ಶಿಕ್ಷಕನಾಗಿಯು ಸೈ ವ್ಯವಸಾಯದಲ್ಲು ಜೈ. ಕೃಷಿಯಲ್ಲಿ ಯಶಸ್ಸು ಕಂಡ ಶಿಕ್ಷಕ

0
826

ಉದ್ಯೋಗಂ ಪುರುಷ ಲಕ್ಷಣಂ ಅಂತ ಒಂದು ಮಾತಿದೆ. ಉದ್ಯೋಗ ಪುರುಷರಿಗೆ ಅತ್ಯವಶ್ಯಕವಾದ ದುಡಿಮೆಯ ದಾರಿಯಾಗಿದೆ. ಕೆಲವರು ತಮ್ಮ ಜೀವನದ ವೃತ್ತಿಯಲ್ಲಿ ಯಶಸ್ಸು ಕಾಣುವುದಲ್ಲದೆ ಇನ್ನಿತರ ಕಾರ್ಯಗಳಲ್ಲು ಯಶಸ್ಸಿನ ಗೆಲುವನ್ನ ಕಾಣುತ್ತಾರೆ. ಈಗಿನ ಕಾಲದಲ್ಲಿ ಐಟಿ ಸಂಸ್ಥೆಯಲ್ಲಿ ಕೆಲಸ ಸಿಕ್ಕರೆ ಸಾಕು ಜನರು ನಿಟ್ಟುಸಿರು ಬಿಡುತ್ತಾರೆ ಇನ್ನು ಕೃಷಿ ಕಡೆ ಯಾರು ತಾನೇ ಗಮನವನ್ನು ಹರಿಸುತ್ತಾರೆ. ಆದರೆ ಇಲ್ಲಿ ಒಬ್ಬ ವ್ಯಕ್ತಿ ಮಾತ್ರ ಶಿಕ್ಷಕನ ಕೆಲಸದ ಜೊತೆಗೆ ಕೃಷಿ ಕ್ಷೇತ್ರದಲ್ಲು ಸಾಧನೆಯನ್ನು ಮಾಡಿದ್ದಾರೆ. ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ನಿವಾಸಿಯೆ ಮಾರುತಿ ಭೀಮಪ್ಪ ಸರಣ್ಣನವರು. ಮುಂದೆ ಓದಿ

ಸಂಜೆ ಮತ್ತು ವಾರದ ಕೊನೆಯಲ್ಲಿ ವ್ಯವಸಾಯವನ್ನು ಮಾಡುತ್ತಾರೆ

ಇವರು ಕೆಲಸ ಮಾಡುತ್ತಿದ್ದ ಶಾಲೆಗೂ ಸಹ ಹೊಸ ರೂಪವನ್ನು ನೀಡಿದ್ದರು. ಶಾಲೆಗೆ ಮುಖ್ಯೋಪಾಧ್ಯಾಯ ಆಗಿರುವ ವೇಳೆಯಲ್ಲಿ ಸ್ಮಾರ್ಟ್ ಮಾದರಿ ಶಾಲೆಯನ್ನಾಗಿ ಮಾಡಿರುವುದು ಇವರ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಜಿಲ್ಲಾ ಆದರ್ಶ ಶಿಕ್ಷಕ ಎನ್ನುವ ಪ್ರಶಸ್ತಿಯನ್ನು ಸಹ ಇವರಿಗೆ ನೀಡಿದ್ದು, ಚಿಕ್ಕ ವಯಸ್ಸಿನಿಂದಾನು ಇವರಿಗೆ ಕೃಷಿ ಕಡೆಗೆ ಹೆಚ್ಚು ಒಲವಿತ್ತು. ಬೆಳಿಗ್ಗೆಯ ಹೊತ್ತಿನಲ್ಲಿ ಪುಸ್ತಕವನ್ನು ಹಿಡಿದು ಮಕ್ಕಳಿಗೆ ಪಾಠ ಮಾಡುತ್ತಾರೆ. ಸಂಜೆ ಮತ್ತು ವಾರದ ಕೊನೆಯಲ್ಲಿ ನೇಗಿಲು ಹಿಡಿದು ವ್ಯವಸಾಯವನ್ನು ಮಾಡುತ್ತಾರೆ. ಇವರು ಕೆಲಸ ಮಾಡುವ ಶಾಲೆಯ ಸುತ್ತ ಹೂಗಳು ರಾಶಿ ರಾಶಿಯಾಗಿ ಬೆಳೆದಿತ್ತು. ಬಹುಶ ಇದೆ ಕಾರಣದಿಂದಾಗಿ ಭೀಮಪ್ಪನವರಿಗೆ ಹೂ ತೋಟವನ್ನು ನಿರ್ಮಿಸಬೇಕೆಂದು ನಿರ್ಧರಿಸಿದ್ದರು ಅಂತ ಹೇಳಬಹುದಾಗಿದೆ.

