ಬ್ಯಾಟಿಂಗ್ ಕ್ರಮಾಂಕದಲ್ಲಿ ತಪ್ಪು ಮಾಡಿದರು ಶಾಸ್ತ್ರಿ ಎಂದು ಹೇಳಿದ ದಾದಾ

0
273

ವಿಶ್ವ ಕಪ್ ಟೂರ್ನಮೆಂಟ್ ನಲ್ಲಿ ಭಾರತ ಮೊದಲಿನಿಂದಲು ಒಳ್ಳೆಯ ಪ್ರದರ್ಶನ ನೀಡುತ್ತ ಬಂದಿತ್ತು. ಲೀಗ್ ಮ್ಯಾಚ್ ಗಳಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಮ್ಯಾಚ್ ಸೋತಿದ್ದು, ಉಳಿದ ಮ್ಯಾಚ್ ಗಳಲ್ಲಿ ಅತ್ಯುತ್ತಮವಾಗಿ ಆಟವನ್ನು ಆಡಿದ್ದರು. ಹಿಟ್ ಮ್ಯಾನ್ ಎಂದೆ ಗುರುತಿಸಿಕೊಂಡ ರೋಹಿತ್ ಶರ್ಮ 5 ಭರ್ಜರಿಯಾದ ಶತಕವನ್ನು ಬಾರಿಸಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಸೋತು ವಿಶ್ವ ಸರಣಿಯಿಂದ ಹೊರ ಬಿದ್ದಿದೆ. ಆರಂಭದಲ್ಲೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಅನ್ನು ಕಳೆದುಕೊಂಡಿದ್ದು, ನಂತರ ಕೆ ಎಲ್ ರಾಹುಲ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಪೆವಿಲಿಯನ್ ಗೆ ಸೇರಿಕೊಂಡರು. ಇಂತಹ ಒತ್ತಡ ಪರಿಸ್ಥಿತಿಯಲ್ಲು ಜಡೇಜ ಅದ್ಭುತವಾಗಿ ಬ್ಯಾಟಿಂಗ್ ಆಡುವುದರ ಮೂಲಕ ಅಭಿಮಾನಿಗಳಲ್ಲಿ ಗೆಲ್ಲುವ ಭರವಸೆ ಮೂಡಿಸಿದ್ದರು. ಧೋನಿ ಮತ್ತು ಜಡೇಜ ಉತ್ತಮವಾದ ಜೊತೆ ಆತ ಆಡಿ ಕೊನೆ ಕ್ಷಣದ ವರೆಗು ಹೋರಾಡಿದರು. ಅಂತಿಮವಾಗಿ ಜಡೇಜ ಕ್ಯಾಚ್ ಔಟ್ ಆಗಿದ್ದು, ಧೋನಿ ರನ್ ಔಟ್ ಆಗಿದ್ದಾರೆ. ಈ ಬಾರಿ ಭಾರತ ವಿಶ್ವ ಕಪ್ ಗೆಲ್ಲುವ ಕನಸು ಕನಸಾಗೆ ಉಳಿದಿದೆ.

ಬ್ಯಾಟಿಂಗ್ ಕ್ರಮಾಂಕದಲ್ಲಿ ಇಬ್ಬರ ನಡುವೆ ಗೊಂದಲ ಉಂಟಾಗಿದೆ

ಭಾರತ ನ್ಯೂಜಿಲ್ಯಾಂಡ್ ವಿರುದ್ಧ ಸೋಲುತ್ತಿದ್ದಂತೆ, ತಂಡದಲ್ಲಿ ಈಗ ಬಿರುಕಿನ ವಾತಾವರಣ ಉಂಟಾಗಿದೆ. ಭಾರತ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ತಂಡದ ಕೋಚ್ ಆದ ರವಿ ಶಾಸ್ತ್ರಿ ನಡುವೆ ಹೊಂದಾಣಿಕೆ ಇಲ್ಲದಿರುವುದು ಈಗ ಬೆಳಕಿಗೆ ಬಂದಿದೆ. ಹೌದು ಬ್ಯಾಟಿಂಗ್ ಕ್ರಮಾಂಕವನ್ನು ಆಯ್ಕೆ ಮಾಡುವ ಹಕ್ಕು ಕ್ಯಾಪ್ಟನ್ ಮತ್ತು ಕೋಚ್ ಗೆ ಇರುತ್ತದೆ. ಆದರೆ ಇಬ್ಬರು ಚರ್ಚಿಸಿ ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆದರೆ ರಿಷಬ್ ಪಂತ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಇಬ್ಬರ ನಡುವೆ ಗೊಂದಲ ಉಂಟಾಗಿದೆ. ಪಂದ್ಯದ ಪರಿಸ್ಥಿಯನ್ನು ಗಮನಿಸಿ ಯಾವ ಬ್ಯಾಟ್ಸ್ಮೆನ್ ಈ ಹಣತದಲ್ಲಿ ಆಡಬಹುದುದೆಂದು ಆಲೋಚಿಸಿ ನಂತರ ಕಳಿಸಬೇಕಾಗಿತ್ತು. ಮುಂದೆ ಓದಿ.

