಯಲ್ಲಿ ಬೆಳೆಸಬೇಕೆಂದು ಬಯಸಿದ್ದಳು. 1998 ರಲ್ಲಿ ಜ್ಯೋತ್ಸಾ ಗೆ 6 ವರ್ಷ, ಇವಳ ತಮ್ಮನಿಗೆ ಒಂದು ವರ್ಷ ತುಂಬಿತ್ತು, ಇವರ ತಂದೆ ಅಪಘಾತದಲ್ಲಿ ಎರಡು ಕಾಲುಗಳನ್ನು ಮುರಿದು ಕೊಂಡಿದ್ದರು, 7 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಜ್ಯೋತ್ಸ್ನಾ ಅವರ ತಾಯಿ ಎಷ್ಟು ಜವಾಬ್ದಾರಿಯನ್ನ ಹೊತ್ತಿದ್ದರು ಅಂದ್ರೆ, ತಮ್ಮ ಗಂಡ ಹಾಗೂ ಮಕ್ಕಳನ್ನ ನೋಡಿಕೊಳ್ಳುವುದರ ಜೊತೆಗೆ, ತೋಟದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು.

12 ವರ್ಷ ಆಗುವಷ್ಟರಲ್ಲಿ ತೋಟದ ಎಲ್ಲಾ ಕೆಲಸಗಳನ್ನು ಕಲಿತಿದ್ದಳು

ಅಮ್ಮನ ಜೊತೆ ಜ್ಯೋತ್ಸಾ ಸಹ ತೋಟಕ್ಕೆ ಹೋಗುತ್ತಿದ್ದಳು, ಜ್ಯೋತ್ಸ್ನಾ ಗೆ 12 ವರ್ಷ ಆಗುವಷ್ಟರಲ್ಲಿ ತೋಟದ ಎಲ್ಲಾ ಕೆಲಸಗಳನ್ನು ಕಲಿತಿದ್ದಳು. ನಾನು ಶಾಲೆಗೆ ಹೋಗುವುದಕ್ಕೂ ಮುಂಚೆ ಮತ್ತು ಶಾಲೆ ಇಂದ ಬಂದ ಮೇಲೆ ತೋಟದ ಕೆಲಸಗಳಲ್ಲಿ ಅಮ್ಮನಿಗೆ ನಾನು ಸಹಾಯ ಮಾಡುತ್ತಿದ್ದೆ, ಪರೀಕ್ಷೆ ಸಮಯದಲ್ಲೂ ಅಷ್ಟೇ ತೋಟದಲ್ಲಿಯೇ ನಾನು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ, ನಾನು ಕೆಲಸ ಮಾಡುವದರಿಂದ ಅಮ್ಮನಿಗೆ ಸ್ವಲ್ಪ ವಿಶ್ರಾಂತಿ ಸಿಗುತ್ತಿತ್ತು ಅಂತಾ ಬೆಟರ್ ಇಂಡಿಯಾದವರು ನಡೆಸಿದ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದಾರೆ.

jyotsaa

ಇಂಜಿನೀರಿಂಗ್ ವಿದ್ಯಾಭ್ಯಾಸದ ಜೊತೆಗೆ ಕೃಷಿ ಕಡೆ ಕೂಡ ಗಮನ ಹಾರಿಸಿದ್ದಳು

ಅಪ್ಪನ ಸೂಚನೆಯಂತೆ ತೋಟದ ಎಲ್ಲಾ ಕೆಲಸವನ್ನು ಕಲಿತಿದ್ದಳು, ತನ್ನ ವಿಧ್ಯಾಭ್ಯಾಸ ಕೂಡ ಮುಂದುವರೆಸಿದಳು ಕಂಪ್ಯೂಟರ್ ಇಂಜಿನೀರಿಂಗ್ ವಿಧ್ಯಭ್ಯಾಸದ ಜೊತೆ ಕೃಷಿ ಕಡೆ ಕೂಡ ಗಮನ ಹರಿಸಿದ್ದಳು. ಅಪ್ಪನ ಮಾರ್ಗದರ್ಶನದಂತೆ ಟ್ಟ್ರ್ಯಾಕ್ಟರ್ ಚಲಿಸುವುದನ್ನು ಕಳಿತಳು. ತಾನು ಓದುತಿದ್ದ ಕಾಲೇಜ್ ಅಲ್ಲಿಯೇ ಕ್ಯಾಂಪಸ್ ಇಂಟರ್ವ್ಯೂ ಅಲ್ಲಿ ಆಯ್ಕೆ ಆದಳು. 6 ತಿಂಗಳ ನಂತರ ತೋಟದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಳು,ವಿದ್ಯುತ್ ಸಮಸ್ಯೆ ಇದ್ದ ಕಾರಣದಿಂದಾಗಿ ಸ್ವತಹ ತಾನೇ ನೀರು ತಂದು ದ್ರಾಕ್ಷಿ ಗಿಡಗಳನ್ನು ಪಾಲನೆ ಮಾಡುತ್ತಿದ್ದಳು. ತಡ ರಾತ್ರಿ ಆದರೂ ಅಲ್ಲೇ ಟೆಂಟ್ ಅಲ್ಲಿ ತಮ್ಮನ ಜೊತೆ ಮಲಗಿಕೊಂಡು ತೋಟವನ್ನು ಕಾದಳು. ರಾತ್ರಿ ಹೊತ್ತು ನೀರಿನ ಅಭಾವದ ತೊಂದರೆ ಇತ್ತು ಆದ್ದರಿಂದ ರಾತ್ರಿ ಎಲ್ಲಾ ನಿದ್ದೆ ಗೆಟ್ಟು ಪಂಪ್ ಸೆಟ್ ಮೂಲಕ ನೀರು ಹಾಕಲು ಶುರು ಮಾಡಿದಳು.

jyotsaa

ಈಕೆಯ ಸಾಧನೆ ಕಂಡು ಇವರ ತಂದೆಯ ಕಣ್ಣುಗಳು ಸಂತೋಷದಿಂದ ಒದ್ದೆ ಆಗಿದೆ

ಇವಳ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿತು 6 ತಿಂಗಳಲ್ಲಿ ದ್ರಾಕ್ಷಿ ಗಿಡಗಳು ಸೊಗಸಾಗಿ ಬೆಳೆದಿತ್ತು, ಸಹಜವಾಗಿ ಒಂದು ದ್ರಾಕ್ಷಿಯ ಬಂಚ್ ಅಲ್ಲಿ 15 ಹಣ್ಣುಗಳಿರುತ್ತವೆ, ಆದರೆ ಇವಳು ಬೆಳೆಸಿರುವ ಗಿಡಗಳ ಬುಂಚ್ ಅಲ್ಲಿ 25 ರಿಂದ 30 ಹಣ್ಣುಗಳು ಇದ್ದವು, ಇದರಿಂದಾಗಿ ಒಳ್ಳೆಯ ಆದಾಯ ಬರಲು ಶುರುವಾಯಿತು. ಯಾವ ಹುಡುಗಿಯು ಸಹ ಕೃಷಿ ಕ್ಷೇತ್ರದಲ್ಲಿ ಇಂತಹದೊಂದು ಸಾಧನೆ ಮಾಡಿಲ್ಲ, ಈಕೆಗೆ 2018 ರಲ್ಲಿ ಕೃಷಿಥಾನ್ ಬೆಸ್ಟ್ ವುಮೆನ್ ಫರ್ಮರ್ ಅವಾರ್ಡ್ ಕೂಡ ಲಭಿಸಿದೆ. ಈಕೆಯ ಸಾಧನೆ ಕಂಡು ಇವರ ತಂದೆಯ ಕಣ್ಣುಗಳು ಸಂತೋಷದಿಂದ ಒದ್ದೆ ಆಗಿದೆ.

LEAVE A REPLY

Please enter your comment!
Please enter your name here