ಪರೀಕ್ಷೆಯಲ್ಲಿ ಗಾಂಧೀಜಿ ಹೇಗೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಪ್ರಶ್ನೆ ಕೇಳಿದ ಶಾಲಾ ಮಂಡಳಿ. ಎಲ್ಲಿ?

0
371
gandhiji and school

ಭಾರತಕ್ಕೆ ಸ್ವಾತಂತ್ರ ತಂದುಕೊಡಲು ನಮ್ಮ ನಾಯಕರು ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಅವರು ಆಗ ಕಷ್ಟ ಪಟ್ಟಿದ್ದಕ್ಕೆ ನಾವು ಇಂದು ನಮ್ಮ ನೆಲದಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದೇವೆ. ನಮ್ಮ ರಾಷ್ಟ್ರಪಿತ ಯಾರು ಅಂದಾಗ ನಾವು ಹೇಳುವ ಉತ್ತರ ಒಂದೇ. ಅದು ಮಹಾತ್ಮ ಗಾಂಧೀಜಿ ಎಂದು. ಯಾಕಂದ್ರೆ ಬ್ರಿಟಿಷರಿಂದ ಬಿಡುಗಡೆ ಹೊಂದಿ, ನಮ್ಮ ದೇಶಕ್ಕೆ ಸ್ವಾತಂತ್ರವನ್ನುತಂದುಕೊಡಬೇಕು ಎಂದು ಅವರು ಅನೇಕ ಶಾಂತಿಯುತ ಹೋರಾಟ ಹಾಗು ಉಪ್ಪಿನ ಸತ್ಯಾಗ್ರಹವನ್ನು ನಡೆಸಿದರು. ನಂತರ ೧೯೪೭ ಆಗಸ್ಟ್ ೧೫ರದು ನಮಗೆ ಸ್ವಾತಂತ್ರ ದೊರಕಿಸಿಕೊಟ್ಟರು. ಆದ್ರೆ ಅವರು ನಮಗೆ ಸ್ವಾತಂತ್ರ ದೊರಕಿಸಿ, ಹೆಚ್ಚು ದಿನ ನಮ್ಮ ಜೊತೆ ಇರಲಾಗಲಿಲ್ಲ. ಯಾಕಂದ್ರೆ ನಾಥುರಾಮ್ ಗೂಡ್ಸೆ, ಮಹಾತ್ಮ ಗಾಂಧೀಜಿಯನ್ನು ಹತೈಗೈಯುತ್ತಾನೆ. ಇದು ಸಣ್ಣ ಮಕ್ಕಳಿಗೂ ಸಹ ಗೊತ್ತಿರುವ ವಿಷಯ. ಆದ್ರೆ ಇಲ್ಲೊಂದು ಶಾಲೆಯ ಪರೀಕ್ಷೆಯಲ್ಲಿ ಗಾಂಧೀಜಿ ಹೇಗೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ಕೇಳಿರುವುದು ಭಾರಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಗಾಂಧೀಜಿ ಹೇಗೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಪ್ರಶ್ನೆ ಕೇಳಿದ ಶಾಲೆ

ಗುಜರಾತಿನ, ಸುಫಲಾಂ ಶಾಲಾ ವಿಕಾಸ ಸಂಕುಲ ಶಾಲೆಯಲ್ಲಿ ಕೆಳೆದ ಎರಡು ಮೂರೂ ದಿನಗಳಿಂದ ೯ನೇ ತರಗತಿಯ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳುವಂತಹ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಮಹಾತ್ಮ ಗಾಂಧೀಜಿಗೆ ಸಂಬಂಧಿಸಿದಂತೆ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. ಹೌದು. ‘ಗಾಂಧೀಜಿ ಹೇಗೆ ಆತ್ಮಹತ್ಯೆ ಮಾಡಿಕೊಂಡರು’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನು ಆ ಪ್ರಶ್ನೆಯನ್ನು ನೋಡಿದ ಕೂಡಲೇ, ವಿದ್ಯಾರ್ಥಿಗಳಿಗೆ ಆಶ್ಚರ್ಯವಾಗಿದೆ. ಇದು ಎಂತಹ ಪ್ರಶ್ನೆ ಎಂದು ಅವರು ತಮ್ಮ ಶಿಕ್ಷಕರನ್ನು ಕೇಳಿದ್ದಾರೆ. ಆಗ ಶಿಕ್ಷಕರು ಈ ಪ್ರಶ್ನೆಯನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಯಾಕಂದ್ರೆ ನಮ್ಮ ರಾಷ್ಟ್ರಪಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದ್ರೆ ಏನು ಅರ್ಥ. ಇದು ಎಂಥಹ ಪ್ರಶ್ನೆ ಎಂದು, ಶಿಕ್ಷಣಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದ ಜಿಲ್ಲಾ ಶಿಕ್ಷಣಾಧಿಕಾರಿ

ಇನ್ನು ಈ ಬಗ್ಗೆ ಶಾಲೆಯ ಶಿಕ್ಷಕರು, ಜಿಲ್ಲೆಯ ಶಿಕ್ಷಣಾಧಿಕಾರಿಯಾದ ಭರತ್ ವಾಧರ್ ಅವರಿಗೆ ತಿಳಿಸಿದ್ದು, ಮೊದಲು ಅವರು ಇದರ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ವಿಚಿಚರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದರ ಬಗ್ಗೆ ಯಾರೊಬ್ಬರೂ ಸಹ ಖಚಿತ ಮಾಹಿತಿ ಹೊರ ಹಾಕಿಲ್ಲ. ಆದ್ರೆ ನಂತರ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಯಾಕಂದ್ರೆ ಸುಫಲಾಂ ಶಾಲಾ ವಿಕಾಸ ಸಂಕುಲ ಎಂಬುದು ಅನುದಾನಿತ ಶಿಕ್ಷಣ ಸಂಸ್ಥೆಯಾಗಿದ್ದು, ರಾಜ್ಯ ಶಿಕ್ಷಣ ಇಲಾಖೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭರತ್ ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಬಗ್ಗೆ ಗುಜರಾತಿನಲ್ಲಿ ಕೆಲವು ವಿವಾದಗಳು ನಡೆಯುತ್ತಿದ್ದು, ಜಿಲ್ಲಾ ಶಿಕ್ಷಣಾಧಿಕಾರಿ ಮಾತ್ರ ನಮ್ಮನ್ನು ಏನು ಕೇಳಬೇಡಿ. ಇಅದಕ್ಕು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾತ್ರ ಹೇಳುತ್ತಿದ್ದಾರೆ.

ನಿಜಕ್ಕೂ ಈಗಿನ ದೇಶದ ಪರಿಸ್ಥಿಯನ್ನು ಹಾಗು ಕೆಲವು ಶಿಕ್ಷಣ ಮಂಡಳಿಯವರನ್ನು ನೋಡಿದಾಗ ಏನು ಹೇಳಬೇಕು ಎನ್ನುವುದೇ ತಿಳಿಯುವುದಿಲ್ಲ. ಯಾಕಂದ್ರೆ ದೇಶದ್ರೋಹಿಯೊಬ್ಬನ ಗುಂಡಿಗೆ ಬಲಿಯಾದ ಗಾಂಧೀಜಿಯವನ್ನು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಿದಾಗ ಇವರ ಬುದ್ದಿವಂತಿಕೆ ಎಷ್ಟರ ಮಟ್ಟಿಗಿದೆ ಎಂಬುದು ತಿಳಿಯುತ್ತದೆ.

LEAVE A REPLY

Please enter your comment!
Please enter your name here