ಶಾಸ್ತ್ರಿ ಅವರ ಬ್ಯಾಟಿಂಗ್ ಸ್ಟ್ರಾಟರ್ಜಿ ಬಗ್ಗೆ ಪ್ರಶ್ನಿಸಿದ್ದಾರೆ

ಬ್ಯಾಟಿಂಗ್ ಸ್ಟ್ರಾಟರ್ಜಿ ಬಗ್ಗೆ ಪ್ರಶ್ನಿಸಿದ್ದಾರೆ ಹೌದು, ರಿಷಬ್ ಪಂತ್ ನಾಲಕ್ಕನೆ ಸ್ಥಾನದಲ್ಲಿ ಆಡಿಸಿರುವ ಕಾರಣದಿಂದಾಗಿ ಕೊಹ್ಲಿ ಮತ್ತು ಶಾಸ್ತ್ರಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂತ್ ನಾಲಕ್ಕನೆ ಕ್ರಮಾಂಕದಲ್ಲಿ ಆಡಿಸುವುದು ವಿರಾಟ್ ಕೊಹ್ಲಿ ಗೆ ಇಷ್ಟವಿದ್ದಿಲ್ಲ. ಆದರೆ ಶಾಸ್ತ್ರಿ ತಲೆಯಲ್ಲಿ ಅದೇನು ಓಡುತಿತ್ತೊ ಗೊತ್ತಿಲ್ಲ ಪಂತ್ ಅವರನ್ನು ಆಯ್ಕೆ ಮಾಡುತ್ತಾರೆ. ರಿಷಬ್ ಪಂತ್ ಆರಂಭದಲ್ಲಿ ಒಳ್ಳೆಯ ಆಟವನ್ನು ಆಡಿದ್ದರು, ಆಕ್ರಮಣ ಮಾಡಲು ಮುಂದಾಗಿ ರಾಂಗ್ ಶಾಟ್ ಸೆಲೆಕ್ಟ್ ಮಾಡುವುದರ ಮೂಲಕ ಔಟ್ ಆದರು. ಪಂತ್ ಔಟಾದ ಮೇಲೆ ಪೆವಿಲಿಯನ್ ನಲಿ ಕುಳಿತಿದ್ದ ರವಿ ಶಾಸ್ತ್ರಿಯ ಹತ್ತಿರ ಚರ್ಚಿಸಿದ್ದು, ಶಾಸ್ತ್ರಿ ಅವರ ಬ್ಯಾಟಿಂಗ್ ಸ್ಟ್ರಾಟರ್ಜಿ ಬಗ್ಗೆ ಪ್ರಶ್ನಿಸಿದ್ದಾರೆ.

ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಗೆ ಬರುವ ಮುನ್ನ ಧೋನಿ ಬರಬೇಕಿತ್ತು

ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಗೆ ಬರುವ ಮುನ್ನ ಧೋನಿ ಬರಬೇಕಿತ್ತು, ಧೋನಿ ರಿಷಬ್ ಪಂತ್ ಅವರಿಗೆ ಕೆಟ್ಟ ಹೊಡೆತಕ್ಕೆ ಕೈಹಾಕಲು ಬಿಡುತ್ತಿರಲಿಲ್ಲ. ಕಾರ್ತಿಕ್, ಪಾಂಡ್ಯರನ್ನ ಜಡೇಜಾ ಜೊತೆಗೆ ಕೊನೆಗೆ ಆಡಿಸಬೇಕಿತ್ತು. ನನಗೆ ಗೊತ್ತಿಲ್ಲ ಕೋಚ್ ರವಿ ಶಾಸ್ತ್ರಿ ತಲೆಯಲ್ಲಿ ಏನು ಇತ್ತು ಅಂತ. ಶಾಸ್ತ್ರಿ ಬಹಳ ದೊಡ್ಡ ತಪ್ಪು ಮಾಡಿಬಿಟ್ಟರು ಎಂದು ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here