ಚಂಡು ಹೂವು ಯಾವುದೆ ರೋಗದಿಂದ ನರಳುವುದಿಲ್ಲ

ಇನ್ನು ಇವರು ಚೆಂಡು ಹೂವು ಬೆಳೆಯುವುದಕ್ಕೆ ವಿಶೇಷವಾದ ಕಾರಣವಿದೆ. ಗುಲಾಬಿ, ಸೇವಂತಿಗೆ, ಮಲ್ಲಿಗೆ, ಇನ್ನು ಕೆಲ ವರ್ಗದ ಹೂವುಗಳನ್ನ ಹೋಲಿಸಿದರೆ ಚೆಂಡು ಹೂವು ಯಾವುದೆ ರೋಗದಿಂದ ನರಳುವುದಿಲ್ಲ. ಈ ಹೂವನ್ನು ಬೆಳೆಯಲು ನೀವು ಅಧಿಕವಾದ ಬಂಡವಾಳವನ್ನು ಹಾಕುವ ಅವಶ್ಯಕತೆ ಇರುವುದಿಲ್ಲ. ಹಾಕಿದ ಹಣಕ್ಕಿಂತ ಎರಡು ಪಟ್ಟು ಹಣವನ್ನು ನೀವು ಇದರಿಂದ ಗಳಿಸಬಹುದಾಗಿದೆ. ಹೂವಿನ ಕುರಿತು ಸಂಶೋಧನೆ ಮಾಡಿದ ನಂತರ ಮಾರುತಿ ಅವರು ಚೆಂಡು ಹೂವನ್ನು ಬೆಳೆಯುವ ನಿರ್ಧಾರವನ್ನು ಮಾಡುತ್ತಾರೆ. ಹೂವಿನ ಉತ್ತಮವಾದ ಬೆಳವಣಿಗೆಗಾಗಿ ಎಲ್ -3 ಹೈಬ್ರಿಡ್ ಚೆಂಡು ಹೂವಿನ ಬೀಜಗಳನ್ನು ಮತ್ತು ಕೀಟನಾಶಕ ವಸ್ತುಗಳನ್ನ ತಿಪಟೂರು ತಾಲೂಕಿನ ಹುಲಕುರ್ಕೆ ಗ್ರಾಮದಲ್ಲಿ ಎ.ವಿ.ಟಿ ನ್ಯಾಚುರಲ್ ಪ್ರಾಡಕ್ಟ್ಸ್ ಸಂಸ್ಥೆಯಿಂದ ಖರೀದಿಸಿದ್ದರು.

ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಬಿಟ್ಟು ಕೃಷಿಯನ್ನು ಮಾಡಿದ್ದರು

ಮೊದಲನೆ ಹಂತದಲ್ಲಿ 3 ಎಕರೆಯ ಜಾಗದಲ್ಲಿ 35 ಗಂಟೆಗಳ ಕಾಲ ಹೊಲವನ್ನು ಊಳಿದ್ದು, ನಂತರ ಗೊಬ್ಬರವನ್ನು ಮಣ್ಣಿಗೆ ಸೇರಿಸಿದ್ದರು. ಜೂನ್ ತಿಂಗಳಿನಲ್ಲಿ ಚೆಂಡು ಹೂವಾದ ಬೀಜವನ್ನು ಬಿತ್ತಿದ್ದರು. ಅಧಿಕ ಲಾಭ ಗಳಿಸುವ ಸಲುವಾಗಿ ಸಾಲಿನಿಂದ ಸಾಲಿಗೆ ನಾಲಕ್ಕು ಅಡಿ ಜಾಗ ಬಿಟ್ಟು, ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಬಿಟ್ಟು ಕೃಷಿಯನ್ನು ಮಾಡಿದ್ದರು. ಇನ್ನು ಹೊಲದಲ್ಲಿ ಬೋರ್ ವೆಲ್ ಇದ್ದು, ವಾರಕೊಮ್ಮೆ ನೀರು ಬಿಡುತ್ತಿದ್ದರು. ವಾರಕ್ಕೆ ಒಂದು ಸಲ ಸಂಸ್ಥೆಯವರು ಕೊಡುವ ಔಷಧಿಗಳನ್ನು ಭೂಮಿಗೆ ಹಾಕುತ್ತಿದ್ದು. ಜುಲೈ ತಿಂಗಳಿನಲ್ಲಿ ಹೂವಿನ ಮೊಗ್ಗು ಸೂರ್ಯ ಮೋಡದಲ್ಲಿ ಉದಯವಾಗುವ ಹಾಗೆ ಅರಳಿದ್ದವು. ಕೇವಲ ಎರಡು ತಿಂಗಳಿನಲ್ಲಿ ಮಾರುತಿ ಅವರು ಉತ್ತಮವಾದ ಫಲಿತಾಂಶವನ್ನು ಕಂಡಿದ್ದರು.

ಎವಿಟಿ ಸಂಸ್ಥೆಯವರು ಚಂಡು ಹೂವನ್ನು ಕೊಂಡುಕೊಳ್ಳುತ್ತಿದ್ದರು

ಮೊದಲನೆ ವಾರದಲ್ಲಿ 1 ಟನ್ ಹೂವು ಸಿಕ್ಕಿದ್ದು, 4 ನೇ ವಾರದಲ್ಲಿ 8 ಟನ್ ಅಷ್ಟು ಹೂವುಗಳು ಬೆಳೆಯುತ್ತದೆ. ವಾರ ಕಳೆದಂತೆ ಇದು ಅಧಿಕವಾಗುತ್ತ ಹೋಗುತ್ತದೆ. ಪ್ರತಿ ವಾರ ಎವಿಟಿ ಸಂಸ್ಥೆಯವರು ಚಂಡು ಹೂವನ್ನು ಕೊಂಡುಕೊಳ್ಳುತ್ತಿದ್ದರು. ಒಂದು ಕೆಜಿ ಹೂವಿಗೆ 10 ರೂಪಾಯಿ ಮಾರುತಿ ಅವರ ಜೇಬಿಗೆ ಬೀಳುತ್ತಿದೆ. ಸದ್ಯಕ್ಕೆ ಮೂರು ಜನ ಪುರುಷರು ಮತ್ತು 18 ಮಹಿಳೆಯರು ಈ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here