ಬೆಳಗಾವಿಯ ಬ್ಯಾಂಕ್ ಗಳಲ್ಲಿ ಖಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕಾಗಿದೆ

0
595

ನಾಡು, ನುಡಿ, ಜಲ ಎನ್ನುವ ವಿಷಯ ಅಂತ ಬಂದರೆ ಕನ್ನಡಿಗರು ಹೋರಾಡಲು ಸಿದ್ಧರಾಗಿರುತ್ತಾರೆ. ನಮ್ಮ ನಾಡಿನ ಭಾಷೆ, ಸಂಸ್ಕೃತಿ, ಆಚಾರ-ವಿಚಾರವನ್ನು ನಾವು ಪಾಲಿಸಬೇಕಾಗಿದೆ. ಹೆಮ್ಮೆಯ ನಾಡು, ಕವಿಗಳ ಬೀಡು ಎಂದೇ ಹೆಸರುವಾಸಿಯಾದ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ.ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಅನ್ಯ ಭಾಷೆಗಳ ಹಾವಳಿ ಜಾಸ್ತಿಯಾಗಿದೆ. ಕೆಲವರಿಗೆ ಬೇರೆ ಭಾಷೆ ಅರ್ಥವಾಗುವುದಿಲ್ಲ, ಆದ್ದರಿಂದ ಕನ್ನಡ ಭಾಷೆ ಬಳಸಬೇಕೆನ್ನುವುದು ಬಹಳ ಜನರ ಬಾಯಕೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆಧ್ಯತೆ ನೀಡಬೇಕು.

ಬ್ಯಾಂಕ್ ಗಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕಾಗಿದೆ

ಕರ್ನಾಟಕದಲ್ಲಿ ನಾವು ಯಾವುದೆ ಒಂದು ಬ್ಯಾಂಕ್ ಗೆ ಭೇಟಿ ಕೊಟ್ಟರು, ಬೇರೆ ಭಾಷೆಗಳಲ್ಲಿ ವ್ಯವಹಹರಿಸಬೇಕಾವ ಒಂದು ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್ ನಾ ಚಲಾನ್ ಗಳು, ಲೋನ್ ಅರ್ಜಿ, ರಸೀದಿಗಳು ಬೇರೆ ಬಾಷೆಯಲ್ಲಿ ಮುದ್ರಣವಾಗುತ್ತಿದೆ. ರೈತರಿಗೆ ಇದರಿಂದ ತೊಂದರೆ ಉಂಟಾಗುತ್ತಿದೆ. ಬ್ಯಾಂಕ್ ನಲ್ಲಿ ವ್ಯವಹರಿಸುವುದು ಕಷ್ಟವಾಗಿದೆ. ಪತ್ರದಲ್ಲಿ ಇರುವ ಸಮಾಚಾರ ರೈತರಿಗೆ ಗೊತ್ತಾಗುವುದಿಲ್ಲ, ಆದ್ದರಿಂದ ಬ್ಯಾಂಕ್ ನಾ ಎಲ್ಲ ವ್ಯವಹಾರಗಳು ಖಡ ಖಂಡಿತವಾಗಿ ಕನ್ನಡ ಭಾಷೆಯಲ್ಲೆ ವ್ಯವಹರಿಸಬೇಕಾಗಿದೆ. ಒಂದು ತಿಂಗಳಿನಲ್ಲಿ ಇದು ಜಾರಿಗೆ ಬರಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಯಾದ ಡಾಕ್ಟರ್ ಎಸ ಬಿ ಬೊಮ್ಮನ್ನಹಳ್ಳಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

 

ರೈತರಿಗೆ ಗೊತ್ತಾಗದಂತೆ ಸಹಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ

ಗುರುವಾರ ಜಿಲ್ಲಾಧಿಕಾರಿಯ ಕಚೇರಿಯ ಸಭಾಂಗಣದಲ್ಲಿ, ಕನ್ನಡ ಜಾಗೃತಿ ಸಮೀತಿಯವರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿದ್ದಾರೆ. ಇಂಗ್ಲಿಷ್ ನಲ್ಲಿರುವ ರಸೀದಿ ಪಾತ್ರಗಳಿಗೆ ರೈತರಿಗೆ ಗೊತ್ತಾಗದಂತೆ ಅವರಿಂದ ಸಹಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ಹಲವಾರು ಸಮಸ್ಯೆಗಳು ಕಾನೂನು ಎದುರುಸುತ್ತಿದೆ. ಆದ್ದರಿಂದ ಕನ್ನಡದಲ್ಲೆ ವ್ಯವಹಾರ ಮಾಡಬೇಕಾಗಿದೆ. ಇದರಿಂದ ಕಾನೂನಿಗೆ ತೊಂದರೆಯಾಗುವುದಿಲ್ಲ. ಅಕಸ್ಮಾತ್ ಆದರೆ ಅದಕ್ಕೆ ಬ್ಯಾಂಕ್ ಸಿಬ್ಬಂದಿಗಳೇ ಜವಾಬ್ದಾರರಾಗುತ್ತಾರೆ ಎಂದು ತಿಳಿಸಿದ್ದಾರೆ.

ಕನ್ನಡ ಶಿಕ್ಷಕರ ಕೊರತೆ ಆಗದಿರುವ ಹಾಗೆ ನೋಡಿಕೊಳ್ಳಬೇಕಾಗಿದೆ

ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರ ಕಚೇರಿಗಳಲ್ಲಿ  ಜ್ಞಾನ ಪೀಠ ಪಡೆದಿರುವ ಕವಿಗಳ ಭಾವ ಚಿತ್ರವನ್ನು ಹಾಕಲೆಬೇಕು. ಖಾನಾಪುರ ಮತ್ತು ಗಡಿ ಪ್ರದೇಶದಲ್ಲಿರುವ ಶಾಲೆಗಳಲ್ಲಿ, ಕನ್ನಡ ಶಿಕ್ಷಕರ ಕೊರತೆ ಆಗದಿರುವ ಹಾಗೆ ಎಚ್ಚರದಿಂದ ನೋಡಿಕೊಳ್ಳಬೇಕಾಗಿದೆ. ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಾಹಿರಾತು ಫಲಕಗಳಲ್ಲಿ ಖಡ್ಡಾಯವಾಗಿ, ಕನ್ನಡ ಉಪಯೋಗಿಸುವುದರ ಬಗ್ಗೆ ಸಭೆಯಲ್ಲಿ ಎಷ್ಟು ಮಾತನಾಡಿದರು ಅದರಿಂದ ಯಾವುದೆ ಪ್ರಯೋಜನವಾಗುತ್ತಿಲ್ಲ. ಈ ವಿಷಯದ ಕುರಿತು ಅಧಿಕಾರಿಗಳು ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಮೇಯರ್ ಸಿದ್ದಣ್ಣ ಗೌಡ ಪಾಟೀಲ್ ಸಭೆಯಲ್ಲಿ